ಗಿರಿಜಾಕಾಂತನೆ ನಿನ್ನ ಶುಭ
ಚರಣವ ನಂಬಿದೆ ಮುನ್ನ
ಕರವಿಡಿದೀಗಲೆ ಕಾಯಬೇಕೆನ್ನ
ಪರಿಪರಿ ವರಗಳ ಕೊಡುವ ಪ್ರಸನ್ನ ಪ
ಗಜ ಚರ್ಮಾಂಬರನೆ ನಿತ್ಯ
ಸುಜನರ ಪಾಲಿಸುತಿಹನೆ
ಅಮಿತ ಮಹಿಮನೆ
ತ್ರಿಜಗೋದ್ಧಾರನೆ ಭುಜಗಭೂಷಿತನೆ 1
ನಂದಿಯನೇರಿಯೆ ಬಂದು ಎನ್ನ
ಮಂದಿರದೊಳ್ ನಿಂದು
ಕುಂದದಿರುವ ಆನಂದವ ಕೊಡು ಎಂದು
ವಂದಿಸುವೆನು ನಾ ನಿನಗೆ ಕೃಪಾಸಿಂಧು 2ವರ ಚಿಕ್ಕನಾಗರದಿ ನಿಂದು ಗರಪುರವಾಸನೆ ದಯದಿವರದ ಶ್ರೀ ವೆಂಕಟರಮಣನ ರೂಪದಿಪೊರೆವೆ ನಾರಾಯಣದಾಸನ ಮುದದಿ 3