ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತÉೂೀರೆ ಬೇಗನೆ ತೋಯಜನಯನೆಮದವಾರಣ ಗಮನೆ ಪ ಮಾರನ ತಾಪವ ಸೈರಿಸಲಾರೆನೆನೀರೆ ನಿನಗೆ ಮುತ್ತಿನ್ಹಾರವ ಕೊಡುವೆನೆ ಅ.ಪ ನೀರೊಳು ಮುಳು ಮುಳುಗಾಡುತ ಬಂದುಮಥಿಸಿದ ಪಯ ಸಿಂಧುಧಾರುಣಿ ಚಿಮ್ಮುತ ಮೇಲಕೆ ತಂದುದನುಜನ್ನ ಕೊಂದುಮೂರುಪಾದವ ಬೇಡುತ ನಿಂದುಮುನಿಕುಲದಲಿ ಬಂದುನಾರಿಬಿಟ್ಟು ಪರನಾರಿಯರಾಳಿದತೋರೆರಮಣಿ ಹಯವೇರಿ ಮೆರೆದನ 1 ಕತ್ತಲೆ(ತಾಮಸ ದೈತ್ಯ)ನೊಡನೆ ಕಾದಿದನು ಧೀರಕಡೆದನು ಕೂಪಾರಕುತ್ತಿ ಮಣ್ಣಗಿದು ಮೆದ್ದನು ಬೇರದಾನವ ಸಂಹಾರ ಒತ್ತಿ ಬಲಿಯನು ಕಾಯ್ದನು ಶೂರಕುಜನ ಕುಠಾರ ಹತ್ತು ಶಿರನ ಕತ್ತರಿಸಿ ಗೋಕುಲದೊಳುಬತ್ತಲೆ ರಾಹುತನಾಗಿ ಮೆರೆದನ 2 ನಿಗಮ ಕದ್ದವನ ನೀಗಿದ ಧಿಟ್ಟನೆಗಹಿದ ಬೆಟ್ಟಅಗಿದು ಮಣ್ಣನೆ ಜಠರದಲ್ಲಿಟ್ಟಘುಡಿ ಘುಡಿಸುವಸಿಟ್ಟಜಗಕೆಲ್ಲ ನೋಡೆ ಎರಡಡಿಯಿಟ್ಟಕೊಡಲಿಯ ಪೆಟ್ಟಮೃಗವ ಕೆಡಹಿ ಕುಂತಿಮಗಗೆ ಸಾರಥಿಯಾಗಿಜಗವ ಮೋಹಿಸಿ ಹಯವೇರ್ದ ಶ್ರೀಕೃಷ್ಣನ 3
--------------
ವ್ಯಾಸರಾಯರು
ದ್ಯಾವಿ ನಮ್ಮ ದ್ಯಾವರು ಬಂದರು ಬನ್ನೀರೆ, ನೋಡ ಬನ್ನಿರೆ ಪ ಕೆಂಗಣ್ಣ ಮೀನನಾಗಿ ನಮ ರಂಗಗುಂಗಾಡು ಸೋಮನ ಕೊಂದಾನ್ಮ್ಯಾಗುಂಗಾಡು ಸೋಮನ ಕೊಂದು ವೇದವನುಬಂಗಾರದೊಡಲನಿಗಿತ್ತಾನ್ಮ್ಯಾ1 ದೊಡ್ಡ ಮಡುವಿನೊಳಗೆ ನಮ ರಂಗಗುಡ್ಡವ ಹೊತ್ಕೊಂಡು ನಿಂತಾನ್ಮ್ಯಾಗುಡ್ಡವ ಹೊತ್ಕೊಂಡು ನಿಂತು ಸುರರನುದೊಡ್ಡವರನ್ನ ಮಾಡ್ಯಾನ್ಮ್ಯಾ 2 ಚೆನ್ನ ಕಾಡಿನ ಹಂದಿಯಾಗಿ ನಮ ರಂಗಚಿನ್ನದ ಕಣ್ಣನ ಕೊಂದಾನ್ಮ್ಯಾಚಿನ್ನದ ಕಣ್ಣನ ಕೊಂದು ಭೂಮಿಯವನಜಸಂಭವಗಿತ್ತಾನ್ಮ್ಯಾ 3 ಸಿಟ್ಟಿಂದ ಸಿಂಹನಾಗಿ ನಮ ರಂಗಹೊಟ್ಟೆಯ ಕರುಳ ಬಗೆದಾನ್ಮ್ಯಾಹೊಟ್ಟೆಯ ಕರುಳ ಹಾರವ ಮಾಡಿ ಪುಟ್ಟಗೆ ವರವ ಕೊಟ್ಟಾನ್ಮ್ಯಾ4 ಹುಡುಗ ಹಾರುವನಾಗಿ ನಮ ರಂಗಬೆಡಗಲಿ ಮುಗಿಲಿಗೆ ಬೆಳೆದಾನ್ಮ್ಯಾಬೆಡಗಲಿ ಮುಗಿಲಿಗೆ ಬೆಳೆದು ಬಲಿಯನ್ನಅಡಿಯಿಂದ ಪಾತಾಳಕೊತ್ತ್ಯಾನ್ಮ್ಯಾ 5 ತಾಯ ಮಾತನು ಕೇಳಿ ಸಾಸಿರ ತೋಳಿನಆವಿನ ಕಳ್ಳನ ಕೊಂದಾನ್ಮ್ಯಾಆವಿನ ಕಳ್ಳನ ಕೊಂದು ಭೂಮಿಯಅವನಿಸುರರಿಗೆ ಇತ್ತಾನ್ಮ್ಯಾ 6 ಪಿಂಗಳ ಕಣ್ಣಿನ ಕೊಂಗಗಳ ಕೂಡಿಛಂಗನೆ ಲಂಕೆಗೆ ಪೋದಾನ್ಮ್ಯಾಛಂಗನೆ ಲಂಕೆಗೆ ಪೋಗಿ ನಮ ರಂಗಹೆಂಗಸುಗಳ್ಳನ ಕೊಂದಾನ್ಮ್ಯಾ7 ಕರಿಯ ಹೊಳೆಯ ಬಳಿ ತುರುಗಳ ಕಾಯುತಉರಗನ ಮಡುವ ಧುಮುಕ್ಯಾನ್ಮ್ಯಾಉರಗನ ಹೆಡೆ ಮೇಲೆ ಹಾರ್ಹಾರಿ ಕುಣಿವಾಗವರವ ನಾರೇರ್ಗೆ ಕೊಟ್ಟಾನ್ಮ್ಯಾ 8 ಭಂಡನಂದದಿ ಕುಂಡೆಯ ಬಿಟುಗೊಂಡುಕಂಡ ಕಂಡಲ್ಲಿಗೆ ತಿರುಗ್ಯಾನ್ಮ್ಯಾಕಂಡ ಕಂಡಲ್ಲಿಗೆ ತಿರುಗಿ ತ್ರಿಪುರರಹೆಂಡಿರನೆಲ್ಲ ಕೆಡಿಸ್ಯಾನ್ಮ್ಯಾ 9 ಚೆಲುವ ಹೆಂಡತಿಯ ಕುದುರೆಯ ಮಾಡಿಒಳ್ಳೆ ರಾಹುತನಾದಾನ್ಮ್ಯಾಒಳ್ಳೆ ರಾಹುತನಾಗಿ ಮ್ಲೇಚ್ಛರಡೊಳ್ಳು ಹೊಟ್ಟೆಯ ಮ್ಯಾಲೊದ್ದಾನ್ಮ್ಯಾ 10 ಡೊಳ್ಳಿನ ಮ್ಯಾಲ್ ಕೈ ಭರಮಪ್ಪ ಹಾಕ್ಯಾನುತಾಳವ ಶಿವನಪ್ಪ ತಟ್ಟಾನ್ಮ್ಯಾಒಳ್ಳೊಳ್ಳೆ ಪದಗಳ ಹನುಮಪ್ಪ ಹಾಡ್ಯಾನುಚೆಲುವ ಕನಕಪ್ಪ ಕುಣಿದಾನ್ಮ್ಯಾ11
--------------
ಕನಕದಾಸ
ನಾರಾಯಣ ನಾರಾಯಣ ನಾರಾಯಣ ನಾರಾಯಣ ನಾರಾಯಣ ನರಹರಿಯೆ ಪ. ನಾರಾಯಣ ನರಹರಿಯೆ ಹಯವದನ ಸ್ವಾಮಿ ನೀ ಎನಗೆ ದಯವಾಗೊ ಅ.ಪ. ನಿಗಮವ ಕದ್ದೊಯ್ದ ದುಗುಡ ದೈತ್ಯನ ಕೊಂದು ಆಗಮವ ತಂದು ಅಜಗಿತ್ತೆ ಆಗಮವ ತಂದು ಅಜಗಿತ್ತೆ ಹಯವದನ ಆದಿಮೂರುತಿಯೆ ದಯವಾಗೊ 1 ಕೂರ್ಮರೂಪದಿ ಬಂದು ಆ ಗಿರಿಯನೆತ್ತಿದ ಪ್ರೇಮದಿ ಸುರರಿಗಮೃತವ ಪ್ರೇಮದಿ ಅಮೃತವನಿಕ್ಕಿದ ಹಯವದನ ಸ್ವಾಮಿ ನೀ ಎನಗೆ ದಯವಾಗೊ 2 ಕ್ರೋಡರೂಪದಿ ಬಂದು ಮೂಢದೈತ್ಯನ ಕೊಂದು ರÀೂಢಿಯ ನೆಗಹಿ ಜಗಕಿತ್ತೆ ರÀೂಢಿಯ ನೆಗಹಿ ಜಗಕಿತ್ತೆ ಹಯವದನ ಪ್ರೌಢ ನೀ ಎನಗೆ ದಯವಾಗೊ 3 ಶಿಶುವ ಬಾಧಿಸುತಿರ್ದ ಕಶಿಪನ್ನ ಸೀಳಿದಿ ಕುಶಲದಿಂ ಕರುಳ ಮಾಲೆಯ ಕುಶಲದಿಂ ಮಾಲೆ ಧರಿಸಿದ ಹಯವದನ ಬಿಸಜಾಕ್ಷ ಎನಗೆ ದಯವಾಗೊ 4 ವಾಮನರೂಪದಿ ಬಂದು ಭೂಮಿ ಓರಡಿ ಮಾಡಿ ವ್ಯೋಮಕ್ಕೆ ಚರಣವ ನೀಡಿದೆ ವ್ಯೋಮಕ್ಕೆ ಚರಣವ ನೀಡಿದ ಹಯವದನ ವಾಮನ ಎನಗೆ ದಯವಾಗೊ 5 ಕೊಡಲಿಯ ಪಿಡಿದು ಕಡಿದೆ ದುಷ್ಟನೃಪರ ಹಡೆದ ತಂದೆಯ ಮಾತು ಸಲಿಸಿದೆ ಹಡೆದ ತಂದೆಯ ಮಾತು ಸಲಿಸಿದ ಹಯವದನ ಒಡೆಯ ನೀ ಎನಗೆ ದಯವಾಗೊ 6 ಸೀತೆಗೋಸ್ಕರ ಪೋಗಿ ಸೇತುವೆಯ ಕಟ್ಟಿದೆ ಭೂತ ರಾವಣನ ಮಡುಹಿದೆ ಭೂತ ರಾವಣನ ಮಡುಹಿದೆ ಹಯವದನ ಖ್ಯಾತ ನೀ ಎನಗೆ ದಯವಾಗೊ 7 ಗೊಲ್ಲರ ಒಡನಾಡಿ ಬಲ್ಲಿದಸುರÀನ ಕೊಂದು ಮಲ್ಲರೊಡನಾಡಿ ಮಡುಹಿದೆ ಮಲ್ಲರೊಡನಾಡಿ ಮಡುಹಿದ ಹಯವದನ ಫುಲ್ಲಾಕ್ಷ ಎನಗೆ ದಯವಾಗೊ 8 ತ್ರಿಪುರರ ಸತಿಯರಿಗುಪದೇಶವನಿಕ್ಕಿ ತ್ರಿಪುರರನೆಲ್ಲ ಮಡುಹಿದೆ ತ್ರಿಪುರರನೆಲ್ಲ ಮಡುಹಿದ ಹಯವದನ ನಿಪುಣ ನೀ ಎನಗೆ ದಯವಾಗೊ 9 ತೇಜಿಯನೇರಿ ರಾಹುತನಾಗಿ ನೀ ಮೆರೆದೆ ಮೂರ್ಜಗಕ್ಕೆ ಕಲ್ಕಿಯೆಂದೆನಿಸಿದೆ ಮೂರ್ಜಗಕ್ಕೆ ಕಲ್ಕಿಯೆಂದೆನಿಸಿದೆ ಹಯವದನ ಭೋಜ ನೀ ಎನಗೆ ದಯವಾಗೊ 10 ವಾದಿರಾಜರಿಗೊಲಿದು ಸ್ವಾದೆಪುರದಲಿ ನಿಂದು ವೇದದ ಕಥೆಯನರುಹಿದೆ ವೇದದ ಕಥೆಯನರುಹಿದ ಹಯವದನ ಮಾಧವ ನೀ ಎನಗೆ ದಯವಾಗೊ 11
--------------
ವಾದಿರಾಜ
ಯಾಕೆ ಬಾರಯ್ಯ ನೀ ಏಕೋ ದೇವನೆ ಎನ್ನ ಏಕಾಕಾರದಲೆನ್ನ ಹೊರಿಯಲಾರೇನಯ್ಯ ಧ್ರುವ ನೀರ ಥೆರಿಯ ಕಡಿದು ಹೃದಯದಕರ ಚರಣದಿ ಭರದಿ ಮುಣಗಿ ನೀರ ನಡಿಗಿ ದಣದೇನಯ್ಯ 1 ವಾರಿಧಿಮಥನದಿ ಮೇರುಪರ್ವತವನ್ನು ಭಾರ ಬೆನ್ನಲಿ ಪೊತ್ತು ಬೆವರಿ ದಣಿದೇನಯ್ಯ2 ಧರಿಯ ಕದ್ದಸುರನ ಕೋರೆದಾಡಿಂದ ಸೀಳಿ ಭರದಿಂದ ಹೊಯಿದಾಡಿ ಹೋರಿ ದಣಿದೇನಯ್ಯ 3 ತರಳಗೊಲಿದು ಪ್ರಕಟಿಸಿ ದೈತ್ಯನ ಸೀಳಿ ಕರಳೊನಮಾಲಿಯ ಧರಿಸಿ ದಣಿದೇನಯ್ಯ 4 ಧರಿಯು ಮೂರಡಿ ಮಾಡಿ ಎರೆದು ದಾನವ ಬೇಡಿ ನರನ ಪಾತಾಳಕೊತ್ತಿ ಬಳೆದು ದಣಿದೇಯನಯ್ಯ 5 ಹಿರಿಯಳ ಶಿರವನು ಹರಿದು ಕತ್ತರಿಸಿನ್ನು ಕರದಲ್ಲಿ ಪರಶುವ ಪಿಡದು ದಣಿದೇನಯ್ಯ 6 ಶಿರಗಳ ಚೆಂಡಾಡಿ ರಾವಣೀಂದ್ರ ಜಿತನ ಶರದಿ ಕುಂಭಕರ್ಣನ ಎಚ್ಚದು ದಣಿದೇನಯ್ಯ 7 ಷತುರುಗಳ ಕಾಯಿದು ಉರುಗನ ತುಳದಿನ್ನು ಗಿರಿಯ ಬೆರಳಲೆತ್ತಿ ತೋರಿ ದಣಿದೇನಯ್ಯ 8 ಬರಿಯ ಬತ್ತಲೆ ಅಗಿ ಅರಿಯದೆ ತ್ರಿಪುರವ ಸೇರಿ ನಾರೇರ ವ್ರತವಳಿದು ದಣಿದೇನಯ್ಯ 9 ಏರಿ ಕುದುರಿಯ ತಿರುಹು ರಾಹುತನಾಗಿ ಪರಿ ರೂಪವ ತಾಳಿ ದಣಿದೇನಯ್ಯ 10 ಸರ್ವಾಪರಧವು ಕ್ಷಮೆಯಿಂದ ಮಹಿಪತಿಯ ಮನದೊಳು ಬಂದು ನಿಂದು ಹೊರೆದು ರಕ್ಷಿಸಯ್ಯ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು