ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾತ್ವಿಕ ಕೃತಿಗಳು ಅಂಥಾ ಕರುಣನೇ ನಮ್ಮ ರಂಗ ಅನಂತ ಶರಣನೇ ಪ ಎಂಥ ಕರುಣ ನಮ್ಮ ರಂಗ ಅಂತರಾತ್ಮ ಪಾಂಡುರಂಗ ಚಿಂತೆಗಳನು ದಹಿಪ ರಂಗ ಅಂತರಾ ಅಭ್ಯಂತರಂಗ ಅ.ಪ ಮೂಡಲಾದ್ರಿಯ ವೆಂಕಟೇಶ ಆಡಬಂದನೇ ನಾಡಿನೊಳಗೆ ಮೂಡಿ ನಿಂದನೇ ಗಾಡಿಕಾರ ರಂಗಧಾಮ ಕೇಡುಗಳನು ಬಡಿವನಾಮ ವಾಡಿಗೆಗಳಂತಿರುವ ಭಕ್ತ ಕೋಟಿಗೇ ವರವೀವ ಪ್ರೇಮ1 ಹರನ ರೂಪವತಾಳಿ ನಿಂದ ಹರಿಮಾಧವ ಒರಳಿನೊಳು ಮೆರೆಯುತಿರುವವ ಹರಿಯುಹರನು ಬೇರೆಯಲ್ಲ | ನರರನೋಡಿ ನೋಡಿ ಸೊಲ್ಲ ಬರಿದೆಭ್ರಾಂತಿ ಲೇಸದಲ್ಲ ಅರುಹುವನೆಂಬುವ ಗೊಲ್ಲ 2 ಯುಕ್ತಿಯವರನ್ಯರಿಲ್ಲ ವಿ ರಕ್ತನಾಗಿ ಗುಣವದಿಲ್ಲ ಭಕ್ತಗೊಲಿವ ಹರಿಯುಬಲ್ಲ ಯುಕ್ತಿ ಇದಕೆ ಬೇರೆ ಇಲ್ಲ 3 ತನಯನೋರ್ವನನೆ ಪಡೆಯಲೆಳಸಿವನಜನಾಭನ ಕರುಣದಿಂದ ತನಯನುದಯಿಸಲು ಧನಿಕ ಕೈಂಕರ್ಯವನು ಗೈದು ಧನವ ಗಣನೆಗೈಯಲದು ಮನದಿ ಮರುಗಿ ಕೆಳಕ್ಕೈತಂದ| ವನಿತೆಯಿತ್ತ ಪೊಂಗಲ ಸವಿದ4 ಕಾಮಜನಕನೇ ನಮ್ಮರಂಗ | ಕೋಮಲಾಂಗನೇ ಕರುಣಾಪಾಂಗ ಭೀಮವಿಕ್ರಮನೇ ಭೂಮಿಜಾತೆಯ ರಸಭರಿತ ರಾಮದಾಸವಿನುತಲೀಲ ವಾಸುದೇವನ ಹೋಲುವರಂಗ5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವೆಂಕಟರಮಣ ಮಾಂಪಾಹಿ ಸಂಕಟಹರಣ ಸರ್ವಲೋಕಕಾಧಾರ ಪ ಮತ್ಸ್ಯರೂಪವತಾಳಿ ವೇದಗಳ ರಕ್ಷಿಸಿದೆ ಮತ್ತೆ ಬೆಟ್ಟವ ಪೊತ್ತೆ ಕೂರ್ಮನಾಗಿ ಹೊತ್ತು ಭೂಮಿಯ ಪೊರೆದೆ ವರಾಹಾವತಾರದಲಿ ಬತ್ತಿ ಕಂಬದಿ ಬಂದೆ ನರಸಿಂಹನಾಗಿ ನೀ ಇತ್ತೆ ವರವನು ತುಳಿದು ಬಲಿಯು ನೀಡಲು ತಲೆಯ ವಟುರೂಪಿನಿಂದ ವೆಂಕಟರಮಣ ಮಾಂ ಪಾಹಿ 1 ಹೊತ್ತು ಪರಶುವ ಭುವಿಯ ಕ್ಷಾತ್ರಿಯರನೀ ಕೊಂದೆ ಮತ್ತೆ ರಾಮಾವತಾರದಲಿ ರಾವಣನ ಕೊಂದೆ ನಿತ್ತು ಕಾಪಾಡಿದೆಯೋ ಕೃಷ್ಣ ಪಾಂಡವರನ್ನು ಮತ್ತೆ ಬುದ್ದನರೂಪ ತಾಳಿ ಮೆರೆದೆ ತಾಳಿ ದರುಳ ದುರ್ಜನರನ್ನು ಮೆಟ್ಟಿ ಕುಟ್ಟಿದೆಯೋ ವೆಂಕಟರಮಣ ಮಾಂ ಪಾಹಿ 2 ಬೇಡಿದವರ ಇಷ್ಟಾರ್ಥಗಳನೀವ ಕಾಡಿದ ರಕ್ಕಸರ ಜೀವ ಕೊಳುವ ನೋಡಿ ದಯಮಾಡಿ ನೀಸುಜನರನು ಕಾವ ಆಡಿ ಅಡಗಿಸೋ ನೀನೇ ಮನದ ನೋವ ಗಾಢ ರಕ್ಷಿಸು ಕಡು ಬಾಡಿದೆ ಭಯದಲ್ಲಿ ವೆಂಕಟರಮಣ ಮಾಂ ಪಾಹಿ 3 ವರ ಅಜಾಮಿಳಗೆ ವರವಿತ್ತು ಸಲಹಿದೆಯೋ ಕರಿ ರಾಜ ಬರಲಿದಡೆ ಬಂದು ಕಾಯ್ದೆ ದುರುಳ ಕಾಳಿಂಗನನು ಮೆಟ್ಟಿಕುಣಿದಾಡಿದೆಯೋ ಧರಿಸಿ ಗೋವರ್ಧನವ ಕಾಯ್ದೆಗೋವಳರನ್ನು ವೆಂಕಟರಮಣ ಮಾಂ ಪಾಹಿ 4 ಇಳೆಯೊಳಗೆ ಮೂಡಲಗಿರಿವಾಸನಾಗಿ ನೆಲೆಯ ನರಿದು ಭಜಿಪರ ಪಾಪನಾಶ ಸೂರ್ಯ ಕೋಟಿ ಪ್ರಕಾಶ ಕಲಿಯುಗದೊಳು ನಿನ್ನ ಮಹಿಮೆ ವಿಶೇಷ ಸಲಹೋ ಪಾತಳ ಸೇವೆಯ ಗೆಣಸಿನ ಕುಣಿ ವೆಂಕಟರಮಣ ಮಾಂ ಪಾಹಿ 5
--------------
ಕವಿ ಪರಮದೇವದಾಸರು