ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಊ) ಕ್ಷೇತ್ರ ವರ್ಣನೆ 1. ಬೇಲೂರು ಚನ್ನಕೇಶವರಾಯ ಚೆಲುವ ಚೆನ್ನಿಗರಾಯಾ ನಿನ್ನ ಕಾಣದೇ ನಿಲ್ಲಲಾರೆ ಬೇಲೂರ ಪ ವಜ್ರ ಪದುಮ ಪತಾಕಾಂಕುಶಗಳು ನಿಜಸತಿ ಲಕುಮಿದೇವಿಯರಾ ಭುಜ ಕುಚ ಕುಂಕುಮಾಂಕಿತ ಧರಾಂಕಿತ ಭಜಕರ ಭಾಗ್ಯೋದಯ ಪಾದಯುಗಳದಾ 1 ಸುರ ವೈರಿಗಳೆದೆ ಥಲ್ಲಣವೆನಿಸುವಾ ಬಿರುದಿನ ಖಡ್ಡೆಯಪ್ಪ ಚರಣಂಗಳಾ ಗರುಡನ ಹೆಗಲೇರಿ ಉದರದಿ ವಿರಿಂಚಿಯು ಉದುಭವಿಸಿದ ವರನಾಭಿಯ ಚೆಲುವಿನಾ 2 ಪೊಂಬಟ್ಟೆಯಿಂದೆಸೆವ ಪೀತಾಂಬರ ಚೆಂಬೊನ್ನದ ಕಾಂಚಿಯದಾಮದಾ ಅಂಬುಜ ಕೌಮೋದಕಿ ಸುದರುಶನ ಕಂಬುವ ಧರಿಸಿಹ ಚತುರುಭುಜಂಗಳಾ 3 ಶ್ರೀಯಾಲಿಂಗಿಸಿ ಸುಖವ ಕಾಮಿನಿಯರ ಶ್ರೀಯೋಗವ ತೋರಿಸೆನಗೊಮ್ಮೆ ಹಾಯೆಂದು ಬಿಗಿದಪ್ಪಿ ನಂಬಿಸಿ ಚುಂಬಿಸಿ ಬಾಯ ತಂಬುಲವಿತ್ತು ಬಂದೆನ್ನ ನೆರೆಯಾ 4 ಕರೆವೆನ್ನ ಮನದಲ್ಲಿ ಕರೆವ ನಾಲಿಗೆಯಲ್ಲಿ ಕರೆವೆನ್ನ ಕಣ್ಣುಸನ್ನೆಯಲೀ ಕರೆವೆ ನೆರೆವೆ ನಿನ್ನ ಚರಣಕೆರಗುವೆ ನಾ ವರವೈಕುಂಠಕೇಶವ ಬೇಲೂರ 5
--------------
ಬೇಲೂರು ವೈಕುಂಠದಾಸರು
ಜನ್ಮ ಸಫಲವಾಯಿತು ಪ. ಆದಿ ಅನಂತ ಜನಾರ್ದನನ ಕಂಡುಎನ್ನ ಜನ್ಮ ಸಫಲವಾಯಿತು ಅ.ಪ. ಬ್ರಹ್ಮಾನಂದ ಸುಗುಣ ನಿಮ್ಮ ಮಹಿಮೆಯ ಅ-ಗಮ್ಯಗೋಚರನೆಂದು ಸ್ತುತಿಸುತಿರೆಬ್ರಹ್ಮರುದ್ರಾದಿಗಳು ಇಂದ್ರ ಚಂದ್ರಾದಿಗಳುನಿರ್ಮಲಮೂರುತಿ ನಿಮ್ಮ ನಿಜವ ತೋರಿದಮ್ಯಾಲೆ 1 ಒಡ್ಡಿ ನಿಂತದ್ದು ಕಂಡು 2 ಮಕರಕುಂಡಲ ಕೌಸ್ತುಭ ಕೊರಳವೈಜಯಂತೀ ಮಾಲಿಕೆಗಳ ಕಂಡು ಎನ್ನ 3 ನಡುವಿನ [ಬಾಗಿಲಲಿ]ನಾಭಿಕಮಲ ಕಂಡೆಉದ್ಭವಿಸಿ ಮೆರೆವ ವಿರಿಂಚಿಯ ಕಂಡೆಜಡಿವೊ ಪೀತಾಂಬರ ನಡುವಿನೊಡ್ಯಾಣವಉಡಿಗೆಜ್ಜೆ ಮೇಲಿನ ಕಿರುಗೆಜ್ಜೆಗಳ ಕಂಡು 4 ಮೂರನೆ ಬಾಗಿಲಲಿ ಮುದ್ದು ಶ್ರೀಚರಣವುಶ್ರೀದೇವಿ ಭೂದೇವಿ ಸೇವೆಮಾಳ್ಪುದ ಕಂಡೆಸುರರು ಮಾನವರ ಕಂಡೆ ಸ್ತೋತ್ರಮಾಳ್ಪುದ ಕಂಡೆಉರಗಶಯನ ಮ್ಯಾಲೆ ಹಯವದನನ ಕಂಡು ಎನ್ನ 5
--------------
ವಾದಿರಾಜ
ಜಯ ಜಯ ಭೀಮಶ್ಯಾಮಾ ಜಯ ಸತ್ಯಾವರ ಪ್ರೇಮಾ ಜಯ ಕೃಷ್ಣಾಗತ ಕಾಮಾ ಜಯ ಪುಣ್ಯನಾಮಾ ಪ. ಪಂಚಬಾಣನ ಜನಕ ಪಾಂಚಾಲೆಯನು ಕರೆದು ಪಂಚ ಮೂರುತಿಗರಿಸಿನವ ಹಚ್ಚೆನಲೂ ಪಂಚರತ್ನಗಳಿಂದ ಮಿಂಚುತ ಭಾವಿ ವಿ- ರಿಂಚಿಯ ಕಡೆಗಾಗಿ ನಡೆತಂದಳಾಗ 1 ಅಣಿಮಾದಿ ಗುಣ ಚಿಂತಾಮಣಿಯ ಹತ್ತಿರೆ ಬಂದು ಮಣಿದು ಪಾದಕೆ ನಾರಿಮಣಿ ನಸುನಗುತಾ ಝಣಝಣವೆನಿಪ ಕಂಕಣ ಶೋಭಿತದಿಂದ ಪುನುಗಿನೆಣ್ಣೆಯ ಕೂಡಿದರಿಶಿಣ ಹಚ್ಚಿದಳು 2 ಕ್ಷತ್ರಿಯ ಗಣ ಶಿರೋರತ್ನನಾಗಿರುವಿ ಸ- ರ್ವತ್ರ ವ್ಯಾಪಕ ಫಾಲನೇತ್ರ ವಂದಿತನೆ ಕೃತ್ರಿಮ ದ್ವಿಜ ಭಿಕ್ಷಾ ಪಾತ್ರ ಸಲ್ಲದು ಕಂಜ ಪತ್ರ ತೋರಿದರೆ ನಾನರಿಶಿಣ ಹಚ್ಚುವೆನು 3 ಖುಲ್ಲ ಬಕಗೆ ಭಂಡಿಯಲ್ಲಿ ತುಂಬಿದ ನಾನಾ ಪಲ್ಯ ಭಕ್ಷಗಳ ಮೇಲೆ ಚೆಲ್ಲಿದನ್ನವನು ಎಲ್ಲ ಉಂಡಸುರನ ನಿಲ್ಲದಂತೊರಸಿದ ಮಲ್ಲ ನಿನ್ನಯ ದಿವ್ಯ ಗಲ್ಲವ ತೋರೊ 4 ಅಂಗಸಂಗದಿ ಶತಶೃಂಗಗಿರಿಯನೊಡದ ಮಂಗಳಮೂರ್ತಿ ಮಾತಂಗ ವೈರಿಗಳ ಭಂಗಿಸಿ ಬಲುಹಿಂದ ರಂಗನರ್ತನ ಗೈವ ಶೃಂಗಾರ ಕರಗಳಿಗರಸಿನ ಹಚ್ಚುವೆನು 5 ಮುಂದೆ ಕೀಚಕಬಾಧೆಯಿಂದ ರಕ್ಷಿಸುವಿ ಸೌ ಗಂಧಿ ಕುಸುಮವನ್ನು ತಂದು ಮುಡಿಸುವಿ ಮಂದಮತಿಯ ಕುರುನಂದ ನರನು ಬೇಗ ಕೊಂದು ಮನ್ಮನಸಿಗಾನಂದ ಪಾಲಿಸುವಿ 6 ಕುಂಡಲೀ ಗಿರೀಶ ಬ್ರಹ್ಮಾಂಡ ನಾಯಕ ಹೃ- ನ್ಮಂಡಲದೊಳಗಿಟ್ಟುಕೊಂಡು ಸಂತಸದಿ ಚಂಡ ವೈರಿಗಳನ್ನು ಖಂಡಿಸಿ ಸುಖದಿಂದ ಶುಂಡಾಲ ಪುರವಾಳಿಕೊಂಡು ನೀನಿರುವಿ7
--------------
ತುಪಾಕಿ ವೆಂಕಟರಮಣಾಚಾರ್ಯ
ಪೂರ್ಣಭೋಧ ಮುನಿರಾಯಾ ಎನ್ನಲಿ ಕರುಣವ ಮಾಡಯ್ಯಾ ಪ ಚರಣವ ನಂಬಿದ ತರುಣನ ಭವ ಅರಣವ ದಾಟಿಸಿ ಶರಣನ ಪೊರೆಯೋ ಅ.ಪ ನಿನ್ನ ಮತದಿ ದೀಕ್ಷಾ ಪೊಂದಿಸಿ ನಿನ್ನ ಕರುಣ ಕಟಾಕ್ಷ ನಿನ್ನ ಶಾಸ್ತ್ರದಲನನ್ಯ ಭಾವವ ಮನ್ನಿಸೊ ದಿನದಿನ ಎನ್ನೊಳು ನೆಲೆಸಿದ್ದು 1 ಪಂಚಭೇದಮತಿಯಾ ತರತಮ ಪಂಚಕ ಭಾವದ ಪರಿಯಾ ವಂಚನೆÀ ಮಾಡದೆ ಪಂಚಿಕಿ ತಿಳಿಸೆಲೊ ಮಂಚಿಗೆ ಮರುತ ವಿರಿಂಚಿಯಾಗುವಿ ನೀ 2 ಮಾತರಿಶ್ವ ಹನುಮಾ ಭೀಮಾ ಯತಿನಾಥ ಮಧ್ವನಾಮಾ ಖ್ಯಾತ ಮಾಯಿಮತ ವ್ರಾತವನಳಿದ ದಾತಗುರುಜಗನ್ನಾಥ ವಿಠಲ ಪ್ರಿಯ 3
--------------
ಗುರುಜಗನ್ನಾಥದಾಸರು
ವಿಜಯ ಭೈರವಿ ತಾಯೆ ವಿಶ್ವೇಶಿ ಮಹಾಮಾಯೆ ಸ್ವಜನನೆಂದೆನ್ನ ಕಾಯೆ ಕುಜನ ಕೃತ್ಯಗಳನ್ನು ಕಾಲಿಂದಲೊರಸು ಕಂ- ಬುಜನೇತ್ರೆ ಕರುಣಾಸುಧೆಯ ನೀಡು ದಯಮಾಡು ಪ. ಪರಿ ಪರಿಯಲಿ ದೇಹ ಕರಗಿಸುತಿಹ ನಾನಾ ದುರಿತ ಕಾರಣವೇನೆಂದರಿಯದಲೇ ಮರುಗುತಲಿರೆಯಿಂದಿನಿರುಳ ಸ್ವಪ್ನದಿ ಬಂದು ಹರಿಯ ಚಿತ್ತದ ರೀತಿಯರುಪಿ ತ್ವರಿತದಿ 1 ಶರಣು ಜನ ಮಂಥಾರ ಶಾಶ್ವತ ತರಣಿ ಕೋಟಿ ಸಮಾನ ಭಾಸುರ ಚರಣ ಕಮಲಗಳನ್ನು ಶಿರದಲಿ ನಿರಪದಿಯೊಳಿಟ್ಟಿರವ ತೋರಿಸು 2 ಪಂಚ ವಿಂಶತಿ ತತ್ವ ಪರಿಭಾಸೆ ಪುರುಶಕ್ತಿ ಪಾಂಚ ಭೌತಿಕ ದೇಹ ಗತ ಬಾಧೆಯ ಕೊಂಚವಲ್ಲದೆ ಹರವಂಚವಾಗಿರುವೆ ವಿ- ರಿಂಚಿಯ ಜನನಿ ನಿಷ್ಕಿಂಚನ ಜನವಂದ್ಯೆ 3 ಪಾಂಚಜನ್ಯೋದಕವ ಸೇಚಿಸಿ ಪಂಚಕರಣಕೆ ಮಾರ್ಗ ಸೂಚಿಸಿ ಪಂಚವರ್ನದ ಶು ....... * 4
--------------
ತುಪಾಕಿ ವೆಂಕಟರಮಣಾಚಾರ್ಯ