ಒಟ್ಟು 9 ಕಡೆಗಳಲ್ಲಿ , 8 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅಃ) ಕಾಮದೇವ ಕರುಣದಿಂದಲಿ ಒಲಿದು ಕಂಡನಾತುರದಲಿ ಪ ಇಂದ್ರಸಮಾನ ದೇವತೆಯೆ ರತಿಪತಿಯೇ | ಮಾರ || ಬಂದು ಕಲ್ಪದಲಿ ಸುಂದರನೆನಿಸಿಕೊಂಡಿರ್ದ | ಬಂಧುವೇ ಅಹಂಕಾರ ಪ್ರಾಣನಿಂದಧಿಕನೆ 1 ವನಜ ಸಂಭವನು ಸೃಷ್ಟಿ ಸೃಜಿಪಗೋಸುಗ | ಮನದಲ್ಲಿ ಪುಟ್ಟಿಸೆ ಚತುರ ಜನರ || ಮುನಿಗಳೊಳಗೆ ನೀ ಸನತ್ಕುಮಾರನಾಗಿ ಜನಿಸಿ | ಯೋಗ ಮಾರ್ಗದಲ್ಲಿ ಚಲಿಸಿದ ಕಾಮಾ 2 ತಾರಕಾಸುರನೆಂಬ ಬಹು ದುರುಳತನದಲ್ಲಿ | ಗಾರುಮಾಡುತಲಿರಲು ಸುರಗಣವನು || ಗೌರಿಮಹೇಶ್ವರರಿಗೆ ಪುತ್ರನಾಗಿ ಪುಟ್ಟಿ | ಧಾರುಣಿಯೊಳಗೆ ಸ್ಕಂದನೆನಿಸಿದೆ 3 ಮತ್ಸ್ಯ ಉದರದಲಿ | ಪೊಕ್ಕು ಶಿಶುವಾಗಿ ಸತಿಯಿಂದ ಬೆಳೆದು || ರಕ್ಕಸ ಶಂಬರನೊಡನೆ ಕಾದಿ ಗೆದ್ದು ಮರಳಿ | ಚಕ್ಕನೆ ಸಾಂಬನೆನಿಸಿದೆ ಜಾಂಬವತಿಯಲ್ಲ 4 ಜನಪ ದಶರಥನಲ್ಲಿ ಭರತನಾಗಿ ಪುಟ್ಟಿದೆ | ಮನೋ ವೈರಾಗ್ಯ ಚಕ್ರಾಭಿಮಾನಿ || ಎನಗೊಲಿದ ವಿಜಯವಿಠ್ಠಲರೇಯನಂಘ್ರಿ | ಅರ್ಚನೆ ಮಾಡುವ ಸುಬ್ರಮಣ್ಯ ಬಲು ಧನ್ಯ 5
--------------
ವಿಜಯದಾಸ
ಕಂಡೆ ಕನಸಿನಲಿ ನಾ ಪಾಂಡುರಂಗನ ಮಂಡೆ ಇಡುತಲಿ ಪುಂಡಲೀಕ ಚರಣದಲೀ ಪ. ಪಂಡರೀಕ್ಷೇತ್ರದಲಿ ವಿಠ್ಠಲನ ದರ್ಶನಕೆ ದಂಡೆ ಹಾರ ಕೊಂಡು ಪೋಗುತಿರಲೂ ಹಿಂಡು ಜನ ಊಟಕೆಡೆ ಅಣಿಮಾಡುತಿರಲಲ್ಲಿ ಕಂಡು ಸಾಗುತ ಮುಂದೆ ದ್ವಾರದೆಡೆ ಬಂದು 1 ನಂತರದಿ ದ್ವಾರಗಳು ಮುಚ್ಚಿರಲು ಕಂಡು ಬಹು ಚಿಂತಿಸಲು ಅಲ್ಲೊಬ್ಬ ಬರಲು ಅವಗೇ ಅಂತರಂಗವನುಸುರೆ ಕದ ತೆರೆದು ನೋಡೆನಲು ಸಂತೋಷದಿಂದೆರಡು ದ್ವಾರಗಳ ತೆರೆದೇ 2 ರತಿಪತಿಯ ಬಿಂಬ ಶ್ರೀ ಪ್ರದ್ಯುಮ್ನವಿಠ್ಠಲನ ಮೂರ್ತಿಯನೆ ಕಂಡು ಹಾರವನ್ಹಾಕಿ ನಮಿಸಿ ಅತಿ ಪ್ರೀತಿ ಭಕ್ತಿಯಲಿ ಅಪ್ಪಿ ನಾ ಮೈ ಮರತೆ ಸ್ತುತಿಸುತಲಿ ಗೋಪಾಲಕೃಷ್ಣವಿಠ್ಠಲನನಾ 3
--------------
ಅಂಬಾಬಾಯಿ
ಕರುಣಾ ಪೊಂದಿರೆ ಕೊರತೆಗಳುಂಟೆ ಶ್ರೀ ನರಹರಿಯ ಪ ನರಿಗಳ ಕೂಗಿಗೆ ಹುಲಿಯಂಜುವುದೆ ಬಿರುಗಾಳಿಗೆ ದೊಡ್ಡ ಗಿರಿ ನಡುಗುವುದೆ ಅ.ಪ ನಾನು ತಾನೆಂದು ಕುಣಿಯುತಲಿದ್ದ ಮಾನವರನು ಜರಿದು ನೀನೆ ಸೇವೆಯನು ಮಾಡೆಂದೆನುತ ತಾನೊಲಿಯುತಲಿ ಹೀನ ಜನರು ಅಪಮಾನವ ಬಯಸಲು ನಾನಿಹೆನೆನ್ನುವ ಜಾನಕಿನಾಥನ 1 ಬಂಧುಗಳೆನ್ನ ನಿಂದಿಸುತಿಹರು ಒಂದನೂ ಕೊಡೆಯೆಂದು ಹಿಂದು ಮುಂದೆನಗೆ ಕುಂದು ಕೋರುವರು ಒಂದನರಿಯರು ಮುಂದೆ ಎನಗೆ ಬಲು ತೊಂದರೆಗಳಿರುವು ವೆಂದು ಪೇಳುವರು ಮಂದರಧರನ 2 ಧನಿಕನಲ್ಲೆಂದು ಅಲ್ಲಗೆಳೆಯುವರು ಧನವಿಲ್ಲದಿರಲು ಘನತೆ ಎಂತೆಂದು ಜರಿಯುತಲಿಹರು ಮನವನರಿಯರು ಧನ ಪಿಶಾಚಿಯನು ಮನದಿಂದ ತೊಲಗಿಸಿ ಮನದಲಿ ನೆಲಸಿಹ ವನರುಹ ನಯನನ 3 ನಂಬಿದರೆಮ್ಮ ಧನಕನಕಗಳ ತುಂಬುವೆವೆಂಬ ಜಂಭದ ಮಾತ ನಂಬದೆ ಇರಲು ಹಂಬಲಿಸುವರು ನಂಬುವ ಭಕುತರ ಹಿಂಬಾಲಿಸುತಲಿ ಬೆಂಬಲಿವೀಯುತವ ಅಂಬುಜನಾಭನ 4 ಚತುರನಲ್ಲೆಂದು ಅತಿದೂರುವರು ಹಿತರಂತೆ ನಟಿಸಿ ಮಿತಿಮೀರಿ ಎನಗೆ ಬೋಧಿಸುತಿಹರು ಮನ್ಮತಿಯನರಿಯರು ರತಿಪತಿಯೆನ್ನನು ಪ್ರಸನ್ನನಾಗಿ ದಿವ್ಯ ಗತಿ ತೋರುತಲಿರೆ ಚತುರತೆಯೇತಕೆ 5
--------------
ವಿದ್ಯಾಪ್ರಸನ್ನತೀರ್ಥರು
ಗುರವೆ ಪೊರೆಯೊ ಯನ್ನ | ಆವಗುಣಮರೆದು ರಾಘವೇಂದ್ರಾ ಪ ನೆರೆನಂಬಿದರ ಸುರತರುವೇ ಹೇಪುರಟ ಕಶಿಪುಜ ಗರುಡವಹನ ಪ್ರೀಯ ಅ.ಪ. ಸುಜನ ವತ್ಸಲ | ಗೆಲುವ ಕಾಣೆನೊ ಕರ್ಮನಿರ್ವಹದಿಜಲಜನಾಭನ ಚರಣ ಪುಷ್ಕರ | ಸುಲಭ ಷಟ್ಟದ ಸೆನಿಸೊ ಗುರುವರ 1 ಯತಿಕುಲ ಸಾರ್ವಭೌಮ | ನಿಮ್ಮಯ ನಾಮಾಮೃತವನುಣಿಸಲು ನಿಸ್ಸೀಮಾ ||ಪತಿತ ಪಾವನ ಹರಿಯ | ಸತತದಿ ನುತಿಸುವಮತಿಯಿತ್ತು ಪಾಲಿಸೊ | ಶತಕ್ರತು ಪಿತ ಪಿತನೆ ||ರತಿಪತಿಯ ಪತನೆನಿಸಿದಾತನ | ನತಿಸಿ ನುತಿಸುತ ಕರೆಯುತಲಿ ಗತಿ ಪ್ರದಾಯಕ ಹರಿಯ ವ್ಯಾಪ್ತಿಯ | ಪಿತಗೆ ತೋರಿದ ಅತುಳ ಮಹಿಮಾ 2 ಮಂತ್ರ ನಿಕೇತನನೆ ಯತಿಕುಲರನ್ನ ಮಂತ್ರಾರ್ಥ ರಚಿಸಿದನೇ ||ಗ್ರಂಥೀಯ ಹರಿಸೂವ | ತಂತ್ರವ ತೋರೋ ಅತಂತ್ರವಾಗಿದೆಯನ್ನ | ಮಂತ್ರ ಸಾಧನವೂ || ಪ್ರಾಂತಗಾಣದೆ ಚಿಂತಿಸುವೆ ಸರ್ವಸ್ವ | ತಂತ್ರ ಗುರುಗೋವಿಂದ ವಿಠಲನ ಅಂತರಂಗದಿ ತೋರಿ ಸಲಹೋ | ಕ್ರಾಂತನಾಗುವೆ ನಿಮ್ಮ ಪದಕೇ3
--------------
ಗುರುಗೋವಿಂದವಿಠಲರು
ಯತಿ ವರ್ಣನೆ ಕಾಶೀಮಠದ ಶ್ರೀ ಭುವನೇಂದ್ರರ ಸ್ತುತಿ ಕಂಡು ಕೃತಾರ್ಥನಾದೆ ಭುವನೇಂದ್ರರಂಘ್ರಿಯ ಕಂಡು ಕೃತಾರ್ಥನಾದೆ ಪ. ಕಂಡು ಕೃತಾರ್ಥನಾದೆ ಭೂ- ಮಂಡಲದಿ ಪೆಸರ್ಗೊಂಡು ಮೆರೆದಿಹ ಪುಂಡರೀಕದಳಾಕ್ಷ ಸತತಾ- ಖಂಡಸುಖ ಮಾರ್ತಾಂಡತೇಜರ ಅ.ಪ. ವಾರಿರುಹಭವಾಂಡದ ಭೂಮಧ್ಯ ವಿ- ಸ್ತಾರಜಂಬೂದ್ವೀಪದ ನವಖಂಡದೊಳ್ ಸಾರಭರತಖಂಡದÀ ಹಿಮಗಿರಿಯ ಪಾಶ್ರ್ವದ ತೋರ್ಪ ವಿಂಧ್ಯಾಚಲದ ಮಧ್ಯ ಭಾ- ಗೀರಥಿಯ ಪಶ್ಚಿಮ ಭೂಭಾಗದ ತೀರ ಕಾಶೀಮಠಸಂಸ್ಥಾನ ವಿ- ಚಾರಶಾಸ್ತ್ರವಿಶಾರದರ ಪದ 1 ವರ ರಾಜೇಂದ್ರ ಯತೀಂದ್ರರ ಕರಸಂಜಾ- ತರ ಗುರುಸುರೇಂದ್ರರ ಕರಕಮಲಮಧ್ಯದಿ ಧರಿಸಿರ್ದ ವಿಭುದೇಂದ್ರರ ಸರೋರುಹ ಕರಸಂಜಾತ ಮಹಾನುಭಾವರ ಕರುಣನಿಧಿ ಕಮನೀಯ ಸದ್ಗುಣ ಭರಿತ ಶ್ರೀಭುವನೇಂದ್ರರಂಘ್ರಿಯ 2 ಸುಂದರಮುಖಶೋಭೆಯ ಪೂರ್ಣಮಿ ಶುಭ ಚಂದ್ರಸನ್ನಿಭಕಾಂತಿಯ ಶೋಭಿಪ ನವ ಕುಂದರದನ್ತಪಂಕ್ತಿಯ ತಿಲಕದ ಛಾಯ ಮಂದಹಾಸಾನಂದ ಪುರಜನ ವೃಂದಪೂಜಿತಪಾದಪದ್ಮ ದ್ವಂದ್ವ ಸತತಾನಂದ ಸದ್ಗುಣ ಇಂದ್ರ ಶ್ರೀಭುವನೇಂದ್ರರಂಘ್ರಿಯ 3 ಶೃಂಗಾರರಸತೇಜರ ಯಮನಿಯಮಾದ್ಯ ಷ್ಟಾಂಗಯೋಗಸರ್ವಜ್ಞರ ಪಾಪಾತ್ಮರ ಕಂಗಳಿಗಗೋಚರ ಸತ್ಯಾವತಾರ ಮಂಗಳಾತ್ಮಕಸಂಗ ಸುಮಮನಸ ರಂಗ ಸಾಧ್ಯವೇದಾಂಕ ಕರುಣಾ ಪಾಂಗ ವಿಬುಧೋತ್ತುಂಗ ಅಂಗಜ ಭಂಗ ಶ್ರೀಯತಿಪುಂಗವರ ಪದ 4 ಎಷ್ಟೆಂದು ನಾ ಪೇಳಲಿ ಸದ್ಗುರುವರ- ರಿಷ್ಟಕೆ ತೋಷ ತಾಳಲಿ ದಾರಿದ್ರ್ಯದ ಕಷ್ಟವೆಲ್ಲ ಪರಿಹರಿಸಲಿ ದಯವಿರಲಿ ಎನ್ನಲಿ ಶ್ರೇಷ್ಠ ಗೌಡಸಾರಸ್ವತ ಸ- ಮಷ್ಟಿ ಕೊಂಕಣದೇಶವಿಪ್ರ ವಿ- ಶಿಷ್ಟ ಒಡೆತನ ಪಟ್ಟವಾಳುವ ಶ್ರೇಷ್ಠಯತಿವರರಂಘ್ರಿಕಮಲವ 5 ಆಶೆಯೊಂದುಂಟೆನಗೆ ಕಾವ್ಯವ ಓದ್ಯ- ಭ್ಯಾಸಗೈಯುವದು ಮಿಗೆ ಸನ್ನಿಧಾನದಿ ಪೋಷಿಸಿ ಎನ್ನ ಹೀಗೆ ರಕ್ಷಿಸಲು ಕಡೆಗೆ ಏಸು ಧನ್ಯನು ನಾನು ಕರುಣಾ ನಿಗಮ ವಿ- ಲಾಸರಂಘ್ರಿಗೆ ದಾಸದಾಸರ ದಾಸ ನಾನು ದಯಾಶರಧಿಯರ 6 ಸತತ ಸದ್ಯತಿಧರ್ಮದ ಪರಿಪಾಲಿಸಿ ಕ್ಷಿತಿಗತಿ ಪ್ರತಿವಾಸವನಂತೆಸೆವುತಾ ಮಿತ ಭಾಗ್ಯಸಂಪದವ ವಿಖ್ಯಾತವ ರತಿಪತಿಯ ಪಿತ ಕ್ರುತುಪಾಲಿತ ಸೂ- ನೃತಭಾಷಿತ ಲಕ್ಷ್ಮೀನಾರಾಯಣ ಸತತ ವೇದವ್ಯಾಸ ಶ್ರೀರಘು ಪತೀಚರಣಪೂಜಿತರ ಪದವನು 7
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಯತಿ ವರ್ಣನೆ ಕಾಶೀಮಠದ ಶ್ರೀ ಭುವನೇಂದ್ರರ ಸ್ತುತಿ ಕಂಡು ಕೃತಾರ್ಥನಾದೆ ಭುವನೇಂದ್ರರಂಘ್ರಿಯ ಕಂಡು ಕೃತಾರ್ಥನಾದೆಪ. ಕಂಡು ಕೃತಾರ್ಥನಾದೆ ಭೂ- ಮಂಡಲದಿ ಪೆಸರ್ಗೊಂಡು ಮೆರೆದಿಹ ಪುಂಡರೀಕದಳಾಕ್ಷ ಸತತಾ- ಖಂಡಸುಖ ಮಾರ್ತಾಂಡತೇಜರಅ.ಪ. ವಾರಿರುಹಭವಾಂಡದ ಭೂಮಧ್ಯ ವಿ- ಸ್ತಾರಜಂಬೂದ್ವೀಪದ ನವಖಂಡದೊಳ್ ಸಾರಭರತಖಂಡದÀ ಹಿಮಗಿರಿಯ ಪಾಶ್ರ್ವದ ತೋರ್ಪ ವಿಂಧ್ಯಾಚಲದ ಮಧ್ಯ ಭಾ- ಗೀರಥಿಯ ಪಶ್ಚಿಮ ಭೂಭಾಗದ ತೀರ ಕಾಶೀಮಠಸಂಸ್ಥಾನ ವಿ- ಚಾರಶಾಸ್ತ್ರವಿಶಾರದರ ಪದ 1 ವರ ರಾಜೇಂದ್ರ ಯತೀಂದ್ರರ ಕರಸಂಜಾ- ತರ ಗುರುಸುರೇಂದ್ರರ ಕರಕಮಲಮಧ್ಯದಿ ಧರಿಸಿರ್ದ ವಿಭುದೇಂದ್ರರ ಸರೋರುಹ ಕರಸಂಜಾತ ಮಹಾನುಭಾವರ ಕರುಣನಿಧಿ ಕಮನೀಯ ಸದ್ಗುಣ ಭರಿತ ಶ್ರೀಭುವನೇಂದ್ರರಂಘ್ರಿಯ2 ಸುಂದರಮುಖಶೋಭೆಯ ಪೂರ್ಣಮಿ ಶುಭ ಚಂದ್ರಸನ್ನಿಭಕಾಂತಿಯ ಶೋಭಿಪ ನವ ಕುಂದರದನ್ತಪಂಕ್ತಿಯ ತಿಲಕದ ಛಾಯ ಮಂದಹಾಸಾನಂದ ಪುರಜನ ವೃಂದಪೂಜಿತಪಾದಪದ್ಮ ದ್ವಂದ್ವ ಸತತಾನಂದ ಸದ್ಗುಣ ಇಂದ್ರ ಶ್ರೀಭುವನೇಂದ್ರರಂಘ್ರಿಯ3 ಶೃಂಗಾರರಸತೇಜರ ಯಮನಿಯಮಾದ್ಯ ಷ್ಟಾಂಗಯೋಗಸರ್ವಜ್ಞರ ಪಾಪಾತ್ಮರ ಕಂಗಳಿಗಗೋಚರ ಸತ್ಯಾವತಾರ ಮಂಗಳಾತ್ಮಕಸಂಗ ಸುಮಮನಸ ರಂಗ ಸಾಧ್ಯವೇದಾಂಕ ಕರುಣಾ ಪಾಂಗ ವಿಬುಧೋತ್ತುಂಗ ಅಂಗಜ ಭಂಗ ಶ್ರೀಯತಿಪುಂಗವರ ಪದ4 ಎಷ್ಟೆಂದು ನಾ ಪೇಳಲಿ ಸದ್ಗುರುವರ- ರಿಷ್ಟಕೆ ತೋಷ ತಾಳಲಿ ದಾರಿದ್ರ್ಯದ ಕಷ್ಟವೆಲ್ಲ ಪರಿಹರಿಸಲಿ ದಯವಿರಲಿ ಎನ್ನಲಿ ಶ್ರೇಷ್ಠ ಗೌಡಸಾರಸ್ವತ ಸ- ಮಷ್ಟಿ ಕೊಂಕಣದೇಶವಿಪ್ರ ವಿ- ಶಿಷ್ಟ ಒಡೆತನ ಪಟ್ಟವಾಳುವ ಶ್ರೇಷ್ಠಯತಿವರರಂಘ್ರಿಕಮಲವ5 ಆಶೆಯೊಂದುಂಟೆನಗೆ ಕಾವ್ಯವ ಓದ್ಯ- ಭ್ಯಾಸಗೈಯುವದು ಮಿಗೆ ಸನ್ನಿಧಾನದಿ ಪೋಷಿಸಿ ಎನ್ನ ಹೀಗೆ ರಕ್ಷಿಸಲು ಕಡೆಗೆ ಏಸು ಧನ್ಯನು ನಾನು ಕರುಣಾ ನಿಗಮ ವಿ- ಲಾಸರಂಘ್ರಿಗೆ ದಾಸದಾಸರ ದಾಸ ನಾನು ದಯಾಶರಧಿಯರ6 ಸತತ ಸದ್ಯತಿಧರ್ಮದ ಪರಿಪಾಲಿಸಿ ಕ್ಷಿತಿಗತಿ ಪ್ರತಿವಾಸವನಂತೆಸೆವುತಾ ಮಿತ ಭಾಗ್ಯಸಂಪದವ ವಿಖ್ಯಾತವ ರತಿಪತಿಯ ಪಿತ ಕ್ರುತುಪಾಲಿತ ಸೂ- ನೃತಭಾಷಿತ ಲಕ್ಷ್ಮೀನಾರಾಯಣ ಸತತ ವೇದವ್ಯಾಸ ಶ್ರೀರಘು ಪತೀಚರಣಪೂಜಿತರ ಪದವನು7
--------------
ತುಪಾಕಿ ವೆಂಕಟರಮಣಾಚಾರ್ಯ
ವನಜನಯನನ ಮನವ ಮಧುಪ ನಂಬುವರೆಮನದೆಗೆದ ಮದನಪಿತ ವಿಠಲರೇಯಾ ಪ ಅರಿಯದ ಬಾಲೇರಿಗೆ ತನ್ನ ಪರಿಯನರುಹಿಸಿ ಮುನ್ನನೆರೆದು ರತಿಪತಿಯ ಸುಖ ನೆರೆದೋರಿದತೊರೆದು ಬದುಕುವೆವೆಂತೋ ರತಿಪತಿಯ ಪಿತನಗಲಿವಿರಹದುರಿ ತಾನಳವಡರಿ ಸುಡುತಿಹುದು 1 ನಡೆ ನಗೆಯ ತುದಿನೋಟ ಬಲೆಯನೆಮ್ಮೊಳು ಬೀಸಿಬಿಡದೆ ಯೆಮ್ಮನು ತನ್ನ ವಶಮಾಡಿದಪಡಿಯಿಲ್ಲದನುಭವದ ಸುಖದ ಸವಿಯನೆ ತೋರಿಮಡದಿ ತಡೆದಳೊ ಮಧುರೆಯಲಿ ನಲ್ಲನ2 ಎಂದೆಂದು ನಿಮ್ಮ ವಶದಲ್ಲಿಹೆನೆಂದಭಯವಿತ್ತುಇಂದುಮುಖಿ ನಾರಿಯರ ನೆರೆ ನಂಬಿಸಿನಂದನಂದನ ನಮ್ಮ ಕಾನನದೊಳೀಡ್ಯಾಡಿಇಂದು ಮಧುರೆಯ ನಾರಿಯರ ನೆಚ್ಚಿದ 3 ಕಪಟ ತಿಳಿಯಲರಿಯದೆ ನಾವುನವ ಹರಿಣಿಯಂತೆ ಮರುಳಾಗಿ ಕೇಳಿವಿವರವರಿಯದೆ ನಾವು ಕಡು ನೊಂದೆವೆಲೊ ಮಧುಪಇವನ ಗುಣವರಿಯದೆ ಕಡುಕರುಣಿ ಎಂಬುವರು 4 ಭವ ಬಂಧನಗಳೆಲ್ಲ ಈಡ್ಯಾಡಿಗತಿ ನಮಗೆ ಅವನೆಂದು ಮನಸೋತೆವೋಕೃತಕವರಿಯದೆ ನಮ್ಮ ವನದೊಳು ನಿಲ್ಲಿಸಿ ಪೋದಪತಿಯೊಡನೆ ಸಂಧಾನವೆಂತೊ ಎಲೊ ಮಧುಪ 5 ಮರುಳುಗಳು ನಾವು ಶ್ರೀಪತಿಯ ಕೂಟವ ಬಯಸಿಇರುಳು ಹಗಲು ಜರಿಜರಿದಳಲುವೆವುಸಿರಿಯವನ ಉಂಗುಟದ ಉಗುರು ಗುಣ ಕಾಣಳೆಲೋಹರಿ ನಮ್ಮ ನೆನೆವುದಚ್ಚರಿಯಲ್ಲವೆ6 ಭೃಂಗ ಮಧುರೆಗೆ ಪೋಗಿರಂಗವಿಠಲನ ತಂದೆಮ್ಮನುಳುಹುವುದೋ 7
--------------
ಶ್ರೀಪಾದರಾಜರು
ಏನಮಾಡಿದರೆನ್ನ ಭವಹಿಂಗದು |ದಾನವಾಂತಕ ನಿನ್ನ ದಯವಾಗದನಕ ಪಅರುಣೋದಯಲೆದ್ದು ಅತಿಸ್ನಾನಗಳ ಮಾಡಿ |ಬೆರಳನೆಣಿಸುತ ಸ್ಮರಿಸಿ ನಿಜವರಿಯದೆ ||ಶರಣು ಸಾಷ್ಟಾಂಗವನು ಹಾಕಿದೆನು ಶತಸಹಸ್ರ |ಹರಿನಿನ್ನ ಕರುಣಾ ಕಟಾಕ್ಷವಿರದನಕ1ಶೃತಿಶಾಸ್ತ್ರ ಪುರಾಣಗಳನೋದಿ ಬೆಂಡಾದೆ |ಅತಿ ಶೀಲಗಳನೆಲ್ಲ ಮಾಡಿ ದಣಿದೆ ||ಗತಿಯ ಪಡೆಯುವೆನೆಂದು ಗಯೆ ಕಾಶಿಯ ಮಾಡಿದೆನು |ರತಿಪತಿಯ ಪಿತ ನಿನ್ನ ದಯವಾಗದನಕ 2ದಾನವನು ಮಾಡಿದೆನು ಮೌನವನು ತಾಳಿದೆನು |ಙ್ಞÕನ ಪುರುಷಾರ್ಥಕ್ಕೆ ಮನವೀಯದೆ ||ಶ್ರೀನಾಥ ದಯಪೂರ್ಣ ಪುರಂದರವಿಠಲನ |ಧ್ಯಾನಿಸುವರೊಡನಾಡಿ ನೆಲೆಗೊಳ್ಳದನಕ 3
--------------
ಪುರಂದರದಾಸರು