ಒಟ್ಟು 9 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಸು ರೂಪಾಯ್ಗೆ ಕೊಂಡು ಕೊಂಡೆವ್ವಾ ಒಸರುವ ಗಡಿಗೆ ಪ ಏಸುರೂಪಾಯ್ಗೆ ಕೊಂಡುಕೊಂಡೆವ್ವಾ ಏಸುರಾಪಾಯ್ಗೆ ಕೊಂಡುಕೊಂಡಿ ಹೇಸಿಕೊಳ್ಳದೆ ಇದನು ನೀನು ಬೇಸರಿಲ್ಲದೆ ತೊಳೆಯುತಿದ್ದಿ ವಾಸನಿಕ್ಕಿ ನಾರುತಿದೆ ಅ.ಪ ಎಂಥ ಕುಂಬಾರಿದನು ಮಾಡಿದ ಎಷ್ಟುಕಾಲದಿ ಕುಂತು ಇದಕೆ ಶೋಧ ಹುಡುಕಿದ ಅವನು ದಾವ ಸಂತೆಯೊಳಗೆ ಕುಂತು ಮಾರಿದ ಕೊಂಡೇನುತಿಳಿದ ತಂತು ತಿಳಿಯದೆ ಹೊತ್ತುಕೊಂಡು ನಿಂತಿಯಿದರ ಖ್ಯಾಲಿನೊಳಗೆ ಸಂತೆ ತೀರಿಹೋಗಲಾಗೇನಂತ ಹೇಳುವಿ ಕೇಳುವವರಿಗೆ 1 ಕಷ್ಟದ್ಹೊತ್ತು ಕುದಿಯುತಿದ್ದ್ಯಲ್ಲ ಹುಚ್ಚು ಎಷ್ಟುದುಡಿದು ತುಂಬುತಿದ್ದ್ಯಲ್ಲ ನಿಲ್ಲದಿನಿತು ಅಷ್ಟು ಒಸರಿ ಬಸಿಯುತಾದಲ್ಲ ಖೂನ ನಿನಗಿಲ್ಲ ನಟ್ಟನಡುವೆ ಗಂಟುಬಿದ್ದು ಕೊಟ್ಟು ನಿನಗೆ ಕಷ್ಟ ವಿಧ ವಿಧ ಕಟ್ಟ ಕಡೆಗೆ ಕೈಯ ಬಿಟ್ಟು ಕೆಟ್ಟು ಮಣ್ಣು ಕೂಡುತಾದೆ 2 ಮಸಣಿಬುದ್ಧಿ ನೀಗಿ ಕೇಳಮ್ಮ ನಿಜವನಿರುತ ಕುಶಲರ್ಹೇಳುವ ಮಾತು ತಿಳಿಯಮ್ಮ ಮುಂದೆ ಮಹಕಾಲ ನಿಶೆಯು ಒದಗುತದೆ ತಂಗೆಮ್ಮ ಪುಸಿಯಲ್ಲವಮ್ಮ ಮಸಿಯ ಗಡಿಗ್ಹಿಡಿದು ಹಸನಮಾಡಿ ವಸುಧೆಗಧಿಕ ಶ್ರೀರಾಮಪಾದ ಕುಸುಮಕರ್ಪಿಸಿ ಧನ್ಯಳಾಗಿ ಅಸಮಮೋಕ್ಷಪದವಿ ಪಡೆಯೆ 3
--------------
ರಾಮದಾಸರು
ಕಾಲ ಬಂದಿತೋ ಬಂದ ಭವದೊಳು ಚಿಂತೆಯೊಳಗೆ ದಿನ ಸಂದಿತು ಪ ತುಪ್ಪ ಪಣಕೆ ಸೇರು ಉಪ್ಪೆಂಟು ಸಿದ್ದೆಯು ಮುಪ್ಪಾಗ ಕೊಂದೆ ಕೊಳಗಬತ್ತ ಸೊಪ್ಪ ಪಣಕೆ ಮಾರುವುದು ಅಚ್ಚೇರು 1 ವ್ಯಾಪಾರ ಸಾಪಾರ ತುಟ್ಟಿಸಿದರು ಕೊಳ್ಳ ಲಾಪರೆ ಫಣವೊಂದೆ ಕಟ್ಟಿಲ್ಲ ರೂಪಾಯಿ ಕೊಡೆ ಪುಲಿಚರಮ ಪಾಪವು ಸುಲತಾಗಿ ಪಣವ ಕೊಡೆಂಬರು 2 ದುಡ್ಡು ಕೊಡಲು ಬೇಡ ಬೈಯುತ ಆನೆ ಗೂಡಿನ (ಆನೆಗೊಂದಿ) ದುಡ್ಡತಾರೆಂಬರು ದೊಡ್ಡ ಮೊಳೆ ಪಣವಿದು ಸಣ್ಣ ಮೊಳೆಯಿಂಗಿ ? ಹೆಡ್ಡ ಹೋಗೆಂದದ್ದ ಬಿಸುಟರು ಫಣವ 3 ತಪ್ಪಿ ಹೇಳುವೆನೆ ನಮ್ಮಪ್ಪ ದುರ್ಭಿಕ್ಷವು ಎಪ್ಪತ್ತು ವರುಷ ಕೊದಗಿ ಬಂತು ಇಪ್ಪತ್ತು ವರುಷಕೀಕಾಲ ಬಂದಿದ್ದರೆ ಕನಿಷ್ಟಕ್ಕೆ ಗಣಿಸಿ ಸುಕ್ಷಾಮವ ಮರೆವೆನು 4 ಧಾರಣೆ ಪಾರಣೆ ಶಿವರಾತ್ರಿ ಹರಿದಿನ ಓರಂತೆ ಬಡವಗೆ ನೆಲೆಯಾಯಿತು ಕ್ಷೀರಾಬ್ದಿ ಶಯನ ಲಕ್ಷ್ಮೀನಾರಾಯಣನು ತನ್ನ ಸೇರಿದ ಜನರ ಕಣ್ಣಲಿ ನೋಡುತೊಲಿದ 5
--------------
ಕವಿ ಪರಮದೇವದಾಸರು
ಚಾರು ಹಸ್ತಾಯ 1ಹೃದಯಶೋಭಿತ ಮಹಾ ಕೌಸ್ತುಭಾಭರಣಾಯವಿಧಿಜನಕ ನಾಭಿಪಂಕಜ ಭಾಸುರಾಯಸದಮಲಾಯತ ಕಾಂಚಿದಾಮಯುತ ವಸನಾಯಬುಧಜನಮನೋವೇದ್ಯ ಪಾದಪದ್ಮಾಯ 2ಲಕ್ಷ್ಮೀಕಳತ್ರಾಯ ಸೂಕ್ಷ್ಮಸ್ವರೂಪಾಯಕುಕ್ಷಿಗತಭುವನ ಪರಿಪಾಲಕಾಯಪಕ್ಷೀಂದ್ರಕಂಧರಾರೂಢಾಯ ದುಷ್ಟಜನಶಿಕ್ಷಾಸಮರ್ಥಾಯ ಸಾಕ್ಷಿ ಚೈತನ್ಯಾಯ 3ವಿಶ್ವಸ್ವರೂಪಾಯ ವಿಶ್ವತರು ಮೂಲಾಯವಿಶ್ವಗುಣ ಸಂಹಾರಕಾರಣಾಯವಿಶ್ವನಾಟಕಸೂತ್ರಧಾರಾಯ ನಿತ್ಯಾಯವಿಶ್ವಕೃತ ಸುಕೃತದುಷ್ಕøತ ಲೇಪರಹಿತಾಯ 4ಧರಣಿಕಮಲಾಲಯಾಶ್ರಿತ ದಿವ್ಯ ಪಾಶ್ರ್ವಾಯಸುರಮುನಿ ಸ್ತುತಿ ಘೋಷಪೂರಿತಾಯಪರಮಪಾವನಪುಣ್ಯ ಶೇಷಾದ್ರಿನಿಲಯಾಯಸ್ಮರಜನಕ ಸುರಶಿಖಾಮಣಿ ವೆಂಕಟೇಶಾಯ 5ಓಂ ಅನಘಾಯ ನಮಃಕಂ||ಗಣಪತಿ ನಿನ್ನಾಗ್ನೇಯದಲಿನ ತಾ ನೈರುತ್ಯದೆಶೆಯೊಳಂಬಿಕೆಮರುತನೊಳನುಪಮ ಶಂಕರನೀಶಾನ್ಯನೋಳರ್ಚಿತರಾರೈಯ್ಯ ತಿರುಪತಿಯೊಡೆಯಾನೀನೇ ಗಣಪತಿ ಸೂರ್ಯನುನೀನೇ ಶಿವ ನಿನ್ನ ಶಕ್ತಿ ದೇವಿಯು ನಾನೂನೀನಾಗಿ ನಿನ್ನ ಭಜಿಸಿದೆನೀ ನಿರ್ಣಯ ನಿನ್ನ ವಚನ ವೆಂಕಟರಮಣಾ
--------------
ತಿಮ್ಮಪ್ಪದಾಸರು
ಧನವ ಗೆದ್ದವರುಂಟೆ ಜನರೊಳಗೆ ಶ್ರೀನಿವಾಸ ಪ ಕನಸಿಲಾದರು ಬಿಡದು ಕನಕದಾಶೆಯು ಈಶ ಅ.ಪ. ಹೆಂಡತಿಯ ಬಿಡಬಹುದು ಮಂಡೆಬೋಳಿಸಬಹುದು ಕಂಡ ಕಂಡವರೀಗೆ ದಂಡ ಬೀಳಲಿ ಬಹುದು ಪುಂಡರೀಕಾಕ್ಷನಿಗೆ ತೊಂಡನಾಗಲಿ ಬಹುದು ದುಡ್ಡು ಕಾಸುಗಳನ್ನು ನೀಡಲಾಗದು ಮನಸು 1 ನಾಮ ಹಾಕಲಿಬಹುದು ನೇಮಮಾಡಲಿಬಹುದು ಹೋಮಮಾಡುತಲಿ ಬಹು ಕರ್ಮಿಷ್ಟನೆನಿಸಬಹುದು ನಾಮ ಪಾಡಲಿಬಹುದು ಧರ್ಮಪೇಳಲಿ ಬಹುದು ಹೇಮದಾಶೆಯು ಬಿಡದೂ ಶ್ರೀ ಮನೋಹರನೇ 2 ಜಪಮಾಲೆಧರಿಸುತಲಿ ಉಪವಾಸ ಮಾಡಬಹುದು ತಾಪಸನು ಎನಿಸುತಲಿ ಪುರಾಣಗಳ ಪೇಳಲಿಬಹುದು ಶ್ರೀಪತಿಯ ಸೇವಿಸುತ ಜಪತಪವ ನಡೆಸಬಹುದು ರೂಪಾಯಿ ಮಮತೆ ತಾ ಮುಪ್ಪಿನಲು ತೊಲಗದೈಯ್ಯ 3 ಯಾತ್ರೆಮಾಡಲಿಬಹುದು ಸ್ತೋತ್ರ ಘಟ್ಯಾಗಿ ಹೇಳಬಹುದು ನೀತಿ ಪೇಳಲಿಬಹುದು ಪೂತನೆನಿಸಬಹುದು ಮಾತು ಮಾತಿಗೆವೇದ ಎತ್ತಿ ಪೇಳಲಿಬಹುದು ಪ್ರೀತಿ ತಪ್ಪದೂ ಯೆಂದೂ ಆಸ್ತಿ ಧನಕನಕದಲಿ 4 ಲಜ್ಜೆಬಿಡುತಲಿ ಬೇಗ ಗೆಜ್ಜೆಕಟ್ಟಲಿ ಬಹುದು ಸಜ್ಜನನುಯೆಂದೆನಿಸಿ ಮೂರ್ಜಗದಿ ಮೆರೆಯಬಹುದು ಮಜ್ಜನಕ ಜಯತೀರ್ಥ ವಾಯು ಹೃದಯದಲಿರ್ಪಜ ಗಜ್ಜನಕ “ಶ್ರೀಕೃಷ್ಣವಿಠಲ”ನೆ ನೀವಲಿವ ತನಕ 5
--------------
ಕೃಷ್ಣವಿಠಲದಾಸರು
ಧರಣೆಯನಾಳ್ವ ಪಾರ್ಥಿವರಿಂಗೆ ಪ್ರಜೆಗಳು ಬೇಡವಾಯ್ತು ವರಹದ ಮೇಲಣಾಸೆಯಿಂದ ರಹಿತರ ಬಡಿವುದಾಯ್ತು ಪ ರಾಜ್ಯಕೆ ದಂಡ ಹಾಕಿದರು ತೀರಿತೆಲ್ಲಿ ಪ್ರಜೆಗಳ ಬಾಳು ನಜರು ಕೊಡುವುದಾಯ್ತು ತೆರತೆರುವುದರಿಂದ ವರಹಕೊಂಡು ಬಂದು ಏರೆಯ ರೂಪಾಯಿಗಳನು ಎತ್ತಿ ದಂಡಿಗೆ ಕೊಡುವುದಾಯ್ತು 1 ಮತ್ತೆ ಸೇನಭೋಗರು ಶಿರಸ್ತೆದಾರರು ಸಾವಿರ ಸಾವಿರ ವೆತ್ತಿ ಜನಕೆ ಬೆದುಕಮಾಳ್ವ ಕರಣಿಕರಿಗೆ ಪತ್ತು ನೂರು ಮೂರು ಸಾವಿರವೆಂದು ದಂಡವನುಕಟ್ಟಿ ವಿತ್ತವನ್ನು ಸೆಳೆದರದುವೆ ಬಿತ್ತು ಬೇರೆ ಪ್ರಜೆಗಳ ಮೇಲೆ 2 ಸೂಳೆ ಮಾಲೆಯರನು ಕರೆಸಿ ಜನಕೆ ಸಾವಿರದಂಡಕಟ್ಟಿ ಕೂಳತಿನಲು ಬಿಡದೆ ತರುಬಿವಾಲೆ ಮೂಗುತಿ ನಾಣ್ಯಗೊಂಡು ಬೀಳು ಕೊಟ್ಟು ಮನೆಗೆ ಅಂಗಡಿ ಸಾಲುವಳಿಗೆಯರನು ಕಾಲನಂತೆ ದಣಿಸಿ ರೊಕ್ಕದ ಜಾಳಿಗೆಯನು ಕೊಂಡು ಮೆರೆವ 3 ಸುಲಿಗೆಯಾಗ ದುಳಿಯಲಿಲ್ಲ ಬೆಳೆದ ಬೆಳೆಯ ನುಣ್ಣಲಿಲ್ಲ ಹೊಳಲ ಸುಟ್ಟು ಬಿಟ್ಟುದೆಲ್ಲ ಕುಲಕೆ ಪಶುಗಳುಳಿಯಲಿಲ್ಲ ತಲೆಯ ಚಂಬುಹಾರಿತಲ್ಲ ಜನರು ಸತ್ತು ಹೋದುದೆಲ್ಲ ಮಲೆತ ರಿಪುಗಳನ್ನು ಕುಟ್ಟಿ ಪ್ರಜೆಗಳ ಕಾಯ್ದು ಕೊಳ್ಳಲಿಲ್ಲ 4 ತಿರುಕರಿಂಗೆ ಸುಖಿಗಳಿಂಗೆ ಹರುವೆ ಸೊಪ್ಪುಮಾರ್ವರಿಂಗೆ ತರುಣಿಯರನು ಬಿಟ್ಟು ತಲೆಯ ಹೆರೆಸಿ ಕೊಂಡಲೆಗಳರಿಂಗೆಗೆ ಹಿರಿದು ಕಿರಿದು ಎಂದು ಬಿಡದೆ ಮರುತ ಸುತನ ಕೋಣೆಲಕ್ಷ್ಮಿ ಯರಸ ರುದ್ರರೂಪಧರಿಸಿ ಜನರಿಗಿನಿತು ಮಾಡಿದ 5
--------------
ಕವಿ ಪರಮದೇವದಾಸರು
