ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಊ) ಲೋಕನೀತಿಯ ಕೃತಿಗಳು ಕೆಟ್ಟಗುಣಗಳು ನರನ ಅಟ್ಟಿಕೆಡಹುತಲಿಹುವು ಭ್ರಷ್ಟನೆನಿಸದೆ ಬಿಡವು ಇವನ ಪ ಸೃಷ್ಟಿಯೊಳಗಿವುಗಳಿಂದೆಷ್ಟುಜನ ಕೆಟ್ಟಿಹರೋ ಕಟ್ಟುತ್ತ ಮುಸಲದಿಂ ಕುಟ್ಟುತಿಹುವೂ ಅ.ಪ ಸರಿಧರೆಯ ಸ್ತ್ರೀಯರಂ ಕಾಯಿಸಲು ನರತಾನು ಹರಿಯಿಂದ ಹತನಾಗಿ ಹೋದಾ ವರವಿಪ್ರನಲಿ ಕ್ರೋಧಮಾಡಿದ ಬಕಾಸುರನ ತರಿದನಲ್ಲವೆ ಭೀಮ ತಾನು 1 ದಾಯವನು ಲೋಭದಿಂ ಕೌರವನು ಪಾಂಡವರಿ ಗೀಯದುದಕವನೇನು ಪಡೆದಾ ರಾಯದಶರಥ ತನ್ನ ಸತಿಸುತರ ಮೋಹವಿರೆ ಆಯುವಿಂ ಗತನಾಗಿ ಹೋದಾ 2 ಜಮದಗ್ನಿಯ ಹೋಮಧೇನುವಂ ಮದದಿಂದೆ ಕಾರ್ತಿವೀರ್ಯಾರ್ಜುನನು ಕೊಳಲು ಅಮಿತಬಲನಾಪರಶುಧಾರಿಯು ತಾನು ಸಮರದೊಳೆ ಸವರುತ್ತ ಅವನ ಕಳೆದ3 ಕೃಷ್ಣನನು ಮತ್ಸರದಿ ಶಿಶುಪಾಲ ಬಯ್ಯಲು ವಿಷ್ಣುಚಕ್ರವು ಕೊಂದಿತವನ ಬಾಣ ತಾನೀರ್ಷೆಯಿಂ ಭವಗವಂತನಿದಿರೇಳೆ ಪ್ರಾಣವುಳಿಯುತ ನಾಲ್ಕು ತೋಳ್ಗಳಾಯ್ತು 4 ವಾಸುದೇವನ ಮೇಲಸೂಯೆಯಿಂ ಪೌಂಡ್ರಕ ವಾಸುದೇವನೊಳು ಅಳಿದ ಕಂಡ್ಯಾ ದೂಷಣೆಯು ಡಂಬಗಳು ನಾಶನವ ಗೈಯುವುವು ಈಶ ಸುಜನರಿಗಾಗಿ ಭಾವಿಸುವ ಜಗದೀ5 ದರ್ಪದಿಂ ದಶಶಿರನು ಮರೆಯುತ್ತಲಿರಲಾಗಿ ಅಪಹಾರಗೈದ ಶ್ರೀರಾಮ ತಲೆಯಾ ರಿಪುಗಳಾ ಮಧು ಕೈಟಭರ ಮಮತೆಯನು ಉಪಮೆಯಲ್ಲಿದು ಮಾಯಿ ಮುರಿದ ನೋಡಾ 6 ನಿರ್ವಿಕಾರನ ನೆನೆದು ಗರ್ವವರ್ಜಿತರಾಗಿ ಸರ್ವವೂ ಹೆಜ್ಜಾಜಿ ಕೇಶವಾ ಯೆಂದು ಪರ್ವತೋದ್ಧರನಲ್ಲಿ ಕರ್ಮಾರ್ಪಣೆಯ ಮಾಡಿ ಒರ್ವನೇ ಜಗದೀಶನೆಂದು ನಮಿಸೀ 7
--------------
ಶಾಮಶರ್ಮರು
ಏನು ಪವಮಾನಿ | ಏನು ಪವಮಾನಿ | ಈ ನಿಧಿಯಲಿ ಬಂದು ನಿಂದ ಕಾರಣ | ಮಾಣದೆ ಪೇಳು ನಿ | ದಾನದಿಂದಲಿ | ಮಾನಸದಲಿ | ದಾನವಾರಿಯ | ಧ್ಯಾನ ಮಾಡುವ ಜಾಣ ಜಗದ ಪ್ರಾಣ ಸುಂದರಾ | ನಾನಾ ಮಹಿಮಾ ಗುರುವೆ ಪ ಕೇಸರಿನಂದನ ಪಾಶವಿನಾಶ ನಿರ್ದೋಷ | ಭಾರತೀಶ ಈಶಾ | ಶೇಷಾದ್ಯರಿಗುಪದೇಶದ ಕರ್ತಾ | ಲೇಸು ಸದ್ಗುಣಗಣ ಕೋಶ ಸರಸಿಜಾಸನ ಪದವಿಗೆ ಸೇರುವಾತಾ || ದೇಶದೊಳು ಬಲುಭೂಷಣ ಪಾಕಶಾಸನ ಶರದ ಶರೀರ | ದಾಶರಥಿ ಪಾದಾಸರವಿಡಿ | ದೇಸು ಬಗೆಯಲಿ | ಮೋಸ ಪೋಗದಾಯಾಸಬಡದಲೆ | ಮೀಸಲ ಮನ ಸೂಸು ವನರಾಸಿ ಲಂಘಿಸಿ 1 ಪರಿಸರ ಪೋಗಲಾಸಮಯದಲ್ಲಿ | ಭಾಸುರ ಲಂಕೆ | ಯ ಶೋಧಿಸಿದನಾ ಗೋ | ಸಾಸಿರವಿತ್ತು ಕೂಸಿನಂದದಲಿ || ಭಾಷಿಯನಾಡಿ ಪದ್ಮಾಸನಿಗೆ ಸಂ | ಸವರಿ ಫಲ ಸವಿದು ಖಳನ ನಗುತ | ನಾಶಗೊಳಿಸಿದ ಸಮರ್ಥನೆ 2 ಹಿಂದೆ ಪ್ರಳಯದಲ್ಲಿಂದಿರೇಶನು ಸುರ್ವೃಂದ ಉದರದೊಳು | ಪೊಂದಿಟ್ಟುಕೊಂಡು ಆಗ | ಅಂದು ನೀನೊಬ್ಬನೇ ಮಂದನಾಗದೆ ನಯದಿಂದಲಿ ಎಚ್ಚತ್ತು | ಪೊಂದಿಕೊಂಡು ಇದ್ದೆ | ಇಂದು ಕದನದೊಳು ಇಂದ್ರಜಿತನು ಕರದಿಂದ ಸೆಳೆದÀ ಶರ | ದಿಂದಲಿ ಸಿಗಿಬಿದ್ದು | ಬಂಧಿಸಿಕೊಂಡಂಜಿನಿಂದಂತೆ ಮೈದೆಂದಿಗಿಲ್ಲದಂತೆ ನಂದವ ತೋರಿದೆ ಇಂದು ಮೌಳಿಯ ಪೊಂದಿದದಶ | ಕಂಧರನ ಮೊಗ ಮುಂದೆ ಭಂಗಿಸಿ | ಬಂದು ಗುದ್ದಿಲಿನೊದ್ದನು ಅವನಿರೆ | ಮಂದಹಾಸದಲಿಂದ ನಗುತ 3 ಪುರವನುರುಹಿ ಅಸುರರ ಸದೆದು ತೀ | ವರದಿಂದ ಶರಧಿಯ ಮರುಳೆ ಹಾರಿ ಬಂ | ದುರವಣಿಯಿಂದ ಶ್ರೀ | ಹರಿ ಚರಣಕ್ಕೆರಗಿ ಪೊಡಮಟ್ಟು | ಕರವನೆ ಮುಗಿದು | ಚೂಡಾಮಣಿ ಇಡೆ ಮುಂದೆ ವಿವರಿಸಿದೆ | ರಿಪುಗಳಾ | ಗರದ ವಿಸ್ತಾರ | ಸುರರು ಭಾಪುರೆ ಎಂದಂಬರದಲಿವಾದ್ಯ | ಬೆರೆದಲ್ಲಿ ಮೊರೆಯಾಗಿ ಅರಮರೆಯಿಲ್ಲದೆ | ತರಿಸಿ ಮಾರ್ಗವಸರದಲಿ ವಿಸ್ತರಿಸಿ | ಧುರದೊಳಗರಿಗಳಿಂದಲಿ ಮರಣವಾದವರನ ಎಬ್ಬಿಸಿ 4 ಪಾತಾಳದೊಳು ಹತ್ತು ತಲೆಯವನಿರಲು ಕಾತುರದಿಂದ ಹೋ ಮಾತುರಕಾರ್ಚಿಸೆ | ಮಾತು ಮುಂಚದ ಮುನ್ನ ಭೀತಿ ಇಲ್ಲದೆ ಪೋಗಿ | ಪಾತಕನವಧಾನ | ದಾತಗೆ ದಿವ್ಯವರೂಥವೆಂದೆನಿಸಿ ವಿ| ಧೂತ ರಾವಣನ ವಿ | ಪಾತನ ಗೈಸಿದೆ | ಪ್ರೀತಿ ಬಡಿಸಿ ನಿಜಾರಾತಿ ವಿಭೀಷಣಗೆ ತಪ್ಪದೆ ಲಂಕಾ | ನಾಥನ ಮಾಡಿ ನೀ | ರಘುನಾಥನ ಯಡೆ ನೀ ತೆಗೆದುಂಡೆ | ಶ್ರೀ ತರುಣೇಶ ವಿಜಯವಿಠ್ಠಲನ ದೂತಾ ಹನುಮಾ 5
--------------
ವಿಜಯದಾಸ
ರಕ್ಷಿಸು ಶ್ರೀ ಲಕ್ಷ್ಮೀವೆಂಕಟರಮಣ ರಾಕ್ಷಸ ಸಂಹರಣ ಪಕ್ಷೀಂದ್ರವಾಹನ ವಾಸುಕಿಶಯನ ವಾರಿಜದಳನಯನಪ. ತ್ರ್ಯಕ್ಷಾದಿ ವಿಬುಧಪಕ್ಷ ಪರಾತ್ಪರ ಸುಕ್ಷೇಮನಿಧಿ ಕೃಪೇಕ್ಷಣದಿಂ ಸದಾಅ.ಪ. ವೇದಬಾಹಿರರಾಗಿ ಖಲರು ಬಹು ಬಾಧಿಸುವರು ಸಾಧನೆಯೆಲ್ಲ ಕೆಡಿಸುವರು ರಿಪುಗಳಾರ್ವರು ಆದಿಮೂರ್ತಿ ತವಪಾದಾಶ್ರಯ ಸು- ಬೋಧಾಮೃತರಸ ಸ್ವಾದುಗೊಳಿಸುತಲಿ1 ಸರ್ವಾಪರಾಧಂಗಳ ನೀ ಕ್ಷಮಿಸು ಸುಜನರನುದ್ಧರಿಸು ಪೂರ್ವಾರ್ಜಿತ ಪಾಪಂಗಳ ಪರಿಹರಿಸು ಸದ್ಭಕ್ತಿಯೊಳಿರಿಸು ಸರ್ವತ್ರ ವ್ಯಾಪ್ತ ಸಂತಕೃತ ಸ್ತೋತ್ರ ದುರಿತ ದುರ್ಗನಿಗ್ರಹನೆ2 ಸತ್ಯಾತ್ಮ ಪಾವನ ಪಂಕಜನಾಭ ನೀಲಾಭ್ರದಾಭ ಸತ್ವಾದಿಗುಣವರ್ಜಿತ ಮಹಾಶೋಭ ಶರಣಾಗತ ಸುಲಭ ಚಿತ್ತವಾಸ ಶ್ರೀವತ್ಸಾಂಕಿತ ಪರ- ಮಾರ್ಥಬೋಧ ಮಹತ್ತತ್ತ್ವನಿಯಾಮಕ3 ಪವಮಾನಾಂತರ್ಗತ ಪಾಪ ವಿನಾಶ ಪೊರೆಯೊ ಜಗದೀಶ ಅವಿಕಾರ ಲೀಲಾನಂತವಿಲಾಸ ಶತಸೂರ್ಯ ಪ್ರಕಾಶ ಕವಿಜನಾನಂದಭವನ ಭವಭಯಾ- ಮಾಧವ ಮಧುಸೂದನ4 ಚಿತ್ರಾಖ್ಯಪುರಮಂದಿರ ಸುಖರೂಪ ಯಾದವ ಕುಲದೀಪ ಕರ್ತಾಕಾರಯಿತ ಸುಗುಣಕಲಾಪ ಪರಮ ಪ್ರತಾಪ ಸುತ್ರಾಣ ಲಕ್ಷ್ಮೀನಾರಾಯಣ ಪರ ವಸ್ತು ಶಾಶ್ವತ ಪವಿತ್ರ ಚರಿತ್ರ5
--------------
ತುಪಾಕಿ ವೆಂಕಟರಮಣಾಚಾರ್ಯ
ರಕ್ಷಿಸು ಶ್ರೀ ಲಕ್ಷ್ಮೀವೆಂಕಟರಮಣ ರಾಕ್ಷಸ ಸಂಹರಣಪಕ್ಷೀಂದ್ರವಾಹನ ವಾಸುಕಿಶಯನ ವಾರಿಜದಳನಯನ ಪ.ತ್ರ್ಯಕ್ಷಾದಿ ವಿಬುಧಪಕ್ಷಪರಾತ್ಪರಸುಕ್ಷೇಮನಿಧಿ ಕೃಪೇಕ್ಷಣದಿಂ ಸದಾ ಅ.ಪ.ವೇದಬಾಹಿರರಾಗಿ ಖಲರು ಬಹು ಬಾಧಿಸುವರುಸಾಧನೆಯೆಲ್ಲ ಕೆಡಿಸುವರು ರಿಪುಗಳಾರ್ವರುಆದಿಮೂರ್ತಿ ತವಪಾದಾಶ್ರಯ ಸು-ಬೋಧಾಮೃತರಸ ಸ್ವಾದುಗೊಳಿಸುತಲಿ 1ಸರ್ವಾಪರಾಧಂಗಳ ನೀ ಕ್ಷಮಿಸು ಸುಜನರನುದ್ಧರಿಸುಪೂರ್ವಾರ್ಜಿತ ಪಾಪಂಗಳ ಪರಿಹರಿಸು ಸದ್ಭಕ್ತಿಯೊಳಿರಿಸುಸರ್ವತ್ರ ವ್ಯಾಪ್ತ ಸಂತಕೃತ ಸ್ತೋತ್ರದುರ್ವಾರದುರಿತದುರ್ಗನಿಗ್ರಹನೆ2ಸತ್ಯಾತ್ಮ ಪಾವನಪಂಕಜನಾಭನೀಲಾಭ್ರದಾಭಸತ್ವಾದಿಗುಣವರ್ಜಿತ ಮಹಾಶೋಭ ಶರಣಾಗತ ಸುಲಭಚಿತ್ತವಾಸ ಶ್ರೀವತ್ಸಾಂಕಿತ ಪರ-ಮಾರ್ಥಬೋಧ ಮಹತ್ತತ್ತ್ವನಿಯಾಮಕ 3ಪವಮಾನಾಂತರ್ಗತ ಪಾಪ ವಿನಾಶ ಪೊರೆಯೊ ಜಗದೀಶಅವಿಕಾರ ಲೀಲಾನಂತವಿಲಾಸ ಶತಸೂರ್ಯ ಪ್ರಕಾಶಕವಿಜನಾನಂದಭವನ ಭವಭಯಾ-ರ್ಣವ ಬಾಡಬಮಾಧವಮಧುಸೂದನ4ಚಿತ್ರಾಖ್ಯಪುರಮಂದಿರ ಸುಖರೂಪ ಯಾದವ ಕುಲದೀಪಕರ್ತಾಕಾರಯಿತ ಸುಗುಣಕಲಾಪಪರಮಪ್ರತಾಪಸುತ್ರಾಣಲಕ್ಷ್ಮೀನಾರಾಯಣಪರವಸ್ತು ಶಾಶ್ವತ ಪವಿತ್ರ ಚರಿತ್ರ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