ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಸೆ ತೋರಿಸಿ ಈಶ ನಿರಾಸೆಮಾಳ್ಪರೆ ಲೇಸೋ ನಿನಗೆ ಶೇಷಶಾಯಿ ಶ್ರೀಶ ಅಭಿಲಾಷಿಗಳಿಗೆ ಪ ಬಡಜನರ ಪರ್ವತ ಒಡಲ ಆಸೆಯ ಕೊಡುವೆನೆಂದು ನುಡಿಯಲವರು ಎಡೆಬಿಡದೆ ಬೇಡಿ ಬೇಡಿ ಕಾಡಿ ಕಾಡಿ ಕಡೆಗೆ ನೋಯ್ವರು 1 ಆಡಿದ್ಯಾತಕೊ ವಾಕ್ಯ ಸುಳ್ಳು ಮಾಡಿದ್ಯಾತಕೊ ಖೋಡಿದೈವಿನಾ ಬೇಡುವಂತೆ ನಿನ್ನ ಬೇಡಿಕೊಂಬೆ ಗಾಢಮಹಿಮ ನೋಡದಿರೊಳಿತಿತ್ತಾಡಿದ್ಯಾಕ 2 ರೂಢಿಗಧಿಕನೆ ದಯವ ಮಾಡು ಎನ್ನೊಳು ಮೂಢತನದಿ ನಾ ಮಾಡಿದಂಥ ಕೇಡುಗುಣಗಳೆಣೆಸದೆನ್ನೊ ಳಾಡಿದ್ವಾಕ್ಯ ನೀಡು ಶ್ರೀರಾಮ 3
--------------
ರಾಮದಾಸರು
ಪಾರ್ಥಸಾರಥಿ ಪಾಲಿಸೆನ್ನ ಶ್ರೀಹರಿಯೆ ಪ ಅಂದು ಗಜನು ತಾನು ಬಂದು ತಾ ಬಂಧು ಬಳಗವ ಕೂಡಿ ಸೊಂಡಿ- ಲಿಂದ ನೀರನು ಕಲಕಲಾಕ್ಷಣ ಒಂದು ಮಕರ್ಹಲ್ಲಿಂದ ಪಿಡಿಯೆ ಮು- ಕುಂದ ನೀನೆ ಗತಿಯೆಂದರಾಕ್ಷಣ ಬಂದು ಒದಗಿದ್ಯೊ ಸಿಂಧುಶಯನನೆ 1 ದುರುಳಾಸುರನು ತನ್ನ ಕರುಳ ತನ ಕರುಳನಿಟ್ಟುರಿಯಲ್ಲಿ ಗರಳ ಹಾಕಿ ಬಾಧಿಸಲು ಖಳನು ಕಾರಣ ಕಂಬದಲಿ ಬಂದೆಳೆದು ಅವನುರ ಕರುಳ ಮಾಲೆಯ ಕರಾಳವದನವ ತೆರೆದು ತನ್ನಯ ಕೊರಳಲ್ಲಿರಿಸಿದ ಕೋಮಲಾಂಗನೆ 2 ಪಿತನ ತೊಡೆಯಲಿದ್ದ ಸುತನ ಕಂಡು ಸುತನ ಸುರುಚಿಯು ತಾನಾಗ ಹಿತದಂತ್ವಾಕ್ಯಗಳನು ನುಡಿಯಲು ಅತಿಬ್ಯಾಗದಲಜಸುತನ ನುಡಿ ಕೇ ಳುತಲಿ ತಪವನು ಚರಿಸಲಾಕ್ಷಣ ಪತಿತಪಾವನ ಪರಮ ಕರುಣದಿ ಸುತ ಧ್ರುವಗೆ ಸುಖವಿಟ್ಟ ಶ್ರೀಹರಿ3 ಬಾಡಿ ಬಳುಕುವ ದ್ವಿಜನ ನೋಡಿ ತಾ ನೋಡಿ ತಂದವಲಕ್ಕಿ ಬೇಡಿ ಆಡಿ ಭಕ್ತನ ಕೂಡ ನಯನುಡಿ ಮಾಡಿ ಕರುಣವ ತನ್ನ ದಯ ಸೂ- ರ್ಯಾಡಿ ಸಖಗೀಡಿಲ್ಲದರ್ಥವ ನೀಡಿದ್ಯೊ ಬಹು ರೂಢಿಗಧಿಕನೆ 4 ಕಡುಚÉಲ್ವೆಕರೆಯಲುಟ್ಟುಡುಗೆ ಉಟ್ಟ ಉಡುಗೆ ಸೆಳೆಯಲು ಕೃಪ್ಣೆ(ಯಿ)ದ್ದೆಡೆಗೆ ನಡೆದಸುರ ಪಿಡಿದೆಳೆಯೆ ಸೀರೆಯ ಕಡೆಯ ಕಾಣದೆ ಖಳನು ಧರೆಯೊಳು ಯುಡುಗೆಗಕ್ಷಯ ನುಡಿದ ಕೃಷ್ಣನೆ 5 ಸಿಂಧುಶಯನಾರವಿಂದನಯನಾರ- ವಿಂದ ನಯನ ಅಸುರರಿಗತಿ ಭಯಂಕರನಾ- ಗೆಂದಿಗಾದರು ನಿನ್ನ ನಾಮಸುಧೆ ಯಿಂದ ಸುಖ ಸುರಿವಂತೆ ಮಾಡು ಮು- ಕುಂದ ಭೀಮೇಶಕೃಷ್ಣ ನಿನ್ನ ಪ- ದಾಂಬುಜವ ತೋರಾನಂದದಿಂದಲಿ 6
--------------
ಹರಪನಹಳ್ಳಿಭೀಮವ್ವ