ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ವನಜದಳಾಂಬಕ ದೊರೆಯ ಪ. ಕನಸಿನಲೆ ಕಂಡೆನು ಮನಸಿಜನಯ್ಯನ ದನುಜಸಂಕುಲವನೆಲ್ಲವ ಕ್ಷಣದಿಸವರಿದ ಕಡುಗಲಿರಾಮನ ಅ.ಪ. ವರ ರನ್ನಹಾರ ಕಿರೀಟ ಕೋಟಿತರಣಿಸನ್ನಿಭಸಂಕಾಶ ಕೌಸ್ತುಭ ಶ್ರೀವತ್ಸ ಲಾಂಚಿತವಕ್ಷ | ಕೊರಳೊಳು ಧರಿಸಿರ್ಪ ವರರತ್ನ ಹಾರಂಗಳ್ | ತರುಣಿ ಶ್ರೀ ತುಳಸೀ ವನಮಾಲೆಯಿಂದೊಲಿಯಲ್ | ಪರಮ ಮಂಗಳಮೂರ್ತಿವರದ ಹಸ್ತವನೆತ್ತಿ | ಶರಣಜನ ಮೋಹಿಪ ದುರುಳ ರಕ್ಕಸರ ಬೇರಸವರಿದ ಪಾರಕೀರ್ತಿ | ಅರಿತೆನಾ ತರಳ ಪ್ರಹ್ಲಾದನಂ ಪೊರೆದ ಕರುಣಾಮೂರ್ತಿ 1 ವೇದಪಾರಾಯಣಗೈವ ವರದ್ವಾದಶನಾಮದಿ ಮೆರೆವ ಕೀರ್ತನದಿಂ ಮೈಮರೆವ | ಸಾಧುಸಜ್ಜನವೃಂದ ಭಕ್ತಿಭಾವದಿ ಕೈಕಟ್ಟಿ | ಶ್ರೀಧರಾಚ್ಯುತ ಪಾದ ಸಮ್ಮುಖದಿ ನಿಂದು ಭಜಿಪರ ಪರಮಾದರದೆನೋಡಿ | ಶ್ರೀದೇವಿ ಕೆಲದೋಳ್ ನೆಲಸಿರಲ್ ಮನದಿ ಸಂತಸವು ಮೂಡಿ | ಸಾದರದಿ ಕರೆದಾದರಿಸಿ ಕಾಂಕ್ಷಿತಾರ್ಥವನೀಡಿ | ಮೋದಗೊಳ್ಳುತಿಹ ಶ್ರೀಧರನ ಕಂಡು ಮೈಮರೆದೆನೇನಿವನ ನೋಡಿ 2 ಕನಕಖಚಿತ ರತ್ನಮಂಟಪದ ಮಧ್ಯೆ | ಮಿನುಗುವ ಮಣಿಪೀಠದಿ ವೈದೇಹಿ | ವನಜಾಕ್ಷಿ ಕುಳಿತಿರಲು ಕೆಲದೊಳ್ ಮರುತಾತ್ಮಜ | [ನುನಮಿಸ] (ರ)ಲು ಪರಮಸಂಭ್ರಮದಿ ಸೋದರರು ಸಂಸೇವಿಸೆ | [ವÀನ] ತರಣಿಸುತ ಸಪರಿವಾರ ಸಂಭ್ರಮಿಸೆ, ಶರಣ ವಿಭೀಷ | ಣನು ಜಯಘೋಷವೆಬ್ಬಿಸೆ ವರವಸಿಷ್ಟಾದೈಖಿಲ | ಮುನಿವರ ರಾಶೀರ್ವಚಿಸೆ ಸರಸವಚನವೆರಸಿ ರಘುವರ ವರನೆ ತಾನೆಂದು ತೋರೆ 3
--------------
ನಂಜನಗೂಡು ತಿರುಮಲಾಂಬಾ
ಮುಮುಕ್ಷುಗಳನು ಉಪಚರಿಸುವವ ನೀನೆ ಹರಿಯೆ ಪ ಅಪ್ಪಾ ಮಾಂಗಿರಿ ರಂಗ ಅಪರಾಜಿತ ನೀನೆಂಬುದ ತಿಳಿದೂ [ಉಪಾಧಿಗೊಳಗಾದೆ ನಿನ್ನ ಮರೆತು] ಅ.ಪ ಇನ್ನೆವರ ಒಮ್ಮನದಿ ಯೋಚಿಸಿದ ಫಲವಾಗಿ ನಿನ್ನ ಮಹಿಮೆಯನರಿತೆ ಸಂಪೂರ್ಣವಾಗಿ 1 ರನ್ನಹಾರಗಳನ್ನು ಕಟ್ಟಿರುವೆ ಸಾಲಾಗಿ ನಿನ್ನ ಮೈಬಣ್ಣವನ್ನು ಮುಚ್ಚುವುದಕಾಗಿ 2 ಸಕಲಾಂಗಗಳು ಹೊಳೆವ ಮುತ್ತು ಮಾಣಿಕ್ಯಗಳು ಉಡಿಗೆಯಾಗಿರಲೇನು ಕಾಂಬುವಂಗಗಳು 3 ಅದರಿಂದ ನಿನ್ನ ಮೈ ಮುಖವು ಕೈಕಾಲ್ಗಳು ಕಪ್ಪು ಕಾಣಿಸದಿರದು ಹೇಳುವೆನು ಕೇಳಾ 4 ನೂರಾರು ಯೋಜನದ ದೇಹ ನಿನ್ನದು ತಾಯೆ ನಿನ್ನ ಕೆಲಸಗಳೆಲ್ಲಾ ಅತಿ ವಿಚಿತ್ರದ ಮಾಯೆ 5 ಬೆಳಕ ಬಾಯೊಳಗಿಟ್ಟು ಮತ್ತು ಉಗುಳುವೆ ತಾಯೆ ನಿನ್ನ ವಿಸ್ತೀರ್ಣವನು ನಾನಳೆಯಲರಿಯೆ 6
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್