ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಲ ಬಂದಿತೋ ಬಂದ ಭವದೊಳು ಚಿಂತೆಯೊಳಗೆ ದಿನ ಸಂದಿತು ಪ ತುಪ್ಪ ಪಣಕೆ ಸೇರು ಉಪ್ಪೆಂಟು ಸಿದ್ದೆಯು ಮುಪ್ಪಾಗ ಕೊಂದೆ ಕೊಳಗಬತ್ತ ಸೊಪ್ಪ ಪಣಕೆ ಮಾರುವುದು ಅಚ್ಚೇರು 1 ವ್ಯಾಪಾರ ಸಾಪಾರ ತುಟ್ಟಿಸಿದರು ಕೊಳ್ಳ ಲಾಪರೆ ಫಣವೊಂದೆ ಕಟ್ಟಿಲ್ಲ ರೂಪಾಯಿ ಕೊಡೆ ಪುಲಿಚರಮ ಪಾಪವು ಸುಲತಾಗಿ ಪಣವ ಕೊಡೆಂಬರು 2 ದುಡ್ಡು ಕೊಡಲು ಬೇಡ ಬೈಯುತ ಆನೆ ಗೂಡಿನ (ಆನೆಗೊಂದಿ) ದುಡ್ಡತಾರೆಂಬರು ದೊಡ್ಡ ಮೊಳೆ ಪಣವಿದು ಸಣ್ಣ ಮೊಳೆಯಿಂಗಿ ? ಹೆಡ್ಡ ಹೋಗೆಂದದ್ದ ಬಿಸುಟರು ಫಣವ 3 ತಪ್ಪಿ ಹೇಳುವೆನೆ ನಮ್ಮಪ್ಪ ದುರ್ಭಿಕ್ಷವು ಎಪ್ಪತ್ತು ವರುಷ ಕೊದಗಿ ಬಂತು ಇಪ್ಪತ್ತು ವರುಷಕೀಕಾಲ ಬಂದಿದ್ದರೆ ಕನಿಷ್ಟಕ್ಕೆ ಗಣಿಸಿ ಸುಕ್ಷಾಮವ ಮರೆವೆನು 4 ಧಾರಣೆ ಪಾರಣೆ ಶಿವರಾತ್ರಿ ಹರಿದಿನ ಓರಂತೆ ಬಡವಗೆ ನೆಲೆಯಾಯಿತು ಕ್ಷೀರಾಬ್ದಿ ಶಯನ ಲಕ್ಷ್ಮೀನಾರಾಯಣನು ತನ್ನ ಸೇರಿದ ಜನರ ಕಣ್ಣಲಿ ನೋಡುತೊಲಿದ 5
--------------
ಕವಿ ಪರಮದೇವದಾಸರು
ಧನವ ಗೆದ್ದವರುಂಟೆ ಜನರೊಳಗೆ ಶ್ರೀನಿವಾಸ ಪ ಕನಸಿಲಾದರು ಬಿಡದು ಕನಕದಾಶೆಯು ಈಶ ಅ.ಪ. ಹೆಂಡತಿಯ ಬಿಡಬಹುದು ಮಂಡೆಬೋಳಿಸಬಹುದು ಕಂಡ ಕಂಡವರೀಗೆ ದಂಡ ಬೀಳಲಿ ಬಹುದು ಪುಂಡರೀಕಾಕ್ಷನಿಗೆ ತೊಂಡನಾಗಲಿ ಬಹುದು ದುಡ್ಡು ಕಾಸುಗಳನ್ನು ನೀಡಲಾಗದು ಮನಸು 1 ನಾಮ ಹಾಕಲಿಬಹುದು ನೇಮಮಾಡಲಿಬಹುದು ಹೋಮಮಾಡುತಲಿ ಬಹು ಕರ್ಮಿಷ್ಟನೆನಿಸಬಹುದು ನಾಮ ಪಾಡಲಿಬಹುದು ಧರ್ಮಪೇಳಲಿ ಬಹುದು ಹೇಮದಾಶೆಯು ಬಿಡದೂ ಶ್ರೀ ಮನೋಹರನೇ 2 ಜಪಮಾಲೆಧರಿಸುತಲಿ ಉಪವಾಸ ಮಾಡಬಹುದು ತಾಪಸನು ಎನಿಸುತಲಿ ಪುರಾಣಗಳ ಪೇಳಲಿಬಹುದು ಶ್ರೀಪತಿಯ ಸೇವಿಸುತ ಜಪತಪವ ನಡೆಸಬಹುದು ರೂಪಾಯಿ ಮಮತೆ ತಾ ಮುಪ್ಪಿನಲು ತೊಲಗದೈಯ್ಯ 3 ಯಾತ್ರೆಮಾಡಲಿಬಹುದು ಸ್ತೋತ್ರ ಘಟ್ಯಾಗಿ ಹೇಳಬಹುದು ನೀತಿ ಪೇಳಲಿಬಹುದು ಪೂತನೆನಿಸಬಹುದು ಮಾತು ಮಾತಿಗೆವೇದ ಎತ್ತಿ ಪೇಳಲಿಬಹುದು ಪ್ರೀತಿ ತಪ್ಪದೂ ಯೆಂದೂ ಆಸ್ತಿ ಧನಕನಕದಲಿ 4 ಲಜ್ಜೆಬಿಡುತಲಿ ಬೇಗ ಗೆಜ್ಜೆಕಟ್ಟಲಿ ಬಹುದು ಸಜ್ಜನನುಯೆಂದೆನಿಸಿ ಮೂರ್ಜಗದಿ ಮೆರೆಯಬಹುದು ಮಜ್ಜನಕ ಜಯತೀರ್ಥ ವಾಯು ಹೃದಯದಲಿರ್ಪಜ ಗಜ್ಜನಕ “ಶ್ರೀಕೃಷ್ಣವಿಠಲ”ನೆ ನೀವಲಿವ ತನಕ 5
--------------
ಕೃಷ್ಣವಿಠಲದಾಸರು
ಧರಣೆಯನಾಳ್ವ ಪಾರ್ಥಿವರಿಂಗೆ ಪ್ರಜೆಗಳು ಬೇಡವಾಯ್ತು ವರಹದ ಮೇಲಣಾಸೆಯಿಂದ ರಹಿತರ ಬಡಿವುದಾಯ್ತು ಪ ರಾಜ್ಯಕೆ ದಂಡ ಹಾಕಿದರು ತೀರಿತೆಲ್ಲಿ ಪ್ರಜೆಗಳ ಬಾಳು ನಜರು ಕೊಡುವುದಾಯ್ತು ತೆರತೆರುವುದರಿಂದ ವರಹಕೊಂಡು ಬಂದು ಏರೆಯ ರೂಪಾಯಿಗಳನು ಎತ್ತಿ ದಂಡಿಗೆ ಕೊಡುವುದಾಯ್ತು 1 ಮತ್ತೆ ಸೇನಭೋಗರು ಶಿರಸ್ತೆದಾರರು ಸಾವಿರ ಸಾವಿರ ವೆತ್ತಿ ಜನಕೆ ಬೆದುಕಮಾಳ್ವ ಕರಣಿಕರಿಗೆ ಪತ್ತು ನೂರು ಮೂರು ಸಾವಿರವೆಂದು ದಂಡವನುಕಟ್ಟಿ ವಿತ್ತವನ್ನು ಸೆಳೆದರದುವೆ ಬಿತ್ತು ಬೇರೆ ಪ್ರಜೆಗಳ ಮೇಲೆ 2 ಸೂಳೆ ಮಾಲೆಯರನು ಕರೆಸಿ ಜನಕೆ ಸಾವಿರದಂಡಕಟ್ಟಿ ಕೂಳತಿನಲು ಬಿಡದೆ ತರುಬಿವಾಲೆ ಮೂಗುತಿ ನಾಣ್ಯಗೊಂಡು ಬೀಳು ಕೊಟ್ಟು ಮನೆಗೆ ಅಂಗಡಿ ಸಾಲುವಳಿಗೆಯರನು ಕಾಲನಂತೆ ದಣಿಸಿ ರೊಕ್ಕದ ಜಾಳಿಗೆಯನು ಕೊಂಡು ಮೆರೆವ 3 ಸುಲಿಗೆಯಾಗ ದುಳಿಯಲಿಲ್ಲ ಬೆಳೆದ ಬೆಳೆಯ ನುಣ್ಣಲಿಲ್ಲ ಹೊಳಲ ಸುಟ್ಟು ಬಿಟ್ಟುದೆಲ್ಲ ಕುಲಕೆ ಪಶುಗಳುಳಿಯಲಿಲ್ಲ ತಲೆಯ ಚಂಬುಹಾರಿತಲ್ಲ ಜನರು ಸತ್ತು ಹೋದುದೆಲ್ಲ ಮಲೆತ ರಿಪುಗಳನ್ನು ಕುಟ್ಟಿ ಪ್ರಜೆಗಳ ಕಾಯ್ದು ಕೊಳ್ಳಲಿಲ್ಲ 4 ತಿರುಕರಿಂಗೆ ಸುಖಿಗಳಿಂಗೆ ಹರುವೆ ಸೊಪ್ಪುಮಾರ್ವರಿಂಗೆ ತರುಣಿಯರನು ಬಿಟ್ಟು ತಲೆಯ ಹೆರೆಸಿ ಕೊಂಡಲೆಗಳರಿಂಗೆಗೆ ಹಿರಿದು ಕಿರಿದು ಎಂದು ಬಿಡದೆ ಮರುತ ಸುತನ ಕೋಣೆಲಕ್ಷ್ಮಿ ಯರಸ ರುದ್ರರೂಪಧರಿಸಿ ಜನರಿಗಿನಿತು ಮಾಡಿದ 5
--------------
ಕವಿ ಪರಮದೇವದಾಸರು
ಭಿಕ್ಷವ್ಯಾತಕ್ಕೊ ಫಾಲಾಕ್ಷ ನಿನಗೆ ಪ ಲಕ್ಷುಮೀಪತಿಯಂಥ ಸಖನಿದ್ದ ಬಳಿಕ ಅ.ಪ. ರಜತಾದ್ರಿ ಅರಮನೆಯು ಹೇಮನಿಗಿಯೇ ಧನುವುಗಜಗಮನ ಸುರನಿಕರ ಪರಿವಾರವು |ಭುಜಗೇಂದ್ರ ಭೂಷಣ ನಿಜರಾಣಿ ಅನ್ನಪೂರ್ಣೇಗಜಮುಖನು ಕುಮಾರ ಗಂಡುಮಕ್ಕಳು ಇರಲು 1 ಬೇಡುವುದ ಬಿಟ್ಟು ನಿನ್ನೆತ್ತು ಯಮನಿಗೆ ಕೊಟ್ಟುಮಾಡಬಾರದೆ ಮುಯ್ಯ ಅವನ ಕೋಣ |ಜೋಡು ಮಾಡಿಕೊಂಡು ಬಾತಿ ಮುಟ್ಟು ತ್ರಿಶೂಲಬೇಡಿದ್ದು ಬೆಳೆಯದೆ ಬರಿದೆ ಧಾವತಿಗೊಂಬಿ 2 ರೊಕ್ಕ ರೂಪಾಯಿಗಳು ಬೇಕೆಂಬಿಯ ಸಾಲತಕ್ಕೊಬಾರದೆ ಗೆಳೆಯ ಧನಪನಲ್ಲಿ |ಶುಕ್ರ ಒಕ್ಕಣ್ಣ ಮೋಹನ ವಿಠಲ ಇಕ್ಕಣ್ಣಮುಕ್ಕಣ್ಣ ನೀನಾಗಿ ಮುಂಜಿ ಮಂತ್ರವ ಪಿಡಿದಿ 3
--------------
ಮೋಹನದಾಸರು