ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾರಜನಕ ಮುರಾರಿ ಕಾಣಮ್ಮ ಪ ಅರುಣ ಚರಣ ಕಳದಿರವು ಅಂಕುಶಧ್ವಜ ಅರವಿಂದ ರೇಖಾಂಕ ಪುರುಷನಾರಮ್ಮ ಉರಗಶಯನ ಕರಸರೋಜ ಮಧ್ಯದೊಳಿಟ್ಟು ಸುರರಿಂದರ್ಚನೆಗೊಂಬ ಹರಿಯು ಕಾಣಮ್ಮ 1 ಪೊಳೆವ ಉದಯ ಶಶಿ ಬೆಳಗು ಸೋಲಿಪ ನಾಖಾ ವಳಿಯಿಂದ ಒಪ್ಪುವ ಚಲುವನಾರಮ್ಮಾ ಕುಲಿಶ ಪಾಣಿಗೆ ಒಲಿದಿಳೆಯೊಳು ಬಂದು ಖಂ ಜಲಧಿ ಕಾಣಮ್ಮ 2 ಅಂದುಗೆ ಗೆಜ್ಜೆ ಕಡಗ ಪೊನ್ನೂಪುರ ತೊಡಂದ ಬರುತಿಹ ಪ್ರೌಢನಾರಮ್ಮ ದೃಢ ಭಕ್ತರೆಡೆಯಲಿ ಬಿಡದೆ ನಲಿಯುತಲಿಪ್ಪ ಮೃಡಸುರಪಾದ್ಯರ ಪತಿಯು ಕಾಣಮ್ಮ 3 ಕರಿಗಲ್ಲಿನಂತೆ ಸುಂದರ ಜಂಘೆ ಜಾನುಗ ಳೆರಡು ತರಣಿಯಂತೆ ಇವನಾರಮ್ಮಾ ಪರಮೇಷ್ಠಿ ಪ್ರಳಯದಿ ಸಿರಿಯಿಂದ ನುತಿಗೊಂಬ ಪರಮ ಪುರುಷ ನರಹರಿಯು ಕಾಣಮ್ಮ 4 ಇಭವರಕರದಂತೆ ಉಭಯ ಊರು ಕಟಿ ಪ್ರಭ ವಸನವನುಟ್ಟ ಸುಭಗನಾರಮ್ಮಾ ರಭಸದಿಂದಲಿ ಕಂಭ ಬಿಗಿದು ಪ್ರಹ್ಲಾದಗೆ ಅಭಯವಿತ್ತ ಸುರಪ್ರಭುವು ಕಾಣಮ್ಮ 5 ವಲಿವಿೂಕ ಬಿಲದಂತೆ ಸುಳಿನಾಭಿ ಜಠರತ್ರಿ ವಳಿಗಳಿಂದಲಿ ಬಲು ಪೊಳೆವನಾರಮ್ಮಾ ನಳಿನೋದ್ಭವನ ಪುತ್ರಾಖಿಳ ಲೋಕ ತಾಳಿದಾ ಹಾಲಾಹಲಕಂಠನ ಗೆಳೆಯ ಕಾಣಮ್ಮಾ 6 ಕೌಸ್ತುಭ ವೈಜಯಂತೀ ಸರ ಸಿರಿಯಿಂದಲೊಪ್ಪೋ ನಿರಯನಾರಮ್ಮ ವರಭೃಗುಮುನಿಪನ ಸ್ಪರುಶವನು ತಾಳ್ದ ಕರುಣ ಸಾಗರ ಸಿರಿಧರನು ಕಾಣಮ್ಮ 7 ಅರಿ ಶಂಖ ಸತತ ಪಿಡಿದಿಹ ಚತುರನಾರಮ್ಮ ದಿತಿಜರ ಸದೆದು ದೇವತೆಗಳ ಸಲಹಿದ ಚತುರಾಸ್ಯ ಕೃತಿದೇವಿ ಪತಿಯು ಕಾಣಮ್ಮ 8 ಧರದಿಂದೊಪ್ಪುತಲಿಹ ಪಿರಿಯ ನಾರಮ್ಮಾ ಸಿರಿಯೊಡನೆ ಕ್ಷೀರಶರಧಿ ಯೊಳೊರಗಿಪ್ಪ ವಜ್ರ ಪಂಜರವನು ಕಾಣಮ್ಮ 9 ಸುರಕಪೋಲ ನಾಸ ಸರಸಿಜನಯನ ಪು ಕುಂಡಲಿ ಯುಗಧರನು ಆರಮ್ಮಾ ಶರಧಿ ಮಥನದಲ್ಲಿ ತರುಣಿಯಾಗಿ ಅಸು ರರ ಮೋಹಿಸಿದ ಅಜರನು ಕಾಣಮ್ಮ10 ಬಾಲಶಶಿಯಂತೆ ಫಾಲಕಸ್ತೂರಿನಾಮ ಮೌಳಿ ಸುಳಿಕೇಶ ಬಾಲನಾರಮ್ಮಾ ಮೂಲೇಶನಾದ ಜಗನ್ನಾಥ ವಿಠ್ಠಲ ಮೂರ್ಲೋಕಾಧಿಪ ಶ್ರೀ ಗೋಪಾಲ ಕಾಣಮ್ಮ11
--------------
ಜಗನ್ನಾಥದಾಸರು
ರಂಗನೊಲಿದ ನಮ್ಮ ಕೃಷ್ಣನೊಲಿದ |ಅಂಗನೆ ದ್ರೌಪದಿಗೆ ಅಕ್ಷಯವಸ್ತ್ರವನಿತ್ತುಪಕರಿಯಪುರದ ನಗರದಲ್ಲಿ ಕೌರವರು ಪಾಂಡವರು |ಧರೆಯನೊಡ್ಡಿ ಲೆತ್ತವಿಡಿದು ಜೂಜನಾಡಲು ||ಪರಮಪಾಪಿ ಶಕುನಿ ತಾನು ಪಾಸಿನೊಳಗೆ ಪೊಕ್ಕಿರಲು |ಧರುಮರಾಯ ಧಾರಿಣಿ - ದ್ರೌಪದಿಯ ಸೋತನು 1ಮುದ್ದುಮೊಗದ ದ್ರೌಪದಿಯ ಮುಂದೆಮಾಡಿ ತನ್ನಿರೆಂದು |ತಿದ್ದಿ ತನ್ನ ಮನ್ನೆಯರಿಗೆ ತಿಳಿಯಹೇಳಿದ ||ಮುದ್ರೆಮನ್ನೆಯರು ಬಂದು ದ್ರೌಪದಿಯ ಮುಂದೆ ನಿಂತು |ಬುದ್ಧಿಯಿಂದಲೆಲ್ಲವನು ಬಿನ್ನಹಮಾಡಲು 2ಅಮ್ಮ ಕೇಳೆ ಅರಸುಗಳು ಅಚ್ಚ ಪಗಡೆ ಪಂಥವಾಡಿ |ಹೆಮ್ಮೆಯಿಂದ ಜೂಜಿಗಿಟ್ಟು ಲೆತ್ತವಾಡಲು ||ಧರ್ಮರಾಯ ಸೋತನೆಂದು ಸತ್ಯವಚನಿ ಕೌರವಂಗೆ |ನಿಮ್ಮ ನಿಜದಿ ಸೇರಿ ಆಗ ಕೊಟ್ಟರೆಂದರು 3ಪಟ್ಟಪದವಿ ಅವರಿಗಾಗಿ ಬಡವರಾಗಿ ಇರುವೆವೆಂದರೆ |ಕಿಟ್ಟ ಪಗಡೆ ಪಂಥ ಜೂಜಿದೆಲ್ಲಿ ಒದಗಿತು ? ||ದುಷ್ಟ ಕೌರವನು ಎನ್ನ ಲಜ್ಜೆ - ನಾಚಿಕೆಯ ಕೊಂಡು |ಭ್ರಷ್ಟ ಮಾಡುವನು ಎಂದು ಬಳಲಿ ದ್ರೌಪದಿ 4ಬಾಗಿ ಬಳುಕಿ ಬೆದರಿ ಬಿಕ್ಕಿ ಕಣ್ಣ ನೀರನುದುರಿಸುತಲಿ |ಮಾಗಿಯ ಕೋಗಿಲೆಯಂತೆಕಾಯ ಒಲೆಯುತ ||ಆಗ ಕೃಷ್ಣನಂಘ್ರಿಗಳನು ಅಂತರಂಗದಲಿ ನೆನೆದು |ಸಾಗಿಸಾಗಿ ಹೆಜ್ಜೆ ಇಡುತ ಸಭೆಗೆ ಬಂದಳು 5ವೀರಕರ್ಣ ಅಶ್ವತ್ಥಾಮ ವಿದುರ ಶಲ್ಯ ಭಗದತ್ತರು |ಕ್ರೂರ ಕೌರವ ದುಃಶಾಸನ ಗುರುಹಿರಿಯರು ||ಸಾರುತಿಪ್ಪ ಭಟರು ಪರಿವಾರ ರಾವುತರ ಕಂಡು |ಧಾರಿಣಿಗೆ ಮುಖವ ಮಾಡಿ ನಾಚಿನಿಂತಳು 6ಚೆಂದದಿಂದ ದುರ್ಯೋಧನ ಚದುರಿ ದ್ರೌಪದಿಯ ಕಂಡು |ಮುಂದರಿಯದೆ ಮುಗುಳುನಗೆಯ ಮಾತನಾಡಿದ ||ಅಂದು ಸ್ವಯಂವರದಲ್ಲಿ ಐವರಿಗೆ ಆದ ಬಾಲೆ |ಇಂದು ಎನ್ನ ಪಟ್ಟದರಸಿಗೊಪ್ಪಿದೆಯೆಂದನು7ಮಲ್ಲಿಗೆಯನು ಮುಡಿಯೆ ನಾರಿ ಮುದ್ದುಮೊಗದ ಒಯ್ಯಾರಿಚೆಲ್ಲೆಗಂಗಳ ದ್ರೌಪದಿಯೇ ಬಾರೆ ಎಂದನು ||ಬಿಲ್ಲು ಎತ್ತಲಾರದವನೆ ಬಂಡಣ ಕಾದದಿದ್ದವನೇ |ಹಲ್ಲುಕೀಳುವರೈವರು ಬೇಡವೆಂದಳು 8ಬಟ್ಟೆಬಡಕರೈವರಿಗೆ ಮಿತ್ರೆಯಾಗುವುದು ಸಲ್ಲ |ಪಟ್ಟಿಮಂಚಕೊಪ್ಪುವಂತ ಬಾರೆ ಎಂದನು ||ಕೆಟ್ಟಮಾತನಾಡದಿರೊ ಕ್ರೋಧದಿಂದ ನೋಡದಿರೊ |ರಟ್ಟೆಕೀಳುವರೈವರು ಬೇಡವೆಂದಳು 9ಅಡವಿತಿರುಕರೈವರಿಗೆ ಮಡದಿಯಾಗುವುದು ಸಲ್ಲ |ತೊಡೆಯ ಮೇಲೆ ಒಪ್ಪುವಂತೆ ಬಾರೆ ಎಂದನು ||ಬೆಡಗುಮಾತನಾಡದಿರೊ ಭೀಮಸೇನನ ಗದೆಯು ನಿನ್ನ |ತೊಡೆಯ ಮೇಲೆ ಒಪ್ಪುವದು ಬೇಡವೆಂದಳು 10ಅಚ್ಚ ಪೊಂಬಣ್ಣದ ಬೊಂಬೆ ಆನೆಯಂತೆ ನಡೆವ ರಂಭೆ |ಅಚ್ಚ ಮುತ್ತಿನಂತೆ ಬಿಂಬೆ ಬಾರೆ ಎಂದನು ||ಹೆಚ್ಚು - ಕುಂದನಾಡದಿರೊ ಪರರ ಹೆಣ್ಣ ನೋಡಿದಿರೊ |ಚುಚ್ಚಿ ಹಾಕುವರೈವರು ಬೇಡವೆಂದಳು 11ಎಷ್ಟುಬಿಂಕ - ಬಡಿವಾರವು ಹೆಣ್ಣ ಬಾಲೆಗಿವಳಿಗೆಂದು |ಸಿಟ್ಟಿನಿಂದ ದುರ್ಯೋಧನ ಸಾರಿ ಕೋಪಿಸಿ ||ಉಟ್ಟ ಸೀರೆ ಸೆಳೆಯಿರಿವಳಉಬ್ಬು ಕೊಬ್ಬು ತಗ್ಗಲೆಂದು |ದೃಷ್ಟಿಯಿಂದ ದುಃಶಾಸಗೆ ಸನ್ನೆ ಮಾಡಿದ 12ದುರುಳ ದುಃಶಾಸನ ಬಂದು ದ್ರೌಪದಿಯ ಮುಂದೆ ನಿಂತು |ಕರವ ಪಿಡಿದು ಸೆರಗಹಿಡಿದು ನಿರಿಯ ಸೆಳೆಯಲು ||ಮರುಳು ಆಗದಿರೋ ನಿನ್ನ ರಕ್ತದೊಳಗೆ ಮುಡಿಯನದ್ದಿ |ಕರುಳ ದಂಡೆಯನ್ನೆ ಮಾಡಿ ಮುಡಿವೆನೆಂದಳು 13ಗುಲ್ಲುಗಂಟಿ ಹೆಣ್ಣೆ ನಿನ್ನ ಕಾಡಿ ಬಳಲಿಸುವೆನು ಎಂದು |ಗಲ್ಲದಲ್ಲಿ ಕೈಯನಿಕ್ಕಿ ನಿರಿಯ ಸೆಳೆಯಲು ||ನಿಲ್ಲೊ ನಿಲ್ಲೊ ಪಾಪಿ ನಿನ್ನ ನಾಲಗೆ ಎರಡಾಗಿ ಸೀಳಿ |ಪಲ್ಲಿನಲ್ಲಿ ಕೇಶ ಹಿಕ್ಕಿಕೊಂಬೆನೆಂದಳು 14ಬೆನ್ನಿನಲಿ ಪೆಟ್ಟನಿಕ್ಕಿ ಭಂಡುಮಾಡುವೆನು ಎಂದು |ಕೆನ್ನೆಯಲಿ ಕೈಯನಿಕ್ಕಿ ನಿರಿಯ ಸೆಳೆಯಲು ||ರನ್ನೆ ವೀರಬೊಬ್ಬೆಯಿಕ್ಕಿ ರಭಸದಿಂದ ಸಾರುತಲಿ |ಪನ್ನಗಶಯನ ಕೃಷ್ಣ ಕೃಷ್ಣ ಕಾಯೊ ಎಂದಳು 15ಮಚ್ಚ ಕೂರ್ಮವರಹ ಕಾಯೊ, ಮುದ್ದು ನಾರಸಿಂಹ ಕಾಯೊ |ಹೆಚ್ಚಿನ ವಾಮನನೆ ಕಾಯೊಭಾರ್ಗವ ಕಾಯೊ ||ಅಚ್ಯುತ ರಾಮಕೃಷ್ಣ ಕಾಯೊ ಬೌದ್ಧ ಕಲ್ಕಿರೂಪ ಕಾಯೊ |ಸಚ್ಚಿದಾನಂದ ಸ್ವಾಮಿ ಕಾಯೊ ಎಂದಳು16ಸಜ್ಜನರ ಪ್ರಿಯನೆ ಕಾಯೊ ಸಾಧುರಕ್ಷಕನೆ ಕಾಯೊ |ನಿರ್ಜರವಂದಿತನೆ ಕಾಯೊ ನರಹರಿ ಕಾಯೊ |ಅರ್ಜುನನ ಸಖನೆ ಕಾಯೊ ಆನತಪಾಲಕನೆ ಕಾಯೊ |ಲಜ್ಜೆ - ನಾಚಿಕೆಯ ಕಾಯೊ ಸ್ವಾಮಿ ಎಂದಳು 17ಸಿಂಧು ಸಾಗರದ ಶಯನ ದ್ರೌಪದಿಯ ಮೊರೆಯಕೇಳಿ |ಅಂದು ಉಟ್ಟ ವಸ್ತ್ರಗಳುಅಕ್ಷಯ ವೆಂದನು||ಒಂದು ಎರಡು ಮೂರು ನಾಲ್ಕು ಕೋಟ್ಯಸಂಖ್ಯ ಸೀರೆಗಳು |ನೊಂದು ಬೆಂದು ದುಃಶಾಸನು ನಾಚಿಕುಳಿತನು 18ನೋಡಿದರು ದ್ರೌಪದಿಯ ಮಾನರಕ್ಷ ಲೀಲೆಗಳನು |ಮಾಡಿದರು ಮಾಧವನ ಮುದ್ದು ಸ್ತೋತ್ರವ ||ಮೂಢ ಕೌರವನ ಕೂಡಮಾನಿನಿ ದ್ರೌಪದಿಯು ಪಂಥ - |ವಾಡಿ ತನ್ನ ಪತಿಗಳೈವರನ್ನು ಗೆಲಿದಳು19ಕೇಶಮುಡಿಗಳನ್ನಕಟ್ಟಿ ಕ್ಯೆಯಕಾಲಮಣ್ಣನೊರಸಿ |ಸಾಸಿರನಾಮದ ಕೃಷ್ಣನು ಸುರರ ಪಾಲಿಪ |ವಾಸಿಯುಳ್ಳ ಕೃಷ್ಣ ಎನ್ನ ವಹಿಸಿ ಮಾನಕಾಯ್ದನೆಂದು | ಸಂತೋಷದಿಂದ ದ್ರೌಪದಿಯು ಮನೆಗೆ ಬಂದಳು 20ಇಂತು ಆ ದ್ರೌಪದಿಯ ಮಾನರಕ್ಷ ಲೀಲೆಗಳನು |ಸಂತತದಲಿ ಹಾಕಿಕೇಳಿ ನಲಿವ ಜನರಿಗೆ |ಸಂತಾನ ಸೌಭಾಗ್ಯ ಸಕಲಭೀಷ್ಟೆಗಳನು ಕೊಡುವ |ಕಂತು ಜನಕ ನಮ್ಮ ಪುರಂದರವಿಠಲನು21
--------------
ಪುರಂದರದಾಸರು
ವಾಯುದೇವರು152ಎಣೆಗಾಣೆ ಭುವನದಿ ಶ್ರೀರಾಮಚಂದ್ರನ ಪ್ರಿಯವೀರಹನುಮ ಘನಧೀರ ಪ.ಬ್ರಹ್ಮ ಪಿತೃ ಪಾದಕ್ಕೆರಗಿ ಉಮ್ಮಯದಿ ಕೊಂಡಾಜೆÕಸಮನೆಶರಧಿಗೋಷ್ಪದ ಮಾಡಿ ಹೋಗ್ಯಮ್ಮ ಜಾನಕಿಗೆ ಪರಬೊಮ್ಮನುಂಗುರವಿತ್ತುಹಮ್ಮಿನ ನಿಶಾಚರನಿಗುಮ್ಮಳಿಕೆನಿತ್ತೆ 1ಕ್ರೀಡೆಯಿಂ ದಶಶಿರನನೊಡೆವನಾಯದೆ ಶಿಥಿಲಮಾಡುವನಾಗಿನಾ ಮಾತನಾಡಿ ರಮೆಯಚೂಡಾಮಣಿಯ ತಂದು ನೀಡಿ ರಾಘವಗೆ ಸುಖಮಾಡಿಸಿದೆ ಅಪ್ರತಿಮಾರುತಿ ಅತಿಧೀರ 2ಗರುವಿನ ಖಳನ ವನದತರುವಿಟಪಮೂಲಸಹಮುರಿದು ಕರಚರಣದಿ ತಂದಾನೆರದ ರಿಪುರಕ್ಕಸರ ತರಿ ತರಿದು ಮರಲುಂದಿ ರಭಸದಿಂದಸುರಪುರವನುರುಹಿದೆ 3ಕದನಕರ್ಕಶರಿಪುಗಳೆದೆಯೊದೆದು ಕೋಟಿ ಸಿಂಹದ ರಭಸದಿನಲ್ಲಿ ಬಿಸುಟಿ ಉದಧಿಯಲ್ಲಿಸುದುರ್ಲಭಾದ ನಾಕೌಷಧವ ತಂದು ರಣದಿ ಮಲಗಿದ ವೀರರಸುಗಾಯಿದೆ ಅದ್ಭುತ ಮಹಿಮ 4ಸೀತಾಪತಿಯ ಪ್ರೀತಿಯತ್ಯಾದರದಿ ಪಡೆದು ವಿಷಯಾತೀತನಾಗಿ ವಿಧಾತನಾದೆವಾತಜಾತನೆ ನಿಮ್ಮ ಖ್ಯಾತಿಯ ಹೊಗಳಲಳವೆನಾಥ ಪ್ರಸನ್ನವೆಂಕಟ ದಾತನಿಗೆ ದೂತ 5
--------------
ಪ್ರಸನ್ನವೆಂಕಟದಾಸರು