ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳ ಮಾಧವಗೆ ಮಾರಮಣಗೆ ಮಂಗಳ ಶ್ರೀಧರಗೆ ಪ ಭಂಗ ಭವಗಜ ಸಿಂಗ ಕರುಣಾಪಾಂಗ ಶ್ರೀಶಗೆ ಗಂಗಾಜನಕಗೆ ತುಂಗ ಮಹಿಮಗೆ ಭಂಗರಹಿತಗೆ ಅನಂಗಪಿತನಿಗೆ 1 ಭುವನ ಮೋಹನ ಸುಮನಸರ ಪ್ರಿಯ ಕವಿಜನರ ಹೃದ್ಗøಹ ನಿವಾಸಗೆ ನವನವ ಲೀಲೆಗಳ ತೋರ್ದಗೆ ನವರತುನದಾರತಿಯ ಬೆಳಗಿರೆ 2 ಗರುಡಗಮನಗೆ ಉರಗಶಯನಗೆ ಪರಮಪುರುಷಗೆ ಪುಣ್ಯಚರಿತಗೆ ಉರಗಗಿರಿವಾಸನಿಗೆ ದೇವಗೆ ಸುರರೊಡೆಯ ಶ್ರೀ ಶ್ರೀನಿವಾಸಗೆ3 ಸೌಮ್ಯನಾಮ ಸಂವತ್ಸರದಂದು ನೇಮದಿಂದ ಭಜಿಪ ಭಕುತರ ಕಾಮ್ಯಕರ್ಮವ ತರಿದು ಪೊರೆಯುವ ಕಮಲನಾಭ ವಿಠ್ಠಲನ ಪ್ರತಿದಿನ4
--------------
ನಿಡಗುರುಕಿ ಜೀವೂಬಾಯಿ
ಸತಿ ಸಹಿತ ಕಶ್ಯಪರು ರತುನದಾರತಿ ಪಿಡಿದು ರತಿಪತಿಪಿತನಿಗೆ ಅತಿಹರುಷದಿ ಅತಿಶಯದ ಮಹಿಮೆಗಳ ಪೊಗಳುತಲಿ ಶ್ರೀಹರಿಗೆ ಕುಶಲದಾರತಿ ಎತ್ತಿಬೆಳಗಿದರು ನಿತ್ಯ ಶುಭ ಮಂಗಳಂ 1 ಅನಸೂಯ ಸಹಿತ ಅತ್ರಿಯರು ಬೇಗನೆ ಬಂದು ನಳಿನಾಕ್ಷನ ಚರಣಕ್ಕೆರಗಿ ನಿಂದು ವಿಧವಿಧದ ಆಟಗಳ ಆಡಿದ ಶ್ರೀಹರಿಗೆ ಪದುಮದಾರತಿ ಎತ್ತಿ ಬೆಳಗಿದರು ನಿತ್ಯ ಶುಭಮಂಗಳಂ 2 ಶೀಲವತಿಯಾದ ಸುಶೀಲೆ ಸಹಿತ ಭಾರದ್ವಾಜ ಋಷಿಗಳು ತಮ್ಮ ಆಶ್ರಮದಲಿ ಶ್ರೀಲಕುಮಿವಲ್ಲಭಗೆ ಶೀಘ್ರದಿಂದಲಿ ತಾವು ಗೋಮೇಧಿಕದಾರುತಿ ಬೆಳಗಿದರು ನಿತ್ಯ ಶುಭಮಂಗಳಂ 3 ಕುಮುದ್ವತಿ ಸಹಿತ ವಿಶ್ವಾಮಿತ್ರ ಋಷಿಗಳು ಕನಕ ಮಂಟಪದಿ ಮೆರೆಯುವ ದೇವಗೆ ಸನಕಾದಿವಂದ್ಯನಿಗೆ ವನಜಾಕ್ಷಿಯರಸನಿಗೆ ಕನಕದಾರತಿ ಎತ್ತಿ ಬೆಳಗಿದರು ನಿತ್ಯ ಶುಭಮಂಗಳಂ 4 ಪ್ರಹ್ಲಾದವರದನಿಗೆ ಅಹಲ್ಯೆಯ ಸಹಿತದಿ ಫುಲ್ಲಲೋಚನಪ್ರಿಯಗೆ ಋಷಿಗೌತಮ ಮಲ್ಲಿಗೆಹಾರಗಳು ಧರಿಸಿ ಶೋಭಿಪ ಹರಿಗೆ ಚಲ್ವನವರತ್ನದಾರತಿ ಎತ್ತುತಾ ನಿತ್ಯ ಶುಭಮಂಗಳಂ 5 ರೇಣುಕಾ ಸಹಿತ ಜಗದಗ್ನಿ ಋಷಿಗಳು ತಮ್ಮ ಧ್ಯಾನಗೋಚರನಾದ ಪರಮಾತ್ಮನ ಮಾನಿನಿಮಣಿ ಲಕುಮಿಯೊಡನೆ ಶ್ರೀಕೃಷ್ಣನಿಗೆ ನೀಲಮಾಣಿಕ್ಯದ ಆರತಿ ಎತ್ತುತ ನಿತ್ಯ ಶುಭಮಂಗಳಂ 6 ಸತಿ ಸಹಿತ ವಶಿಷ್ಠ ಋಷಿಗಳು ಇಷ್ಟಮೂರುತಿಯಾದ ವರಕಮಲನಾಭ ವಿಠ್ಠಲನ ಸ್ಮರಿಸುತ ನಿತ್ಯ ನವರತ್ನದಾರತಿ ಬೆಳಗಿದರು ನಿತ್ಯ ಶುಭಮಂಗಳಂ 7 ಮಂಗಳಂ ಸಪ್ತಋಷಿಗಳು ಪರ್ಣಶಾಲೆಯೊಳು ಗಾಂಗೇಯನುತನ ಪೂಜಿಸಿ ಹರುಷದಿ ಸಂಗೀತಲೋಲನಿಗೆ ಶೃಂಗಾರ ಪುರುಷನಿಗೆ ರಂಗಿನಾರತಿಯೆತ್ತಿ ಬೆಳಗಿದರು ನಿತ್ಯ ಶುಭಮಂಗಳಂ 8
--------------
ನಿಡಗುರುಕಿ ಜೀವೂಬಾಯಿ
ಚಿತ್ತೈಸಿದ ವ್ಯಾಸರಾಯ |ಚಿತ್ತಜನಯ್ಯನ ಬಳಿಗೆ ಪ.ಮುತ್ತಿ ಮುತ್ತೈದೆಯರೆಲ್ಲಎತ್ತೆ ರತುನದಾರತಿಯ ಅಪಹೇಮಪಿಡಿಗಳುಳ್ಳಂತಹ |ಚಾಮರಂಗಳನು ಪಿಡಿದು ||ಕಾಮಿನಿ ಮಣಿಯರು ಕೆಲವರು |ಸ್ವಾಮಿಯೆಂದು ಬೀಸುತಿರೆ 1ಹಾಟಕದ ಬೆತ್ತನೂರು |ಸಾಟಿಯಿಲ್ಲದಲೆ ಪಿಡಿದು ||ನೀಟಾದ ಓಲಗದವರ |ಕೂಟಗಳ ಮಧ್ಯದಲಿ 2ಸಾಧುವಿಪ್ರಜನಂಗಳು |ವೇಧಘೋಷ ಮಾಡುತಿರೆ ||ಮೋದದಿಂದ ಗೋವಿಂದನ |ಸಾಧನ ಮಾರ್ಗವ ಪಿಡಿದು 3ಭೇರಿ ತುತ್ತೂರಿ ಮೃದಂಗ |ಮೌರಿ ಚಾರುವೇದ್ಯಂಗಳು ||ಬಾರಿಬಾರಿಗೆ ಹೊಡೆಯೆ |ನಾರದರು ತಾ ಕೂಡಿಯೆ | 4ಅರವಿಂದಾಸನನಯ್ಯ |ಪುರಂದರವಿಠಲನು||ಸಿರಿಸಹಿತದಿ ಬಂದು |ಕರಪಿಡಿದೆತ್ತಿದ್ದು ಕಂಡೆ 5
--------------
ಪುರಂದರದಾಸರು