ಒಟ್ಟು 30 ಕಡೆಗಳಲ್ಲಿ , 23 ದಾಸರು , 30 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀನಿವಾಸ ಸಲಹೋ ನಮ್ಮ ಶ್ರೀನಿಧಾನ ಚರಣನೆ ಪ ಧ್ಯಾನ ನಿರತಮೌನಿಜನರ ಮಾನಸಾಬ್ಜಹಂಸನೆ ಅ.ಪ. ನಕ್ರಮುಖದಿ ಸಿಕ್ಕಿದಿಭನನಕ್ಕರಿಂದ ಪೊರೆದನೆ ಚಕ್ರಧರ ತ್ರಿವಿಕ್ರಮಾದಿ ಚಕ್ರಭೊಗಿ ಶಯನನೇ 1 ಬಿಟ್ಟು ನಿನ್ನ ಭ್ರಷ್ಟನಾಗಿ ಕೆಟ್ಟೆಜನ್ಮ ಜನ್ಮದೆ ಹುಟ್ಟಿ ಹುಟ್ಟಿ ಕಷ್ಟಪಟ್ಟೆ ಕೃಷ್ಣ ನಿನ್ನ ನಂಬಿದೆ 2 ಶರಣ ಜನರ ಪೊರೆವನೆಂಬ ಬಿರುದು ಧರಿಪನಲ್ಲೆಲಾ ಹರಿಣ ಹರಣಧರದೊಳಿರುವ ಕರುಣಿ ವರದ ವಿಠಲ 3
--------------
ಸರಗೂರು ವೆಂಕಟವರದಾರ್ಯರು
(1) ನಿಂದಾಸ್ತುತಿಗಳು ಏನುಂಟು ನಿನ್ನೊಳಗೆ ನಾ ಬೇಡಲು ಏನು ಕೊಡುವೆ ಎನಗೆ ಪ ಶ್ರೀನಿವಾಸನೇ ಬಲು ದೀನನೊಳವಲಕ್ಕಿ ಮಾನವ ನೋಡದೆಅ.ಪ ತಿರುಕನಾಗಿ ತಂದೆ ಧರೆಯ ಕಶ್ಯಪನೆಂಬ ತಿರುಕ ಹಾರುವನಿಗೆ ಗುರಿಮಾಡಿದೆ ಸಿರಿಯನು ರಜಕನ ಪರಿವಾರದಿ ಬಿಟ್ಟು ಗರಳ ಹಾಸಿನೊಳೊರಗಿದೆ ಕೃಷ್ಣ 1 ಧನಕನಕಂಗಳು ನಿನಗಿರೆ ಸತ್ರಾಜಿ ತನ ಮಣಿಯನು ನೀಗಣಿಸುವೆಯಾ ಅನುವಾದ ಮನೆಯಿರೆ ಮುನಿಮನವೇತಕೆ ಮನೆವಾರ್ತೆಯುಳ್ಳರೆ ವನವಾಸಬೇಕೆ 2 ಕಾಮಧೇನುವು ಕಲ್ಪನಾಮಕ ತರುವು ಚಿಂ ತಾಮಣಿಗಳನು ಸುತ್ರಾಮಗಿತ್ತು ಗೋಮಯರಸಗಳ ಕಾಮಿಸಿ ಕದ್ದು ನೀ ದಾಮೋದರನಾದೆ ತಾಮರಸಾಕ್ಷ 3 ಖ್ಯಾತಿ ನೋಡದೆ ರಣ ಭೀತಿಯೊಳೋಡಿದೆ ಜಾತಿ ನೋಡದೆ ಜಾಂಬವತಿಗೂಡಿದೆ ನೀತಿಯ ನೋಡದೆ ಕೋತಿಯೊಳಾಡಿದೆ ಮಾತು ನೋಡದೆ ಬರಿ ಮಾಯೆಯ ಪಿಡಿದೆ 4 ಗತಿಹೀನರಿಗೆ ವರ ಗತಿಯ ತೋರಿಪನಾಮ ಸ್ಮøತಿಯೊಂದಿತ್ತರೆ ಸಾಕೆನಗೆ ಅತಿಶಯವಿದು ಎನ್ನ ಮತಿಯೊಳು ನಿನ್ನಯ ರತಿಯನ್ನು ಪಾಲಿಸು ವರದವಿಠಲರಾಮ 5
--------------
ವೆಂಕಟವರದಾರ್ಯರು
ಇಂದಿರೇಶ ಭಾಗವತ ಎಂದು ಬರುವನು ಇಲ್ಲೆ ಮಂದಸೂನನುನಮಗೆ ಮುಂದೆ ಗತಿಯೇನುದ್ಧವಾಒಂದು ಕಾರ್ಯವು ಬಾರದಂದಿನಾದಿಈಶ ಸುರಸುಂದರನು ಪೋದನಲ್ಲೋ ಉದ್ಧವಾ ಪ ಪತಿ ಸುತರ ಪರಿಚರಿಸುತಿಹ ನಮ್ಮಮರುಳು ಮಾಡಿದನುದ್ಧವಾ 1 ತೊರೆದು ಮನೆ ಧನಗಳನೆ ಬರಲು ಬಳಿಯಲಿ ಭಾಳತರಲಿ ಮಾಡಿದನುದ್ಧವಾಅರಿಯಲಿಲ್ಲವೊ ನಾವು ಸಿರಿಯರಸ ಇವನೆಂದುಪರಿಮೋಹಿಸಿದೆವುದ್ಧವಾ 2 ಮರುಗ ಮಲ್ಲಿಗೆ ಜಾಜಿ ಸುರಗಿ ಸೇವಂತಿಗೆತುರುಬಿನೊಳಗಿಟ್ಟುದ್ಧವಾಸರಸ ಸೌಂದರ್ಯಕ್ಕೆ ಮರುಳಾದನಿವನೆಂದುಗರುವ ಮಾಡಿದೆವುದ್ಧವಾಅಂತು ನಮ್ಮನು ಬಿಟ್ಟು ಮರೆಯಾಗಿ ರೋಧಿಸಲುಭರದಿ ಬಂದನುದ್ಧವಾ 3 ಕೋಲು ಕುದುರೆಯನೇರಿ ಬಾಲಕರಕೂಡಿ ತಾ ಕೇಳಿ ಮಾಡಿದನುದ್ಧವಾಲೀಲೆ ಚತುರರ ಸದೃಶ ಬಾಲೆಯರಕೂಡಿ ತಾ ಕೋಲನಾಡಿದನುದ್ಧವಾ4 ದಧಿ ಬೆಣ್ಣೆ ನಮ್ಮಾಲಯದೊಳುತಿಂದು ಭಾಳ ಮೋಹಿಸಿದನುದ್ಧವಾ 5 ಗರಳ ಹರಿಸಿನುದ್ಧವಾಉರಿಯ ನುಂಗುತ ಮುಖದಿ ಬೆರಳೊಂದುಹತ್ತೊಂದು ವರುಷ ಇಲ್ಲಿದ್ದುದ್ಧವಾಅರಿಯಲಿಲ್ಲವೊ ನಾವು ಸಿರಿಯರಸ ಇವನೆಂದುಪರಿಮೋಹಿಸಿದೆವುದ್ಧವಾ 6 ಒಂದಿನಾದರೂ ಒಮ್ಮೆ ಮನದಿ ಗೋಕುಲದವರಇಂದು ಸ್ಮರಿಪನೆ ಉದ್ಧವಾಚಂದ್ರ ವದನೇರ ಸ್ನೇಹ ಕೂಡಿ ಪುರದೊಳು ನಮ್ಮನಿಂದು ಮರೆತನೆ ಉದ್ಧವಾ 7 ಬಂದು ಬಳಗವ ಬಿಟ್ಟು ಮಧುರೆಗೆಲ್ಲರುನಿನ್ನ ಹಿಂದೆ ಬರುವೆವೊ ಉದ್ಧವಾಕಂದರ್ಪ ಪಿತನಿವನ ಸ್ಮರಿಸುತಲೆ ದೇಹದಿಪ್ರಾಣವೊಂದೇ ಉಳಿದಿಹುದುದ್ಧವಾ8 ಪರಮ ವೈಕುಂಠನು ಸರತಿಯಲೆ ತೋರಿಸುತಮರುಳು ಮಾಡಿದನುದ್ಧವಾಗಿರಿಗಿರಿ ಝರಿಯೊಳಗೆ ಚರಿಸಿ ಚಿನ್ನದ ಚರಯಗುರುತು ಮಾಡಿದನುದ್ಧವಾಅರಿಯಲಿಲ್ಲವೋ ಸಿರಿಯರಸ ಇವನೆಂದುಪರಿಮೋಹಿಸಿದೆವುದ್ಧವಾ 9
--------------
ಇಂದಿರೇಶರು
ಏಕೆ ಎನ್ನೊಳು ಮೂಕನಾದ್ಯೊತ್ರಿ ಲೋಕ ಜೀವಾಳುಪ ಪಿತ ಮಾತೃದ್ರೋಹಿಯೆಂದು ಅತಿಥಿಗಳನಾದರನುಯೆಂದು ಅತಿ ಪಾತಕಿಯಿವನುಯೆಂದಹಿತದಿ ಮುಖವೆತ್ತದಿರುವ್ಯೋ 1 ವಾಚಹೀನ ನೀಚನೆಂದು ಸಾಚಮನವಿಗಳ್ನಿಂದಕನೆಂದು ಆಚರಿಪನನಾಚಾರವೆಂದು ನೀಚಾರಿ ದಯಸೂಚಿಸದಿರುವ್ಯೋ 2 ಭಕ್ತರನ್ನು ಕ್ಷಮಿಸಿ ಪೊರೆದು ಭಕ್ತವತ್ಸಲನೆಂಬ ಬಿರುದು ಹೊತ್ತದ್ದೆಲ್ಲಡಗಿಸಿದ್ಯೋ ಮುಕ್ತಿದಾತೆನ್ನಯ್ಯ ರಾಮ 3
--------------
ರಾಮದಾಸರು
ಏನು ಕಾರಣವೆಮ್ಮ ದೂರಕೆ ನೀನು ನೂಕಿದನೆನಿಸಿದೆಹಾನಿ ವೃದ್ಧಿಗಳನ್ನು ಕಾಣಿಸಿ ದೀನಧೀರರ ಮಾಡಿದೆ ಪಎಲ್ಲರೊಳು ನೀ ಪೂರ್ಣ'ರುತಿಲ್ಲವೆಮ್ಮೆಡೆಯೊಳಗೆನುವ ಭ್ರಮೆಯಲ್ಲಿ ಬಂದುದು ಎಮಗೆ ಠಾ'ನ್ನೆಲ್ಲಿ ನಿನ್ನನಗಲುವರೆಉಳ್ಳವನೆ ನಿನಗಿಂತು ಬರುತಿರುವಲ್ಲಿ ನ'್ಮುರವನ್ನು ಪೇಳ್ವದುಜಳ್ಳು ನೀನಿದಿರಿಟ್ಟು ತೊಲಗಿದೆಯಲ್ಲ ಶ್ರೀಗುರುವರ್ಯನೆ 1ಹಲವು ಪರಿಯಲಿ ಚಿತ್ತಪಾಕವ ತಿಳಿದು ಶ್ರುತಿತಾ ಸಾರಿದರ್ಥವುಹೊಳೆಯದೊಂದೊಂದರ್ಥದಲಿ ಮನತೊಳಲಿ ಮಾರ್ಗವ ಕಾಣದೆನಲುಗಿ ಭವಮೃತಿಯೊಂದಿ ಜೀವರು ಬಳಲುತಿರಲವತರಿಪನೆಂಬರುತಿಳಿ'ಯಗಲುವನೆಂದರ ನುಡಿಯಳವಡದು ಗುರುವರ್ಯನೆ 2ಕೊರಗಿ ಕರಗುವ ಜೀವರಾರೈ ಬರುವೆ ನೀನೆಲ್ಲಿಂದ ಸಮಯಕೆಇರುವೆ ನೀನಾವೆಡೆಯೊಳಜ್ಞತೆ ಬರುವದಿವರಿಂಗೇತಕ್ಕೆಹರೆವದೆಂತದರಂದತೋರದು ಧರಿಸುತಿಹೆ ನೀನೆಂತು ತನುವನುಮರೆಯ ಮಾಳ್ವೆಯದೇಕೆ ಮೂರ್ತಿಯ ಕರುಣಿಸೈ ಗುರುವರ್ಯನೆ 3ನಿನ್ನ ನಿನ್ನೊಳು ನೀನೆ ನಾನೆಂದೆನ್ನದೆಂಬುದರಿಂದ ತಿಳಿದರೆನನ್ನ ನಿನ್ನೊಳು ಕಾಣ್ಬೆ ಅಂದು ಪ್ರಸನ್ನನಾಗಿಯೆ ಕರುಣಿಸಿಎನ್ನೊಳಗೆ ಸರ್ವವನು ಸರ್ವರೊಳೆನ್ನ ತಿಳಿದನ್ಯಾರ್ಥವನೆ ಮರತುನ್ನತಾಮಲ ಪೂರ್ಣನಹೆಯೆಂದಿನ್ನು ತೋರದು ದೇವನೆ 4ಸಾಕು ಸನಿಯವ ಸೇರಿಸೆಮ್ಮೊಳು ನೂಕು ಕ'ದಿಹ ತಮವ ಸುಖವನುಸೋಕಿಸೈ ಕಡೆಗೊಳಿಸು ಚಿಂತೆಯ ಬೇಕು ನಿನ್ನಡಿ ಸೇವೆಯುಶ್ರೀಕರನೆ ಚಿಕನಾಗಪುರ ವರದರಸನೆ ಗುರುವಾಸುದೇವನೆತಾಕು ತಡೆ ಬರದಂತೆ ನಿನ್ನೊಳಗೇಕತೆಯ ದಯಮಾಡಿಸೈ 5
--------------
ವೆಂಕಟದಾಸರು
ಏನುತ್ತೀರ್ಣಾಗುವೆನು | ಗುರುವಿಗೆ ಪ ಜನಿತು ಪನಿತನು ವಿದ್ಯದಾಯಕನು | ಉಣಲುಡಲೀವನು ಭಯವ ನಿವಾರಿಪನು 1 ತನ್ನ ತಾನೊಲಿದಾ ಕರುಣವಗರದಾ | ಚಿನುಮಯ ಸುಖದಾ ದಾರಿಯ ದೋರಿಸಿದಾ 2 ತಂದೆ ಮಹಿಪತಿ ಸ್ವಾನಂದ ಮೂರ್ತಿಕಂದನ ಸಾರ್ಥಿ ಆಗಿಹ ಘನಕೀರ್ತಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಂಡೆ ಗುರುರಾಯನಾ ಸುರಮನೋಪ್ರಿಯನಾ ಪ ತೊಂಡವತ್ಸಲ ಧರ - ದಂಡ ಕಮಂಡಲ ಪಂಡಿತಾಗ್ರಣಿಗಳೊಳು - ದ್ದಂಡ ಮಹಿಮನ ಅ.ಪ ಮಣಿ ವಿಭವಾ ವ್ರತತಿಜೋಪಮ ಯುಗನಯನ ಸಂಪಿಗಿನಾಸವಾ ಕಪೋಲ ಯುಗ ಭಾಸವಾ ವದನಾಬ್ಜದೊಳೊಪ್ಪುವ ಕಿರಿಹಾಸವಾ ಹಾ-ಹಾ- ಹಾ 1 ಕುಂದ - ಕುಟ್ಮಿಲ - ದಂತ ಪಂಕ್ತಿಯಾ ಅರುಣ ಪೊಂದಿ ಪೊಳೆವೊದದರ ಛವಿಯಾ ಸುಂದರ ದರೋಪಮ ಕಂಧರಾಂಕಿತ ಬಾಹುದಂಡವಾ ಭುಜದಳೊಪ್ಪುವ ಮುದ್ರನಾಮವ ಹೃದಯ - ಮಂಡಲ ಮುದ್ರನಾಮವ ಹಾ-ಹಾ-ಹಾ 2 ಚಲುವ ಸುಳಿನಾಭೀ ಪುಳಿನ ಪೋಲುವೊ ನಿತಂಬವಾ ಕದಳಿ ಸ್ತಂಭವಾ ಮಾಡುವ ಚರ್ಯ ವಿಡಂಬವಾ ಹಾ - ಹಾ - ಹಾ 3 ಕರಿರದೋಪಮ ಜಂಘೆಗಳಾ - ಗುಲ್ಫ ವರರತ್ನ ಪಾದಾಂಗುಲಿ ಸಂಫÀಗಳ ಸ್ಮರಿಸುವೊ ಜನರಿಗೆ ಸುರವರತರು ಪೋಲುವಾ ದುರಿತ ನಿರುತ ನೀಡುವೋ ನಭೀಷ್ಟವಾ ಭಕುತರೊಳಗೆ ತಾನಾಡುವಾ ಹಾ - ಹಾ - ಹಾ 4 ನೀತ ಗುರುಜಗನ್ನಾಥಾ ವಿಠಲಪಾದ ಪ್ರೀತಿಪೂರ್ವಕ ಭಜಿಸುತ ಭೂತ ಪ್ರೇತದ ಭಾಧೆUಳನೆಲ್ಲ ಕಳೆಯುವಾ ಸಕಲ ಸೌಖ್ಯನೀಡುವಾ ನಂಬಿದರೀತ ಪೊರೆಯುವಾ ತೋರಿಪನಾಗಯ್ಯ ಮಹಿಮವಾ ಹಾ - ಹಾ - ಹಾ 5
--------------
ಗುರುಜಗನ್ನಾಥದಾಸರು
ಕಂಡೇವಮ್ಮ ರಂಗನಾ |ಕಂಡೇವಮ್ಮಾ ಕೃಷ್ಣನಾ ಪ ಹೃದಯದೊಳಗಿನ ಸದಮಲ ಬ್ರಹ್ಮನಾ 1 ಬಿಡದೆವೆ ಗೋಕುಲದಿ ಸಂಚರಿಪನಾ 2 ಗುರುಮಹಿಪತಿ ಪ್ರಭು ಕರುಣ ಕಟಾಕ್ಷದಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕೃತ್ತಿಕೋತ್ಸವ ಗೀತೆ ಕೃತ್ತಿಕೋತ್ಸವ ನೋಡುವ ಬಾರೆ ನ ಮ್ಮಾರ್ತಿಯ ಪರಿಹರಿಪನು ನೀರೆ ಪ. ಬಹುಚಂದದಿ [ನಿಂದ]1 ಚಂದಂದಾಭರಣ ತೊಟ್ಟನೆ ಅರ್ತಿಯಿಂದಲೆ ತಾ ಪೊರಟಾನೆ 2 ಮಹಾಧ್ಯಾನದ ಮೇಲಿರಿಸಿ ಭಕ್ತವತ್ಸಲನಾಲಯಕೆಲ್ಲ 3 ಯಾರದಿಂದಲೆ ಶ್ರೀರಂಗನೇರಿ ಚಕ್ರಮೂರುತಿಯಮಂಟಪದಲ್ಲಿ 4 ಪಂದ (?)ವನಿತ್ತಾನೆ ಮುದದಿ ಲಕ್ಷ್ಮಿಗೆ ಸೇವೆ ಕೊಟ್ಟಾನೆ 5 ಆಳುಗಳ ಕೈಲಿತ್ತು ಪೊರೆದಾನೆ ಭಕ್ತರ ಹಸ್ತದಲಿ ಚಿತ್ತೈಸಿದನೆ 6 ಇಂದಿರೆರಮಣ ಗೋವಿಂದನೆ ಭವಬಂಧನಂಗಳನೆಲ್ಲ ಕಳೆವನೆ 7 ಅರ್ತಿಯಿಂದಲೆ ನೋಡಿದವರಿಗೆ ಮುಕ್ತಿಯ ಕೊಡುವನು ಸತ್ಯವಿದು 8
--------------
ಯದುಗಿರಿಯಮ್ಮ
ಚರಣಕಮಲವನು ನೆನೆವೆ ನಾ ನಿನ್ನ ಪ. ಚರಣಕಮಲವನು ನೆನೆವೆ ನಾ ದುರಿತರಾಶಿಗಳ ಸಂಹರಿಪನ ಅ.ಪ. ಶ್ರುತಿಯನುದ್ಧರಿಸಿದುದಾರನ ಸಿಂಧು- ಮಥನಕೊದಗಿದ ಗಂಭೀರನ ಕ್ಷಿತಿಯನೆತ್ತಿದ ಬಲುಧೀರನ ಶಿಶು ಸ್ತುತಿಸೆ ಕಂಬದಿ ಬಂದ ವೀರನ 1 ಇಂದ್ರನ ಧಾರೆಯ ನಿಲಿಸಿದನ್ನ ತನ್ನ ತÀಂದೆಯ ಮಾತು ಸಲಿಸಿದನ್ನ ಕಂದರದಶನ ಸೋಲಿಸಿದನ್ನ ವ್ರಜ- ದಿಂದುಮುಖಿಯರ ಪಾಲಿಸಿದನ್ನ 2 ವಧುಗಳ ವ್ರತವ ಖಂಡಿಸಿದನ್ನ ದುಷ್ಟ ರುದಿಸಲು ತುದಿಯ ತುಂಡಿಸಿದನ್ನ ಇದಿರಾದ ಖಳರ ಖಂಡಿಸಿದನ್ನ ಹಯ ವದನಪೆಸರ ಕೊಂಡುದಿಸಿದನ್ನ 3
--------------
ವಾದಿರಾಜ
ತಾ ಕಾಯುತಿದ್ದ ಕೃಷ್ಣನು ಗೋಪಾಲರನೂಗೋಕುಲದಲ್ಲಿ ಗೂಢನೂ ಪುೀಕುಂಭಿನಿಯೊಳಗಿರುತಿಹ ದುಷ್ಟರನೂಕುವ ಬಿಲದಲಿ ಅನುಪಮ ಧೀರಾ ಅ.ಪಅಸಿತ ಪಕ್ಷವು ಬಂದುದೂ ಮಾಸಗಳೊಳುಎಸೆವೇಕಾದಶಿಯೆಂಬುದು ಬರಲು ಅಂದುಬಸವಾಸುರಾನಾ ಬಡಿದು ತಾನಂದು ವ್ರಜದಿ ವಸುಧೇಶ ನಿದ್ದನೊಲಿದು ಅಸುರನು ಅಳಿಯಲು ಆ ವ್ರಜವುಳಿಯಲು ಹಸುಗಳು ಹೆಚ್ಚಲು ಹರಿ ತಾನಲಿಯಲು ವಸಗೆವ್ರಜದೊಳಗೆ ಬಹುಮಸಗೆ ಹೆಸರಾಗೆ 1ದ್ವಾದಶೀ ದಿವಸಾದಲ್ಲಿ ಉದಯಕಾಲವಾದುದು ''ತದಲ್ಲಿ ಶ್ರೀಕೃಷ್ಣನಿಗೆಬೋಧವಾಗಲು ಬೇಗದಲಿ ಬಾಲರು ಸಹಾ ಮಾಧವಾ ಮುದದಿಂದಲಿಕಾದಿರೆ ಗೋವ್ಗಳ ಕಾನನಮಧ್ಯದಿಕಾದಲು ಬಂದಾ ಕೇಶಿಯನುದಯದಿಕಾದಿ ಅಸುವಸಿಗಿದಿ ವೊದ'ದೀ ಈ 'ಧದಿ 2ವೃಂದಾಖ್ಯವಾದವನಾದಿ ಗೋಪಾಲಕರಾ ವೃಂದದಾ ವರಸ್ತೋಮವಾಮದಿ ನಿಂದಿದ್ದನಾಗಾಕಂದರ್ಪಕೋಟಿತೇಜದಿ ಕುಂಭಿನಿಯನ್ನು ಹೊಂದಿಸಿದನು ಹರುಷದಿ ಮಂದರಧಾರನು ಮಂಜುಳ ಮ'ಮನು ನಿಂದಿಹ ನೀರನು ನಿಜಗುಣಧಾಮನು ಅಂದು ಅಜಬಂಧು ತಾನೆಂದೂ ಅಲ್ಲಿನಿಂದು3ಘನ ನೀಲಾಳಕದ ವೃಂದ 'ುಶ್ರಿತವಾದಾಮಣಿಮಯ ಮಕುಟದಿಂದಾ ಮೂಡುವ ಕಾಂತಿಪಣೆಯಲ್ಲಿ ಮೊಳೆಯುವಂದಾ ಕಸ್ತುರಿತಿಲಕ ಗಣನೆಗೆ ಬರುವ ಛಂದಾ ಗುಣಿಸುವರಾರಿದ ಗುಣನಿಧಿಯೊಪ್ಪಿದ ಪ್ರಣತಪ್ರೇಮದ ಪದ ಮುಖ ಪದ್ಮದಗುಣನೂ ಗುರುತರನೂ 'ನಯವನೂ 'ವರಿಪನೂ 4ಸಿಂಗಾರಿಯ ಸೋಲಿಸುವಾ ಸುಭ್ರುವದಿಂದಾಮಂಗಳವಾದ ಮುಖದ ಮನ್ನಿಸುತಿಹಕಂಗಳ ಕೋಡಿವರಿವಾ ಕಟಾಕ್ಷವನ್ನೂ ಸಂಗಿಸಿದ ಸುಸ್ಮಿತವಾ ತೊಂಗುತ ತೋರಲು ತನ್ನಾಸಿಕವೂರಂಗಿಸಿ ರಾಜಿಸೆ ರದನಚ್ಛದವೂಹೊಂಗೆ ುೀರಂಗೆ ನೋಳ್ಪಂಗೆ ಭವ'ಂಗೆ 5ಕುಂಡಲಗಳ ಕಾಂತಿಯೂ ಕರ್ನಾಗಳಲ್ಲಿಮಂಡಿತವಾಗಿ ಮತ್ತೆಯೂ ಮುಕುರದಂಥಾಗಂಡ ಸ್ಥಳಗಳಲ್ಲಿಯೂ ಗೋಚರಿಸುತ ದಿಂಡಾಗಿ ತೋರೆ ದೀಪ್ತಿಯೂ ಪುಂಡರೀಕಾಕ್ಷನು ಪೊಳೆಯುತಲಿದ್ದನು'ಂಡುತ ಖಳರನು ಹೆದರುವ ಜನರನುಕಂಡೂ ಕರಕೊಂಡೂ ಕೈಕೊಂಡೂ ಹುರಿಗೊಂಡೂ6ವೇಣುವ 'ವರಿಸಲು 'ೀರನಾ ಮುದ್ದೂತಾನೊಂದು ತೇಜ ತೋರಾಲು ಅಂಗುಲೀಗಳುಅನುಕೂಲಗಳಾಗಾಲು ಉಂಗುರಗಳೊಳು ಮಾಣಿಕ್ಯಗಳು ಮೂಡಲುಭಾನುವ 'ುೀರಲು ಬಾಹುಗಳೊಪ್ಪಲುಗಾನಗಳಾಗಲು ಗೋವ್ಗಳು ಕೇಳಲುತಾನು ತೋರಿದನು ಜಾಣುವನು ಜಗಧರನೂ 7ಭೋಗಿಯ ಭೋಗದ ಹಾಗೆ ಬಾಹುಗಳಿರೆತೂಗಿ ಜಾನುಗಳ ತಾಗೆ ಕೇಯೂರಗಳರಾಗ ರಂಜಿತಗಳಾಗೆ ಕಂಕಣವಲಯ ಯೋಗದಿಂದಿರೆ 'ೀಗೆಆಗಿನ ಕಾಲದಲಮರಿದ ಶೃಂಗದುೀಗುರು ಕೃಷ್ಣನ ಇಷ್ಟ ಕೊಳಲಿನಯೋಗೀ ಇಹಭಾಗೀ ಗತರಾಗೀ ಗುರಿಯಾಗೀ8ಕಂಬುಕಂಧರದಿಂದಲೂ ಅಲ್ಲಿರುತಿಹತೊಂಬೆ ತಾರಹಾರಗಳು ಲಕ್ಷ್ಮಿಯು ತಾನುಇಂಬೀನುರದಲಿರಲು ಕೌಸ್ತುಭಕಾಂತಿ ತುಂಬಿ ನಾಭಿಯ ತಾಕಲುಅಂಬುಜ ಸಂಭವನಾಲಯ'ರಲುಜೃಂಭಿಸಿ ಮಾಲೆಯು ಜೋಲಿಡುತಿರಲೂನಂಬೀ ಬಹುತುಂಬೀ ುಹವೆಂಬೀ ಜಗದಿಂಬೀ 9ಕಟಿತಟದತಿಶಯವು ಕಾಂಚಿಯಧಾಮಾಸ್ಪುಟವಾಗಿ ಸ್ವರ್ಣವಸ್ತ್ರವು ಊರುಗಳಲ್ಲಿಗೆಘಟಿಸಿರೆ ಗೂಢವಾದವೂ ಜಾನುಗಳಿಂದ ಪಟು ಜಂಘೆ ಪುದುಗಿಹವೂಕಟಕಗಳಿಂದಲು ಕಡುಚೆಲುವೆನ್ನಲುಅಟಸುತಲಡಿಗಳು ಅತಿಮೃದುವೆನ್ನಲುದಿಟನೂ ನರನಟನೂ ಭವತಟನೂ ಪಟುತರನೂ 10ಕಮಲ ಸೋಕಲು ಕಂದುವ ಲಕ್ಷ್ಮೀಯಕರಕಮಲಕೆ ಕಾಂತಿಯನೀವ ಯೋಗಿಯ ಹೃದಯಕಮಲದಿ ಕುಳಿತಿರುವ ುೀ ದಿವ್ಯಪಾದ ಕಮಲವಕಾಣಿಸುವಾಕಮಲೆಯ ಕಾಂತನ ಕಮಲಜ ಜನಕನ ಕಮಲವ ಕಾವನ ಕಾಂತಿಯ 'ುೀರ್ವನಕ್ರಮವೂ ಕಾಮದವೂ ಶ್ರಮ ಶಮವೂ ಶೋಭನವೂ 11ಬಲಿಯ ಬಳಿಗೆ ಬಂಜವು ಭಾಗ್ಯವನಿತ್ತುಸಲ'ದ ಸೌಮ್ಯಗಳಿವು ಬ್ರಹ್ಮನು ಬಂದುತೊಳೆಯಲು ಬಂದು ತೋರುತಿದ್ದವು ಆ ಪಾದಗಳೆ ಇಳೆಯೊಳಗಿರುತಿಹವೂಕಲಿಮಲಹರಗಳು ಕಲಿಗಳ ಕಾವವುತಾಳಿದವು ನಾಗನ ತದ್ವಶವಾಗಲುಸಿಲುಕೀ ಸಿರಿತುಳುಕೀ ಅಘಕಲಕೀ ಅವು ನಿಲುಕೀ 12ಅಂಕುಶವರ'ಂದವು ಧ್ವಜವಜ್ರವಂಕೀತವಾಗಿಯಾಢ್ಯಾವು ಲಕ್ಷ್ಮಿಯ ಕುಚಕುಂಕುಮವನ್ನು ಕದ್ದವು ಭೂ'ುಗೆ ಪಾದ ಪಂಕಜಗಳು ಬಂದಾವುಕಿಂಕರರಭಿಮತ ಕಂಕೆಯನಟ್ಟುತಮಂಕುಗಳೆನಿಸುತ ಮಲೆವರ ಮುರಿಯುತಶಂಕೆ ಸಲೆ ಕೊಂಕೆ ಹೊರೆುಂಕೆ ಸಿರಿಸೋಂಕೆ13ಈ ರೀತಿಯಲಿ ಈಶನು ಇರುತಲಿರೆನಾರದ ಬಂದು ನಿಂದನು ಕಾಣುತ ಕೃಷ್ಣಕಾರುಣ್ಯ ನಿಧಿ ಕೇಳ್ದನು ಕ್ಷೇಮಗಳನು ತೋರುತ ರೂಪವ ತಾನುವಾರಿಜನೇತ್ರನು ವರದವರೇಣ್ಯನು'ುೀರದೆ ಮುನಿಯನು ಮಾತನು ನುಡಿದನುಸಿರೀ ಅನುಸಾರೀ ಬಗೆದೋರೀ ಮುರವೈರೀ 14ಅರಿತನು ಆತನನುವ ಆ ಕಂಸಗಾಗಅರು' ತೋರಿಸಿದರ್ಥವ ಅದು ತನ್ನ ಕಾರ್ಯನೆರವೇರುವತಿಶಯವ ತಾನಾಗಿ ಮುನ್ನ ಪಿರಿದಾಗಿ ಪ್ರೇರಿಸಿರುವಕರುಣಾವನಧಿಯು ಕಾರ್ಯವ ತೋರಿಯುಮುರಹರಮೂರ್ತಿಯು ಮುಂದಿರುವಲ್ಲಿಯುಅರಿತೂ ಅಲ್ಲಿಕುಳಿತೂ ಬರೆಹೊತ್ತೂ ುದಿರಿತ್ತು 15ಕಾಣುತ ಮುನಿಕೃಷ್ಣನ ಮಾನಸದಲ್ಲಿಧ್ಯಾನಿಸಿದನು ದೇವನ ತಾ ಬಂದುದನ್ನುತಾನು ತೋರಿಸಲು ತತ್ತ್ರಾಣ ಬಂದಾಗ ನ'ುಸಿ ಪ್ರಾಣೇಶಗತಿಪ್ರ'ೀಣಾಕೃಷ್ಣಾ ಕಂಸಗೆ ಹೊದ್ದುವ ರೀತಿಗೆಶ್ರೀನಿಧಿಯಾದಗೆ ಸೂಚಿಸಿ ಸ್ವಾ'ುಗೆತಾನು ಅಜಸೂನು ಅರು'ದನು ಅರಿತದನೂ 16ಮಾನುಷಮೂರ್ತಿಯಾಗಿಯೆ ಭೂ'ುಗೆ ಬಂದುಆನತರನು ಆಳಿಯೆ ಅರ್ಥವ ಸಲಿಸಿಧೇನುವಾಗಿಹೆ ಧೊರೆಯೆ ಯೆನ್ನುತ 'ೀಗೆ ಆನತನಾಗುತಲಿಯೆಮಾನಸಪುತ್ರನು ಮಾತನು ನುಡಿದನುಶ್ರೀನಿಧಿ ತಿರುಪತಿ ವೆಂಕಟರಮಣನುತಾನೂ ತಾಳಿದನೂ ಮಾನಸನೂ ಮಾಡ್ದುದನೂ 17
--------------
ತಿಮ್ಮಪ್ಪದಾಸರು
ದೂರ ಕೇಳೊ ದೊರೆಯೆ ಥಟ್ಟನೆ ಬಾರೊ ಭಕ್ತ ಸಿರಿಯೆ ಗತಿ ಹರಿಯೆ ಪ. ಖುಲ್ಲ ವೈರಿಯು ಮೊದಲನೆಯ ಕಳ್ಳ ಸನ್ನಿಧಿಯಲಿ ಬಂಧಿಸಿ 1 ಕ್ರೋಧನನೆಂಬವನಿವನು ಮಾನಸ ಬೋಧವ ಕೆಡಿಸುವನು ಮಾಧವ ಮಧುವತ್ಕರಿದಿ ನಿವಾರಿಸಿ 2 ತುದಿ ನಡು ಮೊದಲಿಲ್ಲ ಲೋಭ ತಡೆಯುವವರ್ಯಾರಿಲ್ಲ ಶ್ರೀಮಡದಿಯ ನಲ್ಲ 3 ಬಾಹ ಬಾಧೆಗಳನು ತಿಳಿಸದೆ ಚೋಹದಿ ಕೆಡಹುವನು ಮಹಿಮೆಯ ಮಾರ್ಗವ ತಿಳಿಸುತ 4 ಅಷ್ಟವೇಷವುಳ್ಳ ಐದನೆ ದುಷ್ಟನು ಬಿಡಲೊಲ್ಲ ಮುರಿದಟ್ಟು ದಯಾಪರ 5 ಮತ್ಸ್ಯಘಾತಿಯಂತೆ ಕುತ್ಸಿತ ಮತ್ಸರನೆಂಬುವನು ಸತ್ಸಂಗಗತಿಗಳನುತ್ತರಿಪನು ಶ್ರೀವತ್ಸ ಬೆನ್ಹನೀ ತಾತ್ಸಾರಗೊಳದಲೆ 6 ಈ ಶತ್ರುಗಳಿರಲು ತತ್ವ ವಿಲಾಸಗಳೆಂತಹವು ಶೇಷಗಿರೀಶ ಕೃಪಾಂಬುಧಿ7
--------------
ತುಪಾಕಿ ವೆಂಕಟರಮಣಾಚಾರ್ಯ
ನಿನ್ನ ಕರುಣಕೆಯ ಕಾಣೆನಾ | ವಿಠಲರಾಯಮನ್ನುಜನ್ನ ರೂಪ ಧರಿಪನಾಅನ್ನ ವಸನವಿತ್ತು ಪಿತಗೆ | ಚನ್ನ ಸೇವೆ ಮಾಳ್ಪದೇವೆಘನ್ನ ಸಾಧ್ಯ ಸಾಧನವೆಂದು | ಮನ್ನಣೆಯ ತೋರ್ದೆ ಜಗಕೆ ಅ.ಪ. ಪಂಥ ಜನರ ಸಂದಣೀಯಲಿ | ಮೆರೆಯುತ್ತಿದ್ದಪಂಢರಪುರದ ಸುಪ್ರದೇಶದಿಪುಂಡರೀಕ ನಯನ ಭಕ್ತ | ಬಂಡುಣೀಯ ಮನವ ನೋಡೆಅಂಡಾ ನಂತಕೀಶ ಮನುಜ | ದಿಂಡು ಧರಿಸಿ ಬಂದು ನಿಂತ 1 ಇಂದು ಭಾಗ ಸರಿತು ತೀರದಿ | ಪುಂಡಲೀಕತಂದೆ ಪಾದಸೇವೆ ಭರದಲಿ |ಬಂದ ಮನುಜ ವೇಷ ಹರಿಗೆ | ನಿಂದಿರೆಂದು ಪ್ರಾರ್ಥಿಸುತ್ತಅಂದ ಅನ್ಯ ಪೀಠವಿರದೆ | ಒಂದು ಇಟ್ಟಗಿ ಪೀಠವಿತ್ತ2 ಸಿಂಧು | ಸುಷ್ಠು ಒತ್ತಿಪ ದಯಾಸಿಂಧು3 ಶಾಸ್ತ್ರ ಬಹಳ ಶೃತನು ಎನುತಲೂ | ಶುದ್ಧಮೇಧ ಶಕ್ತಿ ಬಹಳ ಯುತನು ಎನುತಲೂ | ಯುಕ್ತಿಗಾಗ್ಯ ವಲಿವನಲ್ಲ | ಮುಕ್ತಿದಾತ ಲಕ್ಷ್ಮೀನಲ್ಲಭಕ್ತಿ ಮುಡುಪು ಯಿತ್ತು ತುತಿಪ | ಭಕ್ತ ಜನರ ಬಿಡದೆ ಪಾಲಿಪ4 ಭಾವ ದ್ರವ್ಯ ಕ್ರಿಯವು ಎಂಬುದಾ | ಮಹತು ಎನಿಪಈ ವಿಧ ದ್ವೈತತ್ರಯಗಳಾ |ಭಾವದಲ್ಲಿ ಚರಿಸುವಂಥ | ಭಾವವಿತ್ತು ಸಲಹೊ ಗುರುಗೋವಿಂದ ವಿಠಲ ಭಕ್ತಿಪಂಥ | ದೇವನೆಂದು ಮೆರೆವ ವಿಠಲ 5
--------------
ಗುರುಗೋವಿಂದವಿಠಲರು
ನಿನ್ನ ಸೇವೆಯನೊಂದನಿತ್ತು ಸಲಹೋಎನ್ನ ಮನ ನಿನ್ನಲ್ಲಿ ನಿಲುವಂತೆ ಮಾಡಿ ಪ ಅನ್ನವನು ಬೇಡಿಕೊಂಬುವದೆಂತು ವಿಪುಳ ವಿಷವನ್ನು ಕುಡಿದಿಹ ನೀಲಕಂಠನೊಡನೆಸನ್ನುತಾಂಬರವ ಬೇಡುವುದೆಂತು ಕರಿಚರ್ಮ-ವನ್ನು ಪೊದೆದಿಹ ದಿಗಂಬರನೊಡನೆ ಶಂಭೋ 1 ಮಿರುಗುವಾಭರಣಗಳ ಬೇಡಿಕೊಂಬುದೆಂತುಉರಗಕುಂಡಲಹಾರ ವಲಯನೊಡನೆಪರಮ ಭಾಗ್ಯವ ಬೇಡಿಕೊಂಡೆ ನಾನೆಂತು ವಿಧಿಶಿರದಿ ಭಿಕ್ಷವ ಬೇಡಿ ತಿರಿದುಂಡನೊಡನೆ 2 ಕರಿತುರಗ ಮುಖ್ಯವಾಹನವ ಬೇಡುವುದೆಂತುನಿರುತ ಬಸವನ ಮೇಲೆ ಚರಿಪನೊಡನೆಕರುಣದಿಂದೆನಗೆ ಕೊಡಲೇನುಂಟೊ ಕೆಳದಿಪುರ-ದೆರೆಯ ರಾಮೇಶ ಶ್ರೀಕರ ಪಾರ್ವತೀಶ 3
--------------
ಕೆಳದಿ ವೆಂಕಣ್ಣ ಕವಿ
ಪಾರ್ಥನ ಸಾರಥಿಯಾ ನೋಡಿದೆಯಾ ಪ ಆರ್ತ ಜೀವನಿಗೆ ಕರ್ತವ್ಯವನುಗುರ್ತಿಸಿ ಪೇಳ್ವುದ ಪೂರ್ತಿಯ ರೀತಿಯಾ ಅ.ಪ. ಗೀತೆಯ ಪೇಳಲು ವೇದಾಗಮಗಳಸಾರಧಾರೆಯ ಕರೆವನೆಂಬಂತೆಶ್ವೇತಾಶ್ವಂಗಳ ಕಡಿವಾಣಗಳಪ್ರೀತಿಲಿ ಪಿಡಿದಿಹ ಕೃಷ್ಣ ಮೂರುತಿಯ 1 ಭವದ ತೇರಿನಲಿ ಜೀವನನಿರಿಸಿ ನಾಲ್ಕರ್ಥಗಳನು ಜೋಡಿಸುತತವಕದಿ ತಾ ಹೊರಗಿರುತಲೆ ನಡೆಸಿಪ್ರೇರಿಪನೆಂಬಂತಿಹ ಶ್ರೀಪತಿಯ 2 ನೇತ್ರಕೆ ಜೀವನಯಾತ್ರೆಯ ಸಡೆಸುವಸೂತ್ರಧಾರನೆನೆ ತೋರುತಲಿರುವಕ್ಷೇತ್ರ ಗದುಗಿನ ವೀರನಾರಾಯಣನಪಾತ್ರ ವಹಿಸಿದ ದಿವ್ಯಾಕೃತಿಯ 3
--------------
ವೀರನಾರಾಯಣ