ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧರೆಯೊಳಗೆ ವ್ಯಾಸಮುನಿವರನ ಸಂಸ್ಥಾನಕಿ ನ್ನೆರಡನೆಯದಾವುದುಂಟು ಪ. ಪರಿಪರಿಯಲಿ ನೋಡೆ ಪರಮ ವೈಭವದಿಂದ ಧರಣಿಯೊಳು ಮೆರೆಯುತಿಹುದು ಇಹುದುಅ.ಪ. ಹಂಸನಾಮಕನಿಂದ ಹರಿದು ಬಂದಂಥ ಯತಿ ಸಂಸ್ಥಾನ ಸುರನದಿಯೊ ಕಂಸಾರಿಪ್ರಿಯ ಶ್ರೀ ಮಧ್ವಮುನಿ ಮತ ಸಾರ ಹಂಸಗಳು ಸುರಿಯುತಿರಲು ಸಂಶಯವ ಪರಿಹರಿಸಿ ಸದ್ಗ್ರಂಥಗಳ ಸ- ದ್ವಂಶರಿಗೆ ಸಾರುತಿರಲು ಅಂಶ ಹರಿಪರ್ಯಂಕ ಸಹಿತ ಬಾಹ್ಲೀಕ ಯತಿ ವಂಶದಲಿ ಉದಿಸಿ ಬರಲು ಬರಲು 1 ಬನ್ನೂರು ಸ್ಥಳದಲ್ಲಿ ಜನ್ಮವೆತ್ತುತಲಿ ಬ್ರ ಹ್ಮಣ್ಯರಾ ಕರದಿ ಬೆಳೆದು ಚಿಣ್ಣತನದಲಿ ಮೌಂಜಿಧರಿಸಿ ಕಿತ್ತೊಗೆಯುತಲಿ ಧನ್ಯಯತಿಯಾಗಿ ಮೆರೆದು ಘನ್ನ ಶ್ರೀಪಾದರಾಯರಲಿ ಸದ್ಗ್ರಂಥಗಳ ಚನ್ನಾಗಿ ಮನನಗೈದು ಸಣ್ಣ ಪೆಟ್ಟಿಗೆಯೊಳಡಗಿದ್ದ ಶ್ರೀ ಕೃಷ್ಣನ ತನ್ನ ಭಕ್ತಿಯೊಳ್ ಕುಣಿಸಿ ನಲಿದು 2 ಪಡೆದು ಪರಿಪರಿಯ ಮಹಿಮೆಗಳ ತೋರುತಲಿ ದುರ್ವಾದಿ ದುರುಳ ಮತಗಳನೆ ಮುರಿದು ಮರುತ ಮತ ಶೀತಾಂಶುಕಿರಣ ಚಂದ್ರಿಕೆಯನ್ನು ಹರಹಿ ಪ್ರಕಾಶಗೈದು ಸರ್ವ ಸಜ್ಜನರ ಮನದಂದಕಾರವ ಕಳೆದು ಸಿರಿವರನ ಪ್ರೀತಿ ಪಡೆದು ತಿರುವೆಂಗಳೇಶನ ಪರಮ ಮಂಗಳ ಪೂಜೆ ವರುಷ ದ್ವಾದಶವಗೈದು ಮೆರೆದು 3 ಆರಸನಿಗೆ ಬಂದಂಥ ಆಪತ್ಕುಯೋಗ ಪರಿ ಹರಿಸಿ ಸಂಸ್ಥಾನ ಪಡೆದು ಪರಮ ಸಾಮ್ರಾಜ್ಯ ಪಟ್ಟಾಭಿಷೇಕವ ತಳೆದು ಪರಮ ವೈಭವದಿ ಮೆರೆದು ಚಿರಕಾಲ ವಿಜಯನಗರವು ಮೆರೆಯಲೆಂದ್ಹರಸಿ ಅರಸನಿಗೆ ರಾಜ್ಯವೆರೆದು ಕರುಣಾಳುವೆನಿಸಿ ವೈರಾಗ್ಯ ಶಿಖರದಿ ಮೆರೆದು ಮೊರೆಪೊಂದಿದವರ ಪೊರೆದು ಬಿರುದು 4 ಎಲ್ಲೆಲ್ಲಿ ನೋಡಲಲ್ಲಲ್ಲಿ ಶ್ರೀ ಮರುತನ್ನ ನಿಲ್ಲಿಸುತ ಪೂಜೆಗೈದು ನಿಲ್ಲದಿರೆ ಹಂಪೆಯಲಿ ಪ್ರಾಣಾರಾಯನು ಯಂತ್ರ ದಲ್ಲಿ ಬಂಧನವಗೈದು ಚಲ್ಲಾಡಿ ಸುವರ್ಣವೃಷ್ಟಿಯಿಂ ದುರ್ಭಿಕ್ಷ ನಿಲ್ಲಿಸದೆ ದೂರಗೈದು ಎಲ್ಲ ಕ್ಷೇತ್ರಗಳ ಸಂಚರಿಸಿ ಬಹುದಿನ ಹಂಪೆ ಯಲ್ಲಿ ಶಿಷ್ಯರನು ಪಡೆದು ನಿಂದು 5 ನವಕೋಟಿ ಧನಿಕ ವೈರಾಗ್ಯ ಧರಿಸುತ ಭವದ ಬವಣೆಯಲಿ ನೊಂದು ಬಂದು ನವ ಜನ್ಮಕೊಟ್ಟು ಉದ್ಧರಿಸಬೇಕೆಂದೆರಗೆ ಅವನಂತರಂಗವರಿದು ಪವಮಾನ ಮತವರುಹಿ ತಪ್ತ ಮುದ್ರಾಂಕಿತದಿ ನವ ಜನ್ಮವಿತ್ತು ಪೊರೆದು ಪವನ ಗ್ರಂಥಾಂಬುಧಿಯೊಳಡಗಿದ್ದ ದಾಸ್ಯ ರ ತ್ನವ ಪೂರ್ವಗುರುವಿಗೊರೆದು ಸುರಿದು 6 ಪುರಂದರ ಕನಕರೆಂ ಬತುಲ ಶಿಷ್ಯರ ಕೂಡುತಾ ಸತತ ಹರಿ ಚರ್ಯ ಮಹಿಮಾದಿಗಳ ಸ್ಮರಿಸುತ್ತ ಸ್ಮøತಿ ಮರೆದು ಕುಣಿದಾಡುತಾ ರತಿಪಿತನ ಗಾನ ಭಕ್ತಿಯಲಿ ಕನ್ನಡ ಕವನ ಮತಿಯೊಳ್ ನಾಲ್ವರುಗೈಯುತಾ ಕ್ಷಿತಿಯಲ್ಲಿ ದಾಸಪದ್ಧತಿ ಬಾಳಲೆಂದೆನುತ ಯತಿವರರ ಸೃಷ್ಟಿಸುತ್ತಾ | ಸತತ 7 ಅಂದು ವಿಜಯೀಂದ್ರರನು ಯತಿವರರು ಬೇಡÉ ಆನಂದದಲಿ ಭಿಕ್ಷವಿತ್ತ ಬಂದು ಕೈ ಸೇರಿದಾ ರಾಜ್ಯವನು ಕ್ಷಿತಿಪನಿಗೆ ಮುಂದಾಳಲೆನುತಲಿತ್ತ ಪತಿ ವೆಂಕಟೇಶನ್ನ ಪೂಜೆ ವರ ಕಂದನಿಗೆ ಒಲಿದು ಇತ್ತ ಒಂದೊಂದು ವೈಭವವು ಕೈ ಸೇರೆ ವೈರಾಗ್ಯ ತಂದು ಅಭಿರೂಪ ಬಿಡುತಾ | ಕೊಡುತ 8 ನವವಿಧದÀ ಭಕ್ತಿಯಲಿ ಜ್ಞಾನ ವೈರಾಗ್ಯದಲಿ ಕವನದಲಿ ಶಾಂತತೆಯಲಿ ನವಗ್ರಂಥ ನಿರ್ಮಾಣ ಪವನ ಗ್ರಂಥೋದ್ಧಾರ ಸವಿನಯವು ಸದ್ಗುಣದಲೀ ಸುವಿವೇಕ ಸತ್ಕರ್ಮ ಅಂತರ್ಮುಖ ಧ್ಯಾನ ಅವನಿ ಸಂಚಾರದಲ್ಲಿ ಇವರ ಸರಿಯಿಲ್ಲ ದಾಸ ವ್ಯಾಸ ಕೂಟದಲಿ ಭುವನದಲಿ ಮೆರೆದ ಧನ್ಯಾ | ಮಾನ್ಯ 9 ಪಾಪಿಗಳ ಸಲಹಿ ಪಾವನ್ನಗೈಯುತ ಭವದ ಕೂಪದಿಂದುದ್ಧರಿಸಿದಾ ಆಪಾರ ಮಹಿಮೆ ಆದ್ಯಂತ ವರ್ಣಿಸಲಳವೆ ಶ್ರೀಪಾದ ಪದುಮ ರಜದಾ ವ್ಯಾಪಾರವೆನ್ನ ಗುರು ದಯದಿ ಎನ್ನೊಳು ನಿಂದು ತಾ ಪಾಲಿಸುತ ನುಡಿಸಿದ ಗೋಪಾಲಕೃಷ್ಣವಿಠಲ ಧ್ಯಾನದಲಿ ಹಂಪೆ ಗೋಪ್ಯಸ್ಥಳದಲಡಗಿದಾ 10
--------------
ಅಂಬಾಬಾಯಿ
ವ್ಯಾಸರಾಯರ ಸ್ಮರಿಸಿ ಏಸು ಜನ್ಮದ ಪಾಪ ನಾಶವಾಗುವುದು ನಿಮ್ಮಾಶೆ ಸಿದ್ಧಿಸುವುದು ಲೇಸಾಗಿ ಸುಖಿಸಿ ಆನಂದ ವೈಕುಂಠದಲಿ ವಾಸವಾಗುವುದು ನಿಜ ಭಕುತಿಯಲಿ ಬಿಡದೆ ಪ ಪಿತನಿಂದ ನೊಂದು ರತಿಪಿತನ ಸ್ಮರಿಸುತ ಪ್ರತಿಬಂಧಕಗಳ ಪ್ರತಿಯಾಗಿ ಬಂದಿರಲು ಬಲು ಮತಿವಂತನಾಗಿ ಮುದದೀ ಕ್ಷಿತಿಯ ಭಾರವ ವೊಹಿಸಿ ಕೃತಭುಜ ಮುನೀಶ್ವರನ ಸ್ತುತಿಸುತಲ್ಲಿದ್ದು ಮಿತಿಕಾಲ ಹಿಂಗಳದು ಅಚ್ಯುತನ ವರದಿಂದ ಬಂದು 1 ಅಲ್ಲಿ ತ್ರಿಣಿನೇತ್ರ ಶ್ರೀ ವಲ್ಲಭನ ಶ್ರೀಪಾದ ಪಲ್ಲವಾರುಣಿ ಚಿತ್ತದಲ್ಲಿ ಪ್ರತಿದಿವಸದಲಿ ನಿಲ್ಲಿಸಿ ನಿಗಮಾರ್ಥದಿಂದ ಪೂಜಿಸುತ್ತಿದ್ದ ಬಲ್ಲ ಭಕುತಿಂದ ಸತತ ಖುಲ್ಲನಲಿ ಪುಟ್ಟಿದ ಪ್ರಲ್ಹಾದ ದೇವನು ಬಲ್ಲಿದಾನಾಗೆಲ್ಲಿ ಸಂಸಾರನುತ್ತರಿಸಿ ಮುನಿ ಮೆಲ್ಲನೇ ನಡತಂದನು2 ಬಂದ ನಾರದಗೆ ಪ್ರಲ್ಹಾದ ದೇವನು ಎರಗಿ ನಿಂದು ಕಂಗಳ ಮುಗಿದು ತ್ರಾಹಿ ತ್ರಾಹಿ ಎಂದು ಇಂದು ನಿಮ್ಮಯಾ ದರುಶನಾ ಛಂದವಾಯಿತೆನಗೆತ್ತಲಿಂದ ಬಂದಿರಿ ಇತ್ತ ಬಂದ ವಿಚಾರ ಪೇಳೆಂದು ಬಿನ್ನೈಸಲು ನಂದದಲಿ ಹಾಹಾ ಎನುತಾ 3 ವೃಕೋದರನಿಂದ ನೊಂದು ದೇಹವನು ಬಿಡುವಾಗ ಬಾ ಲ್ಹಕರಾಯನಾಗಿ ಹುಟ್ಟಿದ ಪ್ರಲ್ಹಾದನು ವೈದಿಕ ಮಾರ್ಗವನ್ನೇ ಧರಿಸಿ ಉಕುತಿಯನೇ ಸಾಧಿಸಿ ಕಲಿಯೊಳಗೆ ನಿಮ್ಮ ಪೂ ಜಕನಾಗಿಪ್ಪೆನೆಂದು ತಲೆವಾಗಲು ಇಂದು ಪ್ರಕಟವಾಯಿತು ಧರೆಯೊಳು 4 ದಿಕ್ಕುಗಳಂ ಮರದು ಧಿಗಿಧಿಗಿನೆ ಚಿಗಿದಾಡುತ್ತ ಉಕ್ಕಿದವು ಕಣ್ಣಿಂದ ಅಶ್ರು ಜಲಧಾರೆ ತಾ ಮೈಮರೆದು ದೇವಕಿ ನಂದನನ ನೆನೆದು ನಕ್ಕು ಕಿಲಿಕಿಲಿ ರಾಹಸ್ಯಗಳನುಚ್ಚರಿಸುತಾ ತಕ್ರ್ಕೈಸಿ ತಿಳುಪಿದನು ಮುಂದಣಾಗಮವೆಲ್ಲ ವೃತ್ತಾಂತ ಅಕ್ಕಟ ಅದ್ಭುತವೇನೆಂಬೆ 5 ಬನ್ನೂರು ಗ್ರಾಮದಲಿ ಜನಿಸಿದನು ಭೂಸ್ವರೂಪ ಮುನ್ನಿಲ್ಲದೇ ಬೆಳೆದು ಮುನಿ ಸುಬ್ರಾಹ್ಮಣ ರನ್ನು ಪಾಲಿಸುವ ಪರಮಾನಂದವುಳ್ಳ ಬ್ರಹ್ಮಣ್ಯತೀರ್ಥರ ಕರದಿ ಚೆನ್ನಾಗಿ ಪೋಷಿಸಿಕೊಂಡು ಉಪನೀತವಾಗಿ ಸನ್ಯಾಸಿ ಪಟ್ಟವನೆ ಧರಿಸಿ ಧರ್ಮದಲಿ ಸ ವಿದ್ಯವನೋದಿ ಧನ್ಯ ಕೀರ್ತಿಯಲಿ ಮೆರೆದಾ 6 ರಾಯಗದ್ದುಗೆನೇರಿ ಅವನಿಗೆ ಬಂದ ಮಹಾ ಕುಹುಯೋಗವ ನೂಕಿ ರಾಜ್ಯದೊಳಗೆ ಇದ್ದ ಸುವರ್ಣ ಛಾಯದಂತೆ ಕಾಂತಿಲೀ ನ್ಯಾಯಾಮೃತ ತರ್ಕ ತಾಂಡವ ಚಂದ್ರಿಕೆ ಎಂಬ ಸ್ಥಾಯವಾದರು ಪೊಂಪದಿ7 ಯಂತ್ರೋದ್ಧಾರಕನ ಪ್ರತಿಷ್ಠಿಸಿ ವಿಜಯೀಂದ್ರ ಸಂತ ವಾದಿರಾಜಗೊಲಿದು ಪುರಂದರ ಮಂತ್ರ ಸಿದ್ಧಿಯನೆ ಕೊಟ್ಟು ಭ್ರಾಂತಗೊಳಿಸುವ ಮಹಾ ಅನ್ಯಾಯ ಮತವೆಂಬ ಕಾಂತಾರ ಪಾವಕನೆ ವ್ಯಾಸಾಬ್ಧಿಯನು ಬಿಗಿದು ಚಿಂತಿತಾ ಫಲದಾಯಕ 8 ಮಧ್ವಮತವೆಂಬ ದುಗ್ಧಾಬ್ಧಿಗೆ ಪೂರ್ಣೇಂದು ಹೃದ್ವನಜದೊಳಗಿರಿಸಿ ಕೃಷ್ಣನ ಪದಾಂಬುಜವ ಚಿದ್ವಾತ್ಯದಲಿ ನಿಲಿಸಿ ಕಾವ್ಯದಲಿ ಕೊಂಡಾಡಿ ಸದ್ವೀರ ವೈಷ್ಣವರಿಗೆ ಪದ್ಧತಿಯನು ಪೇಳಿ ತವಕದಿಂದಲಿ ತಾವು ಸದ್ವೈಷ್ಣವ ಲೋಕ ಸಿರಿಮರಳೈದಿದರು ಪಾದದ್ವಯವ ಭಜಿಸುವವರೂ ಕೇಳಿ 9
--------------
ವಿಜಯದಾಸ