ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರೊ ನೀ ಭಕುತರ ಸುರಧೇನು ಪ ಕರಗಳ ಮುಗಿವೆನು ಅ.ಪ. ಮೂರು ಲೋಕದ ದೊರೆ ನೀನಾಗಿರೆ ನೀರಿನೊಳೀಪರಿಯಾಟವು ತರವೆ ಕೂರುಮ ರೂಪದಾಕಿಟಿ ನರಮೃಗದಾ ಕಾರನೆನುತ ಪರಿಹಾಸವ ಮಾಳ್ಪರು 1 ಪೋರ ನಗುತ ಬಲಿಯನು ವಂಚಿಸಿ ಮೀರಿದ ಕೋಪದಿ ಮಾತೆಯನಿರಿದು ನಾರಿಯ ನೀಗುತ ಮಾವನ ಕೊಂದು ಜಾರಿದ ವಸನದ ರಾಹುತನೆಂಬರು2 ವಾರಿಧಿಯೊಳು ನಿನಗಾಟವು ಸಲ್ಲದು ಕೋರಿದ ಕೊಡುವೆನು ಬಾರೆನ ದೊರೆಯೆ ವಾರಿಜಾಭನೆ ಕರೆ ಕರೆ ಮಾಡದೆ ಶ್ರೀರಂಗೇಶವಿಠಲನೆ ಬೇಗದಿ 3
--------------
ರಂಗೇಶವಿಠಲದಾಸರು