ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದವಾಹನ ವಿಠಲ ನೀನಿವಳ ಕಾಯಬೇಕೋ |ಜ್ಞಾನಪೂರ್ಣನೆ ನಿನ್ನ ಸುಜ್ಞಾನ ಪಾಲಿಸುತ ಹರಿಯೆ ಪ ನಿಗಮವೇದ್ಯನೆ ದೇವ ಜಗದಂತರಾತ್ಮನೆಬಗೆಬಗೆಯ ಲೀಲೆಗಳ ನಗುನಗುತ ತೋರೀ ಬಗೆಹರಿಸು ಭವರೊಗ ಭಿನ್ನೈಪೆ ನಾನಿದನನಗಚಾಪ ಪರಿಪಾಲ ಖಗವಹನೆ ದೇವಾ1 ಪಂಚರೂಪಾತ್ಮಕನೆ ಪಂಚ ಬಾಣನ ಪಿತನೆಪಂಚ ಭೇದ ಜ್ಞಾನ ಸಂಚಿಂತನೆಯನಿತ್ತು |ವಾಂಚಿತಾರ್ಥದ ಹರಿಯೆ ವೈರಾಗ್ಯ ಸದ್ಭಕುತಿವಾಂಚಿಪಳಿಗೀಯೊ | ನಿಷ್ಕಿಂಚನರ ಪ್ರೀಯಾ 2 ಪತಿಸುತರು ಹಿತದಲ್ಲಿ ಮತಿ ಮತಾಂವರರಲ್ಲಿಕೃತಿಪತಿಯೆ ನಿನವ್ಯಾಪ್ತಿ ಅತಿಶಯದಿ ತೋರುತಲಿಹಿತದಿಂದ ಸೇವಿಸುವ ಮತಿಯಿತ್ತು ನೀನಿವಳ ಗತಿಗೆ ಸಾಧನನೆನಿಸು ಪ್ರತಿರಹಿತ ದೇವಾ 3 ನಾಮ ಮಹಿಮೆಯ ತಿಳಿಸಿ ಪ್ರೇಮದಿಂದಲಿ ನಿನ್ನನಾಮದುಚ್ಛಾರಣೆಯ ನೇಮವನೆ ಪಾಲಿಸುತ |ಕಾಮಿತವ ಸಲಿಸುವುದು ಭೂಮ ಗುಣ ನಿಸ್ಸೀಮರಾಮಚಂದ್ರನೆ ಸರ್ವ ಸ್ವಾಮಿ ಎನಿಸುವನೇ 4 ಶ್ರೀವರನೆ ಭವವನಧಿ ನಾವೆ ಎಂದೆನಿಸಿಹನೆಕಾವುದಿವಳನು ಸತತ ಸರ್ವಾಂತರಾತ್ಮ |ನೀವೊಲಿಯದಿನ್ನಾರು ಕಾವವರ ನಾಕಾಣೆದೇವವರ ವಂದ್ಯ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಏನೆಂದು ಕೊಂಡಾಡಿ ಸುತ್ತಿಸೆಲೊ ನಿನ್ನಾ ಪ ದಾನವಾಂತಕ ಕೃಷ್ಣ ಆನಂದ ಗುಣ ಪೂರ್ಣ ಅ.ಪ. ಮತ್ಸರೂಪಿಯೆ ನಿನ್ನ ಉತ್ಸಹದಿ ಕರೆಯಲಾಕುತ್ಸಿತನ ಸೊಲ್ಲ ನೀನೆತ್ತ ಕೇಳುವಿಯೋ |ಮತ್ಸ್ಯಕೇತನ ಜನಕ | ಮತ್ಸರವ ಕಳೆಯಯ್ಯಸಚ್ಚಿದಾನಂದಾತ್ಮ | ಚಿತ್ಸುಖಪದನೇ 1 ಕೂರ್ಮರೂಪಿಯೆಂದು | ಪೇರ್ಮೆಯಲಿ ಕರೆಯಲಾಭರ್ಮ ಗರ್ಭನ ಪಿತನೆ | ಗಿರಿಯ ಧರಿಸಿರುವೇ |ನಿರ್ಮಲಾತ್ಮಕನೆ ಯೆನಗೆ | ನಿರ್ಮಮತೆ ನೀಡಯ್ಯಾ ಊರ್ಮಿಳಾಪತಿ ಭ್ರಾತೃ | ಪರಮ ಮಂಗಳನೇ 2 ವರಹ ರೂಪಿಯೆ ನಿನ್ನ | ಕರೆಯುವುದು ಹೇಗಯ್ಯಾ ಕೋರೆ ದಾಡಿಯ ಮೇಲೆ | ಧರೆಯೆ ಧರಿಸಿರುವೇ | ವಾರೆ ನೋಟದಿ ಯೆನ್ನ | ಪರಿಕಿಸೀ ಪೊರೆಯಯ್ಯಾಧೀರ ಭೂವರಹ ವರ | ಧರಣಿ ಪರಿಪಾಲಾ 3 ನಾರಸಿಂಹನೆ ನಾನು | ಕರೆಯಲಾಪನೆ ನಿನ್ನಘೋರರೂಪವ ನೋಡಿ | ದೂರ ಸಾರುವರೋವಾರಿಜಾಕ್ಷಿಯು ಬಂದು | ಘೋರ ಪ್ರಹ್ಲಾದನ್ನಚಾರು ತವ ಚರಣದಲಿ | ಇರಿಸಬೇಕಾಯ್ತು 4 ದಧಿ | ವಾಮನನೆ ಬಾರೆಂದುಸಾಮಸನ್ಮುತ ನಿನ್ನ | ನಾಮಗಳ ನೆನೆಯೆಲಾ |ಭೂಮಿ ಬೇಡುವ ನೆವದಿ | ಬಲಿಯ ಭೂಮಿಗೆ ತುಳಿದೆಸೀಮೆ ಮೀರಿದ ಮಹಿಮ | ಮರ್ಮವಿನ್ನೆಷ್ಟೋ | 5 ಪರಶುರಾಮನೆ ನಿನ್ನ | ಕರೆಯಲಾರೆನು ನಾನುದುರುಳ ಕ್ಷತ್ರಿಯರ | ಶಿರಗಳನೆ ತರಿದೂ |ಭಾರಿ ಪರಶುವಿನಿಂದ | ವರಮಾತೆ ಶಿರ ತರಿದಿಸರಿ ಕಾಣೋ ಇದು ನಿನಗೆ | ಪರಮ ಪಾವನ್ನಾ 6 ರಾಮ ರೂಪಿಯೆ ನಿನ್ನ | ಆ ಮಹಾ ಮಹಿಮೆಗಳಸೀಮೆಗಾಣಳು ಲಕುಮಿ | ಪಾಮರನಿಗಳವೇ |ಆ ಮರಾ ಈ ಮರಾನೆಂದ ಆ | ಪಾಮರನ ಪೊರೆದುಆ ಮಹಾತ್ಮನ ಗೈದ | ಪರಿಯೆನ್ನ ಮಾಡೋ 7 ಕೃಷ್ಣ ಕೃಷ್ಣಾ ಎಂದು ಕರೆಯುವೆನೆ ನಾ ನಿನ್ನಕಷ್ಟದೊಳು ಸಿಲುಕಿರುವೆ | ಗಿರಿಯನ್ನೆ ಪೊತ್ತು |ವೃಷ್ಟಿಕುಲ ಸಂಪನ್ನ | ಕೃಷ್ಣ ಮೂರುತಿ ನೀನುಇಷ್ಟ ಭಕುತರ ಮನೋ | ಭೀಷ್ಟ ಸಲಿಸುವಿಯಾ 8 ಬುದ್ಧ ದೇವನೆ ಎನಗೆ ಸ | ದ್ಭುದ್ಧಿ ಕೊಡು ಎಂದುಬುದ್ಧಿ ಪೂರ್ವಕವಾಗಿ ನಿನ್ನ ಕರೆಯಲಾ |ಬುದ್ಧಿಯಿಂದಲಿ ನೀ | ಭೋಧಿಸಿದೆ ದುಶ್ಯಾಸ್ತ್ರಬೌದ್ಧ ನಿನ್ನನು ಪೊದ್ದು | ಬುಧರ ಪಾಡೇನೊ 9 ಕಲ್ಕಿ ಕಲ್ಕೀ ಎಂದೇ ಕರೆಯಲಾಪೆನೆ ದೇವಾಶುಲ್ಕ ಮೇಲಾಗಿಹುದು ಕಲಿಯುಗದೊಳು |ಉಲ್ಕ ಮುಖ ಮೊದಲಾದ | ಕಲ್ಕಿರಾಜರು ನಿನ್ನಕಲ್ಕ್ಯಾತ್ಮ ಸತ್ಯ ತವ | ವ್ರತವ ಮಾಳ್ಪರು ಬಿಡದೆ 10 ಸರ್ವರೂಪಾತ್ಮಕನೆ | ಸರ್ವ ವ್ಯಾಪಕ ಸ್ವಾಮಿಸರ್ವಜಿತು ಸರ್ವಾತ್ಮ ಸರ್ವೇಶನೇ |ಶರ್ವಾರಿ ವಂದ್ಯ ಗುರು | ಗೋವಿಂದ ವಿಠಲನೇಗುರು ಹೃದಂಬರದಲ್ಲಿ | ತೋರಿ ಪೊರೆಯನ್ನ 11
--------------
ಗುರುಗೋವಿಂದವಿಠಲರು
ಭವ ಹರಿಸೊ ಕರುಣಾ ಜಲಧಿ ನೆಂಟ ನೀನಾಗಿ ಹೃನ್ಮಂಟಪದೊಳಗೆ ಪ. ಎಂಟಕ್ಷರ ನುತನೆ ಎಂಟು ರೂಪಾತ್ಮಕನೆ ಎಂಟು ಮೂರು ತತ್ವ ನಿರ್ಮಿಸಿಹನೆ ಎಂಟು ದಳದಲಿ ನಿಂತು ಎಂಟು ವಿಧ ಪ್ರೇರಿಸುತ ಎಂಟು ದಿಕ್ಪತಿಗಳಿಂ ಸೇವೆ ಕೊಳುತಿಹನೆ 1 ಎಂಟು ವಿಧ ಕರ್ತೃವೆ ಎಂಟು ಭಾಗ್ಯಯುತನೆ ಎಂಟು ಬಾಹು ಎಂಟು ಆಯುಧಧರನೆ ಎಂಟು ಪತ್ನಿಯರಿಂದ ಎಂಟನೇ ಅವತಾರಿ ನೆಂಟರೊಡನೆ ಜಗದ ಕಂಟಕರ ಸದೆದನೆ 2 ಎಂಟೆರಡು ಕಲೆಪೂರ್ಣ ವೆಂಕಟರಮಣನೆ ಎಂಟು ವಿಧ ಮದಗಳನು ಭೇದಿಸುತಲಿ ಎಂಟೆರಡು ಒಂದು ಇಂದ್ರಿಯ ನಿನ್ನ ಕಡೆ ಮಾಡಿ ಭಂಟನೆನಿಸೆನ್ನ ಶ್ರೀ ಗೋಪಾಲಕೃಷ್ಣವಿಠಲ3
--------------
ಅಂಬಾಬಾಯಿ
ಭೀಮಾ ತಟಗ ವಿಠಲ | ಕಾಪಾಡೊ ಇವಳಾ ಪ ಸನ್ನುತ ದೇವಾ | ಪ್ರಾರ್ಥಿಸುವೆ ಹರಿಯೇ ಅ.ಪ. ಮರುತದಲ್ಲಿಹಳು | ತರುಣಿ ಬಹು ಭಕ್ತಿಯಲಿಹರಿದಾಸ್ಯ ಕುಂಕ್ಷಿಪಳು | ಕರಿವರದ ದೇವಾ |ಗುರುಕರುಣ ಸ್ವಪ್ನದಲಿ | ಹರಿದಾಗಿ ಪಡೆದಿಹಳುತರಳೆಜ್ರಪತಿ ವರದ | ಪರಿಪಾಲಿಸಿವಳಾ 1 ಪಂಚ ಪಂಚಿಕೆಯ ಪ್ರ | ಪಂಚ ಸತ್ಯತ್ವವನುಪಂಚ ಭೇದಗಳರುಹಿ | ಕಾಪಾಡೊ ಹರಿಯೇ |ಅಂಚೆ ವಹ ಪಿತನೆ ಸ | ತ್ತರತ ಮತ ತಿಳಿಸುತ್ತಪಂಚರೂಪಾತ್ಮಕನೆ | ಕೈಪಿಡಿಯೊ ಇವಳಾ 2 ಭೋಗಗಳ ಉಂಬಾಗ | ಭೋಗಿರಥೀ ಪಿತನಜಾಗುಮಾಡದೆ ಸ್ಮರಿಪ | ಭಾಗ್ಯವನೆ ಕೊಟ್ಟೂ |ಆಗುಹೋಗುಗಳೆಂಬ | ದ್ವಂದ್ವ ಸಹನೆಯನಿತ್ತುನೀಗೊ ಭವಸಾಗರವ | ಕಾರುಣ್ಯಮೂರ್ತೇ 3 ಪತಿಯೇ ಪರದೈವವೆಂ | ಬತುಳ ಶುಭಮತಿಯಿತ್ತುಗತಿಗೋತ್ರ ನೀನೆಂದು | ಸತತ ಚಿಂತಿಸುತಾ |ಮತಿವರಾಂ ವರರಂಘ್ರಿ | ಶತಪತ್ರಸೇವೆಯನುರತಿಯಿಂದ ಗೈವಂಥ | ಮತಿನೀಡೊ ಹರಿಯೇ4 ಸಂತಾನ ಸಂಪತ್ತು | ಶಾಂತಿಪತಿ ನೀನಿತ್ತುಕಾಂತುಪಿತ ಸೇವೆನೈ | ರಂತರದಿ ಗೈವಾ |ಪಂಥದಲಿ ಇರಿಸು ಗುರು | ಗೋವಿಂದ ವಿಠ್ಠಲನೆಇಂತಪ್ಪ ಪ್ರಾರ್ಥನೆಯ | ಸಲಿಸೋ ಶ್ರೀ ಹರಿಯೇ5
--------------
ಗುರುಗೋವಿಂದವಿಠಲರು