ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳಂ ಜಯ ಮಂಗಳಂ ರಾಮ ಮುನಿಜನ ಸ್ತೋಮ ಮಂಗಳಂ ಲೋಕಾಭಿರಘುರಾಮ ಸದ್ಗುಣ ಸ್ತೋಮ ಪ ದಶರಥನ ವರಪುತ್ರ ನೀನಾಗಿ ಕೌಶಿಕನ ಯಜ್ಞದಿ ಅಸಮಸಾಹಸ ದೈತ್ಯರನು ಗೆಲಿದಿ ವಸುಧೆಯೊಳು ಗೌತಮನ ಸತಿಯಳನು ಉದ್ಧರಿಸಿ ತಾಟಕಿ ಹೊಸಪರಿಯ ದೈತ್ಯರನು ಸಂಹರಿಸಿ ಎಸೆವ ಮಿಥಿಲಾ ಪುರದಿ ಜಾನಕಿ ಬಿಸಜನೇತ್ರೆಯ ಕೈಪಿಡಿದು ರನ್ನ ಹೊಸ ಪರಿಯ ರಥದೊಳಗೆ ಪೊರಟು ಸತಿಸಹಿತ ಅಯೋಧ್ಯೆಯಲಿ ಮೆರೆದಗೆ1 ದಶರಥನು ಪುತ್ರಗೆ ಪಟ್ಟವನು ಕಟ್ಟುವೆನು ಎನಲು ದಶದಿಕ್ಕಿಗೆ ಪತ್ರವನು ಕಳುಹಿಸಲು ಎಸೆವ ಮಂಗಳ ವಾದ್ಯ ಕೇಳುತಲೆ ಕೈಕೇಯಿ ಬರಲು ಅಸದಳದವರ ಬೇಡಿ ಕಾಡಿಸಲು ವಸುಧೆಗೀಶನ ವನಕೆ ಕಳುಹಲು ಕುಶಲವಿಲ್ಲದೆ ಮರುಗೆ ದಶರಥ ಮಿಸುಣಿಮಣಿ ಸಿಂಹಾಸನ ತ್ಯಜಿ- ಸುತಲಿ ಪಿತೃ ವಾಕ್ಯವ ನಡೆಸಿದಗೆ 2 ಮಡದಿ ಸೀತಾ ಲಕ್ಷ್ಮಣರ ಕೂಡಿ ಬಿಡದೆ ದೈತ್ಯರನೆಲ್ಲ ಕಡಿದಾಡಿ ಒಡತಿ ಸೀತೆಗೆ ಉಂಗುರವ ನೀಡಿ ಹನುಮಂತ ಬರಲು ಕಡುಜವದಿ ಸಾಗರದಿ ಸೇತುವೆಯ ಮಾಡಿ ತಡೆಯದಲೆ ರಾವಣನ ಮೂಲವ ಕಡಿದು ಕಮಲನಾಭ ವಿಠ್ಠಲನು ಮಡದಿಸಹಿತಾಯೋಧ್ಯೆ ಪುರದಲಿ ಸಡಗರದಿ ಸಾಮ್ರಾಜ್ಯವಾಳ್ದಗೆ3
--------------
ನಿಡಗುರುಕಿ ಜೀವೂಬಾಯಿ
ಶ್ರೀ ರಮಣಿಯರಸ ಕಂ ಜೋದ್ಬವಾರ್ಚಿತ ಪುಣ್ಯ | ಚಾರುತರ ಯುಗ್ಮಪದ ರಂಜನಾಸುರ ಸಂ | ಹಾರ ಸುರ ಜನ ಪಾಲ ಪರಮಾನಂದ ಸಾ | ಕಾರನಲಿದುಪ್ಪವಡಿಸಾ ಹರಿಯೇ ಪ ಹರಿವೇಗ ಮಂಮೀರ್ವ ಹರಿಗಳೇಳಂಗಳದಲಿ | ಹರಿಯಾಗ್ರಜನನಿಂದ ಹರಿಪದದೊಳಗ ಜವದಿ ಹರಿವುತಿಹ ಝಗ ಝಗಿಪ ಹರಿಮಯದ ರಥದೊಳಗ | ಹರುಷಾದೊಳಡರ್ದು ಬಳಿಕಾ || ಹರಿದಿಕ್ಕಿ ಲಿಂದೊಗೆದು ಹರಿಜಗಳ ವಿಸ್ತರಿಸಿ | ಹರಿಯುಮೊದಲಾದವರ ಹರಿಸಿ ತೇಜವ ಜಗಕ | ಪರಿ ಹರಿಸಿ ಉದಿಸಿದಹರಿಯು ನರಹರಿಯೆ ಉಪ್ಪವಡಿಸಾಹರಿಯೇ1 ಪವನಜ ಖಗರಾಜ | ಭಜಿಪಧ್ರುವದ ಶಶಿರಾನುಜ ಭಿಷ್ಮಾ ತನ್ನ ಆ | ತ್ಮ ಜರಿತ್ತ ರಿಕ್ಷಪತಿ ರಜನೀಶ ವಾನ್ನರ | ಧ್ವಜ ವಿಧುರ ಅಂಬರೀಷಾ || ದ್ವಿಜ ಪುಂಡಲೀಕ ಪದ್ಮಜ ಮುಖ್ಯರಾದ ನಾ | ಶುಕ ಉದ್ಧವ ಬಲಿ ಜಯ ವಿಜಯರ ಕೂಡಿ | ಸುಜನರೈ ತಂದ | ರಂಬುಜ ಪದಕ ನಮಿಸೆ ವಾ | ರಿಜನಾಭ ಉಪ್ಪವಡಿಸಾ ಹರಿಯೇ 2 ಪಾಕ ಶಾಸನ ಅಗ್ನಿ ಆಕಾಳ ನೈಋತಿರ | ತ್ನಾಕರ ಪ್ರಭಂಜನಪಿ ನಾಕಿವರ ಕೌಬೇರ | ನಾಕೆರಡು ದಿಕ್ಕಿನವರೇಕೋ ಭಾವದಲಿಂದ ನಾಕ ಪುರಗಜ ಅಜಮಹಾ ಕೋಣ ಮನುಜ ಮಕ | ಹಾಕುರಂಗಂದಣವು ಗೋಕುಲೆಂದ್ರನು ಇಂತು | ವಾಹನ ವಿವೇಕದೇರಿ ಬಂದಿದೆ | ಲೋಕೇಶ ಉಪ್ಪವಡಿಸಾ ಹರಿಯೇ3 ಶ್ರೇಷ್ಠ ಕಶ್ಯಪ ಋಷಿ ವಶಿಷ್ಠ ಗಾರ್ಗೇಯ ತಪೋ | ನಿಷ್ಠ ವಿಶ್ವಾಮಿತ್ರ ಸೃಷ್ಠಿಯೊಳ ಜಲದ ಸಂ | ದಷ್ಟ ವರುಣನ ಗರ್ವ ಭಷ್ಟ ಮಾಡಿದಗಸ್ತಿ | ಅಷ್ಟಾದಶ ಧ್ವಯ ಬಾರಿ ಸೃಷ್ಟಿರ ಚನೆಯ ಕಂಡ | ತುಷ್ಟ ಬಕದಾಲ್ಪ್ಯ ಉತ್ಕøಷ್ಟ ಸನಕಾದಿಗಳು | ದೃಷಮಾನಿಸರಾಗಿ ಮುಟ್ಟಿಸ್ತುತಿ ಸುತಲಿದೇ | ಕೃಷ್ಣ ನೊಲಿ ದುಪ್ಪವಡಿಸಾ ಹರಿಯೇ 4 ವರ ವಾಮ ದೇವಾತ್ರಿ ಪರಮಗಾಲ ವನುಸೌ | ಭರಿಯ ಕೌಡಿಣ್ಯ ಸುಖ ಭರಿತ ಕೌಸಿರ ಮತಿ | ಪರಿಪೂರ್ಣ ಜಯಾಮುನೀರ್ವರು ಭರತರುಸುಗುಣ ಶರಧಿ ವೈಶಂ ಪಾಯನಾ|| ಸುರಪುರೋಹಿತ ಮಹಾ ಸುರರ ವಂಶಾವಳಿಯು | ತರಣಿಜ ಬುಧಾದಿಗಳ | ಕರದೊಳು ಸುಫಲವಿರಿಸಿ ಹರುಷಾದಲಿ ನಿಂದಿದೆ || ಪರಬೊಮ್ಮ ಉಪ್ಪ ವಡಿಸಾ ಹರಿಯೇ 5 ಡಮರುಧರ ಜಡೆಯೊಳಗ ಸಮುಲ್ಲಾಸದಲಿ ಮೆರೆವ ಅಮರ ನದಿ ಪಾಪಹರ ಸಮಕೃಷ್ಣ ವೇಣಿ ಸು | ವಿಮಲ ಗೋದಾವರಿ ಕುಮುದ್ವತಿ ಕಾವೇರಿ | ಶ್ರಮಹಾರಿ ತುಂಗ ಭದ್ರಿ || ಯಮುನಿ ಫಲ್ಗುಣಿ ಮಹೋತ್ತಮ ಸರಸ್ವತಿ-ಕಪಿಲ | ನರ್ಮದಿ ಮೊಲಾಗಿ ಅಮಲಗ್ರೋದ ಕವ | ಕ್ರಮದಿಂ ಕೊಂಡು ನದಿ ಚಮು ಬಂದಿದೇ ಪೊರಗ | ಕಮಲಾಕ್ಷ ಉಪ್ಪವಡಿಸಾ ಹರಿಯೇ6 ದಾರುಣೀ ಚರರಾದಾ ಚಾರುಗೋ ಬ್ರಾಹ್ಮಣರು | ಸಂರಕ್ಷಣೆಯ ಮಾಳ್ವ ಧೀರಯ ಯಾತಿ | ಮೇರು ಸಮ ಹರಿಶ್ಚಂದ್ರ ವೈರಾಟ ಪತಿಜನಕ | ಆರಾಯ ನಳ ನಹುಷನು || ಶೂರ ಹಂಸಧ್ವಜನು ಸಾರಿ ವಿಷ್ಟಕ್ಸೇನ | ವೀರ ಪಾಂಚಾಲನ - ಕ್ರೂರ ಚಂದ್ರಹಾಸ ಮ | ಯೂರ ಧ್ವಜ ಪ್ರಮುಖರಾರತದಿ ಬಂದರಿದೆ | ಕಾರುಣನೆ ಉಪ್ಪಾವಡಿಸಾ ಹರಿಯೇ 7 ವಾರಿಯೋಳ್ ನಡೆವಹತೇರಗಜ ಶೃಂಗರಿಸಿ | ಏರಿಬಂದಿಳಿದು ಮಹಾ ವೀರ ಭಟರೋಗ್ಗೀನೊಳು | ಬಾರಿ ಬಾರಿಗೆ ನಿಮ್ಮ ಚೀರುತ ಬಿರುದಂಗಳನು ಭೂರಿಜನ ಸಚಿದಣಿಸುತಾ || ಪಾರವಿಲ್ಲದ ಪಟಹ ಭೇರಿ ನಿಸ್ಸಾಳತಹ | ಳಾರವರಿದು ಊದುತಲಿ ಈ ರೀತಿ ನೃಪರದಳ | ಚಾರುವಾಲಗವ ಮನವಾರಗುಡುತಿದೆ ಪರಮ ಶೌರಿ ವಲಿದು ಪ್ಪವಡಿಸಾಹರಿಯೇ 8 ಕೇಣವನು ಗೊಳ್ಳದಿಹ ಜಾಣ ಕಲೆಯಿಂದ ಗೀ | ರ್ವಾಣ ಸ್ತ್ರೀಯರು ನೃತ್ಯ ಮಾಣುತಲಿ ಬರೆಕರದಿ | ವೀಣೆಯನು ತಾಂ ಪಿಡಿದು ವಾಣಿ ತುಂಬರ ಸುಪ್ರ ವೀಣನಾರದ ಗಣಪನು || ಶ್ರೇಣಿಯಿಂ ತೊಡಗೂಡಿ ತ್ರಾಣದಿಂದಲಿ ನಾಮ | ವಾಣಿಯಲಿ ವಚಿಸುತಿದೆ ಕಾಣಲ್ಕೆ ನಿಂದಿದೆ | ಏಣಾಂಕನುಜೆ ಮುಗಿದು ಪಾಣಿಯನು ಗುರು ಮಹಿಪತಿ ಪ್ರಾಣನೊಲಿದುಪ್ಪವಡಿ ಸಾ ಹರಿಯೇ 9
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಿರಿ ಚರಣದಲ- ಪಾರ ಭಕುತಿಯನೀಯೋ ತವ ಸೇವಕನೆನಿಸಿ ಕೀರುತಿಯನು ಪಡೆಯೋ ಭವಕ್ಲೇಶ ಕಳೆಯೊ ಪ ಸೂರಿ ಸುಬ್ಬಣಾಚಾರ್ಯಕರಸ- ರೋರು ಹಗಲಲಿ ಪೂಜೆಗೊಳುತಲಿ ಚಾರುತರ ಶ್ರೀ ಜಯಮಂಗಳಿಯ ತೀರದೊಳಿರುವ ವೀರ ಮಾರುತಿ ಅ.ಪ. ಪ್ರತಿ ವರುಷ ಮಾಘಸಿತ | ನವಮಿ ದಿನದೊಳು ನೀ- ನತಿವಿಭವದೊಳು ನಗುತ | ಭಕುತರಿಷ್ಟವ ಸಲಿಸೆ ರಥದೊಳಗೆ ಕುಳ್ಳಿರುತ | ವಿಧ ವಿಧ ವಾದ್ಯಗಳ ತತಿಯನಾಲೈಸುತ | ಅತಿ ಮೋದಬಡುತ ಪರಿ ಸಂ- ಸ್ತುತಿಸೆ ಹಿಗ್ಗುತಲವರ ಸ್ವಮನೋ- ರಥಗಳ ನೀ ಸಲಿಸುವೆನೆನುತಲಿ ಅತುಳ ವಿಕ್ರಮದಭಯ ಹಸ್ತದಿ ಕೃತಿರಮಣ ಸಿರಿವರ ಹರಿಯನನು ಮತವ ಪಡೆಯುತ ರಥವ ನಡೆಸಿ ಚತುರ ದಿಕ್ಕಲಿ ಬಿಜಯ ಮಾಡುತ ಸತತ ಹರುಷವಗರೆವ ದೇವ 1 ರಕ್ಕಸಕುಲ ತಮ ಭಾನು | ತಾಮಸರ ಧ್ಯಾನಕೆ ಸಿಕ್ಕುವನಲ್ಲ ನೀನು | ಸುಜನರ ಹೃದಯದೊಳು ಅರ್ಕನೊಲು ಪೊಳೆವನು | ಹರಿಸಿರಿಗಾಳುಳಿದು ಬಕ್ಕ ದಿವಿಜರಿಗಿನ್ನು | ಗುರುಬಲ್ಲೆ ನಾನು ಚಿಕ್ಕ ರೂಪವಗೊಂಡು ಲಂಕೆಯ ಪೊಕ್ಕು ರಾಮನ ಸತಿಯ ಕಂಡು ತುಕ್ಕಿ ವನವನು ಸೂರೆ ಮಾಡಿ ಉಕ್ಕಿನ ಧ್ವಜಸ್ತಂಭದಿಂದ ಸೊಕ್ಕಿ ಬಂದ ದನುಜವ್ರಾತವ ಕುಕ್ಕಿ ಕೆಡಹಿ ಪುರವನುರಹಿ ಅಕ್ಕರದ ಮಣಿಸಹಿತ ಬಂದು ಪಕ್ಕಿದೇರನಿಗೆರಗಿ ನಿಂದೆ 2 ತುತಿಸ ಬಲ್ಲೆನೆ ನಾನು | ನಿನ್ನಯ ಸುಗುಣಗಳ ತತಿಗಳೆಲ್ಲವನು | ತ್ರಿಪುರ ಸುಂದರಿ ಪಾ- ರ್ವತಿ ಪತಿಯ ಪಡೆದವನು | ರಂಗೇಶವಿಠಲಗೆ ಅತಿಪ್ರೀತಿಸುತ ನೀನು | ನಿಷ್ಕಾಮಯುತನು ಪತಿತರನುದ್ಧರಿಸಲು ನೀ ಸಿರಿ ಪತಿಯ ಮತದೊಳು ಹನುಮ ಭೀಮ ಯತಿಯ ರೂಪವ ತಾಳಿ ಹರುಷದಿ ಕ್ಷಿತಿಯ ಭಾರವ ಹರಸಿ ಸಲಹಿದೆ ಅತುಳ ಮಹಿಮ ನಿನ್ನಪರಿಮಿತ ಶ ಕುತಿಗೆ ನಮೊ ನಮೊ ವಾಯುತನಯನೆ ಸತತ ಮುದದೊಳು ನಿನ್ನ ಸ್ಮರಿಸುವ ಮತಿಯ ಪಾಲಿಸು ಪತಿತ ಪಾವನ 3
--------------
ರಂಗೇಶವಿಠಲದಾಸರು