ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನೆ ಬಂದಿತಮ್ಮಾ ಮರಿ ಆನೆ ಬಂದಿತಮ್ಮಾ ಪ ವೆಂಕಟರಮಣನೆಂಬಾನೆ ಅ.ಪ. ಸಿರಿಯಿಲ್ಲದರಿಲಾರೆನೆಂದಾತುರದಲಿ ಧರೆಗಿಳಿದಾನೇ ವಲ್ಮೀಕ ದೊಳು ಅಡಗ್ಯಾನೇ1 ಯೋಚನೆ ಮಾಡ್ಯಾನೇ2 ಬೇಟೆನಾಡಲು ಹೊರಟ್ಯಾನೆ ದಿಟ್ಟಕುದುರೆಯನೇರ್ಯಾನೇ ಒಂದನು ಕಂಡ್ಯಾನೇ 3 ಪದ್ಮಾವತಿಯಳ ಕಂಡಾನೇ4 ಹಿಂದೆ ಸರಿದಾನೇ 5 ಬಕುಳೆ ಮಾತೆಯ ಕರೆದಾನೇ ಸಕಲವೃತ್ತಾಂತವ ತಿಳಿಸ್ಯಾನೇ ಬೇಗದಿ ಹೋಗಿ ಬಾರೆಂದಾನೇ ಮೌನದಿಂದಲಿ ಮಲಗ್ಯಾನೇ6 ಮಾತೆ ಬರುವುದ ಕಂಡಾನೇ | ಮುದ್ದದಿಂದಲಿ ಎದ್ದುಕುಳಿತಾನೇ ಮಂದಹಾಸದಿಂದ ನಲಿದಾನೇ7 ಬಂಧುಗಳೆಲ್ಲರ ಕರಿಸ್ಯಾನೇ ಮುಂದೆ ಮಾಡಿಕೊಂಡು ನಡೆಸ್ಯಾನೇ ಮದು ಮಗನಾಗಿ ನಿಂತಾನೆ | ಪದುಮಾವತಿ ಕೈ ಪಿಡಿದಾನೇ 8 ಜಯ ಜಯವೆಂದರು ಸುರಬ್ರಹ್ಮಾದಿಗಳು ವಾಣಿ-ಪಾರ್ವತಿಯರು ಜಯ ಜಯ ವೆಂದರುಗಗನದಿ ಅಮರರು ಮದುಮಳ ಮೇಲೆ ಪೂಮಳೆಗರೆದರು 9 ಪನ್ನಗ ಶಯನಗೆ ಮಂಗಳವೆನ್ನಿರೆ ಪರಮ ಕಲ್ಯಾಣಗೆ ಮಂಗಳವೆನ್ನಿರೆ ಶ್ರೀ ವೇಂಕಟ ವಿಠಲಗೆ ಮಂಗಳಾ ಜಯಮಂಗಳಾ10
--------------
ರಾಧಾಬಾಯಿ
ಮಾತ್ರೆಯಿದು ಸಜ್ಜನರಿಗಾರೋಗ್ಯ ಮಾತ್ರೆ ಸೂತ್ರ ನಾರದನಿದಕೆ ನೆನಪಿನಾ ಮಾತ್ರೆ ಪ ಸಾರ ಪಾಕಗಳಿಲ್ಲ ಊರೂರಿಗೊಯ್ವುದಕೆ ಭಾರವಲ್ಲ ಅ.ಪ ಚಾರು ಚೂರ್ಣವಿದಲ್ಲ | ನೀರೊಳಲೆದುದು ಅಲ್ಲ ಕ್ಷಾರ ಹುಳಿ ಕಹಿಯಿಲ್ಲದೈಶ್ವರ್ಯದಾ ಮಾತ್ರೆ 1 ಇಂದಿರಾಪತಿಯೆಂಬ ಚಂದ್ರೋದಯದ ಮಾತ್ರೆ ಮಂದರೋದ್ಧಾರನೆಂಬ ಸಿಂಧೂರಮಾತ್ರೆ 2 ನಾರಾಯಣಾಯೆಂಬ ನೀರ ಬೆರಸಿರೋದಿದಕೆ ಸಾರತರ ರಸಪಾಕ ತೋರುವಾ ಮಾತ್ರೆ3 ಶ್ರೀರಮಣನೆಂಬ ಮಧುಸೇರಲಾ ಮಾತ್ರೆಗಳ [ಮೂರೊತ್ತು ಸೇವಿಸೆ ಮನಕಹುದು ಹಿತ] 4 ಕರುಣಾಕರಾಯೆಂಬ ವರಸಕ್ಕರೆಯ ಬೆರಸಿ ಶರಣಜನವರದನೆಂದೊರೆವರು ಸದಾ 5 ಪರಮಾತ್ಮನೆಂಬ ಒರಳೊಳ್ ಹರಿಯೆಂಬ ಗುಂಡಿನಿಂದ ಅರೆದೊಡದು ಕೇಳಾ ಮಾಂಗಿರಿರಂಗನೆನಿಪಾ 6
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಲಕ್ಷ್ಮೀದೇವಿ ಸ್ತೋತ್ರ ಎಂದು ಬರುವಳೋ ಗೋ-ವಿಂದನೊಲ್ಲಭೆ ಲಕ್ಷ್ಮೀ ರಂಗನ ಸನ್ನಿಧಿಗೆ ಪ ಮಂಗಳಾಂಗಿ ಸರ್ವಾಂಗ ಬಳಲಿ ಮುಖಕಂದಿ ಕಳೆಗುಂದಿದಂತೆ | ಬಲು ವ್ಯಥೆಯಂತೆ ಅ.ಪ ಶೇಷನ ಶಿಖಿ ಮ್ಯಾಲೆವಾಸುದೇವರು ಲಕ್ಷ್ಮೀ ಸಮೇತರಾಗಿರುತಿರಲುಆ ಸಮಯದಿ ಭೃಗುಮುನಿ ಬಂದು ಕೋ-ಪಿಸೆ ಸೋಕಿಸಿದನು ಪಾದವಾ | ವಕ್ಷ ಸ್ಥಳವಾ 1 ಥಟ್ಟನೆ ಇಳಿದಾಳುಸಿಟ್ಟಿನಿಂದಲಿ ಬಹು ಧಿಕ್ಕಾರ ಮಾಡಿದಳುಲಕ್ಷ್ಮೀರಮಣನೆಂಬೊ ಬಿರುದು ನಿಮಗೆ ಈಹೊತ್ತಿಗೆ ಅಲ್ಲೆಂದಾಳು | ತೆರಳಿದಳು 2 ನಿಲ್ಲದೆ ಪೊರಟಾಳುಫುಲ್ಲಾಕ್ಷಿ ಮನದೊಳು ತಲ್ಲಣಿಸುತಿರಲುವಲ್ಲಭನರಿಯದ ಸ್ಥಳವಿಲ್ಲದಿರೆ ತಾಯಿ ಕೊಲ್ಲಾಪುರಕೆ ಬಂದಾಳು | ನೆಲೆಗೊಂಡಾಳು 3 ಜಾತೆ ಬಾಮಾರನ ಮಾತೆ ಬಾ ವಾರಿಜದಳನೇತ್ರೆ ಬಾಮೂರ್ಲೋಕದೊಳಗೆ ನೀ ಪ್ರಖ್ಯಾತೆ ಬಾರೆಂದು ಶ್ರೀಮ-ನ್ನಾರಾಯಣನೆ ಕರೆಯಲು | ನಸುನಗೆಯೊಳು 4 ಜಯ ಲಕ್ಷ್ಮೀರಮಣಗೆಜಯ ಶ್ರೀನಿವಾಸಗೆ ಜಯ ಮೋಕ್ಷದಾಯಕಗೆಜಯತು ಕೊಲ್ಹಾಪುರದೊಳ್ ನೆಲಸಿದವಳಿಗೆಶ್ರೀದೇವಿಯಳಿಗೆ5 ವೆಂಕಟ ವಿಠಲವೈಕುಂಠಪತಿ ಲಕ್ಷ್ಮೀ ಶಾಂತ ಏಕಾಂತದೊಳುಶಂಖಚಕ್ರಧರ ಸರ್ವಮಂಗಳಕಾರಸಂಚಿತಾಗಮದೂರನು ಮಲಗಿರುವನು6
--------------
ವೆಂಕಟೇಶವಿಟ್ಠಲ
ಮುಖ್ಯ ಪ್ರಾಣನೆ ನಮ್ಮ ಮೂಲ ಗುರುವು |ರಕ್ಕಸಾಂತಕ ಶ್ರೀ ಭಾರತಿಯ ರಮಣನೆಂಬ ಪಅಂಜನಾ ಸುತನಾಗಿ ದಶರಥ ಸುತನಂಘ್ರಿ |ಕಂಜಭಜಿಸಿ ರಾವಣಾದಿ ಖಳರಾ ||ಅಂಜಿಸಿ ಕಪಿಗಳು ಚೇತನ ಕೆಡಲಾಗ |ಸಂಜೀವನವ ತಂದು ಪ್ರಾಣವನುಳುಹಿದ 1ಹರಿಗೆ ದ್ವೇಷಿಗಳಾದ ಮಗಧಾದಿ ಕ್ಷಿತಿಪರ |ತರಿದು ದ್ರೌಪದಿಯಳಕರವಪಿಡಿದು ||ದುರುಳಕೌರವರನ್ನು ಅಳಿದು ದ್ವಾಪರ ಕೊಟ್ಟಾ |ಗರಳಭೋಜನ ಮಾಡಿ ವೃಕೋದರನೆನಿಸಿದಾ2ವಿಷಯಂಗಳ ತೊರೆದು ಕಾಷಾಯಾಂಬರ ಧರಿಸಿ |ವಸುಧೆಯೊಳಗೆ ದುರ್ಮತವ ಸೋಲಿಸಿ ||ಅಸಮ ಶ್ರೀ ಪ್ರಾಣೇಶ ವಿಠ್ಠಲ ಪರದೈವವೆಂದು |ಹಸನಾಗಿ ತಿಳಿಸಿದ ಶ್ರೀ ಮಧ್ವಮುನಿಯೆಂಬ 3
--------------
ಪ್ರಾಣೇಶದಾಸರು