ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸೈ ರಮಾರಮಣನೆ ಎನ್ನ ನೀಲಮೇಘ ಶ್ಯಾಮನೆ ಪ ಪಾಲಿಸಿ ಜಗಲೀಲೆ ತೋರಿದಿ ಪಾಲಭಕ್ತ ಭವಮೂಲಪರಿಹರ ಅ.ಪ ಜಾಳು ಸಂಸಾರೆಂಬೊಸಂಕೋಲೆ ಕಾಲಿಗೆ ತೊಡರಿ ಎನ್ನನು ಕೀಳನೆನಿಸಿತ್ತು ಶೀಲ ಕೆಡಿಸಿ ಬಾಳಿ ಫಲವಿಲ್ಲ ತಾಳೆನಭವ 1 ನಾಶವಾಗುವ ದೇಹಧರಿಸಿ ನಾಶನಾಲೋಚನೆಯ ಸ್ಮರಿಸಿ ಏಸು ರೀತಿಲಿ ಘಾಸಿಯಾದೆ ಭವ ಪಾಶದ ಬಾಧೆ ಸಹಿಸೆನಭವ 2 ತಂದೆ ಶ್ರೀರಾಮ ಮಂದಮತಿತನ ದಿಂದ ಕಂದನುಮಾಡಿದ ಒಂದು ದೋಷಗಣಿಸದಲೆ ದಯದಿಂ ಬಂಧದಿಂದ ಮುಕ್ತಿ ಹೊಂದಿಸಭವ 3
--------------
ರಾಮದಾಸರು
ಶ್ರೀರಾಮಾ ರಘುಕುಲಸೋಮ ಕಾಮಿತ ಶುಭಫಲದಾಯಕ ಪ. ರಮಾರಮಣನೆ ಭೀಮ ಪರಾಕ್ರಮ ಸುಂದರ ಅ.ಪ. ದಾನವಾಂತಕ ಶ್ರೀ ಜಾನಕೀ ನಾಯಕರಾಮ ದೀನಾನಾಥ ಪರಿತ್ರಾಣ ಪ್ರಪನ್ನ ಜನಪ್ರಾಣ 1 ವಾಸವಾನುಜ ಜಗದೀಶ ಪರೇಶ ಪರಾತ್ಪರ ದಾಸಜನಾಶ್ರಯ ಶ್ರೀಶ ಸರ್ವೇಶ ದಯಾಸಾಗರ 2 ಮಂಗಳಾತ್ಮಕ ಭವಭಂಗ ಶ್ರೀರಂಗನಾಯಕಿ ರಮಣ ಅಂಗಜಜನಕ ಪಾಂಡುರಂಗ ಕರುಣಾಂತರಂಗ 3 ನಾಗೇಶಪಾಲಕ ನಾಗೇಶವರತಲ್ಪನೆ ಶ್ರೀ ನಾಗಾರಿವಾಹನ ವರನಾಗಾದ್ರಿನಿಕೇತನ ರಾಮಾ 4
--------------
ನಂಜನಗೂಡು ತಿರುಮಲಾಂಬಾ