ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಚ್ಚರಾದರು ದೇವಗಣರಿಂದು ನಮ್ಮ ಲಕ್ಷ್ಮೀರಮಣ ಕೃಷ್ಣ ರಥವನೇರುವನೆಂದು ಪ. ಶಿಂಶುಮಾರ ಚಕ್ರದಂಶಮಕರ ತಿ- ಗ್ಮಾಂಶು ಸಂಕ್ರಮಿಸುವ ಸಮಯದಲಿ ಕಂಸಮರ್ದನ ಯದು ವಂಶಾಬ್ಧಿ ಚಂದ್ರ- ವಿಪಾಂಗಗಮನನಾಗಿ ವೀಧಿಗೆ ಬಹನೆಂದು 1 ಕಂದನ ಸಂಭ್ರಮ ತಂದೆಗೆ ಸುಖಕರ- ವೆಂದು ಪೇಳುವ ಮಾತ ನಿಜವ ದೋರಿ ಮಂದರಧರ ಮನ್ಮಥನ ಕೇತು ಬೆಳಗುವಾ- ನಂದದಿ ರಥವೇರುತ್ತಿಂದು ಬರುವನೆಂದು 2 ಮೋಕ್ಷದಾಯಕ ಕಮಲಾಕ್ಷ ಕೃಷ್ಣನ ಸ- ತ್ಕಟಾಕ್ಷ ಸಂಪಾದಿಪಪೇಕ್ಷೆಯಲಿ ತ್ರ್ಯಕ್ಷಾಧ್ಯಕ್ಷಲೋಕಾಧ್ಯಕ್ಷರೆಲ್ಲರು ಕೂಡಿ ಪಕ್ಷಿವಾಹನನನ್ನು ಈಕ್ಷಿಪ ತವಕದಿ 3 ಪೃಥೆಯ ಕುಮಾರನ ರಥವ ನಡಸುತತಿ- ರಥರನು ಗೆಲಿಸಿ ಸಾಮ್ರಾಜ್ಯವಿತ್ತ ಕಥೆಯ ಕೇಳ್ಪರ ಮನೋರಥಗಳ ಕೊಡುವ ಮ- ನ್ಮಥನ ಜನಕ ಮುಕ್ತಿ ಪಥವ ತೋರುವನೆಂದು 4 ಸಿದ್ಧಿ ವಿಘ್ನಮುಖ ದೋಷಭೇಷಜ ಭಕ್ತಿ ಸಿದ್ಧ ಜಪರಿಗೆ ಸಿದ್ಧಿಸುವನೆಂದು ಮಧ್ವಮುನಿಯು ತಂದಿಲ್ಲಿರಿಸಿ ಪೂಜಿಸಿದಂಥ ಸಿದ್ಧಾಂತವೇದ್ಯನಿರುದ್ಧನಿಲ್ಲಿಹನೆಂದು 5 ಧಾರುಣಿಯೊಳಗಿನ ವಿಷ್ಣುಭಕ್ತರ ಸಂಘ ಸೇರಿ ಸಂತೋಷದಿ ಜಯವೆನಲು ಪಾರಿವ್ರಾಜರು ಕೂಡಿ ಪರತತ್ವ ನುಡಿಯೆ ಸ- ರ್ಪಾರಿಯನೇರಿ ಸಮೀರೇಡ್ಯಬಹನೆಂದು 6 ಮಾಯಿಜನರ ಮುರಿದೊತ್ತುತ ತತ್ವರ- ಸಾಯನ ಸುಧೆಯ ಸಜ್ಜನರಿಗಿತ್ತು ವಾಯುಮುನಿಯು ಪ್ರತಿಷ್ಠೆಯ ಗೈದ ಪುರುಷಾರ್ಥ ದಾಯಕ ವೆಂಕಟರಾಯನೀತನೆಯೆಂದು 7
--------------
ತುಪಾಕಿ ವೆಂಕಟರಮಣಾಚಾರ್ಯ
ಶೌರಿ ಬಾರೋ ಶ್ರೀಹರಿ ಪ ಬಾರೋ ಬಾರೋ ಕರುಣಾನಿಧಿ ನಿನ್ನನು ಬಾರಿ ಬಾರಿಗೆ ಸಿರಬಾಗಿ ನಮಿಸುವೆನು ಅ.ಪ ಮಾರನಯ್ಯನೆ ಮಂಗಳರೂಪ ತೋರೊ ಬೇಗನೆ ಸಾರಸಾಕ್ಷ ಸನ್ಮಂಗಳ ಮಹಿಮನೆ ತೋರೋ ನಿನ್ನ ಮಹಾ ಮೀನರೂಪವನು 1 ಸುಂದರಾನನ ಚಂದಿರವದನ ಮಂದಹಾಸನೆ ದುರಿತ ಕಳೆವಂದದಿ ಬೆನ್ನಿಲಿ ಮಂದರವೆತ್ತಿದ2 ಆದಿದೈತ್ಯನು ಭೂದೇವಿಯಪಹಾರ ಗೈದನು ಆ ದಿತಿಜರ ಸಂಹಾರ ಮಾಡಲು ನೆಲ ವರಾಹ ಬೇಗ 3 ಕಂದನಾಡಿದ ಆ ನುಡಿ ಕೇಳಿಯಾನಂದ ತಾಳಿದ ಮಂದರೋದ್ಧರ ಮುಚುಕುಂದ ವರದ ಸುರ- ಗಂಗೆಯ ಪಿತ ನರಸಿಂಗರೂಪದಿ 4 ಬಾಲರೂಪದಿ ಬೇಡಿದ ದಾನ ಭೂಮಿ ಮಾತ್ರದಿ ಬೇಡಿದುದನೆ ಕೊಟ್ಟಾಮಹೀಪಾಲನ ದೂಡಿ ಪಾತಾಳಕ್ಕೆ ಬಾಗಿಲ ಕಾಯ್ದೆ 5 ಶೂರ ರಾಜರ ಸಂಹಾರ ಮಾಡಿ ತೋರಿ ಶೌರ್ಯವ ಸಾಗರಶಯನಗೆ ತೋರಿ ಪರಾಕ್ರಮ ಶೂಲಿಯ ಧನುವಿತ್ತೆ ರೇಣುಕಾತ್ಮಜ 6 ವಾನರಾಧಿಪ ಹಗಲಿರುಳು ಭಕ್ತಿಮಾಡಿ ಧ್ಯಾನಿಪ ಶ್ರೀ ಮಾನಿನಿಯಳ ಕೈಪಿಡಿಯುತ ಅಯೋಧ್ಯದಿ ಮೆರೆದ ಶ್ರೀರಾಮ ಚಂದಿರನೆ 7 ಪಾಂಡುನಂದನ ಮಾಡಿದ ನಿನ್ನ ಬಂಡಿ ಬೋವನ ಸಂದೇಹಿಸದಲೆ ಅಂದು ಅವರ ಮನೆ ಎಂಜಲ ಬಳಿದ ಮುಕುಂದನೆ ಬೇಗದಿ 8 ಮಂಗಳಾತ್ಮಕ ತ್ರಿಪುರರ ಮದ ಭಂಗನಾಶಕ ಮಂಗಳಮಹಿಮ ವಿಹಂಗವಾಹನ ಸುರ ಸಂಗೀತಲೋಲ ಕೃಪಾಂಗ ದಯಾನಿಧೆ 9 ತೇಜಿಯನೇರುತ ಸುಜನರು ಮಾಳ್ಪಪೂಜೆಗೊಳ್ಳುತ ರಾಜೀವಾಕ್ಷ ರಕ್ಕಸ ಸಂಹಾರಕ ಅ- ಪಾರ ಮಹಿಮ ರಥವೇರುತ ತವಕದಿ 10 ಕಂಜಲೋಚನ ಕಮಲಾಯತಾಕ್ಷ ಮಂಜುಭೂಷಣ ಕಂಜದಳಾಂಬಕ ಕಮಲನಾಭ ವಿಠ್ಠಲಝಗಝಗಿಸುವ ಮದ್ಹøದಯ ಮಂಟಪಕೇ 11
--------------
ನಿಡಗುರುಕಿ ಜೀವೂಬಾಯಿ