ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ನಂಬಿದೆ ಓ ಶಾರದೇ ಪ ಸನ್ನುತಾಂಗಿ ಇನ್ನೂ ಕರುಣ ಬಾರದೆ ಅ.ಪ ಸಕಲಕಳಾಧರೆ ಸಕಲಕಲಾಧರೆ ವಿಕಸಿತ ಸುಮಹಾರೆ ಜ್ಞಾನಸಮೀರೆ ಪ್ರಕಟಿತ ಮಧುರ ಜಪಮಾಲಾಕರೆ ಶಿಖಿ ವೀಣಾಧರೆ ಮೃದುತನುರುಚಿರೆ 1 ಧಾತಾ ಮನೋನ್ಮಣಿ ಧ್ವಾಂತ ಸಂಹಾರಿಣಿ ಪಾತಕವಾರಿಣಿ ಮಾತೆ ಕಲ್ಯಾಣಿ ಭೂತಲ ಕಣ್ಮಣಿ ರಾಗತರಂಗಿಣಿ ಖ್ಯಾತಚರಿತ ಮಾಂಗಿರಿವರತೋಷಿಣಿ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪರಮಶಿವಶಂಕರಿಯೆ ಪ ಕರುಣಿಸು ಮಂಗಳೆಯೆ ಅ.ಪ. ಪಂಕಜನಾಭಿಯೆ ಪಂಕಜಪಾಣಿಯೆ ಪಂಕಜಲೋಚನೆಯೆ ಪಂಕಜಗಂಧಿಯೆ ಪಂಕಜವದನೆಯೆ ಶಂಕರಸುಂದರಿಯೆ 1 ಗೌರಿಯೆ ಗಿರಿಜೆಯೆ ಕಾತ್ಯಾಯನಿಯೆ ಹೈಮವತೀಶ್ವರಿಯೆ ಪಾರ್ವತಿ ಶಿವೆ ಪರಮೇಶ್ವರಿ ಶಂಕರಿ ಕಾಳಿಯೆ ಶಾಂಭವಿಯೆ 2 ಮಾಧವ ಸೋದರಿಯೆ ಭೂಧರವಾಸೆಯೆ ಶ್ರೀ ಲಲಿತಾಂಬೆಯೆ ರಾಜರಾಜೇಶ್ವರಿಯೆ 3 ನಿತ್ಯ ಕಲ್ಯಾಣಿಯೆ ಭಕ್ತವತ್ಸಲೆ ವಿಜಯೆ ನಿತ್ಯ ಸುಮಂಗಳೆಯೆ 4 ದಾನವ ಭಂಜಿನಿ ಮೌನಿಸುರಂಜಿನಿ ಭಾನುಮಂಡಲ ರುಚಿರೆ ಮಾನಿನಿ ಪಾಲಯಮಾಂ 5
--------------
ಬೇಟೆರಾಯ ದೀಕ್ಷಿತರು