ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀನೇ ಶ್ರಾದ್ಧದನ್ನವನುಂಡವಾ ನಾನರಿಯದಂತೆ ಯೆನ್ನ ಗೃಹದೊಳು ಶ್ರೀವೈಷ್ಣವನಾಗಿ ಪ ಬಾಣಸಿಗಾದವರು ನೀನೋ ನಾರಾಯಣಿಯೋ ಕ್ಷೋಣಿಯೊ ರವಿಯೋ ಜಾಹ್ನವಿಯೊ ರತಿಯೋ ವಾಣಿಯೋ ಸುರಧೇನುವೋ ಬಂದಾತಧನಂಜಯನೂ ತಾನೆ ಎನ್ನ ಆದ್ದಾಗಾಯ ತೆಲೆದೇವಾ1 ತಿಳಿದೆ ನಾನೀಗ ನಿನ್ನನು ಕೂಡೆ ಬಂದಿದ್ರ್ದ ಬಿಳಿಯ ಚುಟ್ಟಿನ ಯೆಣ್ಣೆಗೆಂಪಿನವನೂ ಕುಳಿತವನು ಕೈಯಪುಸ್ತುಕದವನು ಕಂಕುಳೊಳ ಗಿಳಿದ ಮಡಿಗಡೆಯವರಾರು ಪೇಳೆಲೆ ದೇವಾ 2 ಆವಾವ ಸ್ಥಾನಕಾರಾರ ನೇಮಿಸಿದೆ ನೀ ದೇವಾ ಉಪಾಧ್ಯರಾರಭಿಶ್ರವಣವನು ಪೇಳ್ದ ಕೋವಿದರಾರು ಶ್ರೀವೈಷ್ಣವರಾರೆಲೆದೇವ 3 ಜನನ ಸ್ಥಿತಿಲಯಕೆ ಕಾರಣಭೂತನೋರ್ವ ನೀ ನೆನುತ ವೇದಾಂತಗಳು ಪೊಗಳುತಿರಲೂ ಇನಿತಕ್ಕೆ ಯೆಂದನ್ನದಗಳು ಕುಡಿತೇಪಾಲ್ಗೇ ಮನವ ಸೋತುದ ಬಿಡುವೆಯಾ ನಿತ್ಯತೃಪ್ತಾ 4 ಗುರುಗಳಂದದಲಿ ಶ್ರೀವೈಷ್ಣವ ನೀನಾಗಿ ಶರಣನಾ ಪಿತೃಗಳಿಗೇ ಶ್ರಾಧ್ಧವನುಂಡುದದೂ ಪಿರಿಯದಾಯ್ತು ಎನ್ನ ನೂರೂಂದು ಕುಲಕೆಲ್ಲಾ ಪರಮಪದವಾಯ್ತು ವೈಕುಂಠಚೆನ್ನಿಗರಾಯಾ 5
--------------
ಬೇಲೂರು ವೈಕುಂಠದಾಸರು
ವರದೇಂದ್ರ ಯತಿ ಚಕ್ರವರ್ತಿ ನಿರಂತರ ವರಣಿಸುವೆ ನಿಮ್ಮ ಕೀರ್ತಿ ಪರಮ ಕರುಣಿ ನಿಮ್ಮ ಚರಣಕಮಲಯುಗ ಕ್ಕೆರಗಿ ಬೇಡುವೆ ವರವಾ ಎಮ್ಮನು ಪೊರೆವಾ ಪ ನತಜನಬಂಧು ನೀನೆಂದೂ | ತಿಳಿದು ನತಿಸಿದೆ ಗುಣಗಣಸಿಂಧು ಪ್ರತಿಗಾಣೆ ನಿಮಗೆ ಸುವ್ರತಿ ವರ ಪ್ರಣತ ಕಾ ಮಿತ ಕಲ್ಪತರುವೆ ನಿರ್ಜಿತಮಾರಮಾರ್ಗಣ ಕ್ಷಿತಿಪರಿಗೆ ಪ್ರತಿದಿನದಿ ಪರಮಾದ್ಭುತವೆನಿಸುವುದು ನಿಮ್ಮದಾನ ಪ್ರತತಿ ಸಾಂಪ್ರತ ಮಧುರವಚನಾ ಶಾಸ್ತ್ರ ಪ್ರವಚನಾ1 ಮರುತ ಮತಾಂಬುಧಿ ಚಂದ್ರಾ | ಚಾಮಿ ಕರವರ್ಣಸರಸ ರವೀಂದ್ರ ಪರವಾದಿತಿಮಿರ ಭಾಸ್ಕರ ವಸುಧೀಂದ್ರ ಸ ದ್ಗುರು ಕರಸಂಜಾತ ನಿರುಪಮ ನಿರ್ಭೀತಾ ಖರಮಥನ ಪದಕೋನದ ಮಧುಕರ ಕೃಪಾಕರ ಕರವ ಪಿಡಿದುದ್ಧರಿಸುವುದು ಭೂ ಸುರ ಕುಲೋತ್ತಂಸಾ ನಮೋ ಪರಮಹಂಸಾ 2 ಕಲಿತ ಸುಂದರ ಮಂದಹಾಸಾ ಹೇ ನಿ ಷ್ಕಲುಷ ಸುತತ್ವ ವಿಲಾಸಾ ಗಳಿತಾ ಘಸಂಘನಿಶ್ಚಲ ಜಗನ್ನಾಥ ವಿ ಠಲನೊಲಿಮೆಯ ಪಡೆದಿಳಿಯೊಳು ಚರಿಸುವ ಭಳಿರೆ ಪ್ರತಿಯೋಗಿಗಳೆನಿಪ ಕಂ ಕಲಭಕೇಸರಿ ನಿಮ್ಮ ದಾಸರೊಳೊಲಿದು ಪಾಲಿಪುದನವರತ ಎನ್ನ ನಂಬಿದೆನೋ ನಿನ್ನ 3
--------------
ಜಗನ್ನಾಥದಾಸರು
ಶೋಭಾನವೆನ್ನಿರೆ ಶುಭಕರ ಸಾವಿತ್ರೇರು | ಪ್ರಭುಗುರು ಆತ್ಮಾ ಶ್ರೀರಾಮಗ ಪ ರಾಮರಾವಣ ಕ್ರೋಧನಿಸ್ಸೀಮ ಕುಂಭಕರ್ಣಾದಿ | ತಾಮಸದವರಾ ಮದಮುರಿದು | ತಾಮಸದವರ ಮದಮುರಿದು ಹೃದಯಕ | ಪ್ರೇಮ ಜಯೋತ್ಸವದಿಂದೈ ತಂದಾ 1 ಒಡನೆ ಶಾಂತಿ ಸೀತೆಯಾ ಬಿಡಿಸಿ ತಂದನು ಸೆರೆಯಾ | ದೃಢವಿಭೀಷಣನ ಸ್ಥಾಪಿಸಿದನಾ | ದೃಢವಿಭೀಷಣನ ಸ್ಥಾಪಿಸಿ ಆಶಾಪಾಶ | ಕಡಲ ಮಧ್ಯ ಪೂರದೊಳು ಈಗ 2 ವಿವೇಕ ಹರಿವಾನದಿ ಭಾವದಾರತಿಯೋಳು | ತೀವಿದ ಸಮ್ಯಜ್ಞಾನ ಜ್ಯೋತಿ | ತೀವಿದ ಸಮ್ಯಜ್ಞಾನಜ್ಯೋತಿಯಿಂದ | ದೇವದೇವೇಶಗ ತಿಂದೀಗ 3 ಅರಿಗಳ ಶಿಕ್ಷಿಸು ಶರಣರ ರಕ್ಷಿಸು | ಧರೆಯೊಳುಯೆಂದು ಹರಸುತ | ಧರೆಯೊಳು ಎಂದು ಹರಸುತ ಮುತ್ತಿನ | ಪರಮಶಾಶಯ ನೊಸಲೊಳಿಟ್ಟು 4 ಇಹಪರಸುಖದಾತಾ ಬಾಹ್ಯಾಂತ್ರ ಸದೋದಿತಾ ಮಹಿಪತಿಸುತ ಪ್ರಭು ರಘುನಾಥ | ಮಹಿಪತಿಸುತ ಪ್ರಭು ರಘುನಾಥ ನೆನೆವರ ಸಹಕಾರಿ ನಮ್ಮ ಸದೋದಿತ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು