ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಯೇ ಪೊರೆಯದಿಹುದು ಸರಿಯೆ | ಎನ್ನ ಮರೆತೆ ಯಾತಕೊ ನಾನರಿಯೆ ಪ ಸೂಕರ ಯೋನಿಯಲಿ ಬಂದು | ನಾನು ಮನುಜನಾಗಿ ನಿಂದಿಹೆನಿಂದು ನಿನ ಬೇಡಿಕೊಂಬೆ ದಯಸಿಂಧು | ಎನ್ನ ಪುನಹ ಪುಟ್ಟಿಸಬೇಡವೆಂದು 1 ಮನಸು ವಚನ ಕಾಯಗಳಿಂದ | ನಿನ್ನ ಅನುಚರನಾಗಿಹೆ ಮುದದಿಂದ ದನುಜಾರಿ ಬಿಡಿಸೆನ್ನ ಬಂಧ | ಭವ- ಜನಿತವಾಗಿಹ ಜಾಲದಿಂದ 2 ಹಲವು ಮಾತೇಕೊ ಮಾಲೋಲ | ಮೌನಿ ಅಲವ ಬೋಧಾರ್ಚಿತ ಗೋಪಾಲ ಕಲುಷ ರಾಸಿಗಳನೆಲ್ಲ ಕಳೆದು ಸಲಹೈಯ್ಯಾ ರಂಗೇಶವಿಠಲ 3
--------------
ರಂಗೇಶವಿಠಲದಾಸರು