ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಕ್ಷಿಸೊ ಜಾನಕಿ ಕಾಂತ ಶಾಂತ ಪ ತಕ್ಷಣದಲಿ ಉಪೇಕ್ಷೆಯ ಮಾಡದೆ ಅ.ಪ ದಕ್ಷ ನಾನಲ್ಲವೊ ಪೊಗಳಲು ಶಾಸ್ತ್ರ ವಿ ಚಕ್ಷಣೆಯರಿಯೆನೋ ಲಕ್ಷ್ಮೀನಾಥ1 ಸಂತತಪಡುತಿಹ ಚಿಂತೆಯ ಬಿಡುತಲಿ ಶಾಂತಿಯ ಪೊಂದುವ ತಂತ್ರವ ತೋರುತ 2 ಬೇಡುವ ವಿಧದಲಿ ರೂಢಿಯಿಲ್ಲದೆ ಬಲು ಪಾಡುಪಡುತಿಹೆನೋ ನೀಡುತ ಕರವನು 3 ಕ್ಷೀಣಿಸೆ ಉರುತರ ತಪಗಳಿಂ ತನುವನು ತ್ರಾಣವಿಲ್ಲವೋ ರಮಾಪ್ರಾಣನಾಥನೆ 4 ಕೆಟ್ಟಯೋಚನೆ ಎನ್ನ ಮುಟ್ಟದೆ ಮನವನು ಘಟ್ಟಿಯ ಮಾಡುತ ಶಿಷ್ಟ ಪ್ರಸನ್ನನೇ 5
--------------
ವಿದ್ಯಾಪ್ರಸನ್ನತೀರ್ಥರು
ಹುಚ್ಚು ಹೊಳೆಯ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಎನ್ನ ಅಚ್ಚಳಿಯದೆ ದಡಕೆ ತಂದಿತಚ್ಚುತನ ದಯ 1 ಬಿಚ್ಚಿ ತೋರಲಾಗದೆನ್ನ ಅಚ್ಚರಿಯನು ದೇವ ನಿನ್ನ ಮೆಚ್ಚುಗೆಯನು ಪಡೆವೆನೆಂದು ಸತ್ಯ ಮಾಡುವೆ 2 ಅಷ್ಟದಾರಿದ್ರ್ಯ ಬರಲಿ ಕಷ್ಟ ರಾಶಿ ರಾಶಿ ಬರಲಿ ಶ್ರೇಷ್ಟದ ಮಾನಸದ ಭಾಗ್ಯವಿತ್ತು ಪೊರೆಯಲೊ 3 ವಿಷವ ಬಡಿಸುವರಿಗೆ ದಿವ್ಯ ರಸ ಕುಡಿಸುವಂತೆ ದೇವ ಹಸನ ಬುದ್ಧಿಯಿತ್ತು ಪೊರೆಯೊ ಹೃಷಿಕೇಶನೆ 4 ತ್ರಾಣವ ಕೊಡೊ ಮನಕೆ ದೇವ ಪ್ರಾಣಗಳನ್ನು ಚರಣದಲ್ಲಿ ಕಾಣಿಕೆಯರ್ಪಿಸುವೆ ರಮಾಪ್ರಾಣನಾಥನೆ5 ಮದಕೆ ಕಿಚ್ಚನೊಟ್ಟಿ ಕ್ಷಣದಿ ಎದೆಗೆ ಕೆಚ್ಚನಿತ್ತು ಮುದದಿ ಬದುಕಿನಲೇ ಮುಕುತಿ ಸೌಖ್ಯವಿತ್ತು ಪೊರೆಯೆಲೊ6 ವಿಭವ ತೋರುತಲಿ ಪ್ರಸನ್ನನಾಗೆಲೊ 7
--------------
ವಿದ್ಯಾಪ್ರಸನ್ನತೀರ್ಥರು