ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾತ ನೀನಿರಲಾತರ ಬಡತನವೊ ದಾತ ನೀನಿರಲಾತರ ಬಡತನವೊ ಪ ಸೋತು ಮನವನು ವಿಷಯಗಳಲಿ ಬಲು ವಾತ ಕುಮಾರರ ನೀತಿಗಳರಿಯುತ ಧಾತಪಿತನ ಗುಣ ಜಾತಗಳಲಿ ಅತಿ ಪ್ರೀತಿ ಪಡೆಯುವರ ಅ.ಪ ತಾನು ತನ್ನವರೆನ್ನುವ ಮೋಹದಲಿ ಅನುದಿನದಲಿ ಮುಳುಗಿಹ ಮಾನವರಿಗೆ ಧನಾರ್ಜನೆಯು ಕ್ಲೇಶ ಜಾನಕೀಶನೆ ನೀನಲ್ಲದೆ ಎನ ಗೇನು ರುಚಿಸದು ಎಂದರಿಯುತ ನಿನ್ನ ಜ್ಞಾನ ಪಡೆಯಲು ಸತತ ಶ್ರವಣ ಮನನಾದಿಗಳ ಸುಖವರಿತ ಸುಜನರಿಗೆ 1 ಪಾಡುಪಡುತಲಿ ಧನವ ಬಹಳ ಗಳಿಸಿ ನೋಡುತಲದ ಹಿಗ್ಗುತ ಗೂಢತನದಲಿ ದಿನದಿನ ನೇವರಿಸಿ ಕಾಡುವಾ ನರನಂತೆ ಜೀವನ ಮಾಡುವುದು ಕಡು ಬಡತನವಲ್ಲವೆ ತೋಡಿ ಗಿರಿಯನು ಇಲಿಮರಿಗಳ ಹಿಡಿ ದಾಡುವಂತಹ ಮೂಢ ನಾನಲ್ಲವೊ 2 ನಿನ್ನ ಗಾನವೆ ವಿವಿಧ ಸುರಸ ಪಾನ ಅವಿಚಾಲಿತ ಮನದಲಿ ನಿನ್ನ ಧ್ಯಾನವೆ ನವಮಣಿ ಸೋಪಾನ ನಿನ್ನ ಪೂಜೆಯ ಮಂದಿರವೆ ಎನ ಗುನ್ನತದ ಉಪ್ಪರಿಗೆಯ ವಾಸವು ನಿನ್ನ ಸೇವೆಯ ಸುಖತಮ ಭೋಗಗ ಳೆನ್ನುವರಿಗೆ ಪ್ರಸನ್ನನಾಗುವ 3
--------------
ವಿದ್ಯಾಪ್ರಸನ್ನತೀರ್ಥರು
ವೇಣು ಗೋಪಾಲನು ಬರುವನಂತೆ ಪ ಜಾಣೆ ನಮ್ಮನೆಯಲಿ ಇರುವನಂತೆ ಅ.ಪ ಪರಮ ಸುಂದರ ನವತರುಣನಿವ ಸಖಿ ಅರಿತು ಭಜಿಪರಿಗೆ ಕರುಣಿ ಇವ ಸಖಿ ತೊರೆಯಬೇಕಭಿಮಾನ ಕ್ಷಣದಲಿ ಮರೆಯಬೇಕಿಹಲೋಕ ಬಂಧನ1 ಹೃದಯವ ಕದಿಯುವ ಚೋರನಿವ ಸಖಿ ಮದನನ ಜಗಕಿತ್ತ ಜಾರನಿವ ಸಖೀ ಕದನದಲಿ ಕಂಠೀರವನು ಶುಭ ವದನೆಯರ ಶೃಂಗಾರ ಜಲನಿಧಿ 2 ಘನತೆಯು ರುಚಿಸದು ಹುಡುಗನಿವ ಧನವನು ಬಯಸನು ಸಿರಿರಮಣ ತನುಮನಗಳರ್ಪಿಸಲು ಹರುಷದಿ ಕುಣಿಯುವನು ಕುಣಿಸುವ ಪ್ರಸನ್ನನು 3
--------------
ವಿದ್ಯಾಪ್ರಸನ್ನತೀರ್ಥರು