ಒಟ್ಟು 10 ಕಡೆಗಳಲ್ಲಿ , 7 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಕೊಟ್ಟನೆ ಮಗಳಾ ಉದಾ | ಸೀನದಿ ಭಿಕ್ಷುಕ ಶಿವಗೀಂದು ಗಿರಿಜಾ ಪ ಹೆತ್ತವಳಿಲ್ಲಾ ಸೀ ಹುಟ್ಟತ ಪರದೇಶೀ | ನೆತ್ತಿಗೆ ಎಣ್ಣಿಲ್ಲಾ ನೆರೆಬಿಸಿ ನೀರಿಲ್ಲಾ | ದೊತ್ತಿದ ಕೂದಲು ದುರ್ಜಟಿ ಯಾಗಲು | ಹೊತ್ತಿದ ತಲೆಯಿಂದ ಹಣೆ ಉರಿಗಣ್ಣಾದ | ಇತ್ತಿ ಹೊದಿಯಲಿಲ್ಲಾದೀ ಭಸ್ಮ ಲೇಪನಾ | ಮೆತ್ತಿದ ಗುಣದಿಂದ ಮೈ ಯಲ್ಲ ಬೆಳ್ಚಾದಾ | ಎತ್ತ ನೇವುವನು ಭೂತ ಗಣಾ | ಯೋಗಿ - ಕು | ಲೋತ್ತ ಮನೆನಿಸಿದನು ಇಂಥ | ಹತ್ತು ಭುಜವ ತಾಳಿ ದೈದು ಮೊರೆಯುಗವ 1 ಶರಥಿ ಮಥನದಲ್ಲಿ ಸಲೆ ವಿಷ ಹೊರಡಲಿ | ಸುರರ ಮಾತು ಕೇಳಿ ಶೀಘ್ರದಿ ಸುರಿಯಲಿ | ಉರಿಹೆಚ್ಚಿ- ಮೈಯ್ಯಲಿ ಉಬ್ಬಸ ಗೊಳುತಲಿ | ಸುರಗಂಗಿಯ ಹೊತ್ತ ಸೀತಾಂಶು ಕಳೆವತ್ತ | ಮರುಳವೆ ತಿರುಗುವ ಮತ್ತೆ ಭೋಳಾದೇವ | ತ್ವರಿತವ ಕೋಪದಯ ಮನಿಯೊಳು ಹಿಡಿದಿಹ | ಸುರರಿಗೆ ವಲಿದಿಹನು ಬೇಡಿದ | ವರಗಳನ್ನು ಕೊಡತಿಹನು ಬೆನ್ನಟ್ಟಿ | ಬರೆ ದುಷ್ಟ ಓಡಿದನು ಶ್ರೀ ವಿಷ್ಣು | ಕರುಣದಿ ಶರೆಯ ಬಿಡಿಸೆ ಕೊಂಡವನಿಗೆ 2 ಕರಿಚರ್ಮ ತಾಳಿದಾ ಕಾಡೊಳು ಸೇರಿದಾ | ಉರಗ ಭೂಷಣನಿವ ಊಧ್ರ್ವರೇತಾದವ | ಹೊರೆ ಹುಲಿದೊಗಲಾ ಹಾಸಿಗೆ ಮಾಡಿದಾ | ಕೊರಳಳು ರುಂಡಮಾಲಾ ಕರದೊಳು ಕಪಾಲಾ | ಧರಿಸಿದ ನೀತನು ದೊರೆಯಲ್ಲದಾತನು | ನೆರೆದುಣ - ಲುಡಿಲಿಲ್ಲಾ ನರಸುರ ರೊಳಗಲ್ಲಾ | ಪರಕ ಪರೆನಿಸುವರು ಸ್ಮರಿಸಿದಾ ಆ ಗುರುವರ ಮಹಿಪತಿ ಪ್ರಭು ಸಾಂಬನೆಂಬವನಿಗೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕರುಣವ ಮಾಡಿ ಶರಣು ಹೋ | ಶರಣು ಹೋಗುವೆ ನಿಮ್ಮ ಚರಣ ಕಮಲಕೆ | ಎರವು ಮಾಡಿದೆ ನಿರುತಾ ಪ ನಗರ ದಹನಾ | ತಾರಕ್ಷ ವಾಹನಾ | ತರುಣ ಚರ್ಮಾಂಬರ ಪೀತಾಂಬರಧರ ಶ್ರೀ ಸತಿರಮಣಾ | ಶೌರಿ ಕೌಸ್ತುಭಮಾಲಾ | ಮಾರಜನಕ ಕು | ಮಾರನಪಿತ ಗಂಗಾಧರ ಧರ ಧರ1 ಶೂಲ ಡಮರುಗ ಹಸ್ತ | ಮೂಲೋಕ ಮೀರಿದವಸ್ತಾ | ಕಾಲ ನಿಯಾಮಕ | ನಿತ್ಯ | ಪಾಲಸಾಗರಶಾಯಿ ನಂದಿಗಮನ ಕಾ | ಪಾಲಿ ಅಭಯ ಪಾಣಿ 2 ವಿಷಧರ ಭೂಷಣ ಕಸ್ತೂರಿ ತಿಲಕ ರಂ | ಪಶುಪತಿ ಪಿನಾಕಿ ಅಸುರಾರಾತಿ ವಿವೇಕಿ | ಅಸಮ ಸುದರುಶನ ರುಂಡಮಾಲಾಧೀಶ ಪಾಲ ಗೋಪಾಲ 3 ಭೂತ ಪ್ರಮಥರೊಡೆಯಾ | ಭೂತೇಶಾದಿಗಳೊಡೆಯಾ | ನೀಲ | ಗಾತುರ ಸದ್ಯೋಜಾತಾ ಜಾತರಹಿತಾ | ಶೂನ್ಯ ಪ್ರತಾಪಾ | ಶ ತಾಮಸ ಖ್ಯಾತಿ ಮಂಗಳಕೀರ್ತಿ 4 ತಂತ್ರ ಮಂತ್ರಕ್ಕೆ ಸಿಲುಕಾ | ಅಂತರಂಗ ನಿಯಾಮಕಾ | ಎಂತೆಂತು ತಿಳಿದರೆ | ಅಂಥಂಥ ಗತಿಯನ್ನು | ಸಂತತ ಕೊಡುವನೆ ಚಿಂತಿಪೆ ವರಹನ್ನ | ದಂತಜ ತೀರದಲ್ಲಿ | ಕಾಂತಾರ ನಿವಾಸಾ 5
--------------
ವಿಜಯದಾಸ
ಗಜಚರ್ಮಾಂಬರ ಗಂಗಾಧರನೇಗಜಮುಖಜನಕ ಗೌರಿಯ ರಮಣ ಓ ತ್ರಿಜಗದೊಂದಿತನೆ ಸಾಂಬಶಿವ ಮಹಾದೇವ ಪಫಾಲನೇತ್ರನೆ ರುಂಡಮಾಲಾಧರನೆನೀಲಕಂಠನೇ ನಿತ್ಯಾನಂದ ಓಕಾಲಾಂತಕನೆ ಸಾಂಬಶಿವ ಮಹಾದೇವ 1ಮದನ ಹರನೆ ಶಿವ ಕಂಬುಕಂಧರನೆಪದ್ಮಾಕ್ಷನಯನ ಪಾರ್ವತಿ ರಮಣ ಓಬುಧಜನಪ್ರಿಯನೆ ಸಾಂಬಶಿವ ಮಹಾದೇವ 2ಭೂತಿಭೂಷಣನೆ ಸರ್ವ ಭೂತಾತ್ಮಕಪಾತಕಹರ ಪಾರ್ವತಿ ರಮಣ ಓಅನಾಥ ರಕ್ಷನೆ ಸಾಂಬಶಿವ ಮಹಾದೇವ 3ಇಂದ್ರವಂದಿತ ಭುಜಗೇಂದ್ರ ಭೂಷಣನೆತಂದೆ ಏಳುಗಿರಿ ವೆಂಕಟಸಖನೇ ಓಚಂದ್ರಶೇಖರ ಸಾಂಬಶಿವ ಮಹಾದೇವ 4
--------------
ತಿಮ್ಮಪ್ಪದಾಸರು
ಜೋಗಿಯ ನೋಡಿರೇ ತಾಪಸ ಯೋಗಿಯ ನೋಡಿರೇ ಆಗಮನುತ ಗುಣಸಾರಸ್ವಾನಂದಶರವಾ ಭುವನದಿಮೆರವಾ ಪ ಗಿರಿಜೇಶನು ಧರಿಸಿಹ ರುಂಡಮಾಲಾಕೃತಿಯೋ ; ವಿದ್ಯುಲ್ಲತಿಯೋ ಭೂಷಣವೋ ; ತಾರಾಗಣವೋ 1 ಶ್ರೀ ಮಹಾದೇವನ ನಂಜು ಗೊರಳಠವಠವಿಯೋ : ಮೇಘ ಚ್ಛವಿಯೋ ತರಣಿಯ ಸದನೋ ಕಾಮಶಲಭನುಹಿದ ಭಾಲಾಕ್ಷದ ಇರವೋ; ದೀಪಾಂಕುರವೋ; ವ್ಯೋಮನದಿಯ ಆವರಿಸಿಹ ಭವನ ಕಂಜೆಡಿಯೋ: ಹವಳದ ಕುಡಿಯೋ 2 ಕರ ಡಮರದ ನಾದಸ್ಪರಣೋ : ಘನವ್ಯಾಕರಣೋ: ಕರ್ಪುರ ಗಿರಿಯೋ; ಸುರಕುಜ ಪರಿಯೋ: ಗುರವರ ಮಹಿಪತಿ ನಂದನ ತಾರಕ ಶಿವನೋ: ನಿಜ ಬಾಂಧವನೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಶುಪತಿ ಬಂದ ಆನಂದದಿಂದ ಪ ಶಶಿಧರ ಶಂಕರ ಸುರಗಂಗಾಧರ ಅಸಮ ಸುಶೋಭಿತ ಜಟಾಜೂಟಧರ ಅ.ಪ ಕರÀದಿ ಧರಿಸಿದ ಡಮರುಗ ತ್ರಿಶೂಲ | ಸುಂದರವಾದ ವರಸಾರಂಗ ಸರಸಿಜಭವ ಕಪಾಲ | ಕೊರಳಲಿ ನೋಡೆ ಧರಿಸಿದ ಬಹುಪರಿ ರುಂಡಮಾಲಾ | ಕಿಡಿಗಣ್ಣಿನ ಫಾಲಾ ಗರಳಕಂಠ ಕರಿವರ ಚರ್ಮಾಂಬರ ಸ್ಮರ ಮದಪರಿಹರ 1 ರಜತಾಚಲ ಮಂದಿರವಾಸ | ಮಹೇಶ ಶಿವಕೃತ್ತಿವಾಸ ಭುಜಗಭೂಷಣ ಶೋಭಿತ ವರವೇಷ | ಭಕ್ತರ ಪೋಷ ಗಜಮುಖ ಜನಕ ಭೂತ ಗಣೇಶ ಪಾಪೌಘ ವಿನಾಶ ಕುಜನಾವಳಿ ಮದಗಜ ಮೃಗರಾಜನು ಸುಜನಜಾಲ ಪಂಕಜಹಿತ ದಿನಮಣಿ 2 ಸುರವರನಮಿತಚರಣನು ಬಂದ | ಶೋಭಿತವಾದ ಪರಿಪರಿ ಚಿತ್ರ ಭೂಷಣನು ಬಂದ | ಕೋರಿದವರ ಕರೆದೀವ ಕರುಣಾಭರಣನು ಬಂದ | ತಾನೊಲವಿಂದ ಚರಣ ಶರಣರಘ ಪರಿಹರಗೈಸುವ ಪುರಹರ ಶಂಕರ 3
--------------
ವರಾವಾಣಿರಾಮರಾಯದಾಸರು
ಶಂಕರನಾರಾಯಣ ಸಲಹೊ ಎನ್ನ | ಪಂಕಜ ಪಾರ್ವತಿ ಪ್ರಿಯಾ | ಕಿಂಕರನ ಮೊರೆ ಕೇಳು ಪ ಶಂಖ ಚಕ್ರಪಾಣಿ | ಮೃಗಾಂಕ ಮೌಳಿ ಅಹಿಪರಿ-| ಯಂಕ ರುಂಡಮಾಲಾ ಶ್ರೀ | ವತ್ಸಾಂಕ ಭುಜಗಭೂಷಣ ವಿಷ್ಟು 1 ನಂದಿಗಮನ ಗರುಡಾರೂಢಾ | ಅಂದ ಭಸ್ಮಧರ ಕಸ್ತೂರಿ | ಸಿಂಧು ವೈರಿ 2 ಪೀತಾಂಬರಧರ ಕೃತ್ಯವಾಸಾ | ಜಾತರಹಿತ ಜಾಹ್ನವಿಧರ | ವಿ- ಧಾತ ಜನಕ ತ್ರಿಶೂಲಪಾಣಿ | ವಾತನೋಡಿಯ ಶಿವ ಗೋವಿಂದ 3 ಕೈಲಾಸವಾಸ ವೈಕುಂಠ | ಲೋಲ ಮಹಾಲಿಂಗ ರಂಗಾ | ಜ್ವಾಲನೇತ್ರ ಕಮಲನಯನಾ | ಕಾಲಾ ನೀಲವರ್ಣ ಕಪರ್ವಿ 4 ರಾಜನೊಬ್ಬ ಭೃತ್ಯನೊಬ್ಬ | ಪೂಜ್ಯನೊಬ್ಬ ಮಾಳ್ಪನೊಬ್ಬ | ಮೂಜ್ಜಗೇಶ ವಿಜಯವಿಠ್ಠಲ | ರಾಜ ತಾತ ಈಶ ಮೊಮ್ಮಗ 5
--------------
ವಿಜಯದಾಸ
ಶಂಕರಾ ಪೊರೆಯಯ್ಯ ನಾ ನಿನ್ನ ಕಿಂಕರ ಪ ಪಂಕಜಾಸನಕುವರ ಮನದ ಶಂಕ ನಾಶಗೈಸಿ ಶೇಷಪ ರ್ಯಂಕಶಯನನ ಪಾದ ಪಂಕಜದೇಕ ಭಕುತಿಯನಿತ್ತು ಸಲಹಯ್ಯಅ.ಪ ನಿಟಿಲನಯನ ಧೂರ್ಜಟಿಯೆ ಸೋಮಧರಾ ಜಟಾಜೂಟನೆ ಕಠಿಣವೆನ್ನಯ ಕುಟಿಲಮತಿಯ ಜಟಿಲಕಳೆದು ನಿಷ್ಕುಟಿಲ ಮನದೊಳು ವಿಠಲಮೂರ್ತಿಯ ಧೇನಿಸಲು ಹೃ ತ್ತಟದಿ ದಿಟಮನ ಕೊಟ್ಟು ರಕ್ಷಿಸಯ್ಯ 1 ಘೋರ ದುರಿತಾಪಹಾರ ತ್ರಿಪುರಹರ ಕರುಣಾಸಮುದ್ರನೆ ನಿರುತ ಶ್ರೀಹರಿಚಾರುಚರಣಸ್ಮರಣೆ ಕರುಣಿಸಿ ಪೊರೆಯೋ ಗುರುವರ ಸುರನದೀಧರ ಪಾರ್ವತೀವರ ಕರಿಗೊರಳ ಕೈಲಾಸಮಂದಿರ2 ಸರ್ಪಭೂಷಣ ಶೂಲಿ ಡಮರುಧರ ಕಂದರ್ಪಹರ ಶಿವ ಸರ್ಪಗಿರಿ ಶ್ರಿ ವೆಂಕಟೇಶಗೆ ಸರ್ವಭಕ್ತಿ ಸಮರ್ಪಿಸಯ್ಯ ಆಪತ್ತುಹರ ಸಂಪತ್ತುಕರ ಶಾರ್ವರೀಕರಧರ ಶುಭಕರ 3 ಶಂಬರಾಂತಕವೈರಿ ಭಸಿತಧರ ಬೆಂಬಿಡದೆ ಸಲಹೊ ಶಂಭು ಶಚಿಪತಿಬಿಂಬ ಗುರುವರ ಸಾಂಬ ಪೊಂಬಸುರಕುವರ ತ್ರ್ಯಂಬಕಾ ತ್ರಿಪುರಾಂತಕ ಶುಕ 4 ಗಿರೀಶ ಸುರವರ ರುಂಡಮಾಲಾಧರ ಕರಿಚರ್ಮಾಂಬರ ನಿರುತ ಹೃದಯಸದನದೊಳನ ವರತ ಉರಗಾದ್ರಿವಾಸ ವಿಠಲನ ಚರಣಸರಸಿಜಮಧುಪ- ನೀ ಸುಖ ಸವಿದು ಸೇವಿಪ ವೈಷ್ಣವಾಗ್ರಣಿ5
--------------
ಉರಗಾದ್ರಿವಾಸವಿಠಲದಾಸರು
ಶಿವ - ಪಾವ9ತಿಯರು ಪರಮೇಶ್ವರಾ ಮಹದೇವಾ | ಗಿರಿಜಾವರ ಶಿವ ಶಂಭೋ | ಪರಮೇಶ್ವರ ಮಹದೇವಾ ಪ ಹರಶವ9 ಕಾಲಕಾಲ | ವಿರೂಪಾಕ್ಷ ರುಂಡಮಾಲಾ | ಶರಣು ಜನರಪಾಲಾ | ಗಿರಿ ಶೋಭಾವಾ ನೀ ಲೋಲಾ 1 ಭೂತೇಶ ವ್ಯೊಮಕೇಶಾ | ಶಿತಿಕಂಠ ಕೃತ್ತಿವಾಸಾ | ಕ್ರತು ಧ್ವಂಸಿ ದುಷ್ಟ ನಾಶಾ 2 ಈಶಾನ್ಯ ಭಗ9ರುದ್ರಾ | ಪಶುಪತೇ ವೀರಭದ್ರಾ | ಕೃಶಾನು ರೇತಸ್ ರೌದ್ರಾ | ಶಶಿಧರಾ ಯೋಗನಿದ್ರಾ 3 ಪಿನಾಕಿ ಮೃತ್ಯುಂಜಯನೇ | ನಾ ನಿನ್ನ ಮರತಿಹನೇ| ದೀನರ ಪಾಲಿಸುವನೇ | ನೀನೆನ್ನ ಕಾಯೋ ಭವನೇ 4 ಗಜಮುಖ ತಾತ ಬಾರೋ | ಭಜಿಸುವೆನೀ ಮೈದೋರೋ | ನಿಜದಾ ಸದಾನಂದ ಬಾರೋ | ರಜತಾದ್ರಿವಾಸ ತೋರೊ 5
--------------
ಸದಾನಂದರು
ಹರಹರ ಮಹಾದೇವ ಮಹಾನುಭಾವಾ | ಭವ ಯ್ಯೋಮಕೇಶ | ಅಂಧಕ ಸುರರಿಪು ಜಾಣಾ | ಸುರವರ ಪುರ ಮುರಹರ ಪದವಿನುತಾ ಪ ಸಂಜೀವ | ವಿಷ ಕರ್ತುವಾಭರಣ ಜಗದ ಸೂತ್ರಾಣ | ಎಸೆವ ರುಂಡಮಾಲಾ ಪಾರ್ವತಿಯ ಲೋಲ | ಪಶುಪತಿ ಪಾವನ್ನ ವರಸುಪ್ರಸನ್ನ | ಅಸಮಾನಸಮಾ ಕುಸುಮಾಭಿಸಮ | ನಿಶಕರ ದಿನಕರ ಬಿಸಿ ನಯನ | ದಶಶಿರ ಪ್ರಸನ್ನ ಭಜಿಪರ 1 ಗುರುಕುಲೋತ್ತ,ಮ ತುಂಗ ವೃಷಭ | ಸುರನದಿ ಧರ ಧೀರ ಜಗದೋದ್ಧಾರ | ನಿರಂಜನ ಸುಂದರ ವದನ | ಕರಿ ಚರ್ಮಾಂಬರ ಶೋಭಾಂತರವಾದನಾ ಭಾ | ಹರಣ ಚರಾಚರ ಸುರವರ ಡಮುರಗ ತ್ರಿಶೂಲಧರ | ನರವರ ಶರಭೂತ ಪರಿವಾರ ಭಯಂಕರ | ದುರಿತ ವಿದೂರಾ 2 ಅಂಬರ ವ್ಯಾಘ್ರಾವಾಸಾ | ಯ್ಯೋಮ | ಕೇಶ ಸ್ಮಶಾನವಾಸ | ಭಾಸುರೋನ್ನತ ಲೀಲಾ | ಸುರಮುನಿಪಾಲಾ | ಚಾಪ ಪಿನಾಕಿ ಚಮುಪಾ | ಕಾಸೀವಾಸಿ ತೋಷಿಸೆ | ದಾಶರಥಿ ನಾಮತಾರಕ ಉಪದೇಶಿ | ಕೋಶ ಶ್ರೀ ವಿಜಯವಿಠ್ಠಲ ವೆಂಕಟೇಶನ | ಪುರಂದರ ದಾಸನ ದಾಸನ ಕ್ಲೇಶವಿನಾಶಾ 3 (ಔ) ಶ್ರೀತುಳಸೀ
--------------
ವಿಜಯದಾಸ
ಗೌರೀವರಶಿವ ನಮೋ ನಮೋ | ಶಿವ |ಗೌರೀವರ ಶಿವ ನಮೋ ನಮೋ |ಈಶಪರಾತ್ಪರದೋಷನಿವಾರ |ಕಾಶೀಪುರವರವಾಸ ವಿಶ್ವೇಶ್ವರ 1ಕರಿಚರ್ಮಾಂಬರ ಕರುಣಾಕರ |ಸ್ಮರಿಸಲು ಸರ್ವರದುರಿತನಿವಾರ 2ಭಸ್ಮಾಲೇಪನ ಶಶಿಶೇಖರವೃಷಭವಾಹನ ಸ್ಮಶಾನ ಸಂಚಾರ 3ಸುರ ಗಂಗಾಧರ | ನರರುಂಡಮಾಲಾ |ಕರದಿ ತ್ರಿಶೂಲವು ಉರಗಕುಂಡಲ 4ಜಟಾಮಕುಟ ನೀಲಕಂಠೇಶ್ವರಾ |ಅಡವಿಯೊಳ್ಕೈರಾತನಟನ ಶಂಕರ 5ಷಣ್ಮುಖ ಭೈರವ ಭೃಂಗಿ ಪ್ರಮಥ |ಗಣನಾಥ ವೀರಭದ್ರ | ನಂದಿವಂ ದಿತ 6ಮಂದರಧರಗೋವಿಂದನ ಸಖನೆ |ವಂದಿಪೆದಾಸನ ಪಾಲಿಸು ಶಿವನೆ 7
--------------
ಗೋವಿಂದದಾಸ