ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನ್ಮಥನಯ್ಯನ ಮನದಲಿ ಸ್ಮರಿಸಿರೊ ಮನ್ಮಥ ನಾಮ ಸಂವತ್ಸರದಿ ಪ ಸುಮ್ಮನೆ ಕಾಲವ ಕಳೆಯುವದೇತಕೆ ಬ್ರಹ್ಮನಪಿತ ನಂಘ್ರಿಗಳ ಭಜಿಸುತ ಅ.ಪ ಬಂಧು ಬಳಗ ಮಂದಿಮಕ್ಕಳೆಲ್ಲರು ಕೂಡಿ ಒಂದೆ ಸ್ಥಳದಿ ಭಜನೆಯಮಾಡಿ ಇಂದಿರಾರಮಣನ ಚಂದದಿ ಪೊಗಳಲು ಬಂದ ದುರಿತಗಳ ಪೊಂದಿಸನೆಂದೆಂದು 1 ಮಾಕಮಲಾಸನ ಲೋಕದ ಜನರಿಗೆ ತಾಕಾಣಿಸಿ ಕೊಳ್ಳದೆ ಇಹನು ಶ್ರೀಕರ ಸಲಹೆಂದು ಏಕ ಭಕುತಿಯಲಿ ಲೋಕವಂದ್ಯನ ಸ್ತುತಿಗೆ ನೂಕುವ ಅಘಗಳ 2 ಅತಿಶಯದಿಂದಲಿ ಸತಿಸುತರೆಲ್ಲರು ಪತಿತಪಾವನನ ಕೊಂಡಾಡುತಲಿ ಗತಿ ನೀನಲ್ಲದೆ ಮತ್ತೆ ಹಿತರ್ಯಾರಿಲ್ಲವೆನೆ ಸತತ ಸುಕ್ಷೇಮವಿತ್ತು ಪಾಲಿಸುವಂಥ 3 ಶ್ರಮವ ಪರಿಹರಿಸೆಂದು ನಮಿಸಿಬೇಡುವ ಭಕ್ತ ಜನರನು ಸಂತೈಸುತಲಿಹನು ಹನುಮ ಭೀಮ ಮಧ್ವಮುನಿಗಳ ಸೇವಿಪ ಮನುಜರ ಮನೋರಥಗಳನೆ ಪೂರೈಸುವೊ 4 ವತ್ಸರ ಆದಿಯಲಿ ಅಕ್ಷರೇಡ್ಯನ ಪಾದ ಕ್ಷಿಪ್ರದಿಂದಲಿ ಸೇವಿಪ ನರನ ಭಕ್ತವತ್ಸಲ ತನ್ನ ಭಕ್ತರ ಸಂಗದೊಳಿಟ್ಟು ಸಂತೈಸುವ ಸತ್ಯಸಂಕಲ್ಪ ಶ್ರೀ5 ತಾಳ ತಂಬೂರಿ ಸುಸ್ವರಗಳಿಂದಲಿ ಬಹು ನೇಮದಿಂದಲಿ ಸರುವರು ಕೂಡಿ ಗಾನಲೋಲನ ಭಜನೆಯ ಮಾಡುತ ಸತ್ಯ ಸ್ವಾಮಿಯ ಗುಣಗಳ ಪೊಗಳುವ ಸುಜನರು 6 ಸಡಗರದಿಂದಲಿ ಕಡಲೊಡೆಯನ ಗುಣ ಪೊಗಳುತ ಹಿಗ್ಗುತ ಅಡಿಗಡಿಗೆ ಕಡಲ ಶಯನ ಕಮಲನಾಭ ವಿಠ್ಠಲನೆಂದು ತೊಡರು ಬಿಡಿಸುವ ಶ್ರೀ 7
--------------
ನಿಡಗುರುಕಿ ಜೀವೂಬಾಯಿ
ವಾಯುದೇವರ ಸ್ತೋತ್ರ ಕೇಳಿರೀತನ ಗಾಥ ಚರಿತೆಯ ಚಲ್ವ ಜಾಲಿಕಾಪುರದಿದ್ದ ಧೊರೆಯಾ ಪ ಕಾಳಾಹಿ ವೇಣಿಯಳು ದ್ರುಪದಜೆಶಾಲೆ ಸೆಳಿಯುತ ಖೂಳ ಸಭೆಯೊಳುಗೋಳಿಸಿದ ದುರ್ಯೋಧನನ ಕುಲಹಾಳು ಮಾಡಿದ ಬಹಳ ಬಗೆಯಲಿಅ.ಪ ಕಟಕೆಲ್ಲ ಕುರುಕ್ಷೇತ್ರದಲ್ಲೀ ಬಹುಳ-ದ್ಧಟಿತವಾಗಿ ನೆರದಿತಲ್ಲೀಕುಟಿಲ ದುಶ್ಶಾಸಿದ್ದನಲ್ಲೀ ಭೀಮಾ-ರ್ಭಟಿಸುತಲವನ ಕಾಣುತಲಿಕಟಕಟನೆ ಪಲ್ಗಡಿದು ಅಸುರನ ಪಟಪಟನೆ ಕರುಳನ್ನು ಹರಿಯುತಪುಟಿ ಪುಟಿದ ಹಾರುತಲಿ ರಣದೊಳು ಛಟ ಛಟಾ ಛಟಿಲೆಂದು ಸೀಳಿದ 1 ಗಡಬಡಿಸುತ ಭೀಮನಾಗೇ ಎದ್ದು ನಡೆದನು ತುಡುಗರ ಬಳಿಗೇ ತಡ ಮಾಡದಲೆ ಬಹು ಬ್ಯಾಗೆ ದೊಡ್ಡಗಿಡ ಕಿತ್ತಿ ಪಿಡಿದ ಕೈಯೊಳಗೇಘುಡು ಘುಡಿಸಿ ರೋಷದಲಿ ಅಸುರರಬಡಿ ಬಡಿದು ಮಕುಟವನೆ ಕಿತ್ತುತ ಕಡಿ ಕಡಿದು ರಥಗಳನೆ ತರಿವುತಧಡ ಧಡಾ ಧಡಲೆಂದು ಕೆಡಹಿ 2 ಪೂಶರ ಜನಕ ತಾನೊಲಿದು ಉಪ-ದೇಶ ಕೊಟ್ಟನು ಭೀಮಗೊಂದುದ್ವೇಷಿ ದುರ್ಯೋಧನನ ಹಿಡಿದು ತೊಡೆ ನಾಶ ಮಾಡಲೊ ಎಂದು ನುಡಿದುರೋಷದಲಿ ಬೊಬ್ಬಿರಿದು ಅವನಾ-ಕಾಶಕೊಗೆಯುತ ಭಾಪುರೇ ಗದೆಬೀಸಿ ಬಡಿಯುತ ಕಡಿದೆ ತೊಡೆಗಳಕೇಶವ ವಿಠಲೇಶನಾಜ್ಞದಿ 3
--------------
ಕೇಶವವಿಠ್ಠಲರು