ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರೇನು ಮಾಡುವರು ಅವನಿಯೊಳಗೆ | ಕರ್ಮ ಫಣಿಯಲ್ಲಿ ಬರೆದುದಕೆ ಪ ಮಾಡಿದಡಿಗಿಯು ಕೆಡಲು ಮನಿಯ ಗಂಡನು ಬಿಡಲು | ಸತಿ ತನ್ನ ಕುಣಿಸ್ಯಾಡಲು ನಿಜದಿ || ಗೋಡೆಗೆ ಬರೆದ ಹುಲಿ ಘಡಘಡನೆ ತಿನಬರಲು | ಆಡಿದ ಮತುಗಳು ಅಖಿಳಿರು ನಿಜವೆನಲು 1 ಹೊಲ ಬೇಲಿ ಮೆಯ್ದರೆ ಮೊಲ ಇರಿಯ ಬಂದರೆ | ತಲೆಗೆ ತನ್ನ ಕೈ ಪೆಟ್ಟು ತಾಕಿದರೆ || ಹೆರಳು ಹಾವಾದರೆ ಗೆಳೆಯ ರಿಪುವಾದರೆ | ಕಲಿಸಿದ ಅವಲಕ್ಕಿ ಕಲಪರಟಿ ನುಂಗಿದರೆ 2 ಹೆತ್ತ ತಾಯಿ ಹಿಡಿದು ಮಕ್ಕಳಿಗೆ ವಿಷ ಹಾಕಿದರೆ | ಪೆತ್ತ ತಂದೆಯು ಹೊರಗೆ ಮಾಡಿದರೆ || ತೊತ್ತು ಅರಸಿಗೆ ಪ್ರತ್ಯುತ್ತರವನಾಡಿದರೆ | ಕತ್ತಲೆ ಬೆನ್ನಟ್ಟಿ ಕರಡ್ಯಾಗಿ ಬಂದರೆ 3 ಕಣ್ಣವೊಳಗಿನ ಗೊಂಬಿ ಕಾದ ಬಂದರೆ | ಹೆಣ್ಣಿನ ಹರಟೆ ಹೆಚ್ಚಾದರೆ | ಅನ್ನವನು ಉಣ್ಣಲು ಅಜೀರ್ಣವಾದರೆ | ಪುಣ್ಯಕ್ಷೇತ್ರಗಳಲ್ಲಿ ಪಾಪ ಅಟ್ಟಿಸಿದರೆ 4 ಏರಿ ಕುಳಿತ ಕುಂಬಿ ಎರಡಾಗಿ ಮುರಿದರೆ | ವಾರಿಧಿಗಳು ಮೇರೆ ಮೀರಿದರೆ || ಆರಿದ ಇದ್ದಲಿಗಳು ಅಗ್ನಿಯಾದರೆ | ನಮ್ಮ ವಿಜಯವಿಠ್ಠಲನಿರುವ ತನಕ 5
--------------
ವಿಜಯದಾಸ
ಆರೇನ ಮಾಡುವರು ಭುವನದೊಳಗೆ |ಪೂರ್ವಜನ್ಮದಕರ್ಮ ಪಣೆಯಲ್ಲಿ ಬರೆದುದಕೆಪಮಾಡಿದಡಿಗೆಯದು ಕೆಡಲು ಮನೆಯ ಗಂಡನು ಬಿಡಲು |ಕೊಡಿ ಇದ್ದಾಸತಿಯ ಕುಣಿಸಾಡಲು ||ಗೋಡೆಯಲಿ ಬರೆದ ಹುಲಿ ಘುಡುಘುಡಿಸಿ ತಿನಬರಲು |ಆಡದಂತಹ ಮಾತ ಅಖಿಳರೂ ನಿಜವೆನಲು 1ಹೆತ್ತಾತಾಯ್ ಕರೆದು ಮಕ್ಕಳಿಗೆ ವಿಷ ಹಾಕಿದರೆ |ಮತ್ತೆ ತಂದೆಯ ಕರೆದು ಹೊರಗೆ ಮಾರಿದರೆ ||ತೊತ್ತು ಅರಸಿಗೆಪ್ರತಿ - ಉತ್ತರವ ನಡೆಸಿದರೆ |ಕತ್ತಲೆ ಕರಡಿಯಾಗಿ ಬೆನ್ನಟ್ಟಿ ಕಟ್ಟಿದರೆ 2ಹೊಲಬೇಲಿ ಮೇದರೆ - ಮೊಲ ಎದ್ದು ಇರಿದರೆತಲೆಗೆ ತನ್ನಯ ಕೈಯ ಪೆಟ್ಟು ತಾಗಿದರೆ ||ಹೆಳಲು ಹಾವಾದರೆ - ಗೆಳೆಯ ರಿಪುವಾದರೆ |ಕಲಿಸಿದ್ದ ಅವಲಕ್ಕಿ ಕಲಪರಟಿ ನುಂಗಿದರೆ 3ಕಣ್ಣೊಳಗಿನಾ ಬೊಂಬೆ ಕಚ್ಚಾಡ ಬಂದರೆ |ಹೆಣ್ಣಿನಾ ಹೋರಾಟ ಹೆಚ್ಚಾದರೆ ||ಅನ್ನ ಉಣ್ಣದ ಮನುಜಗಜೀರ್ಣವಾದರೆ |ಪುಣ್ಯತೀರ್ಥಂಗಳಲಿ ಪಾಪ ಘಟಿಸಿದರೆ 4ಏರಿ ಕುಳಿತಾ ಕುಂಬೆ ಎರಡಾಗಿ ಬಿಚ್ಚಿದರೆ |ವಾರಿಧಿಗಳು ಉಕ್ಕಿ ಮೇರೆ ಮೀರಿದರೆ ||ಆರಿದಾ ಇದ್ದಲಿಯು ಅಗ್ನಿಯಾಗುರಿದರೆ |ಧೀರಪುರಂದರ ವಿಠಲನ ದಯವು ತಪ್ಪಿದರೆ5
--------------
ಪುರಂದರದಾಸರು