ನವನೀತ ತಸ್ಕರಾಯ ಜಯಮಂಗಳಂ ಪವಮಾನ ವಂದಿತಾಯ ಶುಭಮಂಗಳಂ ಪ ವಿಶ್ವ ಪರಬ್ರಹ್ಮ ಅಚ್ಯುತಾಯ ಶರನಿಧಿ ಮಂದಿರಾಯ ಜಯಮಂಗಳಂ ಪರವಸ್ತ ಪರಪರಂಜ್ಯೋತಿ ಪ್ರಕಾಶಾಯ ಸಿರಿದೇವಿ ಅರಸಾಯ ಶುಭಮಂಗಳಂ 1 ಈಶಾ ಇಂದ್ರಾ ವಂದಿತಾಯ ವಿಶ್ವನಯನಾಯ ವಾರಾ ಣಾಸಿ ಕ್ಷೇಮ ಸ್ಥಾಪಿತತಾಯ ಜಯಮಂಗಳಂ ಆಶಾ ದೋಷಾ ಕ್ಲೇಷಾ ಪಾಶಾ ನಾಶಾ ನಾರಾ ಪೋಷಕಾಯ ಶೇಷರಾಜ ಶಯನಾಯ ಶುಭಮಂಗಳಂ 2 ವಾಣೀಪತಿ ಜನಕಾಯ ವೇಣು ನಾದಾ ವಿನೋದಾಯ ಮಾಣಿಕ್ಯ ಹೀರಾ ಹಾರಾಯ ಜಯಮಂಗಳಂ ಬಾಣ ಬಾಹು ಖಂಡನಾಯ ಬಲಿ ಸದನವಾಸಾಯ ಚಾಣೂರ ಮರ್ಧನಾಯ ಶುಭಮಂಗಳಂ 3 ವಿಶ್ವ ಕುಟುಂಬಿ ಪಾಲಾಯ ವಿಷ್ಣು ಸರ್ವೋತ್ತಮಾಯ ಜಯ ಮಂಗಳಂ ಶಿಷ್ಯ ಜನ ವರದಾಯ ಸಿದ್ಧ ಪ್ರಸಿದ್ಧ ರೂಪಾಯ ಮುಷ್ಟಿಕಾ ಸುರವಧಾಯ ಶುಭಮಂಗಳಂ 4 ಬಂಧು ಬಂಧನಾಯಾ ಮಹಸಿಂಧು ನರ ರಕ್ಷಕಾಯ ಸಿಂಧುರಾಜಾ ಹರಣಾಯ ಜಯಮಂಗಳಂ ವೃಂದಾವನ ಸಂಚಾರಾಯ ವಿಜಯವಿಠ್ಠಲರೇಯಾಯ ಮಾಧವ ದೇವಾಯ ಶುಭಮಂಗಳಂ5
--------------
ವಿಜಯದಾಸ
ಭಿಕ್ಷವ್ಯಾತಕ್ಕೊ ಫಾಲಾಕ್ಷ ನಿನಗೆ ಪ ಲಕ್ಷುಮೀಪತಿಯಂಥ ಸಖನಿದ್ದ ಬಳಿಕ ಅ.ಪ. ರಜತಾದ್ರಿ ಅರಮನೆಯು ಹೇಮನಿಗಿಯೇ ಧನುವುಗಜಗಮನ ಸುರನಿಕರ ಪರಿವಾರವು |ಭುಜಗೇಂದ್ರ ಭೂಷಣ ನಿಜರಾಣಿ ಅನ್ನಪೂರ್ಣೇಗಜಮುಖನು ಕುಮಾರ ಗಂಡುಮಕ್ಕಳು ಇರಲು 1 ಬೇಡುವುದ ಬಿಟ್ಟು ನಿನ್ನೆತ್ತು ಯಮನಿಗೆ ಕೊಟ್ಟುಮಾಡಬಾರದೆ ಮುಯ್ಯ ಅವನ ಕೋಣ |ಜೋಡು ಮಾಡಿಕೊಂಡು ಬಾತಿ ಮುಟ್ಟು ತ್ರಿಶೂಲಬೇಡಿದ್ದು ಬೆಳೆಯದೆ ಬರಿದೆ ಧಾವತಿಗೊಂಬಿ 2 ರೊಕ್ಕ ರೂಪಾಯಿಗಳು ಬೇಕೆಂಬಿಯ ಸಾಲತಕ್ಕೊಬಾರದೆ ಗೆಳೆಯ ಧನಪನಲ್ಲಿ |ಶುಕ್ರ ಒಕ್ಕಣ್ಣ ಮೋಹನ ವಿಠಲ ಇಕ್ಕಣ್ಣಮುಕ್ಕಣ್ಣ ನೀನಾಗಿ ಮುಂಜಿ ಮಂತ್ರವ ಪಿಡಿದಿ 3
--------------
ಮೋಹನದಾಸರು