ಒಟ್ಟು 3 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರೋಗಣೆ ಮಾಡಮ್ಮ ಮಂಗಳಗೌರಿ ಬೇಡಿಕೊಂಬೆನೆ ನಿನಗೆ ಬೇಡಿದಡಿಗೆ ಎಡೆ ಮಾಡಿ ತಂದಿಟ್ಟಿಹೆ ಜೋಡಿಸಿ ನಿನಗೆ ಕೈ ಮುಗಿವೆನೆ ಮಹಾತಾಯೆ ಪ ನಂದಿವಾಹನನರ್ಧಾಂಗಿಯ ಪೂಜಿಸಿ ಗಂಧಕುಂಕುಮದಿಂದ ತಂದು ಕಸ್ತೂರಿ ಕಮಲದ ಪುಷ್ಪಗಳುಡಿ ತುಂಬಿ ನೈವೇದ್ಯವ ತಂದಿರಿಸುವೆ ತಾಯೆ 1 ಅಚ್ಚ ಮುತ್ತಿನ ಹರಿವಾಣದಿ ಮಾಲತಿ ಬಟ್ಟ್ಟಿವಿ ಗೌಲಿಗಳು ಅಷ್ಟಗುಳ್ಳವು ಶಾವಿಗೆ ಪರಡಿ ಪಾಯಸ ಭಕ್ಷ ಎಣ್ಣೋರಿಗೆ ಭಾರಿಬಟ್ಟಲು ತುಪ್ಪ 2 ಮಂಡಿಗೆ ಚೂರ್ಮವು ಬುಂದ್ಯ ಬೀಸೋರಿಗೆ ದುಂಡುಗುಳ್ಳೋರಿಗೆಯು ಚೆಂದವಾಗಿದ್ದ ಚಕ್ಕುಲಿ ಕರ್ಜಿಕಾಯ್ಗಳು ಅಂದವಾದ ಕಾಯಿರಸ ಶಾಖ ಪಾಕವು 3 ಸಣ್ಣ ಅಕ್ಕಿಯ ಶಾಲ್ಯಾನ್ನಕೊಪ್ಪುವ ತವ್ವೆ ಇನ್ನು ದಧ್ಯನ್ನಗಳು ಸನ್ಮತವಾಗಿದ್ದ ಶಾವಿಗೆಫೇಣಿ ಸಕ್ಕರೆ ರುಬ್ಬಿದ ಆಂಬೊಡೆ ರುಚಿಯಾದ ಕಲಸನ್ನ 4 ಘೃತ ಸೀಕರ್ಣೆ ಕಾಯ್ಹಾಲು ಹೊಯ್ಗಡುವನಿಟ್ಟು ಸಾರು ಸಾಂಬಾರ ಚಟ್ಟಣಿ ಕೋಸಂಬರಿ ನೀರೆ ನಿನಗೆ ಪನ್ನೀರು ತಂದಿರಿಸುವೆ 5 ದೇವಿ ನಿನ್ನ ಮನೋಭಾವ ತಿಳಿದು ನಾ ಭೀಮೇಶಕೃಷ್ಣನಿಗೆ ಬ್ಯಾಗ ಸಮರ್ಪಣೆ ಮಾಡಲು ಮಹಾದೇವ ಸ್ವಾದ ಸವಿದಾಸುಖದಿಂದಡ್ವಿಳ್ಯವ ಕೊಳ್ಳೆ 6
--------------
ಹರಪನಹಳ್ಳಿಭೀಮವ್ವ
ಜೋ ಜೋ ಜೋ ಗುಂಡ ಪರಮಪ್ರಚಂಡ ಜೋ ಜೋ ಜೋ ಗುಂಡ ಸುರಚಿರದಂಡ ಪ ಜೋ ಜೋ ಜೋ ದೊಡ್ಡ ಕರಿಯಕಲ್ಗುಂಡ ಜೋ ಜೋ ಜೋ ಮದ್ದನರೆಯಚ್ಚಗುಂಡ ಅ.ಪ ದುಂಡು ಮಲ್ಲಿಗೆಗಿಂತ ಮೃದುವಾದ ಗುಂಡಾ ಕೆಂಡ ಸಂಪಿಗೆಗಿಂತ ಚೆಲುವಾದ ಗುಂಡಾ ಪುಂಡರೀಕಕ್ಕಿಂತ ಚೆಲುವಾದ ಗುಂಡಾ ಮೊಂಡ ಮೂಕರಕಯ್ಯ ಕೋದಂಡಗುಂಡಾ 1 ಒಬ್ಬಿಟ್ಟು ಹೂರಣವರೆಯುವ ಗುಂಡಾ ತಬ್ಬಿಬ್ಬಾಡುವರನು ಕಡುಗುವಾ ಗುಂಡಾ ರುಬ್ಬಿ ರುಬ್ಬಿ ದೋಸೆ ಯೀಯುವಾ ಗುಂಡಾ ಕೊಬ್ಬಿದ ಜನವನು ದಬ್ಬುವಾ ಗುಂಡಾ 2 ಪರಿಪರಿ ಬಂಧನವರಿಯದ ಗುಂಡಾ ಉರುಳಿಸಿದಲ್ಲಿಯೇ ನಿದ್ರಿಪ ಗುಂಡಾ [ವರಭಕ್ತಾವಳಿಗೆ ಸುಖವೀವಗುಂಡಾ] 3 ನೀನಿಲ್ಲದಿರುವ ಮನೆಗಳಿಲ್ಲ ಗುಂಡಾ ನೀನಿರುವಲ್ಲಿ ತಿಂಡಿಗಳುಂಟು ಗುಂಡಾ ಕಾನನದೊಳಗಿದ್ದು ಕರಗದ ಗುಂಡಾ ಮಾನವ ಗಣಕ್ಕೆಲ್ಲಾ ಬೇಕಾದ ಗುಂಡಾ4 ಒರಳುಕಲ್ಲಿನ ಮೇಲೆ ನೇಯುವಾ ಗುಂಡಾ ತರುಣಿಯ ಕರದೊಳು ನಲಿಯುವಾ ಗುಂಡಾ ವರ ದುಕೂಲಂಗಳ ಬಯಸದ ಗುಂಡಾ ವರದ ಮಾಂಗಿರಿರಂಗನೆನಿಸುವ ಗುಂಡಾ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್