ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೊಂಬೆಯಾಟವನಾಡಿಸಿದೆ ಮಹಾಭಾರತದ ಪ ಅಂಬುಜಭವಾದಿ ಅಮರರು ನೋಡುತಿರಲು ಅ ಕುರುಭೂಮಿಯೆಂಬ ಪುರವೀಧಿಯನು ರಚಿಸಿಮರೆಯ ಮಾಯದ ಐದು ತೆರೆಯ ಹಾಕಿಧರಣೀಶರೆಂಬ ನರಪ್ರತಿಮೆಗಳನಳವಡಿಸಿನರನ ರಥವಾಜಿಯ ಸೂತ್ರವನು ಪಿಡಿದು 1 ಓದುವನು ನಾರದನು ವಾದ್ಯಕಾರನೆ ಶಂಭುಬಾದರಾಯಣದೇವ ಕಥಾಪ್ರಸಂಗಿಮೇದಿನಿಯ ಹೊರೆಗಳೆವ ಮೃತ್ಯುವಿನ ಹಾಸ್ಯರಸವೇದನಿಕರಗಳು ಕೈವಾರಿಸುತಿರಲು 2 ಹದಿನೆಂಟು ಅಕ್ಷೋಹಿಣಿ ಮಾರ್ಬಲವ ನೆರೆಸಿಹದಿನೆಂಟು ದಿನ ಕದನಕೇಳಿಕೆ ನಡೆಸಿಅದರೊಳೈವರನುಳುಹಿ ಅವನಿಭಾರವನಿಳುಹಿಮುದದಿ ಬ್ರಹ್ಮಕಪಾಲವನು ತೃಪ್ತಿಗೊಳಿಸಿ 3 ಲೋಕದೊಳಗೈದನೆಯ ವೇದವಿದೆಂದೆನಿಸಿಪಾಕಶಾಸನ ಸಭೆಯನು ಮೆಚ್ಚಿಸಿಈ ಕಥೆಯ ಕೇಳಿದ ಜನಮೇಜಯನ ಪತಿಕರಿಸಿತಾ ಕಪಟನಾಟಕದ ಸೂತ್ರಧರನೆನಿಸಿ 4 ಇಂತೆಸೆವ ಲೀಲಾವಿನೋದ ರಚನೆಗಳಿಂದ ಲೋ-ಕಾಂತರಂಗಳ ಸಂಚರಿಸುತಸಂತಸದಿ ಭರತ ಸಂಸಾರವನು ಪೊರೆವ ವೇ-ದಾಂತನುತ ಕಾಗಿನೆಲೆಯಾದಿಕೇಶವರಾಯ 5
--------------
ಕನಕದಾಸ
ಯಾಕೊ ಪಾರ್ಥನ ಹೆಸರು ಹೋಕೆ ಮಾತಿನ ಕೃಷ್ಣ ಸಾಕು ನೀ ನಮ್ಮ ಸರಿಯೇನೊ ಕೋಲಸಾಕು ನೀನಮ್ಮ ಸರಿಯೇನೊ ಬಲಿಯ ಮನೆಯ ಬಾಗಿಲ ಕಾಯ್ದು ಬದುಕಿದಿ ಕೋಲ ಪ. ಚಿಕ್ಕಂದಿನಾರಭ್ಯ ವತ್ಸಗಳನೆ ಕಾಯ್ದು ತುಚ್ಛನಾಗಿದ್ಯೊ ಜನರೊಳು ತುಚ್ಛನಾಗಿದ್ಯೊ ಜನರೊಳು ರುಕ್ಮಿಣಿಯಕೂಡಿ ಹೆಚ್ಚಿನವನೆಂದು ಹೆಸರಾದ್ಯೊ ಕೋಲ1 ಜನಿಸಿದಾಕ್ಷಣದಲ್ಲಿ ಜನನಿ ಜನಕರನಗಲಿದಿದನಗಳ ಕಾಯ್ದ್ಯೊ ವನವನ ದನಗಳ ಕಾಯ್ದ್ಯೊ ವನವನ ತಿರುಗಿದ್ದುಮನಕೆ ತಾರಯ್ಯ ಮರೆಯದೆ ಕೋಲ 2 ಬಡಿವಾರ ಬಂದ ಬಗಿ ಹೇಳೊ ಕೋಲ3 ಸತ್ಯಭಾಮೆ ನಿನ್ನ ಹೊಸ್ತಿಲ ಹೊಗಲಿಕ್ಕೆಅತ್ಯಂತ ಪದವಿ ಒದಗಿತುಅತ್ಯಂತ ಪದವಿ ಒದಗಿತು ಕೃಷ್ಣ ನಿನ್ನ ಹೆತ್ತವರ ಭಾಗ್ಯ ಅರಿವೆಯೆ ಕೋಲ4 ಹೆಂಡಿರ ಪುಣ್ಯದಿಂದ ಕಂಡೆಯಾ ಈ ಭಾಗ್ಯವ ಪಾಂಡಿತ್ಯವೆಲ್ಲೊ ಬಲವೆಲ್ಲೊಪಾಂಡಿತ್ಯವೆಲ್ಲೊ ಬಲವೆಲ್ಲೊ ಕೃಷ್ಣ ನಿನ್ನ ಪಂಡಿತರು ಕೇಳೋ ಹುಸಿಯಲ್ಲ ಕೋಲ5 ನಾರಿಯರ ಪುಣ್ಯದಿ ಏರಿದ್ಯೋ ರಥವಾಜಿ ಧೀರತನದಿಂದ ಗಳಿಸಿದ್ಯೊಧೀರತನದಿಂದ ಗಳಿಸಿದ ಗಳಿಕೆಯ ತೋರೊ ರಾಮೇಶ ನಮಗಿನ್ನು ಕೋಲ 6
--------------
ಗಲಗಲಿಅವ್ವನವರು