ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾತ ನೀನಿರಲಾತರ ಬಡತನವೊ ದಾತ ನೀನಿರಲಾತರ ಬಡತನವೊ ಪ ಸೋತು ಮನವನು ವಿಷಯಗಳಲಿ ಬಲು ವಾತ ಕುಮಾರರ ನೀತಿಗಳರಿಯುತ ಧಾತಪಿತನ ಗುಣ ಜಾತಗಳಲಿ ಅತಿ ಪ್ರೀತಿ ಪಡೆಯುವರ ಅ.ಪ ತಾನು ತನ್ನವರೆನ್ನುವ ಮೋಹದಲಿ ಅನುದಿನದಲಿ ಮುಳುಗಿಹ ಮಾನವರಿಗೆ ಧನಾರ್ಜನೆಯು ಕ್ಲೇಶ ಜಾನಕೀಶನೆ ನೀನಲ್ಲದೆ ಎನ ಗೇನು ರುಚಿಸದು ಎಂದರಿಯುತ ನಿನ್ನ ಜ್ಞಾನ ಪಡೆಯಲು ಸತತ ಶ್ರವಣ ಮನನಾದಿಗಳ ಸುಖವರಿತ ಸುಜನರಿಗೆ 1 ಪಾಡುಪಡುತಲಿ ಧನವ ಬಹಳ ಗಳಿಸಿ ನೋಡುತಲದ ಹಿಗ್ಗುತ ಗೂಢತನದಲಿ ದಿನದಿನ ನೇವರಿಸಿ ಕಾಡುವಾ ನರನಂತೆ ಜೀವನ ಮಾಡುವುದು ಕಡು ಬಡತನವಲ್ಲವೆ ತೋಡಿ ಗಿರಿಯನು ಇಲಿಮರಿಗಳ ಹಿಡಿ ದಾಡುವಂತಹ ಮೂಢ ನಾನಲ್ಲವೊ 2 ನಿನ್ನ ಗಾನವೆ ವಿವಿಧ ಸುರಸ ಪಾನ ಅವಿಚಾಲಿತ ಮನದಲಿ ನಿನ್ನ ಧ್ಯಾನವೆ ನವಮಣಿ ಸೋಪಾನ ನಿನ್ನ ಪೂಜೆಯ ಮಂದಿರವೆ ಎನ ಗುನ್ನತದ ಉಪ್ಪರಿಗೆಯ ವಾಸವು ನಿನ್ನ ಸೇವೆಯ ಸುಖತಮ ಭೋಗಗ ಳೆನ್ನುವರಿಗೆ ಪ್ರಸನ್ನನಾಗುವ 3
--------------
ವಿದ್ಯಾಪ್ರಸನ್ನತೀರ್ಥರು
ಮಾನವನ್ಯಾಕದ್ಯೋ ಎಲೊ ಎಲೋ ಮಾನವನ್ಯಾಕದ್ಯೋ ಪ ಮಾನವನ್ಯಾಕದ್ಯೋ ಹೀನನೆ ಥೂಥೂ ಮಾನವಜನುಮದ ಖೂನವ ತಿಳಿಯದೆ ಅ.ಪ ನರನಾಗವತರಿಸಿಬಂದಿಹ್ಯ ಪರಿಯನು ಶೋಧಿಸಿ ಅರುಹುಗೂಡಿ ಸಿರಿವರನ ಕಥಾಮೃತ ಪರಮಭಕ್ತಿಯಿಂದ ಶ್ರವಣಮಾಡದ 1 ತನುನಿಜವಲ್ಲೆನಿಸಿ ಸತತದಿ ತನುಧನರ್ಪಿಸಿ ಘನತರಭಕುತಿಲಿ ವನಜನಾಭನ ಘನಸತ್ವಚರಿತವನು ಮನನ ಮಾಡದ 2 ಮಂದಮತಿಯ ಹರಿದು ಜಗಕೆ ಬಂದ ಕುರುಹು ತಿಳಿದು ಸಿಂಧುಶಯನ ಮಮತಂದೆ ಶ್ರೀರಾಮನ ಬಂಧುರಂಘ್ರಿ ನಿಜಧ್ಯಾಸವ ರುಚಿಸದ 3
--------------
ರಾಮದಾಸರು
ವೇಣು ಗೋಪಾಲನು ಬರುವನಂತೆ ಪ ಜಾಣೆ ನಮ್ಮನೆಯಲಿ ಇರುವನಂತೆ ಅ.ಪ ಪರಮ ಸುಂದರ ನವತರುಣನಿವ ಸಖಿ ಅರಿತು ಭಜಿಪರಿಗೆ ಕರುಣಿ ಇವ ಸಖಿ ತೊರೆಯಬೇಕಭಿಮಾನ ಕ್ಷಣದಲಿ ಮರೆಯಬೇಕಿಹಲೋಕ ಬಂಧನ1 ಹೃದಯವ ಕದಿಯುವ ಚೋರನಿವ ಸಖಿ ಮದನನ ಜಗಕಿತ್ತ ಜಾರನಿವ ಸಖೀ ಕದನದಲಿ ಕಂಠೀರವನು ಶುಭ ವದನೆಯರ ಶೃಂಗಾರ ಜಲನಿಧಿ 2 ಘನತೆಯು ರುಚಿಸದು ಹುಡುಗನಿವ ಧನವನು ಬಯಸನು ಸಿರಿರಮಣ ತನುಮನಗಳರ್ಪಿಸಲು ಹರುಷದಿ ಕುಣಿಯುವನು ಕುಣಿಸುವ ಪ್ರಸನ್ನನು 3
--------------
ವಿದ್ಯಾಪ್ರಸನ್ನತೀರ್ಥರು
ಸೂರ್ಯ ಪುತ್ರೀ |ತ್ರಿವಿಧ ತಾಪಂಗಳನು ಕಳೆವ ಶುಭಗಾತ್ರೀ ಪ ಕಾಳಕೂಟವ ಮೆದ್ದು ದೇವತತಿ ಸಲಹಿದಗುಕಾಲಾಖ್ಯ ಗರುಡಂಗು ಕಾಳ ಉರಗನಿಗೂ |ನೀಲಾಖ್ಯೆಯಂದದಲಿ ಪಂಚಗುಣದಿಂ ನ್ಯೂನಕಾಳಿಂದಿ ದೇವಿಯರಿಗಾ ನಮಿಪೆ ಸತತ 1 ಸಂಚಿತ ಸುಪಾಪಕ್ಕೆ ಅನುತಾಪವೆಂಬುವುದುಚಿಂತಿಸುವ ತತ್ವಗಳ ನಿರ್ಣಯಾದಿಗಳ |ಇಂತಪ್ಪ ಸತ್ಕರ್ಮ ಸಂತರಿಂ ತಿಳಿಸುತ್ತಚಿಂತಿಪುದೆ ಸತ್ತಪವು ಚಿತ್ತ ನಿಗ್ರಹವೆಂಬ 2 ಮೂರ್ತಿ ಕಾಣದಿಹ ಕಂಗಳಿನ್ನೇಕೇ 3 ಹರಿ ಕಥೆಯ ಕೇಳದವ ಬಧಿರನೇಸರಿ ಅವನುಹರಿಯೆ ನಿರ್ಮಾಲ್ಯ ಮೂಸದಿಂದ್ರಿಯ ವ್ಯರ್ಥ|ಹರಿಯ ನೈವೇದ್ಯಗಳ ರುಚಿಸದಿಹ ನಾಲಗೆಯುಹರಿಯಂಗ ಸ್ಪರ್ಶಿಸದ ಇಂದ್ರಿಯವು ವ್ಯರ್ಥ 4 ಮೂರ್ತಿ ಧ್ಯಾನಿಸದ ಮನಿಸಿನಿಂದ್ರಿಯ ವ್ಯರ್ಥಇನಿತು ದಶ ಕರಣಗಳ ವ್ಯಾಪಾರವಾ |ಗುಣಿಸಿ ತಪವೆಂದೆನುತ ಹರಿಯರ್ಪಣೆಂಬುವುದೆಘನ ತಪವು ಎಂದೆನುತ ಚಿಂತಿಪ ಸುಗಾತ್ರೀ 5 ಕಮಲ ದರ್ಶನವು ಎನಗೆಂದುಪರಿ ಪರಿಯ ಚಿಂತಿಸುತ ಚರಿಸಿ ಸತ್ತಪವಾ |ಹರಿಯ ದರ್ಶನ ಪಡೆದು ಹರಿಯನುಗ್ರಹದಿಂದಹರಿ ಮಡದಿ ನೀನಾಗಿ ಹರಿಗೆ ಪ್ರಿಯಳಾದೇ 6 ನಿತ್ಯ ಭಿನ್ನವಿಪೇ 7
--------------
ಗುರುಗೋವಿಂದವಿಠಲರು