ಕಲಶಾಬ್ಧಿಜಾತೆ ಸೀತೆಗಾರತಿಯನು ಬೆಳಗಿರೆ
ಲಲನಾಮಣಿಯ ಸಾರಿ ನುತಿಸಿ ನಲಿದು ಪಾಡಿರೆ ಪ.
ಸರಸಿಜಾಸನಾದಿ ವಿನುತೆ ಸುರವರಾರ್ಚಿತೆ
ಶರದಿಂದುಹಾಸೆ ಧರಣಿಜಾತೆ ಕರುಣಿಸೆನ್ನುತೆ 1
ಕಮಲನಯನೆ ಕಮಲವದನೆ ಕಮಲವಾಸಿನಿ
ವಿಮಲಚರಣೆ ರಮಾರಮಣಿ ಮಧುರಭಾಷಿಣಿ 2 ಶೇಷಶೈಲವಾಸದಯಿತೆ ವಿಶ್ವಸನ್ನುತೆ
ಪೋಷಿಸೆಮ್ಮ ಪ್ರಾಣದಾತೆ ಸೀತೆಯೆನ್ನುತ 3