ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದಿಗೂ ಮರುಳಾಗೆನೋ ಸಂಸಾರಕ್ಕೆ ಎಂದಿಗೂ ಮರುಳಾಗೆನೋ ಪ ಬಂಧವ ತರಿವ ಕೇಶವನ ದಾಸನಾಗಿ ಪಾದ ಸೇರುವೆನಯ್ಯ ಅ.ಪ ನಾರಿಯರನು ನೆಚ್ಚಿಸೀ ಧರ್ಮವ ಬಿಡಿಸಿ ಮಾರಿಯರ ಸಾಕಿಸೀ ಆರರ ವಶಮಾಡಿ ರತಿಕ್ರೀಡೆ ನಂಬಿಸಿ ಮಾರಿಯ ಗೃಹಕೆನ್ನ ಗುರಿಮಾಡ್ವ ಭವಕೇ 1 ಹÉೂನ್ನುಗಳಿಗೆ ಮೆಚ್ಚಿಸೀ ಸತ್ಯವ ಬಿಡಿಸಿ ಮಣ್ಣುಗಳಿಗೆ ಸೊಕ್ಕಿಸೀ ಬಣ್ಗೆಣ್ಣಿಸಲಾಗದ ಪಾಪವ ಮಾಡಿಸಿ ಚಿನ್ನನ ಮರೆಸುವ ಪುಸಿಯಾದ ಭವಕೇ 2 ಸ್ಮರಣೆಗಳನ್ನೇ ಮಾಡಿ ಸರಸದಿ ಪಾಲಿಪ ಭಕ್ತರ ಪರಿಯನ್ನು ಭರದಿ ಸೇರಿಸಿ ಚನ್ನಕೇಶವಾ ಗತಿಯೆಂಬೇ 3
--------------
ಕರ್ಕಿ ಕೇಶವದಾಸ
ಕೊಡು ನಿನ್ನ ಧ್ಯಾನ ಒಡೆಯ ಶ್ರೀರಮಣ ಎಡಬಿಡದಲೆ ತವಅಡಿಭಕ್ತಿಜ್ಞಾನ ಪ ವನವಸೇರಿರಲಿ ಮತ್ತನುಗಾಲ ಬಡತನ ವನುಭವಿಸುತಿರಲಿ ಘನಸುಖದಿರಲಿ 1 ಸತಿಯಳೊಂದಿಗೆ ಬಿಡದೆ ರತಿಕ್ರೀಡೆಲಿರಲಿ ಸತತದಿ ತವಭಕ್ತಿ ಹಿತಾಹಿತದ ಚಿಂತನೆಯನು 2 ಚಳಿ ಮಳೆಯೊಳು ಬಿದ್ದು ಕಳವಳಗೊಳ್ಳುತಿರಲಿ ಹುಲಿಯ ಬಾಯೊಳು ಸಿಲ್ಕಿ ಹಲುಬಿ ಎದೆಯೊಡೆದು 3 ಕೊಟ್ಟ ಒಡೆಯರು ಬಂದು ಕಟ್ಟಿ ಕಾದಲಿ ಜನ ಬೆಟ್ಟ ಬೇಸರಮಾಡಿ ಅಟ್ಟಬಡಿಯುತಿರಲಿ 4 ಬೇನೆಯೊಳ್ ಬಿದ್ದಿರಲಿ ಹಾನಿಯಾಗಲಿ ಮಾನ ಕಾಣದೆ ಸುಳ್ಳನೆಂದು ಹೀನನುಡಿಯಲಿ ಬಿಡದೆ 5 ಹಗೆಗಳು ಬಂದೆನ್ನ ಬಗೆ ಬಗೆ ನಿಂದಿಸಿ ನಗೆಗೇಡು ಮಾಡೆನ್ನ ಜಗದೆಳಡಾಡುತಿರಲಿ 6 ಅವ ಪರಿಯಲಿರಲಿ ದೇವ ಶ್ರೀರಾಮ ನಿನ್ನ ಸಾವಿರನಾಮ ಎನ್ನ ಭಾವದಿ ನುಡೀತಿರಲಿ 7
--------------
ರಾಮದಾಸರು
ಸಾಕು ಸಾಕಿನ್ನು ಸಂಸಾರಸುಖವು |ಶ್ರೀಕಾಂತ ನೀನೊಲಿದು ಕರುಣಿಸೈ ಹರಿಯೆ ಪಉದಿಸಿದುವು ಪಂಚಭೂತಗಳಿಂದ ಔಷಧಿಗ-|ಳುದಿಸಿದುವು ಔಷಧಿಗಳಿಂದನ್ನವು ||ಉದಿಸಿದುವು ಅನ್ನದಿಂ ಶುಕ್ಲ-ಶೋಣಿತವೆರಡು |ಉದಿಸಿದುವು ಸ್ತ್ರೀ-ಪುರುಷರಲ್ಲಿ ಹರಿಯೆ 1ಸತಿಪುರುಷರೊಂದಾಗಿ ರತಿಕ್ರೀಡೆಗಳ ಮಾಡೆ |ಪತನವಾದಿಂದ್ರಿಯವು ಹೊಲೆ-ರುಧಿರವು ||ಸುದತಿಯುದರದೊಳೆರಡು ಏಕದಲಿ ಸಂಧಿಸಲು |ಬುದಬುದನೆ ಮಾಸಪರ್ಯಂತರದಿ ಹರಿಯೆ 2ಮಾಸವೆರಡರಲಿ ಶಿರಮಾಸಮೂರರಲಂಗ |ಮಾಸನಾಲ್ಕರಲಿ ಚರ್ಮದ ಹೊದಿಕೆಯು ||ಮಾಸವೈದರೊಳುನಖರೋಮ ನವ ರಂಧ್ರಗಳು |ಮಾಸವೇಳಲಿ ಧಾತು ಹಸಿವು ತೃಷೆಯು 3ತಿಂಗಳೆಂಟರಲಿ ಪೂರ್ವಾನುಭವ ಕರ್ಮಗಳ |ಭಂಗವನು ಪಡಲಾರೆ ಭವಭವದೊಳು ||ಅಂಗನೆಯ ಉದರಕಿನ್ನೆಂದಿಗೂ ಬರೆನೆಂದು |ಹಿಂಗದಲೆ ಧ್ಯಾನಿಸುತ ಕಳೆದೆನೈ ದಿನವ 4ಇನಿತು ಗರ್ಭದೊಳು ನವಮಾಸ ಪರಿಯಂತರದಿ |ತನು ಸಿಲುಕಿ ನರಕದಲಿ ಆಯಾಸಗೊಂಡು ||ಘನಮರುತವೇಗದಿಂ ಅರುಹನಲ್ಲಿಯೆ ಮರೆತುಜನಿಸುವಲಿ ಮೃತಭಾವದೊಳು ನೊಂದೆ ಹರಿಯೆ 5ಧರೆಯಮೇಲುದಿಸಿ ಬಹು ವಿಷ್ಣುಮಾಯೆಗೆ ಸಿಲುಕಿ |ಪರವಶದೊಳಿರಲು ನೀರಡಿಸಲಾಗ ||ಹೊರಳಿ ಗೋಳಿಡುತ ಕಣ್ದೆರೆಯ ಹರಿಯನು ಮರೆವ |ದುರಿತರೂಪದ ತನುವ ಧರಿಸಿದೆನೊ ಹರಿಯೆ 6ಶಿಶುತನದೊಳಿರಲು ನೊಣ ಮುಸುಕಲಂದದಕಳಲು |ಹಸಿದನಿವನೆಂದು ಹಾಲನೆ ಎರೆವರು ||ಹಸು-ತೃಕ್ಷೆಗಳಿಂದಳಲು ಹಾಡಿ ತೂಗುವರಾಗ |ಪಶುವಂತೆ ಶಿಶುತನದೊಳಿರಲಾರೆ ಹರಿಯೆ 7ನಡೆಯಲರಿಯದ ದುಃಖ ಮನಸಿನೊಳು ಬಯಸಿದುದ |ನುಡಿಯಲರಿಯದ ದುಃಖ ವಿಷಮದಿಂದ ||ಅಡಿಯಿಡುತ ಮೆಲ್ಲನೇಳುತ ಬೀಳುತಲಿ ತೊದಲು-|ನುಡಿಯೊಳಿಹ ಬಾಲ್ಯದೊಳಗಿಲಾರೆ ಹರಿಯೆ 8ಬಾಲ್ಯದೊಳು ಕೆಲವು ದಿನ ಬರಿದೆ ಹೋಯಿತು ಹೊತ್ತು |ಗೋಳಿಡುತವಿದ್ಯೆಕರ್ಮಗಳ ಕಲಿತು ||ಮೇಲೆ ಯೌವನದುಬ್ಬಿನೊಳು ಮದುವೆಯಾಗಿ ನಾಬಾಲೆಯರ ಬಯಸಿ ಬಹು ಮರಳಾದೆ ಹರಿಯೆ | 9ಜ್ವರದ ಮೇಲತಿಸಾರ ಬಂದಂತೆ ಯೌವನದಿ |ತರುಣಿಯೊಡನಾಡಿಕೂಡಿದವಿಷಯದಿ ||ತರುಣಿ-ಸುತರ್ಗನ್ನ ವಸ್ತ್ರಾಭರಣವೆಂದೆನುತ |ಪರರ ಸೇವೆಯಲಿ ನಾ ಕಡುನೊಂದೆ ಹರಿಯೆ 10ನೆತ್ತರವು ತೊಗಲು ಮಾಂಸದ ಹುತ್ತು ಜೊತ್ತುಗಳ |ಹತ್ತು ಇಂದ್ರಿಯದ ಬಹುರೋಗದಿಂದ ||ಮತ್ತೆ ಕಾಲನ ಬಾಯತುತ್ತು ಬಹುವಿಧ ಕರ್ಮ-||ಕತ್ತಲೆಯೊಳೀ ದೇಹ ಕರಕಾಯ್ತು ಹರಿಯೆ 11ದಿಟ್ಟತನದಲಿ ಗಳಿಸಿ ತರುವಾಗ ಸತಿಸುತರು |ಕಟ್ಟಿಕಾದಿಹರು ಮುಪ್ಪಡಸಲಾಗ ||ತಟ್ಟನೇ ಕೆಟ್ಟನುಡಿಗಳ ಬಯ್ಯುತಳಲುವರು |ಮುಟ್ಟಿನೋಡರು ಸರಕುಮಾಡರೈ ಹರಿಯೆ 12ಎಷ್ಟವಜೆÕಯ ಮಾಡೆ ಮತ್ತವನಿಗಳಲುತಿರೆ |ಕಟ್ಟಳೆಯ ದಿನತುಂಬಿಮೃತನಾಗಲು ||ಕುಟ್ಟಿಕೊಂಡಳುತ ಹೋಯೆನುತ ಬಂಧುಗಳೆಲ್ಲ |ಮುಟ್ಟದಲೆ ಹೆಣನೆಂದು ದೂರದೊಳಗಿಹರು 13ಸತ್ತ ಹೆಣಕಳಲೇತಕೆಂದು ಬಂಧುಗಳೆಲ್ಲ |ಸುತ್ತಿರ್ದು ಹೊತ್ತು ಹೋಯಿತು ಎನ್ನುತ ||ಹೊತ್ತು ಕೊಂಡಗ್ನಿಯಲಿ ತನುವ ಬೀಸಾಡುವರು |ಮತ್ತೆ ಧರಣಿಯಲಿ ನಾ ಜನಿಸಬೇಡವೊ ಹರಿಯೆ 14ಇನ್ನು ಈ ಪರಿಪರಿಯ ಯೋನಿಮುಖದಲಿ ಬಂದು |ಬನ್ನವನು ಪಡಲರೆ ಭವಭವದೊಳು ||ಜನ್ಮ-ಮರಣಾದಿ ಕ್ಲೇಶಗಳನ್ನು ಪರಿಹರಿಸಿ |ಸನ್ಮತಿಯೊಳಿರಿಸೆನ್ನ ಪುರಂದರವಿಠಲ 15
--------------
ಪುರಂದರದಾಸರು
ಹಿಗ್ಗುವೆಯೇಕೊ - ಏ ಮನುಜಾಹಿಗ್ಗುವೆಯೇಕೊ ಅಹಿಗ್ಗುವ ತಗ್ಗುವ ಮುಗ್ಗುವ ಕುಗ್ಗುವಅಗ್ನಿಯೊಳಗೆ ದಗ್ಧವಾಗುವ ದೇಹಕೆ ಅಪಸತಿ ಪುರುಷರು ತಮ್ಮ ರತಿಕ್ರೀಡೆಗಳ ಮಾಡೆಪತವಾದಿಂದ್ರಿಯ ಪ್ರತಿಮೆಯ ದೇಹಕೆ 1ತೋರುವುದೊಂಬತ್ತು ದಾರಿಯ ಮಲವಾದನೀರಿಲ್ಲದಿದ್ದರೆ ನಾರುವ ದೇಹಕೆ 2ಆಗದ ಭೋಗದ ಆಗು ಮಾಡುತಲಿಪ್ಪರೋಗಬಂದರೆ ಬಿದ್ದು ಹೋಗುವ ದೇಹಕೆ 3ನರರ ಸೇವೆಯಮಾಡಿ ನರಕ ಭಾಜನನಾಗಿಮರಳಿ ಮರಳಿ ಹುಟ್ಟಿ ನರಳುವ ದೇಹಕೆ 4ಪುರಂದರವಿಠಲನಚರಣ ಕಮಲಕೆಎರಗದೆ ಇರುತಿಪ್ಪ ಗುರುವಿನ ದೇಹಕೆ 5
--------------
ಪುರಂದರದಾಸರು