ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕದರುಂಡಲಗಿ ಹನುಮಂತದೇವರು ಇಂಥಾ ಕೀರ್ತಿಯ ಮೂರ್ತಿನ್ನಾರೇ ನೋಡಮ್ಮಯ್ಯ ಪ ಸಂತತ ಸೀತಾಪತಿಯ ಧ್ಯಾನರೊಳು ಕಂತುವಿನಸ್ತ್ರವ ಖಂಡಿಸಿದೊಡೆಯಾ ಅ.ಪ. ಸೂರಿ ಸುಲಿಗೆ ನೋಡಮ್ಮಯ್ಯ ನೋಡಮ್ಮಯ್ಯ ಭೂಸುರರಾಯರು ಸೀಮೆಯ ಸುತ್ತಲು ಗಾಸಿಯ ಮಾಡದೆ ಗ್ರಾಮವ ಕಾಯ್ದ 1 ತಾರಣ ನಾಮ ಸಂವತ್ಸರ ಶುದ್ಧ ವೈಶಾಖದಿ ನೋಡಮ್ಮಯ್ಯ ಧರೆಯೊಳು ಕಲಹ ವಿಪರೀತವದರೊಳು ರಣಮಂಡಲ ನೋಡಮ್ಮಯ್ಯ ಊರೆಲ್ಲ ಮೊರೆಯಿಡೆ ಈಕ್ಷಿಸಿ ಮಹಿಮೆಯ ತೋರುವ ಅಭಯ ಪ್ರಸಾದವ ಕೊಡುವಾ 2 ಜಯ ನಮೋ ಎನೆ ನೋಡಮ್ಮಯ್ಯ ಅಕಲಂಕ ಶೇಷಾನೃಪ ಶ್ರೀ ರಾಮರ ಸೇವಕಮಣಿ ನೋಡಮ್ಮಯ್ಯ ಲೋಕದಧಿಕ ಗುರು ಕದರುಂಡಲೀಶಾ ಬೇಕೆಂದು ನಿಂತಾ ಶ್ರೀ ಹನುಮಂತ 3
--------------
ಕದರುಂಡಲಗೀಶರು
ಸ್ಮರಿಸಿರೊ ನಮ್ಮ ನರನ ಸಾರಥಿಯ ಪರಿಹರಿಸುವನು ತಾಪತ್ರಯ ವ್ಯಥೆಯ ಪ. ರಣಮಂಡಲದಲ್ಲಿ ಗುಣಗುವ ಕುಂತಿಯ ತನುಜನ ನೋಡುತ ವಿನಯದಿಂದ ಘನತತ್ವವನು ಪೇಳಿ ಅಣುಮಹದ್ಗತ ವಿಶ್ವ- ತನುವ ತೋರಿದ ಸತ್ಯ ವಿನಯ ಶ್ರೀ ಕೃಷ್ಣನ 1 ಸುರನದೀ ತನುಜನ ಶರದಿಂದ ರಕ್ತವ ಸುರಿವಂದ ತೋರಿ ಶ್ರೀಕರ ಚಕ್ರವ ಧರಿಸಿ ಓಡುತ ತನ್ನ ಚರಣ ಸೇವಕನೆಂಬ ಹರುಷ ತಾಳಿ ಬೇಗ ತಿರುಗಿ ಬಂದವನ 2 ವಿಜಯ ಸಾರಥಿಯಂದು ಭಜಿಸುವ ದಾಸರ ವಿಜಯ ಪೊಂದಿಸುವನಂಡಜ ರಾಜಗಮನ ಅಜ ಭವವರದ ಕಂಬುಜನಾಭ ಕಮಲೇಶ ಭುಜಗ ಧರಾಧೀಶ ಭಜನೀಯಪಾದನ 3
--------------
ತುಪಾಕಿ ವೆಂಕಟರಮಣಾಚಾರ್ಯ