ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋಪಾಲ ಪಾಲಿಸೊ ನಿನ್ನ ಪಾದಸೇವಕನಿವನೆಂದು ನೀ ಭಾವಿಸಿ ಗೋಪಾಲ ಪಾಲಿಸೊ ಪ ನಾರಿಜನರುಟ್ಟ ಸೀರೆ ಸೆಳೆದು ತಾ ಭಾರಿ ಮರವನ್ನೇರಿ ವಿನೋದವ ತೋರಿದ ಸುರರಿಪು ವೈರಿಯೇ ಎನ್ನಯ ಕೋರಿಕೆ ನಡಸಲಿನ್ಯಾರಿಗೆ ಬೇಡಲೊ 1 ತುಂಗಫಣಿಫಣ ಶೃಂಗದೊಳು ಚರ ಣಂಗಳ ಕುಣಿಸು ಭುಜಂಗಮವರನಿಗೆ ಭಂಗಪಡಿಸಿ ಕೃಪಾಪಾಂಗದಿ ಸಲಹಿದ ಮಂಗಳಮಹಿಮ ರಥಾಂಗಧರ ಬಾಲ 2 ಬಂಧು ಬಳಗ ನೀನೆಂದು ತಿಳಿದು ಮ ತ್ತೊಂದನೆಣಿಸದೆ ಇಂದಿರಾರಮಣನೆ ಎಂದೆಂದಿಗೂ ಸಲಹೆಂದು ನಾ ಬೇಡುವೆ ಸಿರಿ 3 ಖಿನ್ನ ನಿಜ ಜನರನ್ನು ಸಲಹುವ ಪನ್ನಗಶಯನ ಪ್ರಸನ್ನ ಹೃದಯನಾಗಿ ಎನ್ನ ಮನೋರಥವ ಪೂರೈಸುವ ರನ್ಯರು ಯಾರಯ್ಯ ಚಿನ್ಮಯ ಮೂರುತಿ 4 ಕಾಮಜನಕನೆ ನಾಮಗಿರಿ ಸಿರಿ ಸ್ವಾಮಿ ನೃಸಿಂಹನೆ ಕಾಮಿತ ಕೊಡುವಂಥ ಕಾಮಧೇನು ಚಿಂತಾಮಣಿ ಎನ್ನಯೋಗ ಕ್ಷೇಮವು ನಿನ್ನದಯ್ಯ ಸೋಮಕುಲಾಧಿಪ 5
--------------
ವಿದ್ಯಾರತ್ನಾಕರತೀರ್ಥರು
ಲಕ್ಷ್ಮೀದೇವಿ ಅಂಬೋರುಹೇಕ್ಷಣೆ ಅಂಬಾಲತೇ ಜಗ ದಂಬಾ ಪೊರೆಯೆ ಸತತ ಗಂಭೀರ ಗಜಗಮನೆ ಪ ನಂಬಿದೆ ನಿನ್ನ ಪದಾಂಬುಜಯುಗಳವ ಕಂಬು ಕಂಧರಿ ಕನಕಾಂಬರ ಧಾರಿಣಿ ಬೆಂಬಲವೀಯೆ ವಿಳಂಬವ ಮಾಡದೆ ಅ.ಪ `ಯಂಕಾಮಯೇ'ತ್ಯಾದಿ ಶೃತಿಗಳೆಲ್ಲಾ ಪಂಕಜಭವಮುಖ ಸುಮನಸರು ಕಿಂಕರರೆನ್ನುತ ಪೊಗಳುತಿರೆ ಶಂಕೆಯುಂಟೆ ನಿನ್ನ ಮಹಿಮೆಗಳಲ್ಲಿ ಶ ಶಾಂಕ ಸೋದರಿ ಆತಂಕವ ಬಿಡಿಸೆ 1 ನೀರಜಾತಗಣ ಕೃತ ನಿಲಯೇ ಮಾರಜನಕ ಹರಿ ಪ್ರಿಯ ಜಾಯೆ ಕೋರುವೆ ನಿನ್ನಯ ಪರಮದಯೆ ಸಾರಸಾಕ್ಷಿ ಸರಿಯಾರು ನಿನಗೆ ಕರು ಣಾರಸಮಯೆ ಸುವಿಶಾರದೆ ಜನನಿ 2 ಕನ್ಯೆ ನಿಖಿಲ ಸುರನರರೊಳಗೆ ಮಾನ್ಯೆ ನಿನ್ನ ಪೋಲುವರನ್ಯರುಂಟೆ ನಿನ್ನ ದಾಸನಾದ ಎನ್ನ ಮನೋರಥ ವನ್ನು ತಿಳಿಸೆ ಪ್ರಸನ್ನ ಶ್ರೀ ಹರಿಯಲಿ 3
--------------
ವಿದ್ಯಾಪ್ರಸನ್ನತೀರ್ಥರು
ಶ್ರೀವರನೆ ಬಾ ಮುಕುಂದ ಮಾಧವ ಕಾವರನ್ಯರು ಇಲ್ಲ ಗೋವಿಂದ ಕೇಶವ ಪ ವೇದವಿದಿತ ಹರಿ ಸಾದರ ಮುರವೈರಿ ಮೇದಿನೀಪತಿ ಕೋದಂಡ ಸುವಿಹಾರಿ1 ನೋಡಿ ನಿನ್ನಯ ಚರಣ ಹಾಡಿ ನಿನ್ನಯ ಸುಗುಣ ಬೇಡಿ ನಿನ್ನಯ ಕರುಣ ಪಾಡುವೆನೋ ಶರಣ 2 ಮಂಗಳ ಸುವಿಲಾಸ ಶೃಂಗಾರ ಭಾನುಭಾಸ ಮಾಂಗಿರಿವರವಾಸ ರಂಗೇಶ ಶ್ರೀನಿವಾಸ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್