ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೇದವೇದ್ಯರ ವಂದಿಸುವೆನು ವಾದಿರಾಜರ ಪ್ರಿಯ ಶಿಷ್ಯರ ವೇದವೇದ್ಯರ ವಂದಿಸುವೆನು ಪ ವಾದಿರಾಜರ ಪಾಶ್ರ್ವದಲ್ಲಿಹ ಮಧ್ವಶಾಸ್ತ್ರವನುದ್ಧರಿಸಿದ ವೇದನಿಧಿಗಳ ತಾತರಾಗಿಹ 1 ರೂಪ್ಯಪೀಠದಿ ಕೃಷ್ಣಮಂದಿರ ರೂಪಳಿದುದನುದ್ಧಾರ ಮಾಡಿದ ಪಾಪರಹಿತರ ಕೋಪಶೂನ್ಯ ಸೋ- ದಾಪುರದೊಳಗೆ ಇರ್ಪ ಯತಿಗಳ 2 ಯಾದವೇಶ ರಾಜೇಶ ಹಯಮುಖ ಸಾಧುಜನರಿಗಾಧಾರರಾಗಿಹ ವಾದಿರಾಜರ ಪದದೊಳಿರ್ಪರ 3
--------------
ವಿಶ್ವೇಂದ್ರತೀರ್ಥ
ಸೋದಾಕ್ಷೇತ್ರವೆ ದಿವ್ಯ ಕ್ಷೇತ್ರ ಬಂದ ಜನರಿಗಿಷ್ಟವನೀವ ಕ್ಷೇತ್ರ ವೀರಶೈವರ ಗೆದ್ದ ಕ್ಷೇತ್ರ ಪ ಒಂದು ಭಾಗದಿ ರೂಪ್ಯಪೀಠ ಮ- ತ್ತೊಂದು ಭಾಗದಿ ಸೋದಾಕ್ಷೇತ್ರ ಕುಂದು ಎಳ್ಳಷ್ಟಿಲ್ಲದೆ ತೋರ್ಪು ದೆಂದು ಹರಿಭಕ್ತರಾದರಿಸುವರು 1 ವೈಕುಂಠನಂತಾಸನಗಳು ಚೆಂದವೇನೆಂದು ಪೇಳಲಿ ಮನವೆ 2 ರಾಜೇಶ ಹಯಮುಖ ಚರಣ ಕಂಜ ಮಧುಪನಂತಿರುವ ಶ್ರೀಭಾವಿ- ಕಂಜಜಾತನ ಪದಕರುಹ ವಾದಿರಾಜರಾಯರ ದಿವ್ಯ ಕ್ಷೇತ್ರ 3
--------------
ವಿಶ್ವೇಂದ್ರತೀರ್ಥ