ಒಟ್ಟು 5 ಕಡೆಗಳಲ್ಲಿ , 2 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇ ನೋಡು ನಿನ್ನ ನಿಜವಾದ ಸ್ವರೂಪ ಜೀವ ಇದೇ ಸಕಲ ಜಗದ ಕಾರಣಾ ಬ್ರಹ್ಮ ಪೂರಣ ಪ ಅನಿಸುವಿಕೆಯು ಇಲ್ಲದಿರುವಾ ತೋರಿಕಿಲ್ಲದಾ ಬರಿ ಇರವಿದೇ ಮನಸಿಲ್ಲದೆ ಬೆಳಗುತಿರುವ ನಿದ್ರೆಹೊದ್ದದಾ ಬರಿ ಅರಿವಿದೆ ಘನ ನಿರಾಕಾರವೇ 1 ವಿಷಯಜನಿತ ದುಃಖಸುಖದ ಸುಳಿವು ತೋರದ ಘನಾನಂದವೇ ಶೇಷ ಮಾತ್ರನಾಗಿ ಸದಾ ಶಾಂತಿರೂಪದ ನಿರ್ವಿಕಾರ ನೀ ಹಸನಾಗಿ ತಿಳಿದುಕೊಳ್ಳು ಬೋಧವಾ ನೀನದೆ ಎಂಬುದ ಈ ಸತ್ಯಸ್ವರೂಪವೇ 2 ಸ್ವರೂಪಾತ್ಮ ಮಾತ್ರ ಪರಮಸತ್ಯನಾಗಿಹ ನಿತ್ಯನಾಗಿಹ ಬರೀ ತೋರಿ ಅಡಗುತಿರುವ ಜಗವು ಭ್ರಾಮಕಾ ಮಿಥ್ಯಾಭಾಸಕ ಗುರುವರ್ಯ ಶಂಕರಾತ್ಮಬೋಧನಾವೇದಾಂತಸಾರವಾ ಪರಮಾತ್ಮ ಜ್ಞಾನವಾ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಏನು ತಿಳಿವುದೋ ಮೂರ್ಖರಿಗೇನು ತಿಳುವುದೋತಾನೇ ತಾನಾದ ತತ್ವವ ಹೇಳಲು ತನ್ನ ತಲೆಯನು ತೂಗುತಿರುವಗೆ ಪ ಮಂಕರಿ ಹೊರುವ ಕೋಣನ ಮುಂದೇ ಮಹಾವೀಣೆಯನು ಹಿಡಿದುಕಿಂಕಿಣಿ ಕಿಣಿ ಕಿಣಿ ಎಂದು ಬಾರಿಸೆ ತಿಳಿಯುವುದೇಓಂಕಾರದ ಮಹಿಮೆಯನು ಒಲಿದು ಹಿರಿಯರು ಹೇಳುತಿರಲುತಂಕದಿ ಕೇಳುತ ಹೋ ಹೋ ಎಂದು ತಲೆಯನು ತೂಗುವರಿಗೆ1 ಮೂಟೆಯ ಹೊರುವ ಕತ್ತೆಯ ಮೂಗಿಗೆ ಮಘ ಮಘಿಪ ಕಸ್ತೂರಿಯ ಹಚ್ಚಲುಗಾಳಿಯ ಪರಿಮಳ ಸುಗಂಧಗಳ ಅದು ತಿಳಿಯುವದೇಲಾಲಿಪ ಬ್ರಹ್ಮಾನಂದದ ಲಕ್ಷಣ ಲಕ್ಷ್ಯವ ಹಿರಿಯರು ಹೇಳುತಿರಲು ಕೇಳಿದಾಗಲೇಹೋ ಹೋ ಎನ್ನುತ ತಲೆಯ ತೂಗುವವರಿಗೆ 2 ಸತ್ಯಾನಂದರೆ ಅವರೇ ಗುರುಗಳು ಸತ್ಯ ಸಂಧರು ಅವರೇ ಭಕ್ತರುಸತ್ಯ ಜ್ಞಾನವ ತಿಳಿಯಲಿಕೆ ಅವರೇ ಯೋಗ್ಯರುಸತ್ಯವಸ್ತು ಚಿದಾನಂದ ಸಾಕ್ಷಾತ್ ರೂಪವೇ ಹೇಳುತಿರಲುಚಿತ್ತದಿ ಕೇಳು ಹೋ ಹೋ ಎಂದು ತಲೆಯ ತೂಗುವರಿಗೆ 3
--------------
ಚಿದಾನಂದ ಅವಧೂತರು
ತಿಳಿಯಿರೋ ಸಮ್ಮಿಂದ ಹೇಳುವೆ ಸುಧಾನಂದ ಪ ಉಂಬವ ತಾನಾರು ಉಣಬಲ್ಲವನಾರುಸಂಭವಿಸುವನಾರು ಸಮನಿಸಿ ಇಂಬಾಗಿಹನಾರು 1 ಕಣ್ಣಿಂದಲೆ ನೋಡಿ ನೋಡುವ ಕಣ್ಣು ಕಾಂಬುದೆ ಖೋಡಿಕಣ್ಣೊಳಗದೆ ನೋಡಿ ಕಂಡಾ ಕಣ್ಣಹುದೆಂದಾಡಿ 2 ಕಿವಿಯಿಂದಲೆ ಕೇಳಿ ಕಿವಿಯನು ಕಿವಿಯೆ ಗಯ್ಯಾಳಿಕಿವಿಯೆ ದಿವಾಳಿ ಕಿವಿಗಾ ಕಿವಿಗರಿವಹುದ್ದೇಳಿ 3 ನಾಲಗೆ ನುಡಿಯಿರಲಿ ನುಡಿವುದೆ ನಾಲಗೆ ಬರಿ ತೊಗಲುನಾಲಗೆಯೊಳಗಿರಲು ಮೂಲದ ನಾಲಗೆಯಲಿ ಬರಲು 4 ಮೂಗಿನ ಮೂಲಕ ಪ್ರಾಣ ಅರಿವಡೆ ಮೂಗು ಬಲ್ಲುದೆ ಕೋಣಮೂಗರಿದವ ಜಾಣ ಮೂಗದು ನಿರ್ವಾಣ5 ತನುವಿನ ಒಳಗಿರ್ದು ಚೇತನ ಜನಿಸುತಲಿರುತಿರ್ದುಇನಿತಾದಲಿರ್ದು ಬೆಳಗುವ ತಾನೆ ತಾನಿರ್ದು 6 ರೂಪಕೆ ವಿರಹಿತನೆ ತೋರ್ಪಾ ರೂಪವೇ ತಾನಿಹನಾಲೇಪಕೆ ದೂರಿಹನಾ ಚಿದಾನಂದಪತಿ ಗುರುವವನಾ7
--------------
ಚಿದಾನಂದ ಅವಧೂತರು
ನಿರ್ವಿಕಲ್ಪರೂಪವೇ ಆನಂದರುಪವೇ ಸರ್ವಾಧಾರ ಚಿನ್ನಭಾ ನೀನೆ ಆ ಸ್ವಯಂಪ್ರಭಾ ಪ ನೀ...... ಅನುಭವದಿ ಮನಗಾಣುವಧೀ ಭಾವಾತೀತ ಬೋಧವಾ ನಿತ್ಯಾನಂದದಾತ್ಮವಾ ಕಲ್ಪನೆ ಎರಡರ ಮಧ್ಯದೊಳಿರುವ ಕಲ್ಪನೆ ಸಾಕ್ಷಿರೂಪವೇ ಪೂರ್ಣಾನಂದ ನೀನಿಹೆ 1 ಈ........... ತೋರಿಕೆ ಎಲ್ಲಾ ಕಲ್ಪಿತಾ ಮನಸಿನದೆಲ್ಲ ಜೀವಿತಾ ಮನವೇ ಚಿತ್ತಾಕಾಶ ತಾ ಪರಿ ಈ ತೋರಿಕೆ ಮಿಥ್ಯಾ ಚಿನುಮಯ ಮಾತ್ರ ನೀನಿಹೆ ಶಂಕರಗುರುವಿನ ಬೋಧವೇ2
--------------
ಶಂಕರಭಟ್ಟ ಅಗ್ನಿಹೋತ್ರಿ
ಬ್ರಹ್ಮ ರೂಪವೇ ಈತಬ್ರಹ್ಮ ಸ್ಥಿತಿಯಿಂತುಸಮ್ಮತ ವೇದಾಂತವು ಮುಕ್ತ ಪ ಪರಿ ದೇಹ ಭಾವವ ಬಿಟ್ಟಯೋಗಿಗೆಇರ್ಪುದೇ ತನು ಭ್ರಾಂತಿ ಮುಕ್ತ 1 ಪರಿ ಸಾಕ್ಷಿಯಾಗಿ ನೋಡುವ ಜ್ಞಾನಿಗೆತನು ಭ್ರಾಂತಿ ತಾನಿಹುದೇ ಮುಕ್ತಾ 2 ಹೊಲೆಯತನ ಶುದ್ಧತನ ಎಲ್ಲಿಹುದೋ ಎಲೆ ಮುಕ್ತಾಹೊಲೆಯತನ ಶುದ್ಧತನ ಸಿದ್ಧನಿಗದೇತಕೋತಿಳಿದು ಬಾಳನು ಬಾಳ್ವ ಚಿದಾನಂದನಾದವವಗೆಬಲು ದೇಹ ಭ್ರಾಂತಿಯಹುದೋ ಮುಕ್ತಾ 3
--------------
ಚಿದಾನಂದ ಅವಧೂತರು