ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನುದಿನ ಚರಣಕಮಲವ ತೋರಮ್ಮ ನಮ್ಮಮ್ಮಾ ಪ. ಮನೋಭಿಮಾನಿಯೇ ಎನ್ನವಗುಣಗಳೆಣಿಸದೆ ತ್ವರಿತದಿ ಬಂದು ಮುತ್ತಿನ ಗದ್ದಿಗೆಯನೇರಮ್ಮ ನಮ್ಮಮ್ಮಾ ಅ.ಪ. ದಕ್ಷಕುವರಿ ದಾಕ್ಷಾಯಿಣಿ ಗೌರಿ ಪಕ್ಷಿವಾಹನನ ಸೋದರಿ ಈಕ್ಷಿಸುತಿರುವೆನು ಉಪೇಕ್ಷಿಸದೆ ಎನ್ನ ರಕ್ಷಿಸಿ ಕಾಯೆ ಪಾರ್ವತಿ ತಾಯೆ 1 ಶಂಭುದೇವನ ರಾಣಿ ಹೃದಯಾಂಬರದೊಳು ನಿಂದು ಅಂಬರ ಪೂಜಿತೆ ನಂಬಿದ ಭಕ್ತರ ಪೊರೆವ ಸದ್ಗುಣ ಚರಿತೆ 2 ಗೆಜ್ಜೆ ಪಾದಗಳಿಂದ ಘಲ್ ಘಲ್ ಎನುತ ಬಾರಮ್ಮ ಹೆಜ್ಜೆಯನಿಡುತ ಮುಗುಳ್ನಗೆ ನಗುತ ಬಾರಮ್ಮ ಸುಜ್ಞಾನ ಮತಿಯಿತ್ತು ಕಾಯುವ ತಾಯಿ ಬಾರಮ್ಮ 3 ಕಂಚುಕ ಪಟ್ಟೆಯ ಪದಕ ಕಟ್ಟಿದ ಕಠಾಣೆ ಮುತ್ತಿನಮೂಗುತಿ ಪಚ್ಚೆಯ ಓಲೆ ಇಟ್ಟ ಕಸ್ತೂರಿತಿಲಕ ಕೆತ್ತಿದ ಕಿರೀಟ ಹೊಳೆಯುತ 4 ಬೇಡಿಕೊಂಬೆವೆ ತಾಯೆ ನೀ ಎನ್ನ ಆಪತ್ತು ಪರಿಹರಿಸಿ ಪಾಡಿ ಪೊಗಳಿ ಕೊಂಡಾಡುವೆ ಕಾಯೆ ತಾಯೆ ಬೇಡಿದ ವರಗಳ ರುಕ್ಮಿಣೀಶವಿಠಲನ ಕರುಣದೆ ನೀಡೆ ತಾಯೆ 5
--------------
ಗುಂಡಮ್ಮ
ಬಾರೈ ಬಾರೈ ಗುರು ಸಾರ್ವಭೌಮನೇ ಪ. ಉಟ್ಟವಸನವು ತೊಟ್ಟ ಆವಿಗೆ ಇಟ್ಟ ದ್ವಾದಶ ಊಧ್ರ್ವ ಪುಂಡ್ರವು ದಿಟ್ಟತನದಿ ಇಟ್ಟು ಕೊರಳೊಳು ಮಣಿ ಮನೋಭೀಷ್ಠವ ಸಲಿಸುತ 1 ದಂಡಕ ಮಂಡಲ ಕೈಯಲಿ ಪಿಡಿದು ಕಂಡ ಕಂಡದ ಪೂಜೆಗೊಂಬುವ ಕೊಂಡ ಜನರ ಪರಿಪಾಲಿಸುತಲಿ ಕಂಡ ಕಂಡವರ ಕಾಯುವ ಕರುಣೆ2 ಭೂತ ಪ್ರೇತ ಭಯ ನಾಶಗೊಳಿಸಿ ಭೀತಿಯ ಬಿಡಿಸಿ ಮಂತ್ರಾಲಯದಿ ಖ್ಯಾತಿವಂತ ರುಕ್ಮಿಣೀಶವಿಠಲನ ಕರುಣದಿ ಪ್ರೀತಿಪ ಜನರ ಮನೋಭೀಷ್ಠವೊಲಿದ 3
--------------
ಗುಂಡಮ್ಮ
ಮಧ್ವರಾಯರೆ ನಿಮ್ಮ ಮುದ್ದು ಪಾದಗಳಿಗೆ ಬಿದ್ದು ಬೇಡಿಕೊಂಬೆ ಮನಶುದ್ಧಿಯ ಮಾಡೊ ಪ. ಮಧ್ವ ಗೇಹದೊಳು ಜನಿಸಿ ಪಾಜಕಾ ಕ್ಷೇತ್ರದೊಳು ಮುದ್ದು ರೂಪವ ತೋರಿ ಅ. ಪ. ಪದ್ಮನಾಭನ ಭಜಿಸುತ ಇರುತ ಗುಹೆಯಲಿ ಶುದ್ಧ ತಪವನೆ ಮಾಡಿ ಪ್ರಸಿದ್ಧಿಯಿಂದಲಿ ಇದ್ದ ದೈತ್ಯನ ಕೊಂದು ಪೊರೆಯುತಲಿ 1 ವಾದಿಗಳ ಛೇದ ಭೇದವ ಮಾಡಿ ಸಾಧಿಸಿನುತವ ಬೋೀಧಿಸಿ ಸುಜನರಿಗೆ ವ್ಯಾಧಿಗಳ ಕಳೆದು ಪೊರೆವ ಮೆರೆವ 2 ಸುಜ್ಞಾನ ತೀರ್ಥರೆಂದೆನಿಸಿ ಮಹಿಯೊಳ್ ಅಜ್ಞಾನ ಪರಿಹರಿಸಿ ಪೊರೆವ ಗುರು ಸುಜ್ಞಾನವೀವ ರುಕ್ಮಿಣೀಶವಿಠಲನ ಭಜಿಪ 3
--------------
ಗುಂಡಮ್ಮ