ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣಜನೋದಧಿಚಂದ್ರಾ ಸಿರಿ ಯರಸ ದೇವ ದೇವ ಕರುಣಿ ಮುಕುಂದಾ ಪ ಹಾರದ ನಿಗದಿಯ ಬಿಟ್ಟು ಸೋತವನಾಗಿ ವ್ಯಾಸ ಭೀಷ್ಮನ ಗೆಲಿಸಿದೆ ಮುಕುಂದಾ 1 ಹಗಲೇ ಇರಳ ಮಾಡಿ ಸೈಂಧವನಸುವನು ತೆಗಿಸಿ ನರನ ವಾಸಿ ಕೊಂಡ್ಯೋ ಮುಕುಂದಾ 2 ಶರಧಿಯಂಜಿಸಿಕೊಂಡು ಪಕ್ಷಿಯ ಶಿಶುವಾಗಿ ಗರುಡನ ವಾಸಿಯ ಕೊಂಡ್ಯೊ ಮುಕುಂದಾ 3 ದಶಜನುಮವತಾಳಿ ಮುನಿಯ ಬೆದರಿಸ್ಯಂಬ ರಿಕ್ಷಣ ಫಲನಡಿಸಿದೆ ಮುಕುಂದಾ 4 ಗುರು ಮಹಿಪತಿ ಸ್ವಾಮಿ ಭಕ್ತ ವತ್ಸಲನೆಂಬ ಬಿರುದುವಾಳಿದರೆಂದು ಸಲಹೋ ಮುಕುಂದಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸರಸ್ವತಿ ದೇವಿ ವಾರಿಜನೇತ್ರೆಯ ಶಾರದೆ ಶ್ರೀಮುಖ ತೋರುವದೆನ್ನಯ ಪಾರ ಪರಾತ್ಪರೆ ಪ ಮಯೂರ ವಾಹಿನಿ ಕಾಯುವುದೆನ್ನ ತಾಯೆ ಚಿದ್ಛನ ನಿಜದಾಯುವ ನೀಯುವ 1 ಬಾಲೆಯ ಭಾಗ್ಯವಿಶಾಲೆಯ ನವಕುಸುಮ ಮಾಲೆಯ ಗಾನವಿಲೋಲೆ ವಾಗೇಶ್ವರಿ 2 ಛಂಧದೊಳೆನ್ನ ಸಾನಂದವ ಪಾಲಿಪ ಮಂದಮತಿಯ ತಿದ್ದಿ ಸುಂದರ ಮುಖಿಯೆ ನೀ3 ನಂಬಿಕೆ ಹೊಂದಿಹನೆಂಬುವ ಭಕ್ತರ ಇಂಬುಗಳನ್ನೆ ಕೊಟ್ಟು ಬೆಂಬಲಕಿರ್ಪಳೆ 4 ಕಂತು ಬ್ರಹ್ಮನರಾಣಿ ಅಂತರಿಕ್ಷಣೆವಾಣಿ ಶಾಂತಿ ಸದ್ಗುರುಪದ ಸಂತಸಕಾರಿಣಿ 5
--------------
ಶಾಂತಿಬಾಯಿ