ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಳಬ್ಯಾಡೆಲವೊ ರಂಗಮ್ಮ ನಿನ್ನ ಇಳಿಯಾರ ನೋಡುತಿದೆ ಗುಮ್ಮ ಪ ಒದರಿದರೆ ಕೇಳೆಲೆವೊ ತಮ್ಮಾ | ಅದು ಅದರುತಿದೆ ಬೊಮ್ಮಾಂಡ ತಮ್ಮ ಬೆದರಿ ದಿವಿಜರು ತಮತಮ್ಮ | ನಿಜ ಸದನ ಬಿಡುತಿಹರು ನೋಡಮ್ಮ 1 ಬೆರಳುಗುರು ಗಾಯಗಳಿಂದ | ಆ ದುರುಳರನ್ನ ಜಠರ ತಳದಿಂದ ಕರುಳು ಮಾಲಿಕೆ ಕಿತ್ತಿ ತಂದ | ತನ್ನ ಕೊರಳಲಿ ಹಾಕಿಹ ಚಂದ2 ಏಸು ದೈತ್ಯರಾಸಿಗಳನು | ತಾನು ಮೋಸಗೊಳಿಸಿ ಕೊಲ್ಲುವನು ದಾಸನೆಂದರೆ ಕಾಮಧೇನು ಸುಮ್ಮಗಿ | ರುವ ವಾಸುದೇವವಿಟ್ಠಲ ನೀನು 3
--------------
ವ್ಯಾಸತತ್ವಜ್ಞದಾಸರು
ಏನಬೇಡಲೊ ಕೃಷ್ಣ ನಾಚಿಕಿಲ್ಲದೆ ಪ ಜ್ಞಾನಶೂನ್ಯನಾಗಿ ಬಹಳ ಹೀನ ಕಾರ್ಯ ಮಾಡಿ ನಾನು ಅ.ಪ. ಪರರ ವನಿತೆ ಧನಗಳಿಂಗೆ ಅರಿತು ಅರಿತು ಆಶೆಪಡುತ ದುರಿತಕೋಟಿಗಳನು ಮಾಡಿ ಪರಮ ನೀಚನೆನಿಸಿದವನು 1 ವನಗಳನು ಕಡಿಸಿ ಹಿರಿದು ಮನೆಗಳನ್ನು ರಚಿಸಿಕೊಂಡು ವನಿತೆ ಮಾತು ಕೇಳಿ ಜನನಿ ಜನಕರನ್ನು ತೊರೆದ ಪಾಪಿ 2 ಸತ್ಯ ಮತವನು ತುಚ್ಛಗೈದು ನಿತ್ಯಕರ್ಮಗಳನು ಬಿಟ್ಟು ಮತ್ತನಾಗಿ ತಿಂದು ಮಲಗಿ ಕತ್ತೆಯಂತೆ ಹೊರಳುವವನು 3 ಆರ್ತರಾದ ಜನರ ಸಲಹಿ ಕೀರ್ತಿಯನ್ನು ಹೊಂದಿ ದೇಹ ಸಾರ್ಥಕವನು ಮಾಡಿಕೊಳದೆ ಧೂರ್ತನೆನಿಸಿಕೊಳುವ ನರನು 4 ವಾಸುದೇವ ಸಕಲ ದೋಷ ರಾಸಿಗಳನು ದಹಿಸುವ ರಂ- ಗೇಶವಿಠಲರೇಯ ನಿನ್ನ ದಾಸನೆಂದು ಪೇಳದವನು 5
--------------
ರಂಗೇಶವಿಠಲದಾಸರು
ಬಂಟ ಪ ಕನಕಕಶಿಪು ತನಯ ತನ್ನ ಜನಕನ ಹಿಂಸೆ ತಡೆಯದೆಲೆ ದನುಜಹರನೆ ರಕ್ಷಿಸೆನಲು ಕ್ಷಣದಿ ಬಂದು ಸಲಹಿದೈಯ್ಯಾ 1 ನಾರಿ ದ್ರುಪದನಂದನೆಯಳ ಸೀರೆ ಖಳನು ಸೆಳೆಯುತಿರಲು ವಾರಿಜಾಕ್ಷ ನಿನ್ನ ಸ್ಮರಿಸೆ ಯಾರು ಅರಿಯದಂತೆ ಬಂದೆ 2 ದಾಸಜನರ ಸಕಲ ಪಾಪ- ರಾಸಿಗಳನು ದಹಿಸೆ ಪೊರೆವೆ ಶ್ರೀಶ ನಿನ್ನ ಭಜಿಸಿದರೆ ರಂ- ಗೇಶವಿಠಲರೇಯ ನೀನು 3
--------------
ರಂಗೇಶವಿಠಲದಾಸರು
ವಿಮಲಮತಿಯ ಪಾಲಿಸಭವ ಅಮಿತದಯಾರ್ಣವ ದೇವ ಪ ದೀನಬಂಧು ಜ್ಞಾನಸಿಂಧು ದೀನನೊಳು ನೀನೆ ನಿಂದು ಹೀನಮತಿಯ ತರಿದು ತವ ಧ್ಯಾನ ಸದಾನಂದದಿಡುವ 1 ಆಶಾಪಾಶಗಳನು ತುಳಿದು ದೋಷರಾಸಿಗಳನು ಕಡಿದು ಶ್ರೀಶ ನಿಮ್ಮ ಸಾಸಿರನಾಮವ ಧ್ಯಾಸಕಿತ್ತು ಜ್ಞಾನ ಕೊಡುವ 2 ಸತ್ಯ ಶ್ರೀರಾಮ ನಿಮ್ಮ ಪಾದ ಭಕ್ತಿಯಿಂದ ಬೇಡ್ವೆ ಸದಾ ಚಿತ್ತ ಶುದ್ಧಿಗೈದು ಎನಗಾ ನಿತ್ಯ ಮುಕ್ತಿ ನೀಡಿ ಬೇಗ 3
--------------
ರಾಮದಾಸರು
ಶೇಷಾಚಲನಿಲಯನಾಗಿರುತ ಭಕುತರ ಪೋಷಿಸುತಿಹನ್ಯಾರೆ ಪೇಳಮ್ಮಯ್ಯ ಪ ದೋಷರಾಸಿಗಳನು ನಾಶ ಮಾಡುತಲಿ ಶೇಷಸುರಸೇವ್ಯ ಶ್ರೀನಿವಾಸ ಕಾಣಮ್ಮ ಅ.ಪ. ಕಲಿಯುಗದೊಳು ಪ್ರಜ್ವಲಿಸುತಿರುವೀ ಗಿರಿ- ಗಿಳಿದು ಬಂದನ್ಯಾಕೆ ಪೇಳಮ್ಮಯ್ಯ ನಲಿಯುತ ಸ್ತುತಿಪ ಜನರ ಕಲುಷವ ಕಳೆಯಲು ಒಲಿದು ಬಂದ ದಯದಿಂದಲಿ ಕೇಳಮ್ಮ 1 ಸ್ವಾಮಿ ಪುಷ್ಕರಿಣಿ ತೀರದಿ ನಗುತ ನಿಂದಿಹ ಕೋಮಲಾಂಗನವನ್ಯಾರೇ ಪೇಳಮ್ಮಯ್ಯ ಕಾಮಿನಿ ಪದುಮಾವತಿ ತಾ ಮೋಹಿಸುತಲಿ ಪ್ರೇಮದಿ ವರಿಸಿದ ಭೂಮಿಪ ಕಾಣಮ್ಮ 2 ಬಂಗಾರ ನವರತ್ನ ಮಂಡಿತನಾಗಿ ವಿ ಹಂಗವೇರ್ದನ್ಯಾರೇ ಪೇಳಮ್ಮಯ್ಯಾ ಗಂಗಾಜನಕ ಪಾಂಡುರಂಗನೆನಿಪ ಆ ರಂಗೇಶವಿಠಲನೆ ಇವ ಕಾಣಮ್ಮ 3
--------------
ರಂಗೇಶವಿಠಲದಾಸರು