ಜಲಧಿ ಜಾತೆ ಬಾಲೆ ಸಾರಸಾಕ್ಷಿ ಮಂಗಳೆ
ಹಾರನೂಪುರಾದಿ ಲೋಲೆ ಬಾರೆ ಕಮಲೆ ನಿರ್ಮಲೆ ಪ
ರಾಜ ರಾಜ ಪೂಜಿತಾಂಘ್ರಿ ರಾಜಗೃಹ ನಿವಾಸಿನಿ
ರಾಜಕಾಂತಿ ಕೋಮಲಾಂಗಿ ರಜಿಸೌ ಮಹಾತ್ಮಳೆ 1
ಮಂಗಳಾಂಗಿ ಭೃಂಗವೇಣಿ ಅಂಗನಾ ಶಿರೋಮಣಿ
ಅಂಗಭವ ಸುಮಾತೆ ಪೊರೆಯೆ ಸಂಗತಾರ್ತಿಹಾರಿಣಿ 2
ದೀನನನ್ನು ನೋಡು ದಯದಿಂ ಸಾನುರಾಗದಿಂದಲಿ
ಧೇನುನಗರ ಪಾಲಿನಿ ಶ್ರೀ ಮಾನಿನೀ ಹರಿಪ್ರಿಯೆ 3