ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾದ ಭಜಿಸಿದವಗನವರತವಿಜಯವಾಗುವದಕ್ಕೆ ಸಂದೇಹವ್ಯಾಕೆ ಪ ಗಜರಾಜ ವರದನಿಗೆ ನಿಜದಾಸರೆಂದೆನಿಸಿದ್ವಿಜಕುಲದಲ್ಲಿ ಮೆರೆವರಾ ಯಿವರ ಅ.ಪ. ಭವ ಬಂಧು ಮುನಿವೃಂದಹೃದಯ ಸಂಶಯ ಹೊಂದಲು (ಹೊಂದಿಸಲು)ವಿಧಿ ವಿಷ್ಣು ಶಿವರೊಳಗೆ ಉತ್ತಮರ ತೋರದಲೆಮದಡ ಭಾವವ ವೊಹಿಸಲು ||ಒದಗಿ ಭೃಗುಮುನಿಗಳೇ ಸರ್ವೇಶ ವೈಕುಂಠಸದನನೆಂದರುಹಿದವರೊ ಯಿವರೊ 1 ಪುರಂದರ ದಾಸರಾಗಿ | ಈ |ಮೇದನೀ ತಳಕೆ ಬರಲೂಸಾಧು ಸಮ್ಮತವಾದ ಪದಪಂಚಲಕ್ಷಕೆ (ತ್ರಿ)ಪಾದವೇ ನ್ಯೂನವಿರಲು | ಆ |ಪಾದವನು ಪೂರ್ತಿಪರು ಮತ್ಪುತ್ರರಿವರೆಂದುಆದಿಯಲಿ ಸೂಚಿಸಿರಲೂ ||ಭೂದೇವ ಜನ್ಮದಿಂದಾ ದಾಸರಭಿಲಾಷೆಸಾಧಿಸಿದ ಸದಯರಿವರೊ ಯಿವರೊ 2 ವೀ ಯೆನಲು ವಿಮಲತೆಯು ಜ ಯೆಂದವಗ ಜಯವುಯ ಯೆನಲು ಯಾಗಫಲವುರಾ ಯೆನಲು ರಾಜ್ಯವು ಯ ಯೆನಲು ಯಮಭಟರುನೋಯಿಸರು ಯಿವನ ಕುಲವೂ ||ಈ ಯಾವದಕ್ಷರವ ಓಂಕಾರ ಸಹ ಪಠಿಸೆಕಾಯಭವ ಪಿತನ ಬಲವೊ ||ಜಾಯಾ ಸಮೇತ ಮೋಹನ್ನ ವಿಠಲನ ಪಾದತೋಯಜ ಭ್ರಮರರಿವರೊ ಯಿವರೊ 3
--------------
ಮೋಹನದಾಸರು
ಬಾರಯ್ಯ ಬೇಗ ಶ್ರೀ ಶ್ರೀನಿವಾಸ ಭಕ್ತರ ನುಡಿಗೆ ಪ. ಬಾರೋ ನಿನ್ನ ಮುಖ ತೋರೊ ತ್ವರಿತದಲಿ ಸಾರಸಾಕ್ಷ ನಿನ್ನ ಸಾರಿದೆನಯ್ಯ ಅ.ಪ. ವೈಕುಂಠದಿಂದ ಬಂದೆಯೊ ಗಿರಿಗೆ | ಲಕ್ಷ್ಮಿಯು ತಾ ಪೋಗೆ ಬೇಕಾಗಲಿಲ್ಲವೊ ಅರಮನೆ ನಿನಗೆ | ಮುನಿಗಳ ವರದನಿಗೆ ಬೇಕಾದ್ವೈಭವ ನೀ ಕೈಕೊಳುತ ಸಾಕುತಲಿಪ್ಪೆಯೊ ನೀ ಕರೆದವರನು 1 ಶ್ರೀಸ್ವಾಮಿ ಪುಷ್ಕರಣಿಯ ದಡದಲ್ಲಿ | ನೀ ವಾಸಿಸುತಲ್ಲಿ ಸೇವಾದಿಗಳನು ಬಗೆಬಗೆ ಕೊಳ್ಳುತಲಿ | ಸುಜನರ ಪೊರೆಯುತಲಿ ಈ ವಿಧದಿಂದಲಿ ಭಾವಜನಯ್ಯನೆ ಪಾವಕಸಖನೊಳು ಪಾವನನಾಗಿಹೆ 2 ವರ್ಣಿಸಲರಿಯೆ ನಿನ್ನನು ದೊರೆಯೆ | ಲೋಕದಿ ಅಚ್ಚರಿಯೆ ಘನ್ನ ಸುಮಹಿಮನೆ ಬೇಡುವದರಿಯೆ | ನೀನೆ ಕೈಪಿಡಿಯೆ ಮುನ್ನ ಮಾಡಿದ ಘನ್ನ ಪಾಪಗಳು ಇನ್ನಿರಲಾರವೊ ಮನ್ನಿಸಿ ಪೊರೆಯೊ 3 ಜಗಸೃಷ್ಟಿಯಿಂದ ಜೀವರ ಮಾಳ್ಪೆ | ಜೀವರ ಸೃಷ್ಟಿಪೆ ತ್ರಿಗುಣಾದಿಗಳಿಂದ ತಿರುಗಿಸುತಿರ್ಪೆ | ಕರ್ಮದ ತೆರೆಮಾಳ್ಪೆ ವಿಗಡ ದೇಹದೊಳು ಬಗೆ ಬಗೆ ದೇವರು ತಗಲಿ ನಿನ್ನ ಪದನಗಧರ ಕಾಣರೊ 4 ಕಣ್ಣ ಬಿಟ್ಟಿರುವೆ ಬೆನ್ನೊಳೆ ಬೆಟ್ಟವೆ | ಮಣ್ಣ ತಿನುತಿರುವೆ ಚಿಣ್ಣ ನಿನಗೊಲಿದು ಚಿಣ್ಣನಾಗ್ವೆ | ಬೆನ್ನೊಳು ಪರಶುವೆ ಹಣ್ಣು ಕೊಟ್ಟವಳಿಗೆ ಒಲಿದು ಗೋಪಿಯರ ಕಾಯ್ದು ಬಣ್ಣಗೆಟ್ಟು ಹಯವನ್ನೇರಿದೆ5 ಆಕಾಶರಾಯನ ಮಗಳ ತಂದೆ | ಈ ಗಿರಿಯಲಿ ನೀನೆ ಸಾಕುವ ಬಿರುದು ನಿನ್ನದೆಂದೆ | ನೀ ಕಾಯಲೆಬೇಕೆಂದೆ ನೂಕಿ ಎನ್ನ ಭವತಾಪನೀಗಲೆ ಶ್ರೀಕಳತ್ರ ನಿನ್ನ ಭಕ್ತರೊಳಿಡಿಸೊ 6 ಅಪಾರಮಹಿಮ ಅದ್ಭುತಚರಿತ | ಶೇಷಾದ್ರಿಯೊಳ್ ನಿರುತ ವ್ಯಾಪಾರ ಮಾಡುತ ಗುಪ್ತದೊಳಿರುತ | ನಿಜ ಭಕ್ತಗೆ ಕಾಣುತ್ತ ಪರಿ ಅದ್ಭುತ ಚರಿತೆಯ ತೋರುವ ಗೋಪಾಲಕೃಷ್ಣ ವಿಠ್ಠಲನೆ ನೀ ಕಾಯೊ 7
--------------
ಅಂಬಾಬಾಯಿ
ಮಂಗಳಂ ಜಯ ಮಂಗಳಂ ಜಯರುಕ್ಮ ಕಿರೀಟಿಗೆ ಮಂಗಳಂ ಪ ಮುರಹರ ರಾಣಿಗೆ | ಸುಖಕರ ವಾಣಿಗೆ |ಮುಖರಿತ ವೇಣಿಗೆ ಮಂಗಳಂ 1 ಕಿಸಲಯ ಪಾಣಿಗೆ | ರಸಲಯ ಜಾಣೆಗೆ |ಬಿಸರುಹ ಬಾಣಿಗೆ ಮಂಗಳಂ 2 ಮಂದರ ಸದನಿಗೆ | ಕುಂದರ ರದನಿಗೆ |ಚಂದಿರ ವದನಿಗೆ ಮಂಗಳಂ 3 ಸುರದರಶ ಮುನಿಗೆ | ಹರಗಿರ ಮುನಿಗೆ |ಕರಿವರ ಗಮನಿಗೆ ಮಂಗಳಂ4 ಕೃತಮತಿವಶಳಿಗೆ | ಶ್ರುತಿನುತಿ ಯಶಳಿಗೆ |ದ್ಯುತಿ ತತಿ ದಿಶಗಳಿಗೆ ಮಂಗಳಂ 5
--------------
ರುಕ್ಮಾಂಗದರು
ಸತಿ ಸಹಿತ ಕಶ್ಯಪರು ರತುನದಾರತಿ ಪಿಡಿದು ರತಿಪತಿಪಿತನಿಗೆ ಅತಿಹರುಷದಿ ಅತಿಶಯದ ಮಹಿಮೆಗಳ ಪೊಗಳುತಲಿ ಶ್ರೀಹರಿಗೆ ಕುಶಲದಾರತಿ ಎತ್ತಿಬೆಳಗಿದರು ನಿತ್ಯ ಶುಭ ಮಂಗಳಂ 1 ಅನಸೂಯ ಸಹಿತ ಅತ್ರಿಯರು ಬೇಗನೆ ಬಂದು ನಳಿನಾಕ್ಷನ ಚರಣಕ್ಕೆರಗಿ ನಿಂದು ವಿಧವಿಧದ ಆಟಗಳ ಆಡಿದ ಶ್ರೀಹರಿಗೆ ಪದುಮದಾರತಿ ಎತ್ತಿ ಬೆಳಗಿದರು ನಿತ್ಯ ಶುಭಮಂಗಳಂ 2 ಶೀಲವತಿಯಾದ ಸುಶೀಲೆ ಸಹಿತ ಭಾರದ್ವಾಜ ಋಷಿಗಳು ತಮ್ಮ ಆಶ್ರಮದಲಿ ಶ್ರೀಲಕುಮಿವಲ್ಲಭಗೆ ಶೀಘ್ರದಿಂದಲಿ ತಾವು ಗೋಮೇಧಿಕದಾರುತಿ ಬೆಳಗಿದರು ನಿತ್ಯ ಶುಭಮಂಗಳಂ 3 ಕುಮುದ್ವತಿ ಸಹಿತ ವಿಶ್ವಾಮಿತ್ರ ಋಷಿಗಳು ಕನಕ ಮಂಟಪದಿ ಮೆರೆಯುವ ದೇವಗೆ ಸನಕಾದಿವಂದ್ಯನಿಗೆ ವನಜಾಕ್ಷಿಯರಸನಿಗೆ ಕನಕದಾರತಿ ಎತ್ತಿ ಬೆಳಗಿದರು ನಿತ್ಯ ಶುಭಮಂಗಳಂ 4 ಪ್ರಹ್ಲಾದವರದನಿಗೆ ಅಹಲ್ಯೆಯ ಸಹಿತದಿ ಫುಲ್ಲಲೋಚನಪ್ರಿಯಗೆ ಋಷಿಗೌತಮ ಮಲ್ಲಿಗೆಹಾರಗಳು ಧರಿಸಿ ಶೋಭಿಪ ಹರಿಗೆ ಚಲ್ವನವರತ್ನದಾರತಿ ಎತ್ತುತಾ ನಿತ್ಯ ಶುಭಮಂಗಳಂ 5 ರೇಣುಕಾ ಸಹಿತ ಜಗದಗ್ನಿ ಋಷಿಗಳು ತಮ್ಮ ಧ್ಯಾನಗೋಚರನಾದ ಪರಮಾತ್ಮನ ಮಾನಿನಿಮಣಿ ಲಕುಮಿಯೊಡನೆ ಶ್ರೀಕೃಷ್ಣನಿಗೆ ನೀಲಮಾಣಿಕ್ಯದ ಆರತಿ ಎತ್ತುತ ನಿತ್ಯ ಶುಭಮಂಗಳಂ 6 ಸತಿ ಸಹಿತ ವಶಿಷ್ಠ ಋಷಿಗಳು ಇಷ್ಟಮೂರುತಿಯಾದ ವರಕಮಲನಾಭ ವಿಠ್ಠಲನ ಸ್ಮರಿಸುತ ನಿತ್ಯ ನವರತ್ನದಾರತಿ ಬೆಳಗಿದರು ನಿತ್ಯ ಶುಭಮಂಗಳಂ 7 ಮಂಗಳಂ ಸಪ್ತಋಷಿಗಳು ಪರ್ಣಶಾಲೆಯೊಳು ಗಾಂಗೇಯನುತನ ಪೂಜಿಸಿ ಹರುಷದಿ ಸಂಗೀತಲೋಲನಿಗೆ ಶೃಂಗಾರ ಪುರುಷನಿಗೆ ರಂಗಿನಾರತಿಯೆತ್ತಿ ಬೆಳಗಿದರು ನಿತ್ಯ ಶುಭಮಂಗಳಂ 8
--------------
ನಿಡಗುರುಕಿ ಜೀವೂಬಾಯಿ
ಅಂದೆ ನಿರ್ಣಯಸಿದರು ಕಾಣೋ |ಇಂದಿರಾಪತಿ ಪರದೈವತವೆಂಬುದ ಪಅಂದು ಚತುರ್ಮುಖ ನಾರದನಿಗೆ ತನ್ನ |ತಂದೆ ಶ್ರೀಹರಿ ಪರದೈವವೆಂದು ||ಸಂದೇಹಗಳ ಪರಿಹರಿಸಿಹ ದ್ವಿತೀಯದಸ್ಕಂಧದೊಳಯ್ದನೆಯ ಅಧ್ಯಾಯದಲಿ 1ಅಂದು ಕಪಿಲದೇವ ದೇವಹೊಲೆಗೆ ತಾನು |ಚೆಂದದ ತತ್ತ್ವವನೆಲ್ಲ ಬೋಧಿಸಿದ ||ಅಂದದಲರ್ಜುನ - ಉದ್ದವರಿಗೆ ಅಂದಾ - |ನಂದದಿ ಗೀತಾಶಾಸ್ತ್ರವನೊರೆದನೆಂದು 2ವೇದೈಶ್ಚ ಸರ್ವೋರಹಮೇವ ವೇದ್ಯಃ |ವೇದವಿಧಾಯಕ ನಾಮದವನು ||ವೇದಾಕ್ಷರಗಳು ಹರಿನಾಮಗಳೆಂದು |ವೇದಾಂತ ಸಿದ್ಧಾಂತಗಳಲಿ ಪೇಳಿದರೆಂದು 3ರಾಜಸ -ತಾಮಸ ಪೌರಾಣಗಳಿವು |ರಾಜಸ -ತಾಮಸ ಜೀವರಿಗೆ ||ರಾಜಸ -ತಾಮಸ ಗತಿಗೋಸ್ಕರ ಮುನಿ - |ರಾಜ ವ್ಯಾಸನು ಮೋಹಕವೆಂದು ಪೇಳಿದ 4ಬಿಡು ಪಾಷಂಡಮತದ ದುರ್ಬುದ್ಧಿಯ |ಬಿಡದೆಮಾಡು ವೈಷ್ಣವಸಂಗವ ||ಧೃಡಭಕ್ತಿಯಿಂದ ಶ್ರೀಹರಿಯ ಪೂಜಿಸಿದರೆ |ಮೃಡಪ್ರಿಯ ಪುರಂದರವಿಠಲನೊಲಿವನೆಂದು 5
--------------
ಪುರಂದರದಾಸರು
ಜಯಮಂಗಳಂನಿತ್ಯ ಶುಭಮಂಗಳಂ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಜಯತುಂಗಲಕ್ಷ್ಮೀಪತಿ ನರಸಿಂಹಗೆಪ.ಕಂದರ್ಪನಯ್ಯಗೆ ಕೋಟಿ ಲಾವಣ್ಯಗೆಮಂದರೋದ್ಧಾರ ಮಧುಸೂದನನಿಗೆ ||ಕಂದ ಪ್ರಹ್ಲಾದನನು ಕಾಯ್ದ ದೇವನಿಗೆ ಶ್ರೀ -ಇಂದಿರಾ ರಮಣ ಸರ್ವೋತ್ತಮನಿಗೆ 1ಕರಿರಾಜ ವರದನಿಗೆ ಕರುಣಾ ಸಮುದ್ರನಿಗೆಸರಸಿಜೋದ್ಭವ - ಭವವಂದ್ಯ ಹರಿಗೆ ||ಗಿರಿಯರಸು ಕಾವೇರಿಪುರದ ರಂಗಯ್ಯಗೆಗಿರಿರಾಜಪತಿವಂದ್ಯ ಸುರರ ನಿಧಿಗೆ 2ಅಂಬರೀಷನ ಶಾಪ ಅಪಹರಿಸಿದವನಿಗೆತುಂಬುರ ನಾರದ ಮುನಿವಂದ್ಯಗೆ ||ಕಂಬುಕಂಧರಪುರಂದರ ವಿಠಲರಾಯಗೆಅಂಬುಜನಾಭಗೆ ಅಜನಪಿತಗೆ 3
--------------
ಪುರಂದರದಾಸರು
ಮಂಗಲಂತ್ರಿಪುರಸುಂದರಿ ಬನ ಶಂಕರಿಗೆ |ಮಂಗಲಂ ಸನ್ನಿಧಿಯ ಕೌಮಾರಿಗೆ |ಮಂಗಲಂ ಭ್ರಮರಾಂಬದೇವಿ ಚೌಡೇಶ್ವರಿಗೆ |ಮಂಗಲಂ ಶ್ರೀ ಲಕ್ಷ್ಮೀ ಮಹಾ ಮಾಯಿಗೆ | ಮಂಗಲಂ ಜಯಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಕಮಲದಳ ನಯನಿಗೆ ಕಮಠಾವಲೋಚನೆಗೆ ವಿಮಳವರವೀವ ಚೂಡಿದರಕೊರಳಿಗೆ |ದ್ಯುಮಣಿಶಶಿಕಿರಣದ ಶ್ರವಣ ಭೂಷಣಿಗೆ ಭ್ರಮರಾರಿ ನಾಸಿಕದಮಣಿಮೌಕ್ತಿಗೆ ಮಂಗಲಂ ಜಯಶುಭಮಂಗಲಂ1ಓಂಕಾರ ವದನಿಗೆ ವೇದಾಂತ ರದನಿಗೆ |ಪಂಕವಿರಹಿತದ ಚಿದ್ರಸ ಜಿವ್ಹೆಗೆ |ಅಂಕದಲಿ ಬ್ರಹ್ಮಪೀಯೂಷರಸ ಸುರಿವ ರುಣದಂಕುರಿಪಪವಳಮಣಿರುಚಿಯ ಧರಿಗೆ ಮಂಗಳ2ಕನಕಕಲಶ ತೋಳಿಗೆ ಕಲಶ ಕುಚಯುಗಳಿಗೆ |ಚಿನಕ ಪೂರ್ವಣ್ಯ ಕಂಚುಕದ ರುಚಿಗೆ ಸನಕಾದಿಗಳತಲೆಯ ಮೇಲಿಡುವ ಹಸ್ತಯುಗ ವನಜೆಶ್ರೀದೇವಿಯಂಗುಲಿಯ ನಖಕೆ ಮಂಗಳ3ಹಸ್ತದಾಭರಣಿಗೆ ಕೊರಳ ಭೂಷಣಿಗೆನಿಜನಿತ್ಯಮಂಗಳಿಗೆಹಾಟಕವರ್ಣಿಗೆ |ರತ್ನ ಬೈತಲಿಗೆ ವಜ್ರಾಣಿ ಪಾರಂಗಣಿಗೆ ನಿಜ |ಮುತ್ತಿನ ಬೊಟ್ಟು ಕುಂಕುಮದ ಫಣಿಗೆ ಮಂಗಳ4ಮರಗು ಮಲ್ಲಿಗೆ ಮುಡಿಗೆ ದುಂಡ ದಂಡಿಯತಲೆಗೆ ಕೊರಳ ಹಾರವ ತುದಿಯ ಕಾಲಿಂದಿಗೆ |ಪರಿಕ್ರಮದ ತಾಂಬೂಲವದನನಸು ನಗೆ ಮೊಗದಪರಿಮಳದ ಘನಸಾರತನುಲೇಪಿಗೆ | ಮಂಗಳ5ಪರಬ್ರಹ್ಮರೂಪಿಗೆ ಪರಾತ್‍ಪರ ಶಂಕರಿಗೆ ನಿರುಪಮಾನಂದಶ್ರೀ ಮಹಾಲಕ್ಷ್ಮಿಗೆ | ಶಿರಸ ಪೂಜೆಯ ಅರಳು ಮಲ್ಲಿಗೆಯುಕೃಪೆಯಿಂದಜರಿದುಉದರಿದವು ಗಿರಿದ್ವಾರದಲ್ಲಿ ||ಮಂಗಳ6
--------------
ಜಕ್ಕಪ್ಪಯ್ಯನವರು