ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರಾ ಪಾಲಿಸು ಎನ್ನ ಇಂದಿರಾ ಪ ಇಂದಿರಾ ದೇವಿಯೆ ನಿನ್ನ | ಪಾದಪೊಂದಿದೆ ಸಲಹಬೇಕೆನ್ನಾ | ಆಹಕಂದರ್ಪ ಇಂದ್ರ ಫಣೀಂದ್ರ ಗರುಡ ಕಂದುಕಂಧರ ಬ್ರಹ್ಮಾದಿ ವಂದ್ಯಳೆ ಪಾಲಿಸು ಅ.ಪ. ಕೃತಿ ಶಾಂತಿ | ದುರ್ಗೆಭೂಮಿ ಶ್ರೀದೇವಿ ಜಯಂತಿ | ಲಕ್ಷ್ಮೀರಮೆ ದಕ್ಷಿಣೆ ಗುಣವಂತಿ | ಸತ್ಯಭಾಮೆ ರುಕ್ಮಿಣಿ ಮಹಾಕಾಂತಿ | ಆಹಈ ಮಹಾನಂತ ರೂಪ ನಾಮಗಳುಳ್ಳಕೋಮಲ ಗಾತ್ರಿಯೆ ಕಾಮಜನನಿ ಕಾಯೆ 1 ಶ್ರೀಭಾಗ ಮಹಾ ಪ್ರಳಯದಲ್ಲಿ | ಪದ್ಮನಾಭಾಗೆ ಬಹು ಭಕ್ತಿಯಲ್ಲಿ | ದಿವ್ಯಆಭರಣಗಳಾಕಾರದಲ್ಲಿ | ಮಿಕ್ಕವೈಭವನೇಕ ರೂಪಾದಲ್ಲಿ | ಆಹಸ್ವಾಭಿಮಾನದಿ ಬಹು ಶೋಭನ ಪೂಜೆಯಲಾಭಗಳೈದಿದ ಶೋಭನವಂತಳೆ 2 ದೇಶಕಾಲಾದಿಗಳಲ್ಲಿ | ಜೀವರಾಶಿ ವೇದಾಕ್ಷರದಲ್ಲಿ | ಇದ್ದುವಾಸುದೇವನ ಬಳಿಯಲ್ಲಿ | ಸರಿಸೂಸಿ ವ್ಯಾಪ್ತಿ ಸಮದಲ್ಲಿ | ಆಹಲೇಸಾಗಿ ಒಪ್ಪುತ್ತ ಈಶ ಕೋಟಿಯೊಳುವಾಸಾಳೆ ಎನ್ನಭಿಲಾಷೆ ಸಲ್ಲಿಸಬೇಕು3 ಭವ ಬಂಧಾ | ಆಹನೀನೆ ಕಳೆದು ದಿವ್ಯ ಜ್ಞಾನ ಭಕುತಿಯಿತ್ತುಪ್ರಾಣಪತಿಯ ಪಾದವನ್ನು ತೋರಿಸಬೇಕು 4 ನಿತ್ಯ ಭಾಗ್ಯವು ನಿನಗೊಂದೆ | ಅಲ್ಲರತ್ನಾಕರನು ನಿನ ತಂದೆ | ತಾಯಿರತ್ನಗರ್ಭಳು ಕೇಳು ಮುಂದೆ | ಪತಿಗತ್ಯಂತ ಪ್ರಿಯಳಾದೆ ಅಂದೆ | ಆಹಸತ್ಯಬೋಧರು ಮಾಳ್ಪ ಅತ್ಯಂತ ಪೂಜೆಯಿಂಯುಕ್ತೆ ಶಿರಿಯೆ ನಿನಗೆತ್ತ ಕತ್ತಲು ಕಾಣೆ 5 ಲೋಕ ಜನನಿಯು ಎಂದು ನಿನ್ನಾ | ಕೀರ್ತಿಸಾಕಲ್ಯವಾಗಿದೆ ಘನ್ನಾ | ಎನ್ನಸಾಕಲಾರದೆ ಬಿಡಲಿನ್ನಾ | ಮುಂದೆಯಾಕೆ ಭಜಿಸುವುದು ನಿನ್ನಾ | ಆಹಸಾಕಾರವಾಗಿನ್ನು ಬೇಕಾದ ವರಗಳನೀ ಕರುಣಿಸಿ ಎನ್ನ ಜೋಕೆ ಮಾಡಲಿ ಬೇಕು 6 ಆವ ಜನ್ಮದ ಪುಣ್ಯಫಲದಿ | ನಿನ್ನಸೇವೆ ದೊರಕಿತೊ ಈ ಕ್ಷಣದಿ | ಎನಗೀವ ಭವ್ಯ ಕೇಳು ಮನದಿ | ಆಹಶ್ರೀ ವ್ಯಾಸ ವಿಠಲನ್ನ ಸೇವಿಪ ಯತಿಗಳ ಸಹವಾಸವನೆ ಇತ್ತು ಭಾವ ಶುದ್ಧನ ಮಾಡು 7
--------------
ವ್ಯಾಸವಿಠ್ಠಲರು
ಪತಿಮಂದಿರದಲಿ ನೀ ಸುಖವಾಗಿ ಬಾಳು ನಿನ್ನ ಪತಿಗಹಿತಕರ ಸಂಗ ತ್ಯಜಿಸಮ್ಮ ಮಗಳೆ ಪ ಉದಯ ಪೂರ್ವಕೆ ಎದ್ದು ಹರಿಯ ಸ್ಮರಣೆಯ ಮಾಡು ಮುದದಿ ಗುರುಹಿರಿಯರಿಗೆ ವಂದನೆಯ ಮಾಡು ಮದನನಯ್ಯನ ಭಜಕರನು ಕಂಡು ನಲಿದಾಡು ಪದುಮನಾಭಗೆ ಪಟ್ಟದರಸಿಯಾಗಮ್ಮ1 ರತ್ನಾಕರನು ತಂದೆ ಎನುತ ಗರ್ವಿಸಬೇಡ ಮತ್ತೆನಗೆ ಸರಿಯಾರು ಎಂದೆನಲು ಬೇಡ ಚಿತ್ತಜನಯ್ಯನ ಮನವರಿತು ನಡೆಯಮ್ಮ ಹೊತ್ತು ಹೊತ್ತಿಗೆ ಪತಿಯ ಸೇವೆ ನಿರತಳಾಗಿ2 ಬಿಟ್ಟಕಂಗಳು ಮುಚ್ಚದವನು ಎಂದೆನಬೇಡ ಬೆಟ್ಟ ಬೆನ್ನಿಲಿ ಪೊತ್ತನೆನಲು ಬೇಡ ಗಟ್ಟಿ ನೆಲವನು ಕೆದರಿ ಅಲಸಿದನೆನಬೇಡ ಹೊಟ್ಟೆಯ ಕರುಳನು ಬಗೆದವ ನೆನೆಬೇಡ 3 ಕಡುಲೋಭಿದಾನ ಬೇಡಿದನು ಎಂದೆನಬೇಡ ಪೊಡವಿಪಾಲಕರ ಕೆಡಹಿದನು ಎನಬೇಡ ಮಡದಿಯ ತಂದ ಕಪಿವಡೆಯನು ಎನಬೇಡ ತುಡುಗತನದಿ ಪಾಲ್ಬೆಣ್ಣೆ ಚೋರನೆಂದೆನಬೇಡ 4 ಉಡಿಗೆ ಉಡದ ಮಾನಗೇಡಿ ಇವನೆನಬೇಡ ತುಡಗತನದಿ ರಾಹುತನಾದನೆನಬೇಡ ಕಡಲಶಯನ ಕಮಲನಾಭ ವಿಠ್ಠಲನ ಗುಣ ಒಡೆದು ಪೇಳದೆ ಗುಟ್ಟಾಗಡಗಿಸಿ ನಡೆಯಮ್ಮ 5
--------------
ನಿಡಗುರುಕಿ ಜೀವೂಬಾಯಿ