ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಗನ್ನಾಥ ಸಮುದ್ರ ತೀರದಿ ಜಗನ್ನಾಥ ಸಮಗ್ರ ಸೇವೆಯ ಕೊಡುವಾತ ಪ ಸಮರ್ಥ ಫಲ್ಗುಣ ರಥಸೂತ ಸಮಸ್ತಲೋಕವ ಪೊರೆವಾತ ಅ.ಪ ಬಲಭದ್ರಾನುಜೆಯರನೊಡವೆರಸಿ ಜಲನಿಧಿ ಮಧ್ಯದಿ ದ್ರೋಣದಿಂದಿಳಿಸಿ ಒಲಿದು ವೈಕುಂಠಕೆ ಅವದಿರ ಕಳಿಸಿ ಸಲೆ ನಿಂದೆಯಾ ಜಗನ್ನಾಥನೆಂದೆನಿಸಿ 1 ಪಾಂಡವರಕ್ಷಕ ನೀಲಾಂಗಾ ಪುಂಡರೀಕಾಂಬಕಾ ಮದನಾಂಗಾ ಅಂಡಜವಾಹನ ರಿಪುಮದಭಂಗ ಕಂಡೆ ನಿನ್ನನಾ ಮಾಂಗಿರಿರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬಾರೋ ಶ್ರೀರಂಗ ಕೀರ್ತಿ ತರಂಗ ಬಾರೋ ರಿಪುಮದಭಂಗ ನೀಲಾಂಗ ಬಾಬಾ ಪ ತಿಮಿರ ಪತಂಗ ಬಾರೋ ನರಸಿಂಗ ಗರುಡ ತುರಂಗ ಬಾಬಾ ಅ.ಪ. ಪುರಹರ ಸಂಗ ಬಾರೋ ಕಾಳಿಂಗ ಮರ್ಧನರಂಗ ಬಾರೋ ಸರ್ವಾಂಗ ಸುಂದರರಂಗ ಬಾಬಾ 1 ಬಾರೋ ಸಾಷ್ಟಾಂಗ ವೆರಗುವೆರಂಗ ಭಂಗ ಬಾಬಾ ಬಾರೋ ಸಾರಂಗ ವರದ ಶ್ರೀರಂಗ ಬೀರೋ ಭಕ್ತಿಯ ನಿಗಮಾಂತರಂಗ ಬಾಬಾ 2 ಬಾರೋ ಶ್ರೀರಂಗ ತೋರೋ ಆನಂದ ಬೀರೋ ಜ್ಞಾನತರಂಗ ಕೃಪಾಂಗ ಬಾಬಾ ಬಾರೋ ಕೇಶವ ಕರುಣಾಂತರಂಗ ಬಾಬಾ 3 ಬಾರೋ ಅಂಗಧ ವರದ ಶ್ರೀರಂಗ ಬಾರೋ ಗಂಗೆಯ ಪಿತನೆ ಶ್ರೀ ರಂಗ ಬಾಬಾ ಬಾರೋ ದೂರ್ವೇಶ ಬಲಚದುರಂಗ ಬಾರೋ ಶ್ರೀ ಚನ್ನಕೇಶವರಂಗ ಬಾಬಾ 4
--------------
ಕರ್ಕಿ ಕೇಶವದಾಸ
ಶ್ರೀವತ್ಸಾಂಕಿತ ಗರುಡ ತುರಂಗ ಕಾವೇರಿ ಜಲ ಪರಿವೃತ ರಂಗ ಪ. ದೇವೋತ್ತಮ ನುತ ಧರಿತ ರಥಾಂಗ ಪಾವನ ಚರಣ ಕೃಪಾಂಗ ಶುಭಾಂಗ ಅ.ಪ. ದೇವಕೀನಂದನ ಜಲದ ನೀಲಾಂಗ ಭಾವಜಪಿತ ದಯಾಜಲಧಿ ತರಂಗ ಶ್ರೀವನಮಾಲಾ ರಿಪುಮದ ಭಂಗ ಲಾವಣ್ಯಾಂಬರ ಕರುಣಾಪಾಂಗ 1 ರಾವಣ ಕುಲ ಸಂಹಾರಕ ರಂಗ ಶ್ರೀವಿಭೀಷಣ ಪೂಜಿತ ರಂಗ ಸನ್ನುತ ರಂಗ ಶ್ರೀವಸುಧಾನ್ವಿತ ಮಾಂಗಿರಿರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್