ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನಗಿನ್ಯಾತರ ಹಂಗೇನು | ಘನ ಗುರು ತಾನಾದ ಶ್ರಯಧೇನು ಪ ಸುರಲೋಕ ಪದವಿಯ ಸುಖದಿಚ್ಛೆಯಾತಕ | ಪರಗತಿ ದಾಯಕ ದೊರಕಿರಲಿಕ್ಕೆ 1 ರಿದ್ದಿ ಶಿದ್ದಿಗಳೆಂಬ ಮಾತಿನ ಗೊಡವಿಲ್ಲಾ | ಪಾದ ಕಮಲಾ 2 ಹಂಬಲಿಸೆನು ಯೋಗ ಭೋಗ ಮುಕ್ತಿಯ ನಾಲಕು | ಅಂಬುಜಾಕ್ಷನ ಸೇವೆಲಿರುವುದೇ ಸಾಕು 3 ತಂದೆ ಮಹೀಪತಿ ಪ್ರಭು ದಯದಿಂದಲಿ | ಕಂದಗ ವಿಶ್ರಾಂತಿ ಇದಿರಿಟ್ಟಿರಲಿ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎಲ್ಲಿಂದ ಬಂದಿದ್ದೆಲೆ ಖೋಡಿ ನೀ ನೆಲ್ಲಿಗೆ ಹೋಗ್ತಿದ್ದಿ ತ್ವರೆಮಾಡಿ ಪ ಕಲ್ಲುಮುಳ್ಳೆನ್ನದೆ ಮುಂದೆ ನೋಡಿ ಜರ ನಿಲ್ಲದೆ ಹೋಗ್ತಿದ್ದಿ ಓಡೋಡಿ ಅ.ಪ ಏಳುಗೇಣಿನ ಕುದುರೇರಿದ್ದಿ ಭವ ಮಾಲೆ ಕೊರಳಿಗೆ ಹಾಕಿದ್ದಿ ಮೂಲ ಲಗಾಮವೆ ತೆಗೆದಿದ್ದೀ ನೀ ಬೀಳುವ ಎಚ್ಚರ ಮರೆತಿದ್ದಿ 1 ಶೀಲ ಸನ್ಮಾರ್ಗವ ಬಿಟ್ಟಿದ್ದಿ ಮಹ ಕಾಳು ಕತ್ತಲೆಹಾದ್ಹಿಡಿದಿದ್ದಿ ಕಾಲನಾಳಿನ ಕೈಗೆ ಸಿಗುತಿದ್ದಿ ಬಹು ಗೋಳಿನೊಳಗೆ ಹೋಗಿ ಬೀಳುತಿದ್ದಿ2 ಅಸ್ಥಿರ ಕುದುರೆ ಹತ್ತಿದ್ದಿ ಬಲು ಮಸ್ತಿಲಿಂದ ಕಣ್ಣು ಮುಚ್ಚಿದ್ದಿ ಪುಸ್ತಿಯಿಲ್ಲದ ದಾರ್ಹಿಡಿದಿದ್ದಿ ಮುಂದೆ ಸ್ವಸ್ಥತೆ ನೀ ಹ್ಯಾಂಗೆ ಪಡೀತಿದ್ದಿ 3 ಯಾರನ್ನ ಬೇಡಿ ಬಂದಿದ್ದಿ ನೀ ನಾರಸೇವೆ ಕೈಕೊಂಡಿದ್ದಿ ದಾರಿ ತಪ್ಪಿದಾರ್ಹಿಡಿದಿದ್ದಿ ಸುವಿ ಚಾರ ಪಥವ ಧಾರೆರೆದಿದ್ದಿ 4 ಬಂದಕಾರ್ಯವನು ತೊರೆದಿದ್ದಿ ಮನ ಬಂದಂತೆ ಕುಣಿಕುಣಿದಾಡುತಿದ್ದಿ ತಂದೆ ಶ್ರೀರಾಮನ ಮರೆತಿದ್ದಿ ಈ ಬಂಧುರಸಮಯ ವ್ಯರ್ಥ ಕಳೀತಿದ್ದಿ 5
--------------
ರಾಮದಾಸರು
ಜ್ಞಾನದ ನಡಿಬ್ಯಾರೆ ತತ್ವಜ್ಞಾನದ ನಡಿ ಬ್ಯಾರೆ ಧ್ರುವ ದೇಹದಂಡನೆ ಮಾಡಿದರೇನು ಬಾಹ್ಯಾರಂಜನೆ ದೋರಿದರೇನು 1 ಶಬ್ದ ಜ್ಞಾನ ಸೂರಾಡಿದರೇನು ಲಭ್ದಾ ಲಬ್ಧೇಲಾಡಿದರೇನು 2 ರಿದ್ದಿ ಸಿದ್ದಿಯ ದೋರಿದರೇನು ಗೆದ್ದು ಮಂತ್ರಾಂತ್ರಸೋಲಿಪರೇನು 3 ಗೀರ್ವಾಣ ಆಡಿದರೇನು ಭೂತ ಭವಿಷ್ಯ ಹೇಳಾಡಿದರೇನು 4 ವ್ರತ ತಪ ತೀರ್ಥಾಶ್ರೈಸಿದರೇನು ಕೃತ ಕೋಟ್ಯಜ್ಞಾವ ಮಾಡಿದರೇನು 5 ಯೋಗಾಯೋಗಾಚರಿಸಿದರೇನು ಭೋಗ ತ್ಯಾಗ ಮಾಡಿದರೇನು6 ಏನು ಸಾಧನೆ ಮಾಡಿದಫಲವೇನು ಖೂನ ದೋರದೆ ಮಹಿಪತಿಗುರುತಾನು7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧು ಸಂತರಾಶ್ರಯ ಮಾಡಿ | ಇದೇ ಮಾಡಿ ಹಿತ ನೋಡಿ ಪ ಅವರ ವಚನಕಾಗಿ ಅಗೋಚರನಾದಾ | ದೇವ ಬಹನು ಒಡಮೂಡಿ 1 ಎಡಬಲದಲಿ ರಿದ್ದಿ ಶಿದ್ಧಿ ನಿಂದಿರಲು | ನೋಡಲು ನುಡಿಸರು ಕೂಡೀ 2 ಮಹಿಪತಿ ನಂದನು ಸಾರಿದ ನಿಜವಾ | ಇಹಪರ ಸುಖವ ಸೂರ್ಯಾಡಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು