ಒಟ್ಟು 6 ಕಡೆಗಳಲ್ಲಿ , 1 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಭಾಗ್ಯವೋ ತಾಯೆ ಲಕುಮಿ ನಿನ್ನದೂ ಸಾನು ರಾಗದಿ ಹರಿಯ ಸೇವಿಸುತಲಿರುವಿ ಪ. ಕಂಕಣವು ನೀನಾಗಿ ಹರಿಗೆ ಭುಜಕೀರ್ತಿ ನೀನಾಗಿ ಶಂಕುಚಕ್ರ ಗದಾ ಪದ್ಮ ನೀನಾಗಿ ಶಂಕೆ ಇಲ್ಲದೆ ಕಿಂಕರಳು ನೀನಾಗಿ ಹರಿಸೇವೆಗೆ ಪಂಕಜಾನಾಭನ್ನ ಸೇವಿಸುತಲಿರುವಿ 1 ಅಕ್ಷರಳು ನೀನಾಗಿ ಹರಿಯ ವಕ್ಷಸ್ಥಳವನೇ ಸೇರಿ ಈ ಜುತ ಹರಿಯ ಪರಮ ಸಂತೋಷದಿಂದ ಲಕ್ಷ ಕೋಟಿ ಕೋಟಿ ಬ್ರಹ್ಮಾಂಡರೂಪದಲ್ಲಿರುವ ಪಕ್ಷಿವಾಹನನ ನೋಡಿ ವೆರಗಾಗುತಲಿರುವಿ 2 ರಾಮನಾ ಸತಿಯಾಗಿ ಪ್ರೇಮದಿಂದಲಿ ಈಗ ಕಾಮನಯ್ಯನ ಕಾರುಣ್ಯದಿಂದ ರಮಾವಲ್ಲಭವಿಠಲನ ತೊಡೆಯ ಮೇಲೆ ಕುಳಿತು ಸ್ವಾಮಿಗೆ ಸತಿಯಾಗಿ ಸೇವಿಸುತಲಿರುವಿ 3
--------------
ಸರಸಾಬಾಯಿ
ಬಂದಳು ನೋಡೆ ಇಂದಿರ ದೇವಿ ಪ. ಬಂದಳು ನೋಡೆ ಗೋವಿಂದನ ಸತಿಯು ಸುಂದರ ಪಾದದಿಂದ ಒಂದೊಂದು ಹೆಜ್ಜೆಯನಿಡುತಾ ಅ.ಪ. ಉಲ್ಲಾಸದಿಂದಲೀ ಚೆಲ್ವೆ ಬಂದಳೀಗ 1 ವಜ್ರದಂತೆ ಕಾಂತಿ ಪ್ರಜ್ವಲಿಸುತ್ತಲೀ ಗೆಜ್ಜೆಪಾದದಿಂದ್ಹೆಜ್ಜೆಯನಿಡುತಲೀಗ2 ಮಾರನಮಾತೆಯು ಮುಂಗುರುಳನೇ ತಿದ್ದಿ ಮುಡಿಯ ಮೇಲಿನ ಮಲ್ಲಿಗೆ ಉದುರುತ್ತ 3 ಕಡಗ ಕಂಕಣವು ಬೆಡಗಿನಿಂದಾಲಿಟ್ಟು ನಡಮುಡಿಮೇಲೆ ಅಡಿಯನಿಡುತಲೀಗ 4 ಕುಕ್ಷಿಯೊಳೀರೇಳು ಜಗವಪೊತ್ತುವನಾ ವಕ್ಷಸ್ಥಳದ ಲಕ್ಷ್ಮಿ ಬಂದಾಳೀಗ 5 ಹರಿಯ ಮಂದಿರಕ್ಕೆ ಸರಸದಿಂದಲೀಗ ಓರೆನೋಟದಿಂದ ಮುಗುಳು ನಗೆಯ ನಗುತ 6 ಚಂದದಿಂದಲೀಗ ಬಂದು ಕುಳಿತುಕೊಂಡು ಮಂದ ಭಾಗ್ಯಳಿಗಾನಂದವ ಕೊಡುವಳು 7 ಇಂದಿರೆ ದೇವನ್ನ ಬಂಧನವಾ ಬಿಡಿಸಿ ತಂದೆಗೋವಿಂದನ್ನ ಕಂಡು ತೋರೆ ತಾಯಿ 8 ರಮಾವಲ್ಲಭವಿಠಲನ ಸ್ಮರಣೆಯು ನಿರುತ ಮಾಡುವಂಥ ವರವ ಕೊಡು ತಾಯೆ 9
--------------
ಸರಸಾಬಾಯಿ
ಬಂದಾನೋ ಧಯಾನಿದಿ ಬಂದಾನೋ ಪ. ಬಂದಾನೊ ನಿನ್ನ ದರುಶನ ಮಾಡಿಸಿ ಆನಂದ ಪಡಿಸಿ ಆನಂದ ಭಾಗ್ಯ ಸುರಿಸಿದೀ ಹರಿಯೆ ಅ.ಪ. ನೀನು ಬಿಡದೆ ಎನ್ನನು ಕರೆಸಿ ನಿನ್ನ ಭಕ್ತರ ಸಂಘದೊಳು ಬೆರೆಸಿ ನಿನ್ನ ದ್ವಾರದೆದುರಿಗೆ ಸ್ಥಳವ ಕೊಡಿಸಿ ವರಹದೇವರ ದರುಶನ ಮಾಡಿಸಿ 1 ನಿನ್ನ ಧರ್ಮ ದರ್ಶನ ಎನಗೆ ಕೊಡಿಸಿ ನಿನ್ನ ಪುಷ್ಕರಣಿ ಸ್ನಾನವ ಮಾಡಿಸಿ ನಿನ್ನ ಭಕ್ತರ ಮಠದಿ ಊಟವ ಮಾಡಿಸಿ ನಿನ್ನ ಕಲ್ಯಾಣೋತ್ಸವ ತೋರಿಸಿ ಆನಂದಪಡಿಸಿ2 ನಿನ್ನ ವಸಂತೋತ್ಸವ ಎನಗೆ ತೋರಿಸಿ ನಿನ್ನ ಉತ್ಸವದೊಳೆನ್ನ ದಣಿಸಿ ನಿನ್ನ ಏಕಾಂತ ಸೇವೆ ಎನ್ನಿಂದ ಮಾಡಿಸಿ ರಮಾವಲ್ಲಭವಿಠಲನ ಮನದಲಿ ನಿಲಿಸಿ ನಲಿಸಿ 3
--------------
ಸರಸಾಬಾಯಿ
ಸಂತೆಯ ಬಿದನೂರು ಹನುಮಂತ ಎನ್ನ ಅಂತರಂಗದಲಿ ಹರಿಯ ತೋರು ಹನುಮಂತ ಪ. ಎನ್ನ ಮೇಲೆ ಪಂಥ ಬೇಡ ನಿಂತು ಬೇಡುವೆ ಹನುಮಂತ ಅ.ಪ. ಅಂಜನಾದೇವಿಯ ಕುಮಾರ ಅಂಜಿಸುವ ಈ ಘೋರ ಸಂಸಾರ ಅಂಜಿಕೆಯ ಬಿಡಿಸೆನ್ನ ಕಾಯೊ ಬಲು ಧೀರ ಸುಗುಣ ಗಂಭೀರ ಸಂಜೀವನನ ಕಂಡ ಶೂರ ಅಂಜನಾದೇವಿಯ ಕುಮಾರ 1 ಕುಂತಿಯಾ ಸುತನಾಗಿ ನೀ ಜನಿಸಿ ಬಂದೇ ಪಂಥದಲಿ ಕೀಚಕನ ಸೋಲಿಸಿ ನಿಂತು ಕಂತುಪಿತನಿಗೆ ದುರ್ಯೋದನನ ಶಿರವ ಒಪ್ಪಿಸಿದೆ 2 ಮದ್ದಿಗೆ ಭಟ್ಟರಲಿ ನೀ ಜನಿಸೀ ಮಧ್ವಮತವನೆ ಉದ್ಧರಿಸಿ ನೀ ಬದರಿಯಲಿ ನಿಂದಿ ಮುದ್ದು ಕೃಷ್ಣನ ಪೂಜಿಸಿ ಉಡುಪಿಲಿ ಸ್ಥಾಪಿಸಿ 3 ಸಂತೆಬಿದನೂರಿನಲಿ ನಿಂತು ಬಂದ ಜನಕೆ ಆನಂದ ಪಡಿಸಿ ಸಂತೋಷದಿಂದ ವರಗಳ ಬೇಡಿದವರಿಗೆ ನೀಡುತ್ತ ಕಂತುಪಿತನ ಧ್ಯಾನದಲಿ ಅನವರತ ಸೇವಿಸುತ 4 ರಾಮ ಸೇವೆ ನೀ ಸಂಭ್ರಮದಲಿ ಮಾಡಿ ರಾಮರ ಧ್ಯಾನ ಮಾಡುತ ಪೂಜಿಸುತಿರುವಿ ರಮಾವಲ್ಲಭವಿಠಲನ ಧ್ಯಾನದಿ ಪಟ್ಟಕೆ ಬರಲಿರುವಿ 5
--------------
ಸರಸಾಬಾಯಿ
ಸರಸಿಜನಾಭ ಪ. ಉಡುಪಿಯ ಕೃಷ್ಣನೇ ಅ.ಪ. ಏನು ಕಾರಣವನ್ನು ತೋರಿದ್ಪೊ ಶ್ರೀನಿವಾಸನೆ ನಿನ್ನ ಮಹಿಮೆಯ ಪೊಗಳಲು ನಾ ಶಕ್ತಳಲ್ಲಾ ಭಕ್ತವತ್ಸಲಾ 1 ನಿನ್ನ ನೋಡಿ ಧನ್ಯಳಾದೆನೊ ಸನ್ನುತಾಂಗನೇ ಎನ್ನ ಮೇಲೆ ಕರುಣವ ತೋರಿ ನಿನ್ನ ದರುಶನವಿತ್ಯೋ ದೇವಾ 2 ಮಾಡಿಸೊ ಧ್ವಂದ್ವಕಾರ್ಯ ನಿನ್ನದೆಂಬ ಸೊಲ್ಲ ಪಾಲಿಸು 3 ನಿನ್ನ ನಾಮದ ಸ್ಮರಣೆಯನ್ನು ಮರಿಯದೆ ನುಡಿಸೆನೆಗೆ ಕರುಣಾನಿಧಿಯೇ4 ನಿನ್ನ ಪಾದದ ಧ್ಯಾನವು ನಿರಂತರವಿರಲೆನೆಗೆ ನಿನ್ನ ಕಡೆಯಾಕಣ್ಣಲಿ ನೋಡೊ ರಮಾವಲ್ಲಭವಿಠಲನೆ ಕರುಣದಿ5
--------------
ಸರಸಾಬಾಯಿ
ಹರಿ ಕುಣಿದ ನಮ್ಮ ಹರಿ ಕುಣಿದ ಹರಿ ಕುಣಿದ ನಮ್ಮ ಹರಿ ಕುಣಿದ ಹರಿ ಕುಣಿದ ನಮ್ಮ ಕೃಷ್ಣ ಕುಣಿದ ಪ. ಹರಿದಾಸುರಗಳ ನೆರೆದಿಹ ಸಭೆಯಲಿ ಭಜನೆಯ ಸಮಯದಿ ಹರಿ ಕುಣಿದ ಅ.ಪ. ಅತಿಭಕ್ತಿಯಿಂದ ಪತಿತ ಪಾವನನ ಪೂಜೆ ಅತಿ ಸಂತೋಷದಿ ಮಾಡುವ ಸಮಯದಿ 1 ವೇದಮಂತ್ರದಿಂದಾ ವೇದಘೋಷದಲ್ಲಿ ವೇದ ವ್ಯಾಸರೆಂಬೋ ನಾಮದಿಂದಿರುವ 2 ಅಂದಿಗೆ ಕಿರುಗೆಜ್ಜೆ ಚಂದದಿ ಪೊಳೆಯುತಾ ಗೋವಿಂದ ದಾಸರ ಮಂದಿರದೊಳಗೆ 3 ಪುರಂದರ ದಾಸರ ಆರಾಧನೆ ದಿನ ಪುರದೊಳಗೆಲ್ಲಾ ಮೆರವಣಿಗೆ ದಿನ ಯತಿಗಳೀರ್ವರು ಪೂಜಿಸಿ 4 ವರದ ಅತಿ ಸಂಭ್ರಮದಿ ಗತಿ ಕೊಡುವವ ಬಂದ ರಮಾವಲ್ಲಭವಿಠಲನ ಪೂಜೆಯ ಸಮಯದಿ 5
--------------
ಸರಸಾಬಾಯಿ