ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವರ್ಯರನು ಭಜಿಸೋ ರಾಘವೇಂದ್ರ ಗುರುವರ್ಯರನು ಭಜಿಸೋ ಪ ಧರೆತಲದಲಿ ಅವತರಿಸಿ ಸುಜನರನು ಪರಿಪÀರಿ ವಿಧದಲಿ ಪೊರೆಯುತಲಿರುವ ಸದ್ ಅ.ಪ ನಳಿನನಾಭ ಶ್ರೀರಾಮರ ರುಚಿರ ಪದಗಳ ಸಂತತದಿ ಭಜಿಸಿ ಖಳರ ದುರ್ಮತಗಳನಳಿಸಿ ದಶಪ್ರಮತಿ ಗಳ ದಿವ್ಯ ಶಾಸ್ತ್ರಾರ್ಥಗಳನು ಸುಲಭದಲಿ ಇಳೆಯೊಳು ಸುಜನಕೆ ತಿಳಿಯುವ ತೆರದಲಿ ಬೆಳಗುತಿರುವ ಪರಿಮಳ ಮುಖವರ ಗ್ರಂಥ ಗಳನು ರಚಿಸುತ ಉಳಿಸಿ ಸುಮತಿಯನು ಇಳೆಯೊಳು ವರಮಂತ್ರ ನಿಲಯದಿ ನೆಲೆಸಿದ 1 ಮಂಗಳಕರಳೆಂದು ಚರಿತೆಯುಳ್ಳ ತುಂಗಾತೀರದಿ ನೆಲೆಸಿ ಕಂಗೊಳಿಸುತ ಚರಣಂಗಳ ಭಜಿಪರ ಸಂಘಕ್ಕೆ ತಮ್ಮ ಅಪಾಂಗ ವೀಕ್ಷಣದಿಂದ ಮಂಗಳ ತತಿಗಳ ನೀಡಿ ಅವರ ಆಘ ಭಂಗವಗೈಯುತ ಅನುದಿನದಲಿ ದ್ವಿಜ ಪುಂಗವ ನಿಕರದಿ ಪೂಜೆಯಗೊಂಬ ಉ ತ್ತುಂಗ ಚರಿತರಥಾಂಗಧರ ಪ್ರಿಯ 2 ಮುನ್ನ ಪ್ರಹ್ಲಾದನೆನೆಸಿ ಶ್ರೀ ನರಹರಿಯನ್ನು ಸತತ ಭಜಿಸಿ ಇನ್ನೊಂದು ಜನುಮದಿ ಮಾನ್ಯ ಶ್ರೀ ವ್ಯಾಸಮುನಿ ಯೆನ್ನಿಸಿ ಖಲಮತವನ್ನು ಖಂಡಿಸುತಲಿ ಚಿನ್ನ ಶ್ರೀಕೃಷ್ಣನ ಉನ್ನತ ಮಹಿಮೆಗ ಳನ್ನು ಬೋಧಿಸುತ ತನ್ನ ಭಕುತಜನ ರನ್ನು ಹರುಷದಲಿ ಧನ್ಯರೆನಿಸಿದ ಪ್ರ ಸನ್ನ ಶ್ರೀರಾಮರ ಭಕುತ ಶಿರೋಮಣಿ 3
--------------
ವಿದ್ಯಾಪ್ರಸನ್ನತೀರ್ಥರು
ಗೋಪಾಲ ಪಾಲಿಸೊ ನಿನ್ನ ಪಾದಸೇವಕನಿವನೆಂದು ನೀ ಭಾವಿಸಿ ಗೋಪಾಲ ಪಾಲಿಸೊ ಪ ನಾರಿಜನರುಟ್ಟ ಸೀರೆ ಸೆಳೆದು ತಾ ಭಾರಿ ಮರವನ್ನೇರಿ ವಿನೋದವ ತೋರಿದ ಸುರರಿಪು ವೈರಿಯೇ ಎನ್ನಯ ಕೋರಿಕೆ ನಡಸಲಿನ್ಯಾರಿಗೆ ಬೇಡಲೊ 1 ತುಂಗಫಣಿಫಣ ಶೃಂಗದೊಳು ಚರ ಣಂಗಳ ಕುಣಿಸು ಭುಜಂಗಮವರನಿಗೆ ಭಂಗಪಡಿಸಿ ಕೃಪಾಪಾಂಗದಿ ಸಲಹಿದ ಮಂಗಳಮಹಿಮ ರಥಾಂಗಧರ ಬಾಲ 2 ಬಂಧು ಬಳಗ ನೀನೆಂದು ತಿಳಿದು ಮ ತ್ತೊಂದನೆಣಿಸದೆ ಇಂದಿರಾರಮಣನೆ ಎಂದೆಂದಿಗೂ ಸಲಹೆಂದು ನಾ ಬೇಡುವೆ ಸಿರಿ 3 ಖಿನ್ನ ನಿಜ ಜನರನ್ನು ಸಲಹುವ ಪನ್ನಗಶಯನ ಪ್ರಸನ್ನ ಹೃದಯನಾಗಿ ಎನ್ನ ಮನೋರಥವ ಪೂರೈಸುವ ರನ್ಯರು ಯಾರಯ್ಯ ಚಿನ್ಮಯ ಮೂರುತಿ 4 ಕಾಮಜನಕನೆ ನಾಮಗಿರಿ ಸಿರಿ ಸ್ವಾಮಿ ನೃಸಿಂಹನೆ ಕಾಮಿತ ಕೊಡುವಂಥ ಕಾಮಧೇನು ಚಿಂತಾಮಣಿ ಎನ್ನಯೋಗ ಕ್ಷೇಮವು ನಿನ್ನದಯ್ಯ ಸೋಮಕುಲಾಧಿಪ 5
--------------
ವಿದ್ಯಾರತ್ನಾಕರತೀರ್ಥರು
ಸೇವೇ ಶ್ರೀರಮಣಂ ಸದಾ ಸೇವಕಾರ್ತಿಹರಣಂ ಪ ಪಾವನ ವಾಘ್ರಾಚಲವಿಹರಣಂ ಅ.ಪ ಪುಂಡರೀಕಾಯತ ನೇತ್ರಂ ಮಂಡಿತ ಖಗಪತಿಪತ್ರಂ ಖಂಡಪರಶುಕೃತಸನ್ನುತಿಪಾತ್ರಂ ಚಂಡಕಿರಣಶತಸನ್ನಿಭಗಾತ್ರಂ7 1 ಕುಲಿಶಧರಾತ್ಮಜ ಮಿತ್ರಂ ಸುಲಲಿತ ಕರಧೃತ ಗೋತ್ರಂ ಕಲಿತರಥಾಂಗಧರಾಸಿತನುತ್ರಂ ಕಲಿಮಲಖಂಡನ ನಿಜಚಾರಿತ್ರಂ2 ಭಾವಿತಜನ ಮಂದಾರಂ ಭಾವಜಜನಕಮುದಾರಂ ಸೇವಕರಕ್ಷಣ ಧೃತಶರೀರಂ ದೇವಸಮೂಹಾಕಲಿತ ವಿಹಾರಂ3 ಶಂಕರಹೃದಯಧ್ಯೇಯಂ ಕಿಂಕರಜನ ಸಮುದಾಯಂ ನಿಜನಾಮಧೇಯ 4 ಪರಮಪುರುಷಮನವಂದ್ಯಂ ಸರಸಗುಣಾಕರಮಾದ್ಯಂ ವರದವಿಠಲಮಖಿಲಾಗಮಬೋಧ್ಯಂ 5
--------------
ವೆಂಕಟವರದಾರ್ಯರು