ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರತಿ ಬೆಳಗಿರೆ ಶಾರದೆಗೆ | ಗುಣ ವಾರಿಧಿ ಕರುಣಾ ನೀರಧಿಗೆ ಪ ನತ ಗೀ- ಜಾಣೆಗೆ ತ್ರಿಭುವನ ತ್ರಾಣೆಗೆ ಜಪಸರ ಧಾ- ಶುಭ ರೂಪಿಣಿಗೆ 1 ಶಾರದ ಚಂದ್ರನ ಕಿರಣನ ಪೋಲುವ ಚಾರು ಶುಕ್ಲಾಂಬರದಿಂದಲಿ ಪೊಳೆವ ಹಾರ ಮಕುಟ ಪದ ನೂಪುರ ಕಂಕಣ ಅಘ ಹಾರಿಣಿಗೆ 2 ಸಕಲಾಗಮಗಳನಾಂತಿಹ ಗಣಿಗೆ ನಿಖಿಲ ಕಲೆಗಳನು ಕಾದಿಹ ಫಣಿಗೆ ಭಕುತರ ಪಾಲಿನ ಚಿಂತಾಮಣಿಗೆ ಶ್ರೀಕಾಂತನಾತ್ಮಜನರಗಿಣಿಗೆ 3
--------------
ಲಕ್ಷ್ಮೀನಾರಯಣರಾಯರು
ಮಂಗಲಂ ಜಯಮಂಗಲಂತ್ರಿಜಗಂಗಳ ಪೊರೆವ ಶ್ರೀಮೂಕಾಂಬೆಗೆ ಪ ಗೌರಿಗೆ ಗುಹಜನನಿಗೆ ಗಿರಿಜಾತೆಗೆಧೀರಮಹಿಷ ದೈತ್ಯಮರ್ದಿನಿಗೆಕಾರುಣ್ಯನಿಧಿಗೆ ಕಾಮಿತಫಲದಾತೆಗೆನಾರದನುತೆಗೆ ನಾರಾಯಣಿಗೆ 1 ಶರದಿಂದುಮುಖಿಗೆ ಶಂಕರಿಗೆ ಶರ್ವಾಣಿಗೆದುರಿತ ದಾರಿದ್ರ್ಯಹರ್ತೆಗೆ ದುರ್ಗಿಗೆಪರಮೇಶ್ವರಿಗೆ ಪಾವನಚರಿತೆಗೆ ಶುಭಕರಿಗೆ ಸಮಸ್ತಮಂತ್ರೇಶ್ವರಿಗೆ 2 ರಾಜಶೇಖರಿಗೆ ರಾಜೀವನೇತ್ರಗೆ ರಕ್ತಬೀಜ ಶಾಸಿನಿಗೆ ಭುವನಮಾತೆಗೆತೇಜೋಮಯಿಗೆ ತರಣಿಕೋಟಿ ಭಾಷೆಗೆಶ್ರೀ ಜನಾರ್ದನನ ಸಹೋದರಿಗೆ 3 ಕಾಳಿಗೆ ಕಾಮರೂಪಿಣಿಗೆ ಕೌಮಾರಿಗೆಕಾಳರಾತ್ರಿಗೆ ಕಾತ್ಯಾಯನಿಗೆವ್ಯಾಳಭೂಷಿಣಿಗೆ ಯೋಗಿನಿಗೆ ರುದ್ರಾಣಿಗೆಭಾಳನೇತ್ರೆಗೆ ಭಯಹಾರಿಣಿಗೆ4 ಚಂಡಿಗೆ ಚಕ್ರಪಾಣಿಗೆ ಚಾತುರ್ಭುಜೆಗೆಮುಂಡಿಗೆ ಧೂಮ್ರಲೋಚನಹತ್ರ್ರೆಗೆಚಂಡಮುಂಡಾಸುರರಸುರಣರಂಗದಿದಿಂಡುದರಿಂದ ಸರ್ವಮಂಗಲೆಗೆ5
--------------
ಕೆಳದಿ ವೆಂಕಣ್ಣ ಕವಿ
ಮಂಗಳಂ ಶ್ರೀ ಲಕ್ಷ್ಮೀದೇವಿಗೆ ಜಯ ಮಂಗಳಂ ಪಕ್ಷಿವಾಹನರಾಣಿಗೆ ಪ. ಮಂಗಳಂ ಮಂತ್ರಮೂರುತಿಗೆ ಶುಭ ಮಂಗಳಂ ಪರತಂತ್ರರೂಪಿಣಿಗೆ ಅ.ಪ. ಭಾರ್ಗವಿಗೆ ಭಾಗ್ಯದಾಯಿನಿಗೆ ಭಾಗವತರ ಪೂಜೆ ಕೈಗೊಂಬಳಿಗೆ ನಾಗವೇಣಿಗೆ ವರನಾಗಪೂಜಿತೆಗೆ ವರ ಭೋಗಿಭೂಷಣಸುತೆ ಯೋಗೇಶ್ವರಿಗೆ 1 ಸೀತೆಗೆ ಮಂಗಳಗೀತೆಗೆ ಭುವಿ ಜಾತೆಗೆ ಮಂಗಳಂ ಪವನಜಸೇವಿತೆಗೆ ಮಾತೆಗೆ ಸದ್ಗುಣ ಪೂತೆಗೆ ವರಪ್ರ ದಾತೆಗೆ ನಿತ್ಯನಿರ್ಮಲೆಗೆ 2 ವರಶೇಷಗಿರಿವರನ ಉರದಲ್ಲಿ ನೆಲೆಗೊಂಡು ಶರಣಾಗತರಂ ಪರಿಭಾವಿಸಿ ಪರತರ ಸುಖಸೌಭಾಗ್ಯವ ಕರುಣಿಸಿ ಪೊರೆವ ಕಾರುಣ್ಯಮೂರುತಿಗೆ 3
--------------
ನಂಜನಗೂಡು ತಿರುಮಲಾಂಬಾ
ಮಂಗಳ ಸದ್ಗುರುವರಗೆ ಮಂಗಳ ಸದ್ಗುರುವರೆಗೆಮಂಗಳ ದುರ್ಗುಣ ಹರಗೆ ಮಂಗಳ ಬಗಳಾಂಬ ಚಿದಾನಂದ ದೊರೆಗೆ ಪ ಪೀತದ ಪೀಠದ ಮೇಲೆ ಪೀತಾಂಬರಿಯು ಕುಳ್ಳಿರಲುಪೀತದಾರತಿಯನ್ನು ಕೈಯಲಿ ಪಿಡಿದುಪೀತದಾಭರಣೆ ಪೀತದಾವರಣೆಗೆಪೀತದಾರತಿಯ ಬೆಳಗಿರೆ 1 ಮುತ್ತಿನ ಪೀಠದ ಮೇಲೆ ಮುಕ್ತಾಂಗಿ ಕುಳಿತಿಹಳುಮುತ್ತಿನಾರತಿಯನ್ನು ಕೈಯಲ್ಲಿ ಪಿಡಿದುಮುತ್ತಿನಾಭರಣೆಗೆ ಚಿತ್ತ ಚಿದ್ರೂಪಿಣಿಗೆಮುತ್ತಿನಾರತಿಯ ಬೆಳಗಿರೆ2 ಪದ್ಮಾಸನದ ಪೀಠದ ಮೇಲೆ ಪದ್ಮಾಸನೆ ಕುಳಿತಿಹಳುಪದ್ಮದಾರತಿಯನ್ನು ಕೈಯಲ್ಲಿ ಪಿಡಿದುಪದ್ಮಶ್ರೀ ಚಿದಾನಂದ ಸದ್ಗುರುವಿಗೆಪದ್ಮದಾರತಿಯ ಬೆಳಗಿರೇ 3
--------------
ಚಿದಾನಂದ ಅವಧೂತರು