ಒಟ್ಟು 9 ಕಡೆಗಳಲ್ಲಿ , 7 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಪ್ಪವಡಿಸಯ್ಯ ತ್ರಿವಿಕ್ರಮ ನಿನ್ನ ಪುರದೊಳಗೆ ಇಪ್ಪ ಮುಕುತರಿಗೆ ಸಲ್ಲದು ನಿದ್ರೆ ನಿನಗಿಲ್ಲ ಕಲ್ಪಾಂತದಲಿ ನಿತ್ಯವಾದ ವೇದವ ನೆನೆವ ಸುಪ್ರಭಾವನಿಗೇಕೆ ಹೀನಮನುಜರ ಸಾಮ್ಯ ಪ. ಹರಿನಾಲ್ಕು ಮನ್ವಂತ್ರಗಳನು ಹಗಲನು ಮಾಳ್ಪ ವಿಧಿ ನಿನ್ನ ಕುವರನೆ ನಿದ್ರೆಗೊಪ್ಪದೆ ಬಂದ ಇದು ಸರ್ವಸೊಪನ ಅನಿಮಿಷರೆಂಬ ಬಿರುದಿನವ ರಿದಕೆ ಕೋಪಿಸಿ ಬಂದರು ವಿಧಿ ತನ್ನ ಹಗಲ ನಡೆಸುತ ನಿನಗೆ ಈ ತೆರನ ಮದನಪಿತ ತಾಳದೆ ಇಳೆಗೆ ನಡೆತಂದ ಸದುಬುಧರು ತಮ್ಮ ವಿಷಯವ ನೆನೆವ ಜಂತುಗಳು ಇದು ತಾಳೆವೆನುತ ಬಾಗಿಲೊಳು ಬಂದೈದಾರೆ 1 ನಿದ್ರೆಗೈವರ ಹೃದಯದಲ್ಲಿ ಭೂಭೂಯೆಂಬ ಎದ್ದು ಬಹ ಶ್ವಾಸದಭಿಮಾನಿ ಮುಖ್ಯಪ್ರಾಣ ಕ್ಷುದ್ರಗತಿ ತನ್ನಾಳ್ದಗಿದು ಪುಸಿಯೆನುತ ಬಂದ ಮಧ್ವಸದ್ಭಾಷ್ಯಕಾರ ಹೊದ್ದಿ ಕರಗಳ ಮುಗಿದು ಜೀವರಿಗು ನಿನಗು ಪ್ರ- ಬುದ್ಧಜನೆನುತ ಬಂದ ವೇದಾಂತದೇವಿಯರು ನಿರ್ದೋಷ ನೀನೆತ್ತ ನಿದ್ರೆಯೆತ್ತೆನುತ ಪಾದ- ಪದ್ಮಗಳ ಪಿಡಿದು ಪಾಡುವ ಸಾಮಗಳ ಸವಿದು 2 ಅಪ್ರಾಕೃತನೆ ನಿನಗೆ ಈ ಪ್ರಕೃತಿಗುಣಗಳಿಂ- ದಿಪ್ಪ ಯುಕ್ತಿಗಳ ಸುಪ್ತಿಗಳು ಸಲ್ಲವು ದೇವ ಅಪ್ರಬುದ್ಧರ ಮುಂದೆ ಆಡುವಾಟಗಳು ಈ ಸುಪ್ರಬುದ್ಧರ ಸಭೆಯಲಿ ಸರ್ಪತÀಲ್ಪನೆ ತೋರಿದಯ್ಯ ಸಾಕೈನಟನೆ ಸುಪ್ರಭಾತವು ಬಂತು ಹಯವದನ ದಿನದಿನದಿ ತಪ್ಪದೆ ಮಾಡುವಘ್ರ್ಯದಿ ಸತ್ಕರ್ಮಗಳ ಒಪ್ಪುಗೊಳು ಅಪ್ರತಿಮಮಹಿಮ ತ್ರಿವಿಕ್ರಮರಾಯ 3
--------------
ವಾದಿರಾಜ
ಕಂಜಾಕ್ಷ ಕಾಯಯ್ಯ ಕರುಣಾನಿಧಿಯೆ ಬಲಭಂಜನನನುಜನೆ ನೋಡೆನ್ನ ಪ . ಅಂಜದೆ ನಾ ನಿನ್ನ ಅಡಿಳಿಗೆರಗುವೆಕುಂಜರವರದನೆ ಕೂಡೆನ್ನ ಅ.ಪ. ನಿಖಿಳ ಸಂಪದ ತನ್ನಿಂ-ತಾನೆ ಬಹುದು ತಡವಿಲ್ಲಆ ನಳಿನಭವಾದ್ಯಮರರಿದಕೆ ಸಾಕ್ಷಿಭಾನುಸನ್ನಿಭ ಬಾರೊ ನಲ್ಲ1 ಬೋವ ನೀನಾದಂದು 2 ವೃಂದಾರಕೇಂದ್ರ ಶ್ರೀ ಹಯವದನ ಮುಕುಂದಮಂದರೋದ್ಧಾರ ಮತ್ತೊಂದರಿಯೆಇಂದಿರೆಯರಸ ಬಾ ಇಂದುವದನ ದೀನ-ಬಂಧುವೆ ಭಕ್ತರ ಸಿರಿಯೆ 3
--------------
ವಾದಿರಾಜ
ನಾರಾಯಣ ಉದಿಸುವನೆಂದು ಆ ಪೂರ್ವಾಂತರ್ಯಾಮಿ ಅವರ ಸಲಹಲು ಸರ್ವದಾ ಅಪೂರ್ವ ತೇಜೋವಂತನಾಗಿ ಅವರ ಹೃದಯದಿ ಸೂರ್ಯತೇಜದಿ ಮೆರೆಯುತಿರುವ ಸರ್ವದಾ ಎಂದು ಅಪೂರ್ವ ಜ್ಞಾನದಿ ನೆನಯುತಿರಿ ಹರಿಭಕ್ತರು 1 ಎದ್ದು ಮುಖ ತೊಳೆದು ನಿಮ್ಮಲ್ಲಿದ್ದ ಕಲ್ಮಷ ತೊಳೆದು ನಿಮ್ಮ ಶುದ್ಧ ಮನದಲಿ ನೆನೆದು ನಿಲಿಸಿ ಹರಿ ಧ್ಯಾನದಿ ಸ್ನಾನಾನ್ಹೀಕಬದ್ಧಕಂಕಣರಾಗಿ ಬ್ರಾಹ್ಮೀಮುಹೂರ್ತದಲಿ ಗೈಯೆ ನಿಮ್ಮಲ್ಲಿದ್ದ ಕಲ್ಮಶವೆಲ್ಲ ಕಳೆದತಿ ಹರ್ಷವೀವ ನಿಮ್ಮ ಶುದ್ಧಾಚರಣೆಗೆ ಮೆಚ್ಚಿ ನಿಮ್ಮ ಭಕ್ತಿಗೆ ನಿತ್ಯ ಬದ್ಧ ಕಂಕಣರಾಗಿ ಸ್ತುತಿಸೆ ನಿತ್ಯ ಹರಿ ಭಕ್ತರು 2 ಮಾಧ್ಯಾನ್ಹಿಕಾದಿಗಳಾಚರಿಸುತ ಹರಿಯ ಮಧ್ಯವರ್ತಿಯನೆನಿಸಿ ಆ ಸೂರ್ಯನಂತರ್ಯಾಮಿ ನಾರಾಯಣನಿ- - ಗಘ್ರ್ಯಪಾದ್ಯವನಿತ್ತು ಸುಭೋಜನವ ಮಾಡಿ ನಿಮ್ಮ ಪೂರ್ವಜರನುಗ್ರಹದಿ ಮಜ್ಜನ್ಮಸಾರ್ಥಕವೆಂದಾವನರಿವನೋ ಅವನ ಹೃದಯ ಮಧ್ಯವರ್ತಿಯಾಗಿದ್ದು ಕಾವ ಸದ್ಗುಣೋಪೇತ ಭಕ್ತರ ಕೈ ಬಿಡ ಮಧ್ವಾಂತರ್ಗತ ಶ್ರೀ ಶ್ರೀನಿವಾಸ ಅವನ ಮನದಿ ನೆನೆಯಿರಿ ಹರಿ ಭಕ್ತರು 3 ಜವÀನ ಬಾಧೆಯು ಇಲ್ಲ ಹರಿ ಭಕ್ತರಿಗೆ ಯವನ ರೂಪದ ಕಲ್ಕಿ ಹರಿಯ ನೆನೆವರಿಗೆ ಜವದಿ ಯಮನಾಳ್ಗಳು ಮುಟ್ಟಲಂಜುವರು ಹರಿಭಕ್ತರನು ಕವಿ ನಾರಾಯಣನ ಧ್ಯಾನಿಪರಿಗೆ ಅವನಿಯೊಳು ಭಯವಿಲ್ಲ ಅವರಿಗೆ ಸಮನಿಲ್ಲ ಅವರಲ್ಲಿ ಹರಿಯಿದ್ದ ಕಾರಣದಿ ಜವದಿ ಹರಿ ದಾಸರೆಲ್ಲ ಶ್ರೀ ಶ್ರೀನಿವಾಸನ ಭಕ್ತರ ಸಂಗದೊಳಿರಿ ಹರಿಭಕ್ತರು 4 ಯಾರ ಭಯವಿಲ್ಲ ಹರಿ ನಾಮಕೆ ದಾರಿ ಹೋಕರು ಬಾರರಿದಕೆ ಭಾರವಿಲ್ಲವು ಮನಕೆ ಸಂಸಾರಭಯವಿಲ್ಲವರಿಗೆ ಹರಿ ಎಂಬುದನೆ ಸಕಲ ಕಾರ್ಯವ ನಿರ್ವಹಿಸುವನೆಂದರಿತವರಿಗೆ ಯುಕುತಿ ಬುದ್ಧಿಯು ಯಾತಕೆ ಯಾರ ಭಯವೇಕೆ ಹರಿಸಖರಾಗಿರಲವರಿಗೆ ಅಂಜಿಕೆಯಾಕೆ ಯಾರನಾಶ್ರಯಿಸುವ ಶ್ರಮವಿಲ್ಲ ಇದನರಿತು ಹರಿಭಕ್ತರು ಶಕುನ ಅಪಶಕುನವೆನ್ನರು ಮನದಿ ಯುಕುತಿಯ ಮಾಡರು ಪರರ ಬೇಡೆ ಶ್ರೀ ಶ್ರೀನಿವಾಸ ಭಕ್ತರು ಅವರ ಮತ ಹಿಡಿದು ಬದುಕಿ ಹರಿಭಕ್ತರು 5 ಜತೆ ಕರುಣಾಕರ ಹರಿಭಕ್ತರಭಿಮಾನಿ ವರದಭಯ ಹಸ್ತವ ಕೊಡುವ ಶ್ರೀ ಶ್ರೀನಿವಾಸ
--------------
ಸರಸ್ವತಿ ಬಾಯಿ
ನಿನಗೆ ಅಚ್ಚರವಲ್ಲ ಅನುಮಾನಸಲ್ಲಾ ಇನಿತು ಶ್ರಮ ಕಳೆಯದಿರೆ ಘನತಿಲ್ಲ ನಿಮದಲ್ಲ ಪ ಹಿಂದೆ ನಿನ್ನ ಅಜ್ಞಾ ನಾ ಒಂದು ಮೀರಿದಕೆ ನೀ ಇಂದು ಭವಭವಣೆ ಬಹುಪರಿಯಿಂದಲೀ ತಂದು ನೋಯಿಸಿ ಮನಸುನಿಂದದಲೆ ಪರರಿಗೆ ಇಂದು ಮೊರೆಯನು ಹೋಗಿಸುವುದು ಥರವೇ ಹರಿಯೇ 1 ಒಂದು ತಿಳಿಯದಲೆ ನಾನು ಅಂದ ಮಾತಿಗೆ ಮನಸು ನೊಂದು ಈ ತೆರದಿ ಮಾಡುವುದು ರೀತೇ ಕಂದನಪರಾಧಗಳ ಒಂದು ನೋಡದ ಜನನಿ ಯಂದದಲಿ ನೀ ಪಾಲಿಸುವುದು ಸ್ವಾಮೀ ಪ್ರೇಮೀ 2 ಜಾತಮಗನನು ನಿಜತಾತ ಪರರಿಗೆ ತಾನು ಆತುರಾದಿಂದಲಿ ಮಾರಿದಂತೆ ದೂತರನು ಜಗದೇಕÀನಾಥ ನೀ ಪರಿಪರಿ ಫಾತಿಸಲು ಇನ್ನಾರು ಪೊರೆªರೈಯ್ಯಾ ಜೀಯಾ 3 ನಂಬಿದವರನ್ನು ನೀ ಅಂಬಿನಲಿ ಹೊಡೆವರೆ ಅರಿ ಪದುಮ ಗದಧರಪಾಣಿಯೆ ತುಂಬಿದ್ಹರಿಗೋಲಲ್ಲಿ ಇಂಬುಗೊಂಡಿರುವಾಗ ಅಂಬುಧಿಮುಣುಗಿಸುವದು ಥರವೇನೋ 4 ಯಾತಕೀಸೊ ಮಾತು ಸೋತೆ ನಾ ನಿನಗೀಗ ವಾತದೇವನ ತಾತ ಸೀತಾನಾಥಾ ನೀತ ಶ್ರೀಗುರುಜಗನ್ನಾಥ ವಿಠ್ಠಲರೇಯ ಮಾತು ಲಾಲಿಸಿ ಪಾಲಿಸುವದು ಇನ್ನಾ ಚೆನ್ನಾ 5
--------------
ಗುರುಜಗನ್ನಾಥದಾಸರು
ಮಾನಿನಿ ಬಲು ನುಡಿಯೋದುಚಿತವೆಭಲಾ ಭಲಾ ಎನಿಸು ಅನುಗಾಲ ಪ. ಬಂದ ಜನರು ಬಲು ಚಂದಾಗಿ ಕುಳಿತಿಹರು ಚಂದಿರವದನೆ ಸುಭದ್ರಾಚಂದಿರವದನೆ ಸುಭದ್ರಾ ನಿನ್ನ ಮುಖಕುಂದಿತಾಕೆಂದು ಕಮಲಾಕ್ಷ 1 ಬಲ್ಲೆ ಭಾಷೆ ನಿನ್ನ ಕ್ಷುಲ್ಲತನದ ಬುದ್ಧಿಮಲ್ಲಿಗೆಯಂಥ ಸುಕುಮಾರಿಮಲ್ಲಿಗೆಯಂಥ ಸುಕುಮಾರಿ ಗರತಿಗೆ ಹೊಲ್ಲ ಮಾತುಗಳ ನುಡಿಯೋರೆ2 ಮಾನುಳ್ಳ ಮಗಳಿಗೆ ನಾನಾ ಮಾತುಗಳಂದಿ ಏನೆಂಬೋರಿದಕೆ ಜನರೆಲ್ಲಏನೆಂಬೋರಿದಕೆ ಜನರೆಲ್ಲ ಸತ್ಯಭಾವೆಮಾನಾಪಮಾನ ನಿನಗಿಲ್ಲ3 ಮದ್ಗುಣಕಿ ಹೂವು ಉದ್ದಾದರೇನ ಮುದ್ದು ಮಲ್ಲಿಗೆಯ ಸರಿಯೇನ ಮುದ್ದು ಮಲ್ಲಿಗೆಯ ಸರಿಯೇನ ಭಾವೆ ಸುಭದ್ರಾಗೆ ನೀನು ಸರಿಯೇನ 4 ತಂಗಿಗಾಡಿದ ಮಾತು ರಂಗರಾಮೇಶ ಕೇಳಿಬಂಗಾರದಂಥ ಗುಣನಿಧಿಬಂಗಾರದಂಥ ಗುಣನಿಧಿ ಸುಭದ್ರೆಗೆವ್ಯಂಗ್ಯ ಮಾತುಗಳ ನುಡಿವೋರೆ5
--------------
ಗಲಗಲಿಅವ್ವನವರು
ಶ್ರೀಗುರುಜಗನ್ನಾಥದಾಸರಾಯರ ಸ್ತೋತ್ರ ಹರುಷದಿ ಕರಪಿಡಿದು ಪರಮ ಕರುಣದಿಂದ ಹರಿದಾಸ್ಯವಿತ್ತು ಉ - ದ್ಧರಿಸಿದ ಉಪಕಾರ ಮರೆಯಲಾರೆನು ಎಂದೂ ಪ ವರದೇಂದ್ರಾರ್ಯರÀು ನಮ್ಮ ಶರಣನು ಇವನಿಗೆ ಕರುಣಿಸೆಂದಾಜ್ಞಾಪಿಸೆ ತರುಳನ ಶಿರದಲಿ ಕÀರವಿಟ್ಟು ಕೃಪೆಯಿಂದ ಗುರುತು ತೋರಿದಕೆ ನಾ ಪರಮಧನ್ಯನೆಂಬೆ 1 ಮರುತಮತದತತ್ವ ಹರಿಕಥಾಮೃತಸಾರ ವರರಹಸ್ಯಗಳೆಲ್ಲವ ಸರಸವಾಗುತೆಂ ಅರಹುವೆವೆಂತೆಂಬ ವರವಾಕ್ಯದಂತೆನ್ನ ಪರಿಪಾಲಿಪುದಯ್ಯ 2 ಹರಿಮುನಿದರು ಗುರುಕರುಣಿಪನೊಮ್ಮಿಗೆ ಗುರು ಮುನಿಯೆ ಹರಿ ಪೊರೆಯ ಹರಿಯ ಕೃಪೆಗೆ ಮುಖ್ಯ ಗುರುವೆ ಕಾರಣನೆಂದು ನೆರೆನಂಬಿರಲು ನೀನರಿಯದಂತಿಪ್ಪುದೆ 3 ಮರುತ ಮತಾಬ್ಧಿಚಂದಿರ ಗುರುರಾಜರ ವರಬಲದಿ ಮೆರೆವ ಹರಿಭಕ್ತಾಗ್ರಣಿ ನಿಮ್ಮ ಚರಿತೆ ಬಣ್ಣಿಸುವೆನಾ ಹರಿವಲಿಯುವÀ ತೆರ ಕರುಣಿಸೆನ್ನಯನಿಜ4 ಬರಿದೆ ಬಾಹ್ಯಾಚಾರ ವಿರಚಿಸದಲೆ ಮನದಿ ಹರಿರೂಪ ಕಾಂಬತೆರದಿ ವರದೇಶ ವಿಠಲನ ಸಿರದಾಸ್ಯತನವೆಂಬ ಗುರುತುತೋರುವುದಯ್ಯ ಗುರುಜಗನ್ನಾಥಾರ್ಯ 5
--------------
ವರದೇಶವಿಠಲ
ಸಿಕ್ಕದಿರು ನಾರಿಯರ ಕಡೆಗಣ್ಣಿಗೆ ಮನ ವಿಕ್ಕಿದರೆ ಇಹಪರದ ಗತಿ ಕೆಡಗು ನಿನಗೆ ಪ ಹೇಸದೇತಕೆ ಮನಸು ಪರದಾರ ಪರದ್ರವ್ಯ ದಾಸೆಯೊಳು ಹಗಲಿರುಳು ಕುದಿದು ಕುದಿದು ಘಾಸಿಯಾಗುತ ತೊಳಲಿ ಬಳಲಿ ಯಮನರಕದೊಳು ವಾಸವನು ಮಾಡದಿರು ಎಲೆ ಮೂಢ ಮನುಜ 1 ಮೊಲೆಯೆ ಮಾಂಸದ ಚೆಂಡು ಮೊಗವು ಶ್ಲೇಷ್ಮೆಯಗೂಡು ಬಳಸಿ ನೋಡಿದರಿದಕೆ ಹುರುಳಿಲ್ಲವೋ ಒಳ ಹೊರಗು ಹೊಲಸು ಹೆಬ್ಬಡಿಕೆಗಳು ವಸನದಲಿ ಬೆಳಗುವಳು ತಲೆ ತುರಿಸಿ ಸಿಲುಕದಿರು ಕಂಡ್ಯಮನುಜ 2 ವಿಧಿ ಲಿಖಿತ ಸರಿಗು ಇಹಪರ ಕೆಡಗು ಪರವಧುವಿನೊಳು ಮನವ ಹರಿಸಬೇಡ ತೊರೆದಿವರ ಮರುತಸುತ ಕೋಣೆ ಲಕ್ಷ್ಮೀಪತಿಯ ಸಾಯುಜ್ಯ ಪದವಿಯನು 3
--------------
ಕವಿ ಪರಮದೇವದಾಸರು
ಅಂಜುವೆನದಕೆ ಕೃಷ್ಣ ಅಭಯವ ಕೋರಿದಕೆ ಪ.ನೀನಿತ್ತ ಮತಿಯಿಂದ ನಿನ್ನ ಹೊಗಳುತಿರೆಹೀನ ಮಾನವರೊಂದೊಂದೂಣೆಯ ನುಡಿವರು 1ಬಾಣವನೆಸೆದು ಬಿಲ್ಲನಡಗಿಸುವಂತೆಆ ನಿಂದಕರು ನಿಂದಿಶಾಣೆಗೆ ನಿಲುವರು 2ಮಾಧವನಾನೇನು ಓದಿದವನಲ್ಲ ಶ್ರೀಪಾದವೆ ಗತಿಯೆಂಬೆ ಬಾಧಿಸುತೈದಾರೆ 3ಅಪರಿಮಿತಪರಾಧಿ ಕಪಟಿ ನಾನಾಗಿಹೆಅಪರೋಕ್ಷಿಯೆಂದೆಂಬ ಕುಪಿತ ಖಳರ ನೋಡಿ 4ಹಿತಶತ್ರುಗಳ ಸಂಗತಿ ಸಾಕು ಪ್ರಸನ್ವೆಂಕಟಪತಿನಿನ್ನ ಭಕ್ತರ ಸಂಗ ಕೊಡು ಕಾಣೊ5
--------------
ಪ್ರಸನ್ನವೆಂಕಟದಾಸರು