ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆ ಕೇಶವನನ್ನು ದೂರ್ವಾಪುರದ ಪುಂಡರೀಕಾಕ್ಷನನ್ನು ಪ ಶಂಖವ ಚಕ್ರವ ಗದೆಯ ಪದ್ಮವ ನಿತ್ಯ ಶಂಕೆಯಿಲ್ಲದೆ ನಾಲ್ಕು ಕರದೊಳು ಪಿಡಿದಾ ಪಂಕಜ ಲೋಚನ ಪರಮ ಪಾವನನನ್ನು ವೈರಿ ಮಾಧವನನ್ನು 1 ಕಾಲಿಗುಂದುಗೆ ಗೆಜ್ಜೆ ಮೇಲಾದ ಭಾಪುರಿ ನೀಲ ಮೇಘಶ್ಯಾಮ ತ್ರಿಗುಣ ರಹಿತನ ತೊಳೆವ ರತ್ನಾಭರಣದಿಂದ ಪದ್ಮ ದಂಡ ಚಲುವಿನಿಂದಲೆ ಊರಿ ನಿತ್ತ ಸ್ವಾಮಿಯನು 2 ಭಜಕರ ಸಲಹುವ ಭಕ್ತವತ್ಸಲನ ಸುಜನರ ಪೊರೆಯುವ ಶ್ರೀಧರನ ಅಜನನ್ನು ಪಡೆದಿಂಹ ಮುರಲೀಧರನ ಭಜಕರ ಮಧ್ಯದಿ ಮೆರೆವ ಕೇಶವನ 3
--------------
ಕರ್ಕಿ ಕೇಶವದಾಸ
ಸ್ಮರಿಸುವ ನರನೇ ಧನ್ಯ ಸನ್ಮಾನ್ಯ ಪ ಸ್ಮರಿಸುವರಿಗೆ ಸುರತರುಕಲ್ಪ ವಿಭರಾಮ ಪುರದಿ ಶ್ರೀಹರಿ ಧ್ಯಾನಪರ ಶ್ರೀ ಕೃಷ್ಣಾಚಾರ್ಯರ ಅ.ಪ ಭರತ ಭೂಮಿಯೊಳವತರಿಸಿ ದೇವಾಂಶದಿ ಪುರುಹೂತನಂತೆ ಗಜಾಂತ ವೈಭವದಿಂದ ಮೆರೆಯುತ ತಮ್ಮಯ ಚರಣಾರಾಧಕರನು- ದ್ದರಿಸಲೋಸುಗದಿ ಸಂಚರಿಸುತ ಮುದದಿ ಸಂದರುಶನದಿಂಧಾಘವ ಕಳೆದು ಬಲು ಕರುಣದಲಿಷ್ಟಾರ್ಥವ ಗರಿದು ಬಹು ಶರಣು ಜ- ನರ ಪೊರೆವ ಭೂಸುರರೊಳು ಮರುತ ಮತಾಬ್ಧಿ ಚಂದಿರನೆನಿಸಿದವರ 1 ವರ್ಣಿಸಲೊಶವಲ್ಲ ಚರಣಯುಗ್ಮಾರಭ್ಯ ಶಿರಪರಿಯಂತರ ಗುರುಗಳಾಕೃತಿಯನ್ನು ನಿರುತ ಧ್ಯಾನಿಪರಿಗೆ ಪರಮ ಮಂಗಳವೀವ ಪರಿಶೋಭಿಸುವ ರತ್ನಾಭರಣದಿಂದೋಪ್ಪುವ ಸ್ವರ್ಣತುಲಸಿ ಮುಕ್ತಹಾರ ಭೂಷಿತ ಕಂಧರ ಸುಂದರವಾದ ಮುಖದೊಳು ಮಂದಸ್ಮಿರ ಕಸ್ತೂರಿಯಂತೆ ಪರಿಮಳಾನ್ವಿತ ಶರೀರ ಮಂತ್ರಾಲಯ ಗುರುರಾಘವೇಂದ್ರರ ಕರುಣಾಸುಪಾತ್ರರ2 ಚಿರಕಾಲ ಶೇವಿಪ ಪರಮ ವಂಧ್ಯರಿಗೆಲ್ಲ ವರಪುತ್ರ ಸೌಖ್ಯವ ಕರುಣಿಸುವರು ಸತ್ಯ ಅಪರಿಮಿತ ಮಹಿಮರೆಂದರಿಯದೆ ಇವರನ್ನು ಜರಿಯಲಾಕ್ಷಣದಲಿ ಅರಿತು ಭೀಕರವಾದ ಉರಗರೂಪವ ತೋರುತ ತ್ಯಜಿಸಿ ಮತ್ತೆ ನಿಜರೂಪದಿಂದಿರುತ ನೋಳ್ಪರಿಗತ್ಯಾಶ್ಚರ್ಯ ಸದ್ಗುಣ ಭರಿತ ಕಾರ್ಪರ ನರಹರಿಯ ಪರೋಕ್ಷದಿ ನಿರುತ ಸುಖಿಪರಂಘ್ರಿ 3
--------------
ಕಾರ್ಪರ ನರಹರಿದಾಸರು